ಪಿಎಫ್‌ಐ ಭಯೋತ್ಪಾದಕ ಸಂಘಟನೆಯನ್ನ ಬ್ಯಾನ್ ಮಾಡಿದ ಮಾತ್ರಕ್ಕೆ, ಬಂಧನದಿಂದ ಇವರ ಆಟ ಮುಗಿಯುವುದಿಲ್ಲ. ಇವರ ಪುಂಡಾಟಿಕೆಯ ಕಡಿವಾಣಕ್ಕೆ ರಾಜ್ಯ, ಕೇಂದ್ರ ಸರ್ಕಾರ ಯೋಜನೆ ರೂಪಿಸಬೇಕಿದೆ ಎಂದು ಉಡುಪಿಯಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.
ಉಡುಪಿ (ಅ.5): ಪಿಎಫ್‌ಐ ಭಯೋತ್ಪಾದಕ ಸಂಘಟನೆಯನ್ನ ಬ್ಯಾನ್ ಮಾಡಿದ ಮಾತ್ರಕ್ಕೆ, ಬಂಧನದಿಂದ ಇವರ ಆಟ ಮುಗಿಯುವುದಿಲ್ಲ. ಇವರ ಪುಂಡಾಟಿಕೆಯ ಕಡಿವಾಣಕ್ಕೆ ರಾಜ್ಯ, ಕೇಂದ್ರ ಸರ್ಕಾರ ಯೋಜನೆ ರೂಪಿಸಬೇಕಿದೆ ಎಂದು ಉಡುಪಿಯಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.
ಪರೇಶ್ ಮೇಸ್ತಾ ಕೇಸ್: ಸಿಬಿಐ 'ಬಿ' ರಿಪೋರ್ಟ್ ಹಾಕಿರೋದು ತಪ್ಪು, ಮುತಾಲಿಕ್ ಆಕ್ರೋಶ
ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಕಾಣಿಸಿಕೊಂಡ 'ಚಡ್ಡಿಗಳೇ ನಾವು ಮತ್ತೆ ಬರುತ್ತೇವೆ' ಎಂಬ ಪಿಎಫ್‌ಐ ಗೋಡೆ ಬರೆಹ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪಿಎಫ್‌ಐ ಸಂಘಟನೆಯನ್ನ ನಿಷೇಧಿಸಿದ ಮಾತ್ರಕ್ಕೆ ಇವರ ಆಟ ನಿಲ್ಲುವುದಿಲ್ಲ. ಪಿಎಫ್‌ಐನ ಸಾವಿರಾರು ಕಮಿಟೆಡ್ ಕಾರ್ಯಕರ್ತರು ಇನ್ನೂ ಇದ್ದಾರೆ. ಕುತಂತ್ರ, ದೇಶದ್ರೋಹಿ ಪ್ರವೃತ್ತಿ ಮುಂದುವರಿಸಿದ್ದಾರೆ. ಇದಕ್ಕೆಲ್ಲ ಕಡಿವಾಣ ಹಾಕಬೇಕೆಂದರೆ ರಾಜ್ಯ, ಕೇಂದ್ರ ಯೋಜನೆ ರೂಪಿಸುವಂತೆ ಆಗ್ರಹಿಸಿದರು.
ಪೊಲೀಸ್, ಗುಪ್ತಚರ ಇಲಾಖೆ ಅಲರ್ಟ್ ಆಗಬೇಕು;
ಬಂಟ್ವಾಳದಲ್ಲಿ ಮತಾಂಧರು ಬರೆದಿರುವ ಗೋಡೆಬರಹ ಒಂದು ಎಚ್ಚರಿಕೆಯಾಗಿದೆ. ಪಿಎಫ್‌ಐ ಇನ್ನೂ ಆಕ್ಟಿವ್ ಆಗಿದೆ ಎಂಬುದರ ಸಂಕೇತ ಇದು. ಪುಂಡರನ್ನು ಹದ್ದುಬಸ್ತಿನಲ್ಲಿಡಲು ಹಿಂದೂ ಸಮಾಜ ಪೊಲೀಸ್ ಇಲಾಖೆ ಜೊತೆ ಸಹಕರಿಸಬೇಕು ಎಂದರು.
ಸ್ವಾತಂತ್ರ್ಯ ಸಿಕ್ಕಿದಾಗಲೇ ಮುಸಲ್ಮಾನರಲ್ಲಿ ರಾಷ್ಟ್ರಪ್ರೇಮ, ರಾಷ್ಟ್ರೀಯತೆ ಬಿತ್ತಬೇಕಿತ್ತು ಆದರೆ ಕಾಂಗ್ರೆಸ್ ಮುಸಲ್ಮಾನರ ತುಷ್ಟೀಕರಣ ಮಾಡಿ ಅವರನ್ನು ಪ್ರತ್ಯೇಕವಾಗಿ ಬೆಳೆಸಿ ದಾರಿ ತಪ್ಪಿಸಿದ ಪರಿಣಾಮವೇ ಇಂದಿನ ಪರಿಸ್ಥಿತಿಗೆ ಕಾರಣ. ಭಯೋತ್ಪಾದನೆ, ಕೊಲೆ, ಗಲಭೆ ಕಾಂಗ್ರೆಸ್ ನ ತುಷ್ಟೀಕರಣದ ಕೊಡುಗೆ ಎಂದು ಕಾಂಗ್ರೆಸ್ ಮುತಾಲಿಕ್ ವಾಗ್ದಾಳಿ ನಡೆಸಿದರು.
ಮುಸಲ್ಮಾನರಲ್ಲಿ ರಾಷ್ಟ್ರೀಯತೆ ಬೆಳೆಯುತ್ತೆ ಎಂಬ ನಂಬಿಕೆ ನನಗಿಲ್ಲ:
ಮುಸಲ್ಮಾನರಲ್ಲಿ ರಾಷ್ಟ್ರೀಯತೆ ಬೆಳೆಯುತ್ತೆ ಎಂಬ ಶೇ.99ರಷ್ಟು ನಂಬಿಕೆ ನನ್ನಲ್ಲಿಲ್ಲ ಎಂದ ಪ್ರಮೋದ್ ಮುತಾಲಿಕ್, ಆರೆಸ್ಸೆಸ್ ನಾಯಕರು ಮಸೀದಿಗೆ ಭೇಟಿ ಕೊಟ್ಟು ಮನಪ್ರವರ್ತನೆ ಆಗುತ್ತದೆ ಎಂದು ನಾನು ಒಪ್ಪಲ್ಲ. ಇದೊಂದು ವ್ಯರ್ಥ ಪ್ರಯತ್ನ ಎಂದರು. ಮುಂದುವರಿದು, ನಮ್ಮ ಶತ್ರು ಯಾರು ಮಿತ್ರ ಯಾರು ಎಂದು ಹಿಂದೂ ಸಮಾಜಕ್ಕೆ ಸ್ಪಷ್ಟ ಕಲ್ಪನೆ ಇಲ್ಲ. ಹಿಂದೂಗಳು ಸಾವಿರಾರು ವರ್ಷದಿಂದ ಸೌಹಾರ್ದತೆಯಲ್ಲೇ ಇದ್ದಾರೆ. ಹಿಂದೂ ಸಮಾಜದಲ್ಲಿ ಆಕ್ರಮಣ ಮಾಡುವ ಮಾನಸಿಕತೆ ಇಲ್ಲ. ಮಸೀದಿ, ಮದರಸಾಕ್ಕೆ ಹೋಗಿ ಮನವರಿಕೆ ಮಾಡುತ್ತೇವೆ ಎಂಬುದು ಅಸಾಧ್ಯದ ಮಾತು ಎಂದರು.
Pramod Muthalik ಶ್ರೇಯೋಭಿವೃದ್ಧಿ ಮತ್ತು ಶತ್ರು ನಾಶಕ್ಕಾಗಿ ಉಡುಪಿಯಲ್ಲಿ ನರಸಿಂಹ ಯಾಗ
ದತ್ತಾತ್ರೇಯ ಹೊಸಬಾಳೆ ರಾಜಕೀಯ ವ್ಯಕ್ತಿಯಲ್ಲ:
ದೇಶದಲ್ಲಿ ಆರ್ಥಿಕ ಅಸಮಾನತೆ ವಿಚಾರ ಕುರಿತಂತೆ ಆರೆಸ್ಸೆಸ್ ಮುಖಂಡ ಹೊಸಬಾಳೆ ಹೇಳಿಕೆ ಪ್ರಸ್ತಾಪಿಸಿದ ಮುತಾಲಿಕ್ ಅವರು, ದತ್ತಾತ್ರೇಯ ಹೊಸಬಾಳೆ ಆರೆಸ್ಸೆಸ್‌ನ ಎರಡನೇ ಸ್ಥಾನ ಹೊಂದಿರುವಂಥ ವ್ಯಕ್ತಿ. ಅವರು ಅಧ್ಯಯನ ಮಾಡಿಯೇ ವಾಸ್ತವಿಕತೆಯನ್ನು ಅರ್ಥ ಮಾಡಿಕೊಂಡು ಹೇಳಿದ್ದಾರೆ. ಯಾವುದೇ ಟೀಕೆ, ದ್ವೇಷ ಮಾಡಲು ಅವರು ರಾಜಕೀಯ ವ್ಯಕ್ತಿಯಲ್ಲ. ದೇಶದ ಬಗ್ಗೆ ಕಳಕಳಿ ಮತ್ತು ವೇದನೆಯಿಂದ ಹೇಳಿದ್ದಾರೆ.ಸಿಟ್ಟು ಮತ್ತು ತಪ್ಪು ಸಂದೇಶ ನೀಡುವ ಉದ್ದೇಶ ಹೊಸಬಾಳೆಗೆ ಇರುವುದಿಲ್ಲ. ಬಿಜೆಪಿ ವಿರುದ್ಧ ಮಾತನಾಡಿದ್ದಾರೆ ಎಂದು ಭಾವಿಸಬೇಕಾಗಿಲ್ಲ. ಬಿಜೆಪಿಯ ಒಳಗೆ ಆಗುವ ತಪ್ಪುಗಳನ್ನು ಯಾರಾದರೂ ಒಬ್ಬರು ಹೇಳಲೇಬೇಕು. ಇಲ್ಲದಿದ್ದರೆ ಆನೆ ನಡೆದದ್ದೇ ದಾರಿ ಎಂದು ಬಿಜೆಪಿ ಭಾವಿಸುವ ಅಪಾಯವಿದೆ ಎಂದರು. ಮುಂದುವರಿದು, ಆರ್ಥಿಕ ಅಸಮಾನತೆ ವಿಚಾರದಲ್ಲಿ ನಾನು ಹೆಚ್ಚು ಅಧ್ಯಯನ ಮಾಡಿಲ್ಲ. ಹೊಸಬಾಳೆ ಹೇಳಿಕೆಯನ್ನು ಸ್ವೀಕರಿಸಿ ಸುಧಾರಣೆ ಹಾದಿಯಲ್ಲಿ ಬಿಜೆಪಿ ಬೆಳೆಯಬೇಕು. ಉಡುಪಿಯಲ್ಲಿ ಶ್ರೀರಾಮಸೇನೆ ಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿಕೆ