New Year Party: ಹೊಸ ವರ್ಷ ಸಂಭ್ರಮಾಚರಣೆ ವೇಳೆ ಗನ್‌ಫೈರ್‌: ಗುಂಡು ಹಾರಿಸಿದ-ತಗುಲಿದ ಇಬ್ಬರೂ ಸಾವು

By Sathish Kumar KH  |  First Published Jan 1, 2023, 4:14 PM IST

ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಬಿತ್ತು ಎರಡು ಹೆಣ
ಕುಡಿದ ಮತ್ತಿನಲ್ಲಿ ಬಂದೂಕಿನಿಂದ ಗನ್‌ ಮಿಸ್‌ ಫೈರಿಂಗ್‌
ಮಗನ ಸ್ನೇಹಿತನ ದೇಹ ಸೀಳಿದ ಗನ್‌ ಬುಲೆಟ್ 


ಶಿವಮೊಗ್ಗ (ಜ.1): ಹೊಸ ವರ್ಷದ ದಿನದಂದು ತಂದೆ-ಮಗ ಸಂಭ್ರಮಾಚರಣೆ ಮಾಡುವ ವೇಳೆ ಗನ್‌ಫೈರ್‌ ಮಾಡಿದ್ದಾರೆ. ಕುಡಿದ ಮತ್ತಿನಲ್ಲಿ ತಂದೆ ಹಾರಿಸಿದ ಗುಂಡು ಮಗನ ಜನ್ಮದಿನದ ಶುಭಾಶಯ ಕೋರಲು ಬಂದಿದ್ದ ಮಗನ ಸ್ನೇಹಿತನ ದೇಹವನ್ನು ಹೊಕ್ಕಿದೆ. ಇನ್ನು ಯುವಕ ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ಗುಂಡು ಹಾರಿಸಿದ ತಂದೆ ಸ್ಥಳದಲ್ಲಿಯೇ ಹೃದಯಾಘಾತವಾಗಿ ಸಾವನ್ನಪ್ಪಿದ್ದರು. ಇನ್ನು ಗಂಭೀರ ಗಾಯಗೊಂಡಿದ್ದ ಮಗನನ್ನು ಶಿವಮೊಗ್ಗದ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಮಧ್ಯಾಹ್ನದ ನಂತರ ಚಿಕಿತ್ಸೆ ಫಲಕಾರಿ ಆಗಿದೇ ಮಗನೂ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಶಿವಮೊಗ್ಗದ ವಿದ್ಯಾನಗರದಲ್ಲಿ ನಡೆದಿದೆ.

ಈ ಅವಘಡದ ಘಟನೆ ನ್ಯೂ ಇಯರ್ ಆಚರಣೆ ವೇಳೆ ಸಂಭವಿಸಿದೆ. ಹೊಸ ವರ್ಷ ಆಚರಣೆ ಸಂಭ್ರಮದಲ್ಲಿ ಗನ್ ಫೈರ್ ಮಾಡಲಾಗಿದೆ. ಕುಡಿದ ಮತ್ತಿನಲ್ಲಿ ಗನ್ ಫೈರ್ ಮಾಡಿದ ಬುಲೆಟ್‌ ಸಂಭ್ರಮಾಚರಣೆಯಲ್ಲಿದ್ದ ಯುವಕನಿಗೆ ತಗಲಿದೆ. ಗುಂಡು ಹಾರಿಸಿದ ವ್ಯಕ್ತಿಯ ಮಗ ಸಂದೀಪ್‌ನ ಸ್ನೇಹಿತ ವಿನಯ್ ಗೆ ಬುಲೆಟ್ ತಗುಲಿ, ಗಂಭೀತ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ. ಇದನ್ನು ಕಂಡು ಗುಂಡು ಹಾರಿಸಿದ ವಯಕ್ತಿ ಮಂಜುನಾಥ್ (65) ಶಾಕ್‌ಗೆ ಒಳಗಾಗಿ ಸ್ಥಳದಲ್ಲಿಯೇ ಹೃದಯಾಘಾತ ಉಂಟಾಗಿ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಇವರು ಶಿವಮೊಗ್ಗದ ಪ್ರತಿಷ್ಠಿತ ಗೋಪಾಲ್ ಗ್ಲಾಸ್ ಅಂಡ್ ಪ್ಲೇವುಡ್ ಅಂಗಡಿಯ ಮಾಲೀಕರು ಆಗಿದ್ದರು.

Tap to resize

Latest Videos

ನ್ಯೂ ಇಯರ್ ಪಾರ್ಟಿ: ಕುಡಿದ ಮತ್ತಿನಲ್ಲಿ ಗನ್‌ಫೈರ್‌ ಮಾಡಿದ ತಂದೆ: ಮಗನ ದೇಹ ಹೊಕ್ಕ ಬುಲೆಟ್‌, ದುರಂತ ಸಾವು

ಘಟನೆ ನಡೆದಿದ್ದು ಹೇಗೆ? : ಹೊಸ ವರ್ಷದ ಸಂಭ್ರಮಾಚರಣೆ ಹಾಗೂ ಸ್ನೇಹಿತ ಸಂದೀಪ್‌ ನ ಜನ್ಮದಿನ ಅಂಗವಾಗಿ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ವಿನಯ್‌ ಸ್ನೇಹಿತನ ಮನೆಗೆ ತೆರಳಿದ್ದಾನೆ. ಎಲ್ಲರೂ ಕುಡಿದು ಸಂಭ್ರಮ ಆಚರಿಸಿದ್ದಾರೆ. ಇನ್ನು ಮಧ್ಯರಾತ್ರಿ 12 ಗಂಟೆ ವೇಳೆಗೆ ಹೊಸ ವರ್ಷವನ್ನು ಸ್ವಾಗತಿಸಲು ಸಂದೀಪ್‌ನ ತಂದೆ ಮಂಜುನಾಥ್ ಓಲೆೇಕರ್ ಅವರು ಬಂದು ಬಂದೂಕಿನಿಂದ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಆದರೆ, ಈ ಗನ್‌ ಫೈರ್‌ ಮಿಸ್ ಫೈರ್ ಆಗಿದ್ದು, ಬಂದೂಕಿನಿಂದ ಹೊರಬಂದ ಗುಂಡು ವಿನಯನ ಹೊಟ್ಟೆಗೆ ತಗಲಿತ್ತು. ತಕ್ಷಣವೇ ವಿನಯ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ವಿನಯ್‌ಗೆ ಶಸ್ತ್ರಚಿಕಿತ್ಸೆ ಮಾಡಿ ಗುಂಡು ಹೊರತೆಗೆದಿದ್ದಾರೆ. ಆದರೆ, ಶಸ್ತ್ರಚಿಕಿತ್ಸೆ ಮಾಡಿದರೂ ಯಾವುದೇ ಪ್ರಯೋಜನವಾಗದೆ ವಿನಯ್ (31) ಸಾವನ್ನಪ್ಪಿದ್ದಾರೆ. 

Mandya: ಧನದಾಹಿ ಪತಿಯ ವರದಕ್ಷಿಣೆ ಕಿರುಕುಳಕ್ಕೆ ಗರ್ಭಿಣಿ ಪತ್ನಿ ಬಲಿ?..! ಕೊಲೆ ಶಂಕೆ

ಸಂಭ್ರಮಕ್ಕೆ ಮಿತಿ ಇರಬೇಕು:
ಹೊಸ ವರ್ಷದ ಸಂಭ್ರಮಾಚರಣೆಗಳು ಹಾಡು, ಕುಣಿತಕ್ಕೆ ಮಾತ್ರ ಸೀಮಿತವಾಗಿದ್ದರೆ ಯಾರಿಗೂ ಆಪತ್ತು ತರುವುದಿಲ್ಲ. ನಾವೇ ಬೇರೆ, ನಮ್ಮ ಸ್ಟೈಲೇ ಬೇರೆ ಎನ್ನುವ ಬೇರೆ ಎಂದು ವಿಶಿಷ್ಟ ಸಂಭ್ರಮಾಚರಣೆ ಮಾಡಲು ಹೋದವರು ಹೆಣವಾಗಿದ್ದಾರೆ. ಇನ್ನು ಯಾವುದೇ ಸಂಭ್ರಮಾಚರಣೆಗಳಲ್ಲಿ ಇತಿ-ಮಿತಿ ಮೀರಿದರೆ ಆಪತ್ತು ಕಟ್ಟಿಟ್ಟಬುತ್ತಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಆದರೆ, ಶಿವಮೊಗ್ಗದ ಕುಟುಂಬದಲ್ಲಿ ಪ್ರಾಣದ ಜೊತೆಗೆ ಆಟವಾಡುವಂತಹ ಮಿತಿ ಮೀರದ ಸಂಭ್ರಮಕ್ಕೆ ಪ್ರಾಣಪಕ್ಷಿ ಹಾರಿ ಹೋಗಿರುವುದು ನಿಜಕ್ಕೂ ದುರಂತದ ಎಂದೇ ಹೇಳಬಹುದು.

click me!