ಗದಗ: ಸಂಗೀತ ಪರೀಕ್ಷಾ ಕೇಂದ್ರಕ್ಕಾಗಿ ಬೀದಿಗಿಳಿದ ಕಲ್ಲಯ್ಯಜ್ಜ ಸ್ವಾಮೀಜಿ, ಮಕ್ಕಳಿಗಾಗಿ ಪ್ರಾಣತ್ಯಾಗಕ್ಕೂ ಸಿದ್ಧ ಎಂದ ಶ್ರೀಗಳು..!

By Girish GoudarFirst Published Jul 26, 2024, 7:40 PM IST
Highlights

ಗದಗನ ಸಂಗೀತ ಪರೀಕ್ಷಾ ಕೇಂದ್ರ ಹುಬ್ಬಳ್ಳಿಗೆ ಶಿಫ್ಟ್ ಮಾಡಿದೆ. ವಿಶ್ವವಿದ್ಯಾಲಯ ಕುಲಪತಿ ನಿರ್ಧಾರಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಖುದ್ದ ಗವಾಯಿಗಳ ಮಠದ ಶ್ರೀಗಳೇ ಬೀದಿಗಳಿದು ಅನಾಥ ಮಕ್ಕಳ ಜೊತೆ ಹೋರಾಟಕ್ಕೆ ಇಳಿದಿದ್ದಾರೆ. ಒಂದು ವೇಳೆ ಕೇಂದ್ರ ರದ್ದು ಮಾಡಿದ್ರೆ ಇಡೀ ಮಠದ ಲಕ್ಷಾಂತರ ಭಕ್ತರು ಬೀದಿಗಿಳಿವುದಾಗಿ ಎಚ್ಚರಿಕೆ ನೀಡಿದ್ದಾರೆ.  
 

ಗದಗ(ಜು.26):  ಅದು ನಾಡಿನ ಸಂಗೀತದ ಆಶ್ರಮ. ಅಂಧ, ಅನಾಥ ಮಕ್ಕಳ ಪಾಲಿನ ಆಶ್ರಯ ತಾಣ. ಅಂಧ, ಅನಾಥ ಮಕ್ಕಳಲ್ಲಿ ಸಂಗೀತದ ದೀಪ ಹಚ್ಚಿದ ಸಂಗೀತದ ಆಶ್ರಮ. ಆ ಆಶ್ರಮಕ್ಕೆ ಶತಮಾನದ ಇತಿಹಾಸವಿದೆ. ಸಾವಿರಾರು ಸಂಖ್ಯೆಯಲ್ಲಿ ಸಂಗೀತವನ್ನು ಕಲಿತು ಬದುಕು ಕಟ್ಟಿಕೊಂಡಿದ್ದಾರೆ. ಆದ್ರೆ, ಈವಾಗ ಸಂಗೀತ ಕಾಶಿಗೆ ಮೈಸೂರು ವಿಶ್ವವಿದ್ಯಾಲಯ ಬಿಗ್ ಶಾಕ್ ನೀಡಿದೆ. ಗದಗನ ಸಂಗೀತ ಪರೀಕ್ಷಾ ಕೇಂದ್ರ ಹುಬ್ಬಳ್ಳಿಗೆ ಶಿಫ್ಟ್ ಮಾಡಿದೆ. ವಿಶ್ವವಿದ್ಯಾಲಯ ಕುಲಪತಿ ನಿರ್ಧಾರಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಖುದ್ದ ಗವಾಯಿಗಳ ಮಠದ ಶ್ರೀಗಳೇ ಬೀದಿಗಳಿದು ಅನಾಥ ಮಕ್ಕಳ ಜೊತೆ ಹೋರಾಟಕ್ಕೆ ಇಳಿದಿದ್ದಾರೆ. ಒಂದು ವೇಳೆ ಕೇಂದ್ರ ರದ್ದು ಮಾಡಿದ್ರೆ ಇಡೀ ಮಠದ ಲಕ್ಷಾಂತರ ಭಕ್ತರು ಬೀದಿಗಿಳಿವುದಾಗಿ ಎಚ್ಚರಿಕೆ ನೀಡಿದ್ದಾರೆ.  

ಹೌದು,  ಗದಗ ನಗರದ ಶ್ರೀ ವೀರೇಶ್ವರ ಪುಣ್ಯಾಶ್ರಮ ಅಂಧ ಅನಾಥ ಮಕ್ಕಳಿಗೆ ದಾರಿ ದೀಪವಾಗಿದೆ. ಅದರಲ್ಲೂ ಗದಗ ಜಿಲ್ಲೆ ಎಂದ್ರೆ ಇದು ಸಂಗೀತ ಕಾಶಿ ಎಂದು ಫೇಮಸ್.. ಇಲ್ಲಿ ಸಂಗೀತ ಕಲಿತು ಹೋದವರು ನಾಡಿನಲ್ಲಿ ಬಹುದೊಡ್ಡ ಹೆಸರು ಮಾಡಿದ್ದಾರೆ. ಲಿಂಗೈಕ್ಯ ಪಂಡಿತ ಪುಟ್ಟರಾಜ ಗವಾಯಿಗಳು ಅಂಧ, ಅನಾಥರ ಬಾಳಲ್ಲಿ ಸಂಗೀತದ ದೀಪ ಹಚ್ಚುವ ಮೂಲಕ ಸಂಗೀತದ ಬದುಕು ನೀಡಿದ್ದಾರೆ.. ಇಷ್ಟೊಂದು ಸಂಗೀತದ ಹಿನ್ನೆಲೆ ಇರೋ ನಗರ ಗದಗ ಜಿಲ್ಲೆ.. ಆದ್ರೆ ಇಷ್ಟು ವರ್ಷಗಳ ಕಾಲ ಸಂಗೀತ ಪರೀಕ್ಷಾ ಕೇಂದ್ರವನ್ನು ಗದಗ ನಗರದಲ್ಲಿ ನಡೆಸುತ್ತಿದ್ರು.. ಆದ್ರೆ ಈ ಬಾರಿ ಏಕಾಏಕಿ ಗದಗ ನಗರದ ಸಂಗೀತ ಪರೀಕ್ಷಾ ಕೇಂದ್ರವನ್ನು ಹುಬ್ಬಳ್ಳಿ ಶಿಫ್ಟ್ ಮಾಡಲಾಗಿದೆ. ಇದು ಸಂಗೀತ ವಿದ್ಯಾರ್ಥಿಗಳು ಹಾಗೂ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಾದ ಶ್ರೀ ಕಲ್ಲಯ್ಯಜ್ಜನವರ ಆಕ್ರೋಶಕ್ಕೆ ಕಾರಣವಾಗಿದೆ.. ಕುಲಪತಿಗೆ ಸಂಗೀತದ ಗಂಧವೇ ಇಲ್ಲ ಅಂತಾ ಶ್ರೀಗಳು ಕಿಡಿಕಾರಿದ್ದಾರೆ. ಶತಮಾನದ ಇತಿಹಾಸಕ್ಕೆ ಧಕ್ಕೆ ಆದ್ರೆ ಪ್ರಾಣ ತ್ಯಾಗಕ್ಕೂ ಸಿದ್ಧ ಎಂದು ಎಚ್ಚರಿಕೆ ನೀಡಿದ ಶ್ರೀಗಳು ಸರ್ಕಾರ ಈ ವಿಷಯ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ರದ್ದು ಮಾಡಿದ್ರೆ ಎಲ್ಲ ವಿದ್ಯಾರ್ಥಿಗಳು ಭಹಿಷ್ಕಾರ ಮಾಡ್ತಾರೆ. ಬೇರೆ ಕಡೇ ಸಂಗೀತ ಪರೀಕ್ಷೆ ಬರೆಯಲು ಅಂಧ ಮಕ್ಕಳು ಹೇಗೆ ಹೋಗ್ಬೇಕು ಎಂದು ಆಕ್ರೋಶ ವ್ಯಕ್ತಪಡೆಸಿದ್ದಾರೆ..

Latest Videos

ಗದಗ: ಬುದ್ಧಿ ಹೇಳಿದ್ದಕ್ಕೆ ಮಗನ ಸ್ನೇಹಿತನಿಂದನೇ ನಡೆದಿತ್ತು ಕೊಲೆ..!

ಸಂಗೀತ ಪರೀಕ್ಷೆ ಬರೆಯಲು, ಒಬ್ಬ ಅಂಧ ವಿದ್ಯಾರ್ಥಿ ಜೊತೆಗೆ ಇಬ್ಬರು ಹೋಗ್ಬೇಕಾಗುತ್ತದೆ. ಹಾಗೇ ಸಂಗೀತ ವಾದ್ಯಗಳಾದ ಹಾರ್ಮೋನಿಯಂ, ವಯೋಲಿನ್, ಸಿತಾರ, ತಬಲಾ ಸೇರಿದಂತೆ ಸಂಗೀತ ಪರಿಕರ ತೆಗೆದುಕೊಂಡು ಹೋಗ್ಬೇಕು.. ಅಲ್ಲಿನ ಪರೀಕ್ಷಾ ಕೇಂದ್ರಕ್ಕೆ ಅಂಧ‌ ಮಕ್ಕಳು ಹೇಗೆ ಹೋಗಿ ಪರೀಕ್ಷಾ ಬರೆಯಬೇಕು, ಅದರ ಖರ್ಚು ವೆಚ್ಚ ಯಾರು ಕೋಡ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.. ಸಿಎಂ ಸಿದ್ದರಾಮಯ್ಯ ಅವರು ಕೂಡಲೇ ಪರಿಶೀಲನೆ ಮಾಡ್ಬೇಕು, ಗದಗ ಪರೀಕ್ಷಾ ಕೇಂದ್ರವನ್ನು ರದ್ದು ಮಾಡಬಾರದು ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ. ಇನ್ನೂ ಗದಗ ಜಿಲ್ಲೆಯಲ್ಲಿ ಗದಗ ನಗರದ ಶ್ರೀ ವೀರೇಶ್ವರ ಪುಣ್ಯಾಶ್ರಮದ ಸಂಗೀತ ಶಾಲೆ ಹಾಗೂ ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದ, ಜ್ಞಾನ ಸಿಂಧು ಮಕ್ಕಳ ವಸತಿ ಶಾಲೆಯ ಸುಮಾರು 125 ಮಕ್ಕಳು ಈ ಭಾರಿ ಸಂಗೀತ ಪರೀಕ್ಷೆಯನ್ನು ಬರೆಯಲಿದ್ದಾರೆ.. ಇದೇ 27 ರಿಂದ‌ ಆರಂಭವಾಗಲಿವೆ. ಆದ್ರೆ ವಿಶೇಷ ಚೈತನ್ಯ ಮಕ್ಕಳು ಹುಬ್ಬಳ್ಳಿಗೆ ಹೋಗಿ ಪರೀಕ್ಷೆ ಬರೆಯಲು ಬಹಳ ತೊಂದೆಯಾಗುತ್ತಿದೆ.. ಇಷ್ಟು ವರ್ಷಗಳ ಕಾಲ ಬೆಂಗಳೂರಿನ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯವರು ಪರೀಕ್ಷೆ ನಡೆಸಿಕೊಂಡು ಬಂದಿದ್ರು.. ಈ ವರ್ಷ ಈ ಪರೀಕ್ಷೆ ನಡೆಸಲು ಸರ್ಕಾರ ಮೈಸೂರಿನ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯಕ್ಕೆ ನೀಡಲಾಗಿದೆ.. ಈ ವಿ.ವಿಯವರು ರಾಜ್ಯಾದ್ಯಂತ 18 ಕಡೇ ಸಂಗೀತ ಪರೀಕ್ಷೆ ನಡೆಸಲಿದ್ದಾರೆ. ಆದ್ರೆ, ಇಷ್ಟು ವರ್ಷಗಳ ಕಾಲ ಗದಗನಲ್ಲಿ ಸಂಗೀತ ಪರೀಕ್ಷೆ ನಡೆಸುತ್ತಿದ್ರು. ಆದ್ರೆ ಈ ಬಾರಿ ಹುಬ್ಬಳ್ಳಿಯ ಪರೀಕ್ಷಾ ಕೇಂದ್ರ ಶಿಫ್ಟ್ ಮಾಡಿದ್ದಾರೆ. ಹೀಗಾಗಿ ಗದಗ ಜಿಲ್ಲೆಯ ಸಂಗೀತಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಹುಬ್ಬಳ್ಳಿಯ ಪರೀಕ್ಷಾ ಕೇಂದ್ರ ರದ್ದು ಮಾಡಿ, ಗದಗ ಜಿಲ್ಲೆಯಲ್ಲಿ ನಡೆಸುವಂತೆ ಒತ್ತಾಯ ಮಾಡಿದ್ದಾರೆ.

ಗದಗ ಜಿಲ್ಲೆಯಲ್ಲಿ ಅತೀ ಹೆಚ್ಚು ವಿಶೇಷ ಚೈತನ್ಯ ಮಕ್ಕಳಿದ್ದಾರೆ. ಅದರಲ್ಲಿ ಅನಾಥ ಮಕ್ಕಳು ಬಹಳ ಸಂಖ್ಯೆಯಲ್ಲಿ ಇದ್ದಾರೆ.. ಹೀಗಾಗಿ ಪರೀಕ್ಷೆ ಬರೆಯಲು ಸಾಕಷ್ಟು ಅಡಚಣೆ ಆಗ್ತುತ್ತೇ.. ಹೀಗಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವರು ಪರಾಮರ್ಶೆ ಮಾಡಿ, ಕೂಡಲೇ ಹಿಂದಿನ ಹಾಗೇ ಗದಗ ಜಿಲ್ಲೆಯಲ್ಲಿ ಪರೀಕ್ಷೆ ನಡೆಸುವ ಮೂಲಕ, ಅಂಧ ಅನಾಥ ಮಕ್ಕಳ ಹಿತ ಕಾಪಾಡಬೇಕಾಗಿದೆ. 

click me!