ಕಲಘಟಗಿಯಲ್ಲಿ ಲವ್ ಜಿಹಾದ್?: ಮತಾಂತರಿಸಿ ಹಿಂದೂ ಮಹಿಳೆ ಮೇಲೆ ಮುಸ್ಲಿಂ ವ್ಯಕ್ತಿ ಹಲ್ಲೆ..!

By Girish Goudar  |  First Published Jul 26, 2024, 8:05 PM IST

ಬೆಂಗಳೂರಿನ ಕನಕನಗರ ನಿವಾಸಿ ಮುಜಾಹೀದ್‌ ಖಾನ್‌ ವಿರುದ್ಧ ಸಂತ್ರಸ್ತ ಮಹಿಳೆ ದೂರು ನೀಡಿದ್ದಾರೆ.  ಆರೋಪಿ ಮುಜಾಹೀದ್‌ ಖಾನ್‌ ಅವಾಚ್ಯ ಶಬ್ಧಗಳಿಂದ ನಿಂದಿಸಿ, ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಿದ ಸಂತ್ರಸ್ತ ಮಹಿಳೆ 
 


ಹುಬ್ಬಳ್ಳಿ(ಜು.26):  ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಲವ್ ಜಿಹಾದ್ ಆರೋಪವವೊಂದು ಕೇಳಿ ಬಂದಿದೆ. ಮದುವೆಯಾಗಿ ಮತಾಂತರಿಸಿ ಹಲ್ಲೆ ಮಾಡಿರುವುದಾಗಿ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಮಹಿಳೆ ದೂರು ನೀಡಿದ್ದಾರೆ. 

ಬೆಂಗಳೂರಿನ ಕನಕನಗರ ನಿವಾಸಿ ಮುಜಾಹೀದ್‌ ಖಾನ್‌ ವಿರುದ್ಧ ಸಂತ್ರಸ್ತ ಮಹಿಳೆ ದೂರು ನೀಡಿದ್ದಾರೆ.  ಆರೋಪಿ  ಮುಜಾಹೀದ್‌ ಖಾನ್‌ ಅವಾಚ್ಯ ಶಬ್ಧಗಳಿಂದ ನಿಂದಿಸಿ, ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. 

Tap to resize

Latest Videos

ಮಂಗಳೂರಿನಲ್ಲಿ ಕಾಣೆಯಾಗಿದ್ದ ಹಿಂದೂ ಯುವತಿ ಮುಸ್ಲಿಂ ಜೊತೆ ಪತ್ತೆ, ಯುವಕನ ಹಿನ್ನೆಲೆ ಕೇಳಿ ಶಾಕ್!

ಸಂತ್ರಸ್ತ ಮಹಿಳೆ ಡೈವೋರ್ಸ್‌ಗೆ ಕಲಘಟಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ನ್ಯಾಯಾಲಯದ ಆವರಣ ಹಾಗೂ ಮನೆಗೆ ನುಗ್ಗಿ ಹಲ್ಲೆ ಮಾಡಿ, ಜೀವಬೆದರಿಕೆ ಹಾಕಿದ್ದಾನೆಂದು ದೂರು ನೀಡಿದ್ದಾರೆ. ಮುಜಾಹೀದ್‌ ಖಾನ್ ವಿರುದ್ಧ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಶ್ರೀರಾಮ ಸೇನೆಯ ಕಾರ್ಯಕರ್ತರೊಂದಿಗೆ ತೆರಳಿ ಸಂತ್ರಸ್ತ ಮಹಿಳೆ ದೂರು ನೀಡಿದ್ದಾರೆ. 

click me!