Illicit Affair: ಅಕ್ರಮ ಸಂಬಂಧ : ಆಕೆಯನ್ನು ಕೊಲೆ ಮಾಡಿ ಶವದ ಜೊತೆಗೆ ಮಲಗಿದ ಭೂಪ

By Kannadaprabha NewsFirst Published Dec 7, 2021, 1:58 PM IST
Highlights
  • ಕುಡಿತ ಮತ್ತಿನಲ್ಲಿ ಜಗಳ ನಡೆದು ಪರಿಸ್ಥಿತಿ ವಿಕೋಪಕ್ಕೆ
  • ಪ್ರಿಯಕರನೇ ಮಾರಕ ಆಯುಧದಿಂದ ಮಹಿಳೆಯನ್ನು ಕೊಚ್ಚಿ ಕೊಲೆ ಮಾಡಿದ

 ಚಿಕ್ಕಬಳ್ಳಾಪುರ (ಡಿ.07):  ಕುಡಿದ ಮತ್ತಿನಲ್ಲಿ ಜಗಳ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಮಹಿಳೆಯನ್ನು (Woman) ಆಕೆಯ ಪ್ರಿಯಕರನೇ (Lover) ಮಾರಕ ಆಯುಧದಿಂದ ಕೊಚ್ಚಿ ಕೊಲೆ (Murder) ಮಾಡಿರುವ ಘಟನೆ ಜಿಲ್ಲಾ ಕೇಂದ್ರದ ನಕ್ಕಲಕುಂಟೆ ಪ್ರದೇಶದಲ್ಲಿ ಕಳೆದ ರಾತ್ರಿ ನಡೆದಿದೆ.  ಕೊಲೆಗೀಡಾದ ಮಹಿಳೆಯನ್ನು ಗೌರಿಬಿನೂರು ತಾಲೂಕಿನ ಸಾದೇನಹಳ್ಳಿಯ ನಿವಾಸಿ ಅಂಜಿನಮ್ಮ ಎಂದು ಗುರುತಿಸಲಾಗಿದ್ದು, ಅಕೆಯೊಂದಿಗೆ ಅಕ್ರಮ ಸಂಬಂದ ಹೊಂದಿದ್ದ ಕೊಲೆಗಾರ ಗಾರೆ ಮೇಸ್ತ್ರಿ ವೇಣುಗೋಪಾಲ್‌ ಎಂಬುವನನ್ನು ನಗರ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ.

ಕೊಲೆ ಮಾಡಿ ನಿದ್ದೆಗೆ ಜಾರಿದ: ವಿಧವೆ ಆಂಜಿನಮ್ಮ ಸಾದೇನಹಳ್ಳಿಯಲ್ಲಿ ವಾಸವಾಗಿದ್ದಳು. ಈಕೆ ಚಿಕ್ಕಬಳ್ಳಾಪುರಕ್ಕೆ (chikkaballapura) ಗಾರೆ ಕೆಲಸಕ್ಕಾಗಿ ಬರುತ್ತಿದ್ದಳು. ಈ ವೇಳೆ ಗಾರೆ ಮೇಸ್ತಿಯಾಗಿದ್ದ ವೇಣುಗೋಪಾಲ್‌ ಪರಿಚಯವಾಗಿ ಆತನೊಂದಿಗೆ ಅಕ್ರಮ ಸಂಬಂದ ಇಟ್ಟುಕೊಂಡಿದ್ದಳು ಎನ್ನಲಾಗಿದೆ. ನಗರದ ನಕ್ಕಲಕುಂಟೆಯ ಶಾಂತಿನಗರ ಬಡಾವಣೆಯಲ್ಲಿರುವ ತಮ್ಮ ನಿವಾಸಕ್ಕೆ ವೇಣುಗೋಪಾಲ್‌ ಆಂಜಿನಮ್ಮಳನ್ನು ಕರೆಸಿಕೊಂಡಿದ್ದ. ಈ ಸಂದರ್ಭದಲ್ಲಿ ವೇಣುಗೋಪಾಲ ಹಾಗೂ ಆಕೆಯ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿತ್ತು. ಈ ವೇಳೆ ಆಕೆಯನ್ನು ಮಾರಕ ಆಯುದಿಂದ ವೇಣುಗೋಪಾಲ್‌ ಹೊಡೆದು ಕೊಲೆ (Murder) ಮಾಡಿದ್ದಾನೆ. ಬಳಿಕ ಮೃತ ದೇಹವನ್ನು ಮನೆಯ ಬಾಗಿಲ ಬಳಿ ಹಾಕಿ ಕುಡಿದ ಮತ್ತಿನಲ್ಲಿ ವೇಣುಗೋಪಾಲ್‌ ಮತ್ತೆ ನಿದ್ರೆಗೆ (Sleep) ಜಾರಿದ್ದ ಎಂದು ಸ್ಥಳೀಯರು ಪೊಲೀಸರಿಗೆ (Police) ಮಾಹಿತಿ ನೀಡಿದ್ದಾರೆ.

ರಕ್ತ ಕಲೆಗಳ ಮೇಲೆ ಉಪ್ಪು:  ಮನೆಯಲ್ಲಿ ಆರೋಪಿ ವೇಣುಗೋಪಾಲ್‌ ಅಂಜಿನಮ್ಮನನ್ನು ಕೊಲೆ ಮಾಡಿದಾಗ ಆಕೆಯ ದೇಹದಿಂದ ಹರಿದ ರಕ್ತದ (Blood) ಕಲೆಗಳ ಮೇಲೆ ಯಾರಿಗೂ ಗುರುತು ಸಿಗದಂತೆ ಆರೋಪಿ ಉಪ್ಪು ಸುರಿದಿರುವುದು ಪತ್ತೆಯಾಗಿದೆ. ಮದ್ಯ ಸೇವನೆ ಮತ್ತಿನಲ್ಲಿ ಇಬ್ಬರು ಜಗಳವಾಡಿದ್ದಾರೆ ಎಂದು ತಿಳಿದುಬಂದಿದೆ.

ಮದುವೆ ಆಸೆಗಾಗಿ ಮೊದಲ ಪತ್ನಿ ಮಕ್ಕಳ ಕೊಲೆ :  ಮೊದಲನೇ ಪತ್ನಿ (Wife) ಮತ್ತು ಇಬ್ಬರ ಹೆಣ್ಣು ಮಕ್ಕಳ (Children) ಕೊಲೆ ಪ್ರಕರಣದಲ್ಲಿ ಪರಾರಿ ಆಗಿದ್ದ ವಾಯುಸೇನೆ ನಿವೃತ್ತ ಜವಾನ ಹನ್ನೊಂದು ವರ್ಷಗಳ ಬಳಿಕ ವಿ.ವಿ.ಪುರ ಪೊಲೀಸರಿಗೆ (Police) ಸಿಕ್ಕಿಬಿದ್ದಿದ್ದಾನೆ.ಹರ್ಯಾಣ ಮೂಲದ ಧರ್ಮಸಿಂಗ್‌ ಯಾದವ್‌(53) ಬಂಧಿತ. ಆರೋಪಿಯು ಸೇನೆಯ (Indian army) ಪಿಂಚಣಿ (Pension) ಪಡೆಯುತ್ತಿದ್ದ ಮಾಹಿತಿ ಆಧರಿಸಿ ಪೊಲೀಸರು, ಕೊನೆಗೆ ಅಸ್ಸಾಂನಲ್ಲಿ 2ನೇ ಪತ್ನಿ ವಾಸಿಸುತ್ತಿದ್ದ ಆರೋಪಿಯನ್ನು ಸೆರೆ ಹಿಡಿದು ಜೈಲಿಗೆ ಕಳುಹಿಸಿದ್ದಾರೆ.

1987ರಲ್ಲಿ ವಾಯು ಸೇನೆಗೆ (Air Force) ಜವಾನನಾಗಿ ಕೆಲಸಕ್ಕೆ ಸೇರಿದ್ದ ಧರ್ಮಸಿಂಗ್‌ ವಿವಿಧೆಡೆ ಸೇವೆ ಸಲ್ಲಿಸಿ 1997ರಲ್ಲಿ ನಿವೃತ್ತನಾಗಿದ್ದ. ದೆಹಲಿಯ (Delhi) ಅನು ಯಾದವ್‌ ಜತೆ ವಿವಾಹವಾಗಿದ್ದ ಆರೋಪಿಗೆ 14 ವರ್ಷ ಮತ್ತು 8 ವರ್ಷದ ಹೆಣ್ಣು ಮಕ್ಕಳು ಇದ್ದರು. ಬೆಂಗಳೂರಿನಲ್ಲಿ (Bengaluru) ಕಾರ್ಯನಿರ್ವಹಿಸುವಾಗಲೇ ನಿವೃತ್ತನಾದ ಧರ್ಮಸಿಂಗ್‌, ನಂತರ ವಿದ್ಯಾರಣ್ಯಪುರದಲ್ಲಿ ಸ್ವಂತ ಮನೆ ಮಾಡಿಕೊಂಡು ಕುಟುಂಬದ ಜತೆ ವಾಸವಾಗಿದ್ದ. ಸೇನೆಯಲ್ಲಿ ನಿವೃತ್ತನಾದ ನಂತರ ಆತ, ಸಂಜಯನಗರ ಸಮೀಪ ಖಾಸಗಿ ಕಂಪನಿಯಲ್ಲಿ (Private Company) ಖರೀದಿ ವಿಭಾಗದ ಅಧಿಕಾರಿಯಾಗಿ ನೇಮಕಗೊಂಡಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

2ನೇ ಮದುವೆಗೆ ಸಿದ್ಧತೆ:  ಮೊದಲನೇ ಪತ್ನಿ ಇದ್ದರೂ ಧರ್ಮಸಿಂಗ್‌, ಮತ್ತೊಂದು ಮದುವೆಯಾಗಲು ಜೀವನ್‌ ಸಾಥಿ ಡಾಟ್‌ ಕಾಂನಲ್ಲಿ ಮದುವೆಯಾಗಿಲ್ಲವೆಂದು ಸುಳ್ಳು ಮಾಹಿತಿ ಅಪ್‌ಲೋಡ್‌ ಮಾಡಿದ್ದ. ಆಗ ಆತನ ಸ್ವ-ವಿವರ ನೋಡಿದ ಅಂಜನಾ ಕುಮಾರಿ ಎಂಬಾಕೆ ಧರ್ಮ ಸಿಂಗ್‌ ವರಿಸಲು ಸಮ್ಮತಿಸಿದ್ದಳು. ಇದರಿಂದ ಉತ್ತೇಜಿತನಾದ ಆರೋಪಿ, ಗೌಪ್ಯವಾಗಿ ಎರಡನೇ ಮದುವೆಗೆ ಸಿದ್ಧತೆ ಆರಂಭಿಸಿದ್ದ.

ತನ್ನ ಆಸೆಗೆ ಅಡ್ಡಿಯಾಗಿದ್ದಾರೆ ಎಂದು ಭಾವಿಸಿ ಪತ್ನಿ ಮತ್ತು ಮಕ್ಕಳನ್ನು 2008ರಲ್ಲಿ ದೊಣ್ಣೆಯಿಂದ ಹಲ್ಲೆ ನಡೆಸಿ ಹತ್ಯೆಗೈದು, ಪೊಲೀಸರ (Police) ದಿಕ್ಕು ತಪ್ಪಿಸಲು ಪತ್ನಿ ಕುತ್ತಿಗೆಯನ್ನು ಚಾಕುವಿನಿಂದ ಕೊಯ್ದು ಮೃತದೇಹದ ಮೈಮೇಲಿದ್ದ ಚಿನ್ನಾಭರಣ ಕಳವು ಮಾಡಿದ್ದ. ಕಳ್ಳತನಕ್ಕಾಗಿ ಪತ್ನಿ ಮತ್ತು ಮಕ್ಕಳ ಕೊಲೆಯಾಗಿದೆ ಎಂದು ಪೊಲೀಸರ ಮುಂದೆ ಆತ ನಾಟಕ ಮಾಡಿದ್ದ. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಶೀಲಿಸಿದಾಗ ಧರ್ಮಸಿಂಗ್‌ ಮೇಲೆ ಶಂಕೆ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆದು ಪೊಲೀಸರು ಪ್ರಶ್ನಿಸಿದಾಗ ಸತ್ಯ ಬಾಯ್ಬಿಟ್ಟಿದ್ದ.

click me!