ಸಿಎಂ ಕುಮಾರಸ್ವಾಮಿ ಅವರು ಘೋಷಿಸಿರುವ ಸಾಲ ಮನ್ನಾ ಗೊಂದಗಳ ಗೂಡಾಗಿದ್ದು, ಇದನ್ನೇ ಪ್ರತಿಪಕ್ಷ ಬಿಜೆಪಿ ಅಸ್ತ್ರವನ್ನಾಗಿಸಿಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇದಕ್ಕೆ ಸಿಎಂ ಒಂದು ನಿರ್ಧಾರಕ್ಕೆ ಬಂದಿದ್ದಾರೆ.ಏನದು?
ಕೊಪ್ಪಳ, (ಡಿ.24): ಸಾಲ ಮನ್ನಾ ಘೋಷಣೆ ಮಾಡಿದ್ದಾಯ್ತು. ಆದ್ರೆ ಸಾಲ ಮನ್ನಾದ ಹಣ ಬಿಡುಗಡೆ ಯಾವಾಗ ಕ್ಲೀಯರ್ ಆಗುತ್ತೆ ಎನ್ನುವುದಕ್ಕೆ ಕುಮಾರಸ್ವಾಮಿ ಡೇಟ್ ಸ್ಪಷ್ಟನೆ ನೀಡಿದ್ದಾರೆ.
ಸೋಮವಾರ ಬಾಗಲಕೋಟೆಗೆ ತೆರಳುವ ಮಾರ್ಗದಲ್ಲಿ ಕೊಪ್ಪಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಸಾಲ ಮನ್ನಾ ಮಾಡಲು ನಾಲ್ಕು ವರ್ಷ ಸಮಯ ತೆಗೆದುಕೊಳ್ಳುವುದಿಲ್ಲ. 2019ರ ಜ. 31ರೊಳಗೆ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಡಿಸಿದ್ದಾರೆ.
ಸಾಲ ಮನ್ನಾ ಮಾಡಿದ್ದೇನೆಂದು ಎದೆ ಬಗೆದು ತೋರಿಸಬೇಕಾ?
ಈ ಮೂಲಕ ಜನರಲ್ಲಿದ್ದ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಸಾಲ ಮನ್ನಾ ಯೋಜನೆ ಬಗ್ಗೆ ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಸಾಲಮನ್ನಾಗಾಗಿ ಯಾವುದೇ ಇಲಾಖೆಯ ಅನುದಾನ ಕಡಿತ ಮಾಡುವುದಿಲ್ಲ.
ಅಭಿವೃದ್ಧಿ ಕೆಲಸವೇ ಬೇರೆ, ಸಾಲಮನ್ನಾ ಯೋಜನೆಯೇ ಬೇರೆ. ಸಾಲ ಮನ್ನಾಗೆ ಬೇರೆ ರೀತಿಯ ಅನುದಾನ ಹೊಂದಾಣಿಕೆ ಮಾಡುತ್ತೇನೆ ಎಂದು ಎಚ್ಡಿಕೆ ವಿರೋಧ ಪಕ್ಷಕ್ಕೆ ತಿರುಗೇಟು ನೀಡಿದರು.
46 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡುವುದು ಸುಲಭದ ಮಾತಲ್ಲ. ಬೇರೆ ಯಾವ ರಾಜ್ಯದಲ್ಲಿ ಇಷ್ಟು ಪ್ರಮಾಣದ ಸಾಲ ಮನ್ನಾ ಯಾರು ಮಾಡಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
ಉತ್ತರ ಪ್ರದೇಶ ಸರ್ಕಾರ 2017ರ ಜೂನ್ನಲ್ಲೇ ಸಾಲಮನ್ನಾದ ಆದೇಶ ಹೊರಡಿಸಿದೆ. ಆದರೆ ಇಲ್ಲಿಯವರೆಗೆ ಶೇ. 40ರಷ್ಟೂ ಸಾಲ ಮನ್ನಾ ಮಾಡಿಲ್ಲ.
ರಾಜ್ಯದಲ್ಲಿ ಕೆಲವರು ಸಹಕಾರಿ ಸಂಘಗಳಲ್ಲಿ ರೈತರ ಹೆಸರಿನಲ್ಲಿ ಸಾಲ ಪಡೆದು ಮಜಾ ಮಾಡುತ್ತಿದ್ದಾರೆ. ಇವರನ್ನು ಗುರುತಿಸಿ ಕೆಲವು ನಿಯಮ ರಚನೆ ಮಾಡಲು ಸಮಯ ಬೇಕು ಎಂದರು.