2022ರಲ್ಲಿ ವಿಜಯಪುರಕ್ಕೆ ಹೆಚ್ಚು ಕಾಡಿದ ಭೂಕಂಪನ, ಅತಿವೃಷ್ಟಿ..!

By Kannadaprabha News  |  First Published Jan 1, 2023, 2:28 PM IST

ವಿಜಯಪುರ ಜಿಲ್ಲೆಯ ಜನರನ್ನು ಅತೀ ಹೆಚ್ಚು ಕಾಡಿದ್ದು ಭೂಕಂಪನ. ಜುಲೈನಲ್ಲಿ ತಿಕೋಟಾ ಹಾಗೂ ಇಂಡಿ ಭಾಗದಲ್ಲಿ ಬೆಳಗಿನ ಜಾವ ಸಂಭವಿಸಿದ ಭೂಕಂಪನದಿಂದಾಗಿ ಹಾನಿ ಉಂಟಾಗಿತ್ತು. 48 ಮನೆಗಳ ಗೋಡೆಗಳು ಅಲ್ಪ ಪ್ರಮಾಣದಲ್ಲಿ ಬಿರುಕು ಬಿಟ್ಟಿದ್ದವು. ಸುಮಾರು 14 ಬಾರಿ ಜಿಲ್ಲೆಯಲ್ಲಿ ಅಲ್ಲಲ್ಲಿ ಭೂಮಿ ಕಂಪಿಸಿದೆ. 


ಖಾಜಾಮೈನುದ್ದೀನ್‌ ಪಟೇಲ್‌

ವಿಜಯಪುರ(ಜ.01): ಗುಮ್ಮಟನಗರಿಗೆ 2022ರಲ್ಲಿ ಸಿಹಿಗಿಂತ ಕಹಿಯನ್ನೇ ಹೆಚ್ಚಾಗಿ ಕಂಡಿದೆ. ಆರಂಭದಲ್ಲಿ ಕೊರೊನಾ ಮೂರನೇ ಅಲೆ, ಆತಂಕ ಮೂಡಿಸಿದ ಭೂಕಂಪ, ಅತಿವೃಷ್ಟಿಯಿಂದ ಬೆಳೆಗಾರರನ್ನು ಸಂಕಷ್ಟಕ್ಕೆ ದೂಡಿದ ಅಕಾಲಿಕ ಮಳೆ... ಹೀಗೆ ಸಾಲು ಸಾಲು ನೋವುಗಳೇ 2022ರಲ್ಲಿ ವಿಜಯಪುರ ಜಿಲ್ಲೆಯ ಜನರ ಪಾಲಿಗೆ ಒದಗಿದವು. ಈಗ 2023ರ ಹೊಸ ವರುಷ ಹೊಸ್ತಿಲಲ್ಲಿದ್ದು, ಇಂತಹ ನೋವುಗಳು ಮತ್ತೆ ಮರುಕಳಿಸದೇ ಸಂತಸದ ಹೊನಲು ಜನರಿಗೆ ದಕ್ಕಲಿ ಎಂಬುವುದು ಕನ್ನಡಪ್ರಭದ ಆಶಯ.

Tap to resize

Latest Videos

ಜಿಲ್ಲೆಯನ್ನು ಅತೀ ಹೆಚ್ಚು ಕಾಡಿದ್ದು ಭೂಕಂಪನ:

ಜಿಲ್ಲೆಯ ಜನರನ್ನು ಅತೀ ಹೆಚ್ಚು ಕಾಡಿದ್ದು ಭೂಕಂಪನ. ಜುಲೈನಲ್ಲಿ ತಿಕೋಟಾ ಹಾಗೂ ಇಂಡಿ ಭಾಗದಲ್ಲಿ ಬೆಳಗಿನ ಜಾವ ಸಂಭವಿಸಿದ ಭೂಕಂಪನದಿಂದಾಗಿ ಹಾನಿ ಉಂಟಾಗಿತ್ತು. 48 ಮನೆಗಳ ಗೋಡೆಗಳು ಅಲ್ಪ ಪ್ರಮಾಣದಲ್ಲಿ ಬಿರುಕು ಬಿಟ್ಟಿದ್ದವು. ಸುಮಾರು 14 ಬಾರಿ ಜಿಲ್ಲೆಯಲ್ಲಿ ಅಲ್ಲಲ್ಲಿ ಭೂಮಿ ಕಂಪಿಸಿದೆ. ಅಕಾಲಿಕ ಮಳೆ ರೈತರನ್ನು ಸಂಕಷ್ಟಕ್ಕೆ ದೂಡಿತು. ಕೈಗೆ ಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿತ್ತು. ದ್ರಾಕ್ಷಿ, ಈರುಳ್ಳಿ ಸೇರಿದಂತೆ ಹಲವಾರು ಬೆಳೆಗಳ ಬೆಳೆಗಾರರು ತೀವ್ರ ಬಾಧಿತರಾದರು.

ಸಿದ್ದೇಶ್ವರ ಶ್ರೀಗಳ ಆರೋಗ್ಯ ವಿಚಾರಿಸಿದ ಸಿಎಂ ಬೊಮ್ಮಾಯಿ, ಜೋಶಿ: ಕರೆ ಮಾಡಿ ಮಾಹಿತಿ ಪಡೆದ ಪ್ರಧಾನಿ ಮೋದಿ

ಕೊನೆಗೂ ನಡೆದ ಮಹಾನಗರ ಪಾಲಿಕೆ ಚುನಾವಣೆ:

ಪ್ರಸಕ್ತ ವರ್ಷದಲ್ಲಿ ಮಹಾನಗರ ಪಾಲಿಕೆ ಚುನಾವಣೆ 8 ವರ್ಷದ ನಂತರ ನಡೆಯಿತು. ಪಾಲಿಕೆ 35 ವಾರ್ಡ್‌ಗಳ ಚುನಾವಣೆಯಲ್ಲಿ ಬಿಜೆಪಿ 33 ವಾರ್ಡ್‌ಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಚುನಾವಣೆ ಅಖಾಡದಲ್ಲಿ ಇಳಿಸಿದರೆ ಕಾಂಗ್ರೆಸ್‌ 35 ವಾರ್ಡ್‌ಗಳಲ್ಲಿ ಅಭ್ಯರ್ಥಿ ಹಾಕಿತ್ತು. ಜೆಡಿಎಸ್‌ 24 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಅಖಾಡದಲ್ಲಿ ಇಳಿಸಿತು. ಪಾಲಿಕೆಯಲ್ಲಿ 17 ವಾರ್ಡ್‌ಗಳಲ್ಲಿ ಬಿಜೆಪಿ, 10ರಲ್ಲಿ ಕಾಂಗ್ರೆಸ್‌, ಎಂಐಎಂ -2, ಜೆಡಿಎಸ್‌ 1, ಪಕ್ಷೇತರ 5 ವಾರ್ಡ್‌ಗಳಲ್ಲಿ ಜಯ ಸಾಧಿಸಿ, ಬಿಜೆಪಿ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿತು.

ಜನವರಿ

- ಜಿಲ್ಲೆಯಲ್ಲಿ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್‌ ಲಸಿಕಾಕರಣ ಆರಂಭ
- ವಿಧಾನ ಪರಿಷತ್‌ ಚುನಾವಣೆ ವೇಳೆ ತಮ್ಮ ವಿರುದ್ಧ ಅಶ್ಲೀಲ ವಿಡಿಯೋ ಬಿಡುಗಡೆ ಮಾಡಿದವರ ವಿರುದ್ಧ ಮಾನನಷ್ಟಮೊಕದ್ದಮೆ ಹೂಡಲಾಗುವುದೆಂದು ಜಿಪಂ ಮಾಜಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಹೇಳಿದ್ದರು.
- ಜಿಲ್ಲೆಯಾದ್ಯಂತ ವೀಕೆಂಡ್‌ ಕಫ್ರ್ಯೂಗೆ ಜನತೆಯಿಂದ ಉತ್ತಮ ಪ್ರತಿಕ್ರಿಯೆ, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲವೂ ಸ್ತಬ್ಧ
- ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿರುದ್ಧ ಅವಹೇಳಕಾರಿಯಾಗಿ ಮಾತನಾಡಿದ ಮಾಜಿ ಸಚಿವ ಡಾ.ಎಂ.ಬಿ ಪಾಟೀಲ ಅವರ ನಿವಾಸದ ಎದುರು ಮಾದಿಗ ಸಮಾಜದ ಮುಖಂಡರು ಹಠಾತ್‌ನೇ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
- ಆಲಮಟ್ಟಿಯಲ್ಲಿ ಮುಳವಾಡ ನೀರಾವರಿ (ಎಂಎಲ್‌ಐ) ಹಂತ-3 ರ ಯೋಜನೆಯ ಕಾಲುವೆಗಳಿಗೆ ನೀರು ಹರಿಸಲು ಅಖಂಡ ಕರ್ನಾಟಕ ರೈತ ಸಂಘದಿಂದ ಪ್ರತಿಭಟನೆ
- ವಿಜಯಪುರ ಐತಿಹಾಸಿಕ ನಮ್ಮೂರ ಜಾತ್ರೆ ಸಿದ್ದೇಶ್ವರ ಸಂಕ್ರಮಣ ಜಾತ್ರಾ ಮಹೋತ್ಸಗೆ ಚಾಲನೆ

ಫೆಬ್ರವರಿ

- ನಾಲತವಾಡ ಸಮೀಪದ ಸುಕ್ಷೇತ್ರ ಅಯ್ಯನಗುಡಿಯಲ್ಲಿ ಕೃಷ್ಣಾನದಿ ತೀರದ ಗಂಗಾಧರೇಶ್ವರನ ರಥೋತ್ಸವ ಸಂಭ್ರಮದಿಂದ ನೆರವೇರಿತು
- ಮುದ್ದೇಬಿಹಾಳ ಮತಕ್ಷೇತ್ರದ ಸಜ್ಜನ ರಾಜಕಾರಣಿ ಎಂದೇ ಖ್ಯಾತರಾಗಿದ್ದ ಎಂ.ಎಂ.ಮಲ್ಲೇಶಪ್ಪ ನಿಧನ
- ಆಲಮಟ್ಟಿಯಲ್ಲಿ ರಾಜ್ಯದ ಮೊದಲ ತ್ರೀಡಿ ಪ್ರೊಜೆಕ್ಷನ್‌ ಮ್ಯಾಪಿಂಗ್‌ ಪ್ರದರ್ಶನಕ್ಕೆ ನೀರಾವರಿ ಸಚಿವ ಗೋವಿಂದ ಕಾರಜೋಳ ಚಾಲನೆ

ಮಾರ್ಚ್‌

- ವಿಜಯಪುರ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕರ್ನಾಟಕ ಅಕ್ಕಮಹಾದೇವಿ ಮಹಿಳಾ ವಿವಿಯ ಮೌಲ್ಯ ಮಾಪನ ವಿಶ್ರಾಂತ ಕುಲಸಚಿವ ಪ್ರೊ.ವಿ.ವಿ ಮಳಗಿ ಚಾಲನೆ ನೀಡಿದರು
- ಉಕ್ರೇನ್‌ನ ಖಾರ್ಕೀವ್‌ನಲ್ಲಿ ವಿಜಯಪುರ ಜಿಲ್ಲೆಯ 15 ವಿದ್ಯಾರ್ಥಿಗಳು ಸಿಕ್ಕಿಹಾಕಿಕೊಂಡಿದ್ದರು.
- ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಮೆಗಾ ಟೆಕ್ಸ್‌ಟೈಲ್‌ ಪಾರ್ಕ ಘೋಷಣೆಯಾಗಿತ್ತು. ಆದರೆ, ಮೆಡಿಕಲ್‌ ಕಾಲೇಜು ಕೈತಪ್ಪಿತು
- ಎರಡು ವರ್ಷಗಳ ಕೊರೋನಾ ನಂತರ ರಂಗಪಂಚಮಿ ರಂಗೇರಿತ್ತು.

ಏಪ್ರಿಲ್‌

- ವಿಜಯಪುರದಲ್ಲಿ ಮಕ್ಕಳ ಹಿರಿಯ ಸಾಹಿತಿ ಶರಣಪ್ಪ ಕಂಚ್ಯಾಣಿ(92) ವಿಧಿ​ವಶ. ಅವರಿಗೆ ರಾಷ್ಟ್ರ ಹಾಗೂ ಕರ್ನಾಟಕದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹವಾರು ಪ್ರಶಸ್ತಿ ಪುರಸ್ಕೃತ ಬಂದಿವೆ. ಅವರ ಇಚ್ಚೆಯಂತೆ ನಿಧನಾನಂತರ ದೇಹವನ್ನು ಬಿಎಲ್‌ಡಿಇ ಡೀಮ್‌ ವಿಶ್ವವಿದ್ಯಾಲಯ ವೈದ್ಯಕೀಯ ಕಾಲೇಜಿಗೆ ಹಸ್ತಾಂತರ ಮಾಡಲಾಯಿತು.
- ಚಡಚಣ ತಾಲೂಕಿನ ಲೋಣಿ ಬಿ.ಕೆ ಗ್ರಾಮದ ಯೋಧನ ಸಾವು. ಶ್ರೀನಗರದಲ್ಲಿ ಅರೆ ಸೇನಾಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯೋಧ ದಯಾನಂದ ಮಲ್ಲಿಗನಾಥ ಪಾಟೀಲ(26) ಲಡಾಖಿನ ಹೊರವಲಯದ ಚೆಕ್‌ಪೋಸ್ಟ್‌ನಲ್ಲಿ ಗುಂಡಿಗೆ ಬಲಿಯಾಗಿದ್ದ.
- ನಗರದ ಕಂದಗಲ ಹನುಮಂತರಾಯ ರಂಗಮಂದಿರದಲ್ಲಿ ಎರಡು ದಿನ ನಡೆದ ರಾಜ್ಯಮಟ್ಟದ ಲಿಂಬೆ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಕುರಿತು ಲಿಂಬೆ ಉತ್ಸವ-2022 ನಡೆಯಿತು.
- ಇಂಡಿ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಲೋಕಕಲ್ಯಾಣಕ್ಕಾಗಿ 18 ಕೋಟಿ ಜಪಯತ್ರ ನಡೆಯಿತು. ಲಕ್ಷಕ್ಕೂ ಅಧಿ​ಕ ಜನಸಾಗರ ಸೇರಿದರು.
- ತಾಳಿಕೋಟಿ ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ಜಲ ಸಂಪನ್ಮೂಲ ಇಲಾಖೆ, ಕೃಷ್ಣಾ ಜಲ ಭಾಗ್ಯಜಲ ನಿಗಮದಿಂದ ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆಯ ಹಂತ-1ರ ಪೈಪ್‌ ವಿತರಣಾ ಜಾಲದ ಕಾಮಗಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಿದರು.

ಮೇ

- ಬಸವನಬಾಗೇವಾಡಿಯ ಬಸವೇಶ್ವರವರ ದೇವಾಲಯ ಅಂತಾರಾಷ್ಟ್ರೀಯ ಶಾಲಾ ಆವರಣದಲ್ಲಿರುವ ನಂದೀಶ್ವರ ರಂಗಮಂದಿರಲ್ಲಿ ಮೊದಲ ಬಾರಿಗೆ ರಾಜ್ಯಮಟ್ಟದ ಬಸವೇಶ್ವರ ಜಯಂತಿ ಕಾರ್ಯಕ್ರಮವನ್ನು ಸಿದ್ದಲಿಂಗ ಸ್ವಾಮೀಜಿ, ಶಿವಪ್ರಕಾಶ ಶಿವಾಚಾರ್ಯರು ಉದ್ಘಾಟಿಸಿದರು.
- ಕೊಲ್ಹಾರ ತಾಲೂಕಿನ ಕೂಡಗಿ ಎನ್‌ಟಿಪಿಸಿ ಉಷ್ಣ ವಿದ್ಯುತ್‌ ಸ್ಥಾವರ ಆವರಣದಲ್ಲಿ ನಿರುಪಯುಕ್ತ ವಸ್ತುಗಳ ಸಂಗ್ರಹಣಾ ಸ್ಟೋರ್‌ಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ಪ್ಲಾಸ್ಟಿಕ್‌ ಪೈಪ್‌ಗಳು ಬೆಂಕಿಗೆ ಆಹುತಿಯಾಗಿದ್ದವು
- ಹೊಸದಿಲ್ಲಿಯಲ್ಲಿ ಉಗ್ರರ ವಿರುದ್ಧ ಹೋರಾಡಿ ಪ್ರಾಣ ತ್ಯಾಗ ಮಾಡಿದ ವಿಜಯಪುರ ಜಿಲ್ಲೆಯ ವೀರಯೋಧ ಹವಾಲ್ದಾರ ಕಾಶಿರಾಯ ಬಮ್ಮನಹಳ್ಳಿ ಅವರಿಗೆ ಕೇಂದ್ರ ಸರ್ಕಾರ ಶೌರ್ಯಪ್ರಶಸ್ತಿಯನ್ನು ಘೋಷಣೆ ಮಾಡಿತ್ತು. ಯೋಧನ ತಾಯಿ ಶಾಂತಾಬಾಯಿ ಶಂಕ್ರಪ್ಪ ಬಮ್ಮನಹಳ್ಳಿ ಹಾಗೂ ಅವರ ಪತ್ನಿ ಸಂಗೀತಾ ಅವರು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
- ವಿಜಯಪುರ ಜಿಲ್ಲಾ ಮಕ್ಕಳ ಆಸ್ಪತ್ರೆಯಲ್ಲಿ ಸುಮಾರು 25ಕ್ಕೂ ಹೆಚ್ಚಿನ ಬಾಣಂತಿಯರ ಸೀಜೆರಿಯನ್‌ ಹೊಲಿಗೆ ಬಿಚ್ಚಿರುವ ಘಟನೆ ನಡೆಯಿತು.
- ವಿಜಯಪುರ ಜಿಲ್ಲಾ ಮಕ್ಕಳ ಆಸ್ಪತ್ರೆಯಲ್ಲಿ ಸುಮಾರು 25ಕ್ಕೂ ಹೆಚ್ಚಿನ ಬಾಣಂತಿಯರ ಸೀಜೆರಿಯನ್‌ ಹೊಲಿಗೆ ಬಿಚ್ಚಿರುವ ಘಟನೆ ನಡೆಯಿತು.
- ಆಲಮಟ್ಟಿಗೆ ರಾಜ್ಯಪಾಲ ಥಾವರಚಂದ್‌ ಗೆಹಲೋಟ್‌ ಭೇಟಿ ನೀಡಿ, ಸಂಗೀತ ಕಾರಂಜಿ, ಲೇಸರ್‌ ಫೌಂಟೇನ್‌, ತ್ರೀಡಿ ಪ್ರೊಜೆಕ್ಷನ್‌ ಮ್ಯಾಪಿಂಗ್‌ ವೀಕ್ಷಿಸಿದರು.

ಜೂನ್‌

- ಬಸವನ ಬಾಗೇವಾಡಿಯ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ವಚನ ಶಿಲಾ ಮಂಟಪ ಲೋಕಾರ್ಪಣೆ ಸಮಾರಂಭದವನ್ನು ಸುತ್ತೂರ ಜಗದ್ಗುರು ಶಿವಾರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು.
- ವಿಜಯಪುರದ ಕಿತ್ತೂರ ರಾಣಿ ಚನ್ನಮ್ಮ ಮಂಗಳ ಕಾರ್ಯಾಲಯದಲ್ಲಿ ನಡೆದ ವಾಯವ್ಯ ಪದವೀಧರ ಹಾಗೂ ಶಿಕ್ಷಕರ ಮತಕ್ಷೇತ್ರ ಚುನಾವಣೆ ಪ್ರಚಾರ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸಿದರು.
- ವಿಜಯಪುರ ಜಿಲ್ಲೆಯಾದ್ಯಂತ 47 ಮತಗಟ್ಟೆಗಳಲ್ಲಿ ವಿಧಾನ ಪರಿಷತ್‌ ವಾಯವ್ಯ ಪದವೀಧರ ಹಾಗೂ ಶಿಕ್ಷಕರ ಮತಕ್ಷೇತ್ರದ ಚುನಾವಣೆಯ ಶಾಂತಿಯುತ ಮತದಾನ ನಡೆಯಿತು.
- ದೇವರಹಿಪ್ಪರಗಿ ಪಟ್ಟಣದ ಬಿಎಲ್‌ಡಿಇ ಆಟದ ಮೈದಾನದಲ್ಲಿ ನಡೆದ ಗೌರಮ್ಮ ಮುತ್ತತ್ತಿ ಫೌಂಡೇಶನ್‌ ನೇತೃತ್ವದಲ್ಲಿ ನಡೆದ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.
- ಐತಿಹಾಸಿಕ ಗೋಳಗುಮ್ಮಟ ಆವರಣದಲ್ಲಿ ನಡೆದ ನವದೆಹಲಿ ಆಯುಷ್‌ ಮಂತ್ರಾಲಯ, ಜಿಲ್ಲಾಡಳಿತ, ಜಿಪಂ ಆಶ್ರಯದಲ್ಲಿ ವಿಶ್ವ ಯೋಗ ದಿನಾಚಾರಣೆ ಸಮಾರಂಭಕ್ಕೆ ಕೇಂದ್ರ ಸಚಿವ ಭಗವಂತ ಖೂಬಾ ಚಾಲನೆ ನೀಡಿದರು.

ಜುಲೈ

- ಒಣದ್ರಾಕ್ಷಿ ಖರೀದಿಸಿ ಕೋಟ್ಯಂತರ ಹಣ ವಂಚಿಸಿದ ಆರೋಪಿ ಗುಜರಾತ ಮೂಲಕ ಕೃನಾಲಕುಮಾರ ಪಟೇಲ್‌ ಬಂಧನ
- ವಿಜಯಪುರ ಜಿಲ್ಲೆಯ ತಿಕೋಟಾ ಹಾಗೂ ಇಂಡಿ ಭಾಗದಲ್ಲಿ ಬೆಳಗಿನ ಜಾವ ಸಂಭವಿಸಿದ ಭೂಕಂಪನದಿಂದಾಗಿ ಹಾನಿ ಉಂಟಾಗಿವೆ. 48 ಮನೆಗಳ ಗೋಡೆಗಳ ಅಲ್ಪ ಪ್ರಮಾಣದ ಬಿರುಕು ಬಿಟ್ಟಿತ್ತು
- ಬುರಣಾಪುರ ಗ್ರಾಮದಲ್ಲಿ 10 ಎಕರೆ ಜಾಗದಲ್ಲಿ ಸರ್ಕಾರಿ ಗೋಶಾಲೆ ಹಾಗೂ ಪಾಲಿ ಕ್ಲಿನಿಕ್‌ ಕಟ್ಟಡವನ್ನು ಲೋಕಾರ್ಪಣೆಯವನ್ನು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ
ಆಗಸ್ಟ್‌
- ನಗರದ ಕಂದಗಲ್‌ ಹನಮಂತರಾಯ ರಂಗಮಂದಿರದಲ್ಲಿ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಅವರ ನೇತೃತ್ವದಲ್ಲಿ ಚುನಾವಣೆ ಸುಧಾರಣೆ ಕುರಿತು ನಡೆದ ಜನಸಂವಾದದ ನಡೆಯಿತು.
- ಡೋಣಿ ಪ್ರವಾಹದಿಂದ ತತ್ತರಿಸಿರುವ ಡೋಣಿ ತೀರದ ಗ್ರಾಮಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಅವರು ಭೇಟಿ ನೀಡಿ ಪರಿಶೀಲಸಿ ರೈತರ ಅಹವಾಲು ಆಲಿಸಿದರು.
- ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ತ್ರಿವರ್ಣ ವಿದ್ಯುತ್‌ ದೀಪಗಳಿಂದ ಐತಿಹಾಸಿಕ ಗೋಳಗುಮ್ಮಟ ಅಲಂಕರಿಸಲಾಗಿತ್ತು
- ವಿಜಯಪುರ ನಗರದ ಡಾ.ಬಿ.ಆರ್‌.ಅಂಬೇಡ್ಕರ ಕ್ರೀಡಾಂಗಣದಲ್ಲಿ 75ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

ಸೆಪ್ಟೆಂಬರ

- ವಿಜಯಪುರ ನಗರದಲ್ಲಿ ಧಾರಾಕಾರ ಮಳೆಗೆ ಬಿದ್ದಿದ್ದು, ತಗ್ಗು- ಪ್ರದೇಶಗಳಲ್ಲಿ ಮನೆ, ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತ
- ಆಲಮಟ್ಟಿಯ ಲಾಲ್‌ಬಹದ್ದೂರ ಶಾಸ್ತಿ್ರಸಾಗರದ ಬಳಿ ಕೃಷ್ಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಾಗಿನ ಅರ್ಪಿಸಿದರು. ಇದೇ ಸಮಯದಲ್ಲಿ ಭೂಸ್ವಾಧೀನ, ಪುನರ್ವಸತಿ, ಪರಿಹಾರಕ್ಕೆ ಆದ್ಯತೆ ನೀಡುವ ಭರವಸೆ
- ನಗರದ ಸೈನಿಕ ಶಾಲೆಯ ಆವರಣದ ಹಾಕಿ ಮೈದಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
- ವಿಜಯಪುರ ನಗರದ ಸಿದ್ದೇಶ್ವರ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.

Vijayapura: ಅನಾರೋಗ್ಯ ವದಂತಿ ನಂತರ ಸಿದ್ದೇಶ್ವರ ಶ್ರೀಗಳಿಂದ ಭಕ್ತರ ದರ್ಶನ: ಅರ್ಧ ಗಂಟೆ ಪ್ರವಚನ

ನವೆಂಬರ್‌

- ವಿಜಯಪುರದ ಡಾ.ಬಾಬಾಸಾಹೇಬ ಅಂಬೇಡ್ಕರ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ 67ನೇ ಕರ್ನಾಟಕ ರಾಜ್ಯೋತ್ಸವ ಅದ್ಧೂರಿಯಾಗಿ ಆಚರಣೆ
- ಧರ್ಮಜಾಗೃತಿಗಾಗಿ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಶಿವಾಚಾರ್ಯರ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ ವಿಜಯಪುರಕ್ಕೆ ಪ್ರವೇಶಿಸಿತು.

ಡಿಸೆಂಬರ್‌

- ಆನ್‌ಲೈನ್‌ ವಂಚನೆ ಪ್ರಕರಣಕ್ಕೆ ಸಂಬಂಧಿ​ಸಿದಂತೆ ಮಹಿಳೆಯೊಬ್ಬಳನ್ನು ಪೊಲೀಸರು ಬಂಧಿಸಿದ್ದು, ಆರೋಪಿ ಹಾಸನದ ಚನ್ನರಾಯಪಟ್ಟಣದ ತಾಲೂಕಿನ ದಾಸರಹಳ್ಳಿ ಗ್ರಾಮದ ಮಂಜುಳಾ ಕೆ.ಆರ್‌.ಸ್ವಾಮಿ ಅವರನ್ನು ಬಂ​ಧನವಾಗಿತ್ತು.
- ವಿಜಯಪುರ ಗ್ಯಾಂಗ್‌ ಬಾವಡಿಯ ಬಳಿ ಬಿಜೆಪಿ ನೂತನ ಕಾರ್ಯಾಲಯದ ಲೋಕಾರ್ಪಣೆವನ್ನು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ನೆರವೇರಿಸಿದರು.
- ವಿಜಯಪುರ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ 13ನೇ ಮತ್ತು 14ನೇ ವಾರ್ಷಿಕ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹ್ಲೋಟ್‌ ವಿದ್ಯಾರ್ಥಿನಿಯರಿಗೆ ಪದವಿ ಪ್ರದಾನ ಮಾಡಿದರು.

click me!