ಹಿಂದು ಸಮಾಜದಲ್ಲಿ ಪರಾಕ್ರಮ ಜಾಗೃತಗೊಳಿಸಬೇಕಿದೆ: VHP ಮುಖಂಡ

By Ravi Janekal  |  First Published Oct 5, 2022, 4:08 PM IST

ಸರ್ಕಾರ, ಪೊಲೀಸರು, ಸೈನಿಕರಿಂದ ಮಾತ್ರ ಹಿಂದು ಧರ್ಮದ ರಕ್ಷಣೆ ಸಾಧ್ಯವಿಲ್ಲ. ಹಿಂದು ಸಮಾಜದಲ್ಲಿ ಪರಾಕ್ರಮ ಜಾಗೃತಗೊಳ್ಳಬೇಕಿದೆ ಎಂದು ವಿಹೆಚ್‌ಪಿ ಮುಖಂಡ ಗೋಪಾಲ್ ನಾಗರಕಟ್ಟೆ ಹೇಳಿದರು.


ಬೆಳಗಾವಿ (ಅ.5) : ಸರ್ಕಾರ, ಪೊಲೀಸರು, ಸೈನಿಕರಿಂದ ಮಾತ್ರ ಹಿಂದು ಧರ್ಮದ ರಕ್ಷಣೆ ಸಾಧ್ಯವಿಲ್ಲ. ಧರ್ಮ ರಕ್ಷಣೆಗೆ ಹಿಂದು ಸಮಾಜದಲ್ಲಿಯೇ ಪರಾಕ್ರಮ ಜಾಗೃತಗೊಳ್ಳಬೇಕಿದೆ ಎಂದು ವಿಹೆಚ್‌ಪಿ ಮುಖಂಡ ಗೋಪಾಲ್ ನಾಗರಕಟ್ಟೆ ಹೇಳಿದರು.

ತುಮಕೂರಿನಲ್ಲಿ ಹಿಂದೂ ಮಹಾಗಣಪತಿ ವಿಸರ್ಜನೆ, ಮುಸ್ಲಿಂ ಭಾಂದವರಿಂದ ಪೂಜೆ

Tap to resize

Latest Videos

ಬೆಳಗಾವಿಯಲ್ಲಿಆಯುಧ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಪರಾಕ್ರಮ ಮುಖ್ಯವಾಗಿರೋದು. ನಾವು ಪರಾಕ್ರಮ ಆರಾಧನೆ ಮಾಡಿದ್ದೇವೆ. ಕೆಲವು ವರ್ಷಗಳ ಕಾಲ ಶಾಂತಿ, ಶಾಂತಿ ಎಂದು ಕೆಲವರು ಹೇಳಿದರು. ಈಗಲೂ ಅದು ನಡೆಯುವುದಿಲ್ಲ. ಹಿಂದುಗಳಲ್ಲೇನಿದ್ದರೂ ಪರಾಕ್ರಮ ಜಾಗೃತವಾಗಬೇಕಿದೆ. ಪರಾಕ್ರಮ ಮಾಡದೇ ಇದ್ದರೆ ಶಿವಾಜಿ ಫೋಟೊ ಹಾಕಲು ಅನರ್ಹರು ಎಂದರು.

ಪೊಲೀಸ್ ಕೇಸ್ ಗೆ ಹೆದರಬೇಡಿ:

ಕನ್ಹಯ್ಯ ಹತ್ಯೆ, ನೂಪೂರ್ ಶರ್ಮಾ ವಿರುದ್ಧ ಧ್ವನಿ ಎತ್ತಿದಾಗ ಬಜರಂಗದಳದ ಯುವಕರು ಸುಮ್ಮನಾದುದ್ದು ದುರ್ದೈವ. ಪೊಲೀಸ್ ಕೇಸ್ ಗಳಿಗೆ ಹೆದರಿ ಸುಮ್ಮನಾಗಬಾರದು. ಯಾಕೆ ದನಿ ಎತ್ತಲಿಲ್ಲ? ಬಜರಂಗದಳದ ಯುವಕರ ರಕ್ತ ಬಿಸಿ ಇಲ್ಲವೇ ಎಂದು ಪ್ರಶ್ನಿಸಿದ ಗೋಪಾಲ ನಾಗರಕಟ್ಟೆ, ಅಂದು ಬಜರಂಗದಳದ ಕಾರ್ಯಕರ್ತರು ಬೀದಿಗೆ ಇಳಿದಿದ್ದರೆ, ಮುಂದಿನ 50 ವರ್ಷಗಳ ಕಾಲ ನೂಪುರ್ ಶರ್ಮಾ ವಿರುದ್ಧ ವಿರೋಧ ವ್ಯಕ್ತವಾಗುತ್ತಿರಲಿಲ್ಲ ಎಂದರು.

ಶಿವಾಜಿ, ಭಗತ್ ಸಿಂಗ್ ಫೋಟೋ ಯಾಕೆ?

ಸರಿಯಾದ ಉತ್ತರ ಕೊಡದಿದ್ದರೆ ಜಗತ್ತು ನಮ್ಮ ಮುಂದೆ ಬಾಗುವುದಿಲ್ಲ. ಹಿಂದುಗಳು ನಾವು ಯಾರ ಮೇಲೆ ಪರಾಕ್ರಮ ತೋರಿಸುವುದಿಲ್ಲ. ಹಿಂದುಗಳ ವಿಚಾರಕ್ಕೆ ಯಾರಾದರೂ ಬಂದಾಗ ನಾವು ಪರಾಕ್ರಮ ತೋರಿಸಬೇಕು. ಶಸ್ತ್ರ ಪೂಜೆ ಅಂದ್ರೆ ಚಿಕ್ಕ ಚಿಕ್ಕ ಚಾಕು, ಚಿಕ್ಕ ಚಿಕ್ಕ ಕತ್ತರಿಗೆ ಮಾಡುವ ಪೂಜೆಯಲ್ಲ. ಶಸ್ತ್ರ ಪೂಜೆ ಎಂದರೆ ಅದು ಹೊಡೆದಾಟ ಮಾಡಲು ಬಳಸುವ ಶಸ್ತ್ರ ಗಳು. ಅಂತಹ ಶಸ್ತ್ರಗಳ ಅಭ್ಯಾಸ ಮಾಡಿ, ಅಂಥ ಆಯುಧಗಳನ್ನೇ ಪೂಜಿಸುವ ಮೂಲಕ ಹಿಂದುಗಳು ಪರಾಕ್ರಮ ಪ್ರದರ್ಶನ ಮಾಡಬೇಕು ಎಂದು ಕರೆ ನೀಡಿದರು.

ಆಯುಧ ಬಳಸಲು ಸಹ ಕಲಿಯಬೇಕಿದೆ:

ಆಯುಧ ಅಥವಾ ಶಸ್ತ್ರ ಬಳಸಿ ರಾವಣ, ಸದ್ದಾಂ ಹುಸೇನ್ ಆಗಬೇಕಿಲ್ಲ. ರಾಮ, ಶಿವಾಜಿ ಹಾಗೇ ಸದ್ಗುಣ ಸಂಪನ್ನ ಆಗಬೇಕಿದೆ‌. ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು. ಹಿಂದು ಸಮಾಜದ ಉನ್ನತಿಗೆ ನಾವೆಲ್ಲರೂ ಶ್ರಮಿಸಬೇಕು. ಧರ್ಮದ ಉಳಿವಿಗೆ ಯೋಧರಂತೆ ಹೋರಾಡಬೇಕು ಎಂದರು.

ಕೆಲವು ಉದ್ಯೋಗಗಳು ಹಿಂದುಗಳ ಕೈಯಿಂದ ತಪ್ಪುತ್ತಿವೆ‌ ಎಂದು ಬೇಸರ ವ್ಯಕ್ತಪಡಿಸಿದ ಗೋಪಾಲ ನಾಗರಕಟ್ಟೆ, ಯಾವುದೇ ಉದ್ಯೋಗ ಅಪವಿತ್ರವಲ್ಲ. ಎಲ್ಲ ಕೆಲಸ ಮಾಡಲು ನಾವು ಸಿದ್ಧರಿರಬೇಕು ಎಂದರು.

ಶ್ರೀರಾಮ ಮಂದಿರ ಕಾರ್ಯಕ್ಕೆ ವೇಗ:

ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ವೇಗದಿಂದ ನಡೆದಿದೆ ಎಂದು ಹೇಳಿದರು. ಗೋಪಾಲ್ ನಾಗರಕಟ್ಟೆ ಅಯೋಧ್ಯೆ ಶ್ರೀರಾಮ ಮಂದಿರ ನವನಿರ್ಮಾಣದ ಉಸ್ತುವಾರಿ ಜವಾಬ್ದಾರಿ ಹೊತ್ತಿದ್ದಾರೆ. ಭೂಮಿಯಿಂದ 16 ಅಡಿ ಎತ್ತರದಲ್ಲಿ ನಮ್ಮ ದೇವರು ರಾಮ ಕುಳಿತುಕೊಳ್ಳುತ್ತಾರೆ. ಭೂಮಿಯನ್ನು ಎತ್ತರಿಸುವಂತಹ ಗ್ರೈನೇಟ್ ಅಳವಡಿಕೆ ಕಾರ್ಯ ಮುಗಿದಿದೆ. 360 ಅಡಿ ಉದ್ದ, 235 ಅಡಿ ಅಗಲ, 161 ಅಡಿ ಎತ್ತರದ ದೇವಸ್ಥಾನ ನಿರ್ಮಾಣ ಆಗಬೇಕು ಈಗಾಗಲೇ ಕಟ್ಟೆ ಕಟ್ಟುವ ಕೆಲಸ ಮುಗಿದಿದೆ. ಮಂದಿರ ನಿರ್ಮಾಣ ಕಾರ್ಯ ವೇಗದಿಂದ ನಡೆಯುತ್ತಿದೆ ಎಂದರು.

ತುಷ್ಟೀಕರಣ ರಾಜಕಾರಣದಿಂದ ದೇಶದಲ್ಲಿ ಕಾಂಗ್ರೆಸ್‌ ಧೂಳಿಪಟ: ಮುತಾಲಿಕ್‌

ಸುಮಾರು 700 ಕಲ್ಲುಗಳನ್ನು ನಾವು ನಿನ್ನೆಯವರೆಗೆ ಇಟ್ಟಿದ್ದೇವೆ. ಈ ಕೆಲಸ 2024ರ ಜನೆವರಿಯೊಳಗೆ ಬಹುತೇಕ ಪೂರ್ಣಗೊಳ್ಳುತ್ತೆ. ಶ್ರೀರಾಮನ ಬಾಲ ರೂಪದಲ್ಲಿ ಪ್ರತಿಷ್ಠಾಪನೆ ಮಾಡಿಸಿ ಜನರಿಗೆ ದರ್ಶನ ಕೊಡಿಸುವ ನಿರ್ಧಾರ ಮಾಡಲಾಗಿದೆ. ಅಲ್ಲಿ ಸರ್ಕಾರ 1200 ಎಕರೆ ಭೂಮಿ ಖರೀದಿ ಮಾಡಿದೆ. ಅದನ್ನ ಬೇರೆ ಬೇರೆ ರಾಜ್ಯ ಸರ್ಕಾರಗಳಿಗೆ, ವಿಶ್ವದ ಬೇರೆ ಬೇರೆ ದೇಶಗಳಿಗೆ ಮತ್ತು ಸಮಾಜದಲ್ಲಿ ಯಾರೇ ಕೇಳಿದರೂ ಕೊಡಬೇಕು ಎಂಬ ನಿಶ್ಚಯವಾಗಿದೆ. ಅದರಲ್ಲಿ ಕರ್ನಾಟಕ ಸರ್ಕಾರಕ್ಕೂ ಭೂಮಿ ಸಿಗಬಹುದು, ಕರ್ನಾಟಕ ಭವನ ಆಗಬಹುದು ಎಂದು ಆಯೋಧ್ಯೆಯ ಶ್ರೀರಾಮ ಮಂದಿ ನಿರ್ಮಾಣ ಕುರಿತು ಮಾಹಿತಿ ನೀಡಿದರು.

click me!