Kolar Tomato Crops : ರೈತರೇ ಟೊಮೆಟೋ ಪುನಃ ಪುನಃ ಬೆಳೆಯಬೇಡಿ

By Kannadaprabha News  |  First Published Dec 18, 2021, 7:06 AM IST
  • ರೈತರೇ ಒಂದೇ ಭೂಮಿಯಲ್ಲಿ  ಟೊಮೆಟೋ ಪುನಃ ಪುನಃ ಬೆಳೆಯಬೇಡಿ
  • ಟೊಮೆಟೋ ಬೆಳೆಯಲ್ಲಿ ಸಮಗ್ರ ಪೀಡೆ ನಿರ್ವಹಣೆ ಬಗ್ಗೆ ತರಬೇತಿ ಕಾರ್ಯಕ್ರಮ
     

 ಚಿಕ್ಕಬಳ್ಳಾಪುರ (ಡಿ.18):  ರೈತರು (Farmers)  ಹೆಚ್ಚಿನ ಬೆಲೆ ಸಿಗುವ ಆಸೆಯೊಂದಿಗೆ ಟೊಮೆಟೋ (Tomato_ ಬೆಳೆಯನ್ನೇ ಪುನಃ ಪುನಃ ಅದೇ ಹೊಲದಲ್ಲಿ ಬೆಳೆಯುವುದರಿಂದ ರೋಗ ಹಾಗೂ ಕೀಟಗಳ ಭಾದೆ ಹೆಚ್ಚಾಗುತ್ತದೆ. ಇದರಿಂದ ತೋಟದ ನಿರ್ವಹಣೆ ಖುರ್ಚು ಹೆಚ್ಚಳವಾಗಿ ರೈತರು ಆರ್ಥಿಕ ನಷ್ಠ ಅನುಭವಿಸಬೇಕಾಗುತ್ತದೆಯೆಂದು ನವದೆಹಲಿಯ ರಾಷ್ರೀಯ ಸಮಗ್ರ ಪೀಡೆ ನಿರ್ವಹಣೆ ಸಂಶೋಧನಾ ಕೇಂದ್ರದ ಕೀಟಶಾಸ್ತ್ರ ತಜ್ಞ ಡಾ.ಕೆ.ವಿ.ರಾಘವೇಂದ್ರ ತಿಳಿಸಿದರು.

ಜಿಲ್ಲೆಯ ಕುರುಬೂರು ಕೃಷಿ (Agriculture)  ವಿಜ್ಞಾನ ಕೇಂದ್ರದಲ್ಲಿ ಗುರುವಾರ ಟೊಮೇಟೋ ಬೆಳೆಯಲ್ಲಿ ಸಮಗ್ರ ಪೀಡೆ ನಿರ್ವಹಣೆ ಬಗ್ಗೆ ಜಿಲ್ಲೆಯ ಬೆಳೆಗಾರರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಪ್ರಾಸ್ತಾವಿಕವಾಗಿ ಅವರು ಮಾತನಾಡಿ, ಸಮಗ್ರ ಪೀಡೆ ನಿರ್ವಹಣಾ ಪದ್ಧತಿ ರೈತರಿಗೊಂದು ವರದಾನವೆಂದರು.

Tap to resize

Latest Videos

undefined

ವಿಸ್ತರಣಾ ನಿರ್ದೇಶಕ ಡಾ.ಎನ್‌. ದೇವಕುಮಾರ್‌ ಮಾತನಾಡಿ, ಟೊಮ್ಯಾಟೊ (Tomato) ಬೆಳೆಯಲ್ಲಿ ಕೀಟ ಮತ್ತುರೋಗ ಬಾಧೆ ಹೆಚ್ಚಾಗಿದ್ದು ರೈತರು ಸಮಗ್ರ ಪೀಡೆ ನಿರ್ವಹಣೆ ಪದ್ಧತಿಗಳನ್ನು ಅಳವಡಿಸಿಕೊಂಡು ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಬಹುದು ಹಾಗೂ ಉತ್ತಮ ಇಳುವರಿ ಪಡೆಯಲು ಸಾಧ್ಯವೆಂದು ಅಭಿಪ್ರಾಯ ಪಟ್ಟರು.

ಕೃಷಿ ವಿಜ್ಞಾನಕೇಂದ್ರದ ಮುಖ್ಯಸ್ಥ ಡಾ.ಎಂ.ಪಾಪಿರೆಡ್ಡಿ ಮಾತನಾಡಿ ಸಮಗ್ರ ಪೀಡೆ ನಿರ್ವಹಣಾ ಕ್ರಮಗಳನ್ನು ಅಳವಡಿಸಿದ್ದಲ್ಲಿ ರೈತರಆದಾಯವನ್ನು ದ್ವಿಗುಣಗೊಳಿಸಬಹುದೆಂದು ಮನದಟ್ಟು ಮಾಡಿದರು.

ರೇಷ್ಮೆಕೃಷಿ ಮಹಾವಿದ್ಯಾಲಯದ ಡೀನ್‌ ಡಾ. ಪಿ. ವೆಂಕಟರವಣ, ಎಲ್ಲಾಟೊಮ್ಯಾಟೊ ಬೆಳೆಗಾರರು ಸಮಗ್ರ ಪೀಡೆ ನಿರ್ವಹಣೆ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಹಾಗೂ ಇತರೆರೈತರಿಗೆ ಮಾಹಿತಿ ತಿಳಿಸಬೇಕೆಂದು ಸೂಚಿಸಿದರು. ಕಾರ್ಯಕ್ರಮದಲ್ಲಿ ಟೊಮ್ಯಾಟೋ ಬೆಳೆಯಲ್ಲಿ ಸಮಗ್ರ ಪೀಡೆ ನಿರ್ವಹಣೆ ಬಗ್ಗೆ ಹಸ್ತಪ್ರತಿಯನ್ನು ಬಿಡುಗಡೆ ಮಾಡಲಾಯಿತು.

ಟೊಮ್ಯಾಟೊ ದರ ಕುಸಿತ : 

ಮಹಾರಾಷ್ಟ್ರದಿಂದ (Maharashtra) ಟೊಮೆಟೋ (tomato) ನಗರಕ್ಕೆ ಸರಬರಾಜಾಗುತ್ತಿರುವ ಹಿನ್ನೆಲೆಯಲ್ಲಿ ಶತಕ ದಾಟಿದ್ದ ಟೊಮೆಟೋ ಬೆಲೆ (Price) ಇದೀಗ ದಿಢೀರ್‌ ಇಳಿಕೆ ಕಂಡಿದೆ. ಕಳೆದ ವಾರ ಕೇಜಿಗೆ .110ರಿಂದ .125ರವರೆಗೂ ಇದ್ದ ಬೆಲೆ ಭಾನುವಾರ 40 ರು. ಕ್ಕೆ ತಲುಪಿದೆ.  ಇತ್ತೀಚೆಗೆ ನಿರಂತರ ಮಳೆಯಿಂದಾಗಿ (Heavy Rain) ಬೆಳೆ ನಷ್ಟಉಂಟಾಗುವುದರ ಜೊತೆಗೆ ರೋಗ ಬಾಧೆಯೂ ಕಾಡಿದ್ದರಿಂದ ಮಾರುಕಟ್ಟೆಗೆ (market) ಸರಬರಾಜಾಗುತ್ತಿದ್ದ ತರಕಾರಿ (vegetable) ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗಿ ಬೆಲೆಯಲ್ಲಿ ಬಹಳಷ್ಟು ಹೆಚ್ಚಾಗಿತ್ತು. ಆದರೆ ಮೂರ್ನಾಲ್ಕು ದಿನದಿಂದ ಮಳೆ ಬಾರದೇ ಇರುವುದರಿಂದ ಬೆಳೆಯು ಬಂದಿದೆ. ಜೊತೆಗೆ ಮಹಾರಾಷ್ಟ್ರದಿಂದ ಸಹ ಟೊಮೆಟೋ ಪೂರೈಕೆ ಆಗುತ್ತಿರುವುದರಿಂದ ಬೆಲೆ ಸ್ವಲ್ಪ ಇಳಿಕೆಯಾಗಿದೆ.

ಭಾನುವಾರ ಹಾಪ್‌ ಕಾಮ್ಸ್‌ನಲ್ಲಿ (Hopcoms) ಕೇಜಿ ನಾಟಿ ಟೊಮೆಟೋ 70 ರು. ಕ್ಕೆ ಮಾರಾಟವಾಗಿದೆ. ಆದರೆ ಮಾರುಕಟ್ಟೆಗಳಲ್ಲಿ 40ರಿಂದ 60 ರು.ವರೆಗೂ ಮಾರಾಟವಾಗಿದೆ. ಶುಕ್ರವಾರ ಮಾರುಕಟ್ಟೆಯಲ್ಲಿ .80ರಿಂದ .90 ರು. ಇದ್ದದ್ದು, ಶನಿವಾರ ಮತ್ತಷ್ಟು ಕುಸಿತ ಕಂಡಿತ್ತು. ಇದೀಗ 40ರಿಂದ 60 ರು. ಕ್ಕೆ ಬಂದಿದೆ.

ಕಲಾಸಿ ಪಾಳ್ಯ ಮಾರುಕಟ್ಟೆಯಲ್ಲಿ ಚಿಲ್ಲರೆ ದರದಲ್ಲಿ ಪ್ರತಿ ಕೇಜಿ ಆಲೂಗಡ್ಡೆ .30, ಕ್ಯಾರೆಟ್‌ .50ರಿಂದ 55, ಬೀನ್ಸ್‌ 50, ಬೆಂಡೆಕಾಯಿ 45ರಿಂದ 50, ಹಿರೇಕಾಯಿ 40ರಿಂದ 45ಕ್ಕೆ ಮಾರಾಟವಾಗಿದ್ದು, ಸ್ವಲ್ಪ ಇಳಿಕೆಯಷ್ಟೇ ಕಂಡುಬಂದಿದೆ.

ನಮ್ಮಲ್ಲಿನ ಬೆಳೆಗಳು ಮಳೆಯಿಂದಾಗಿ ಬಹಳಷ್ಟು ಹಾಳಾಗಿವೆ. ಆದರೆ ಮಹಾರಾಷ್ಟ್ರದಲ್ಲಿ ಅಷ್ಟೊಂದು ಪ್ರಮಾಣದ ಹಾನಿಯಾಗಿಲ್ಲ. ಇದೀಗ ಅಲ್ಲಿಂದ ಟೊಮೆಟೋ ಸರಬರಾಜು ಆಗುತ್ತಿರುವುದರಿಂದ ಬೆಲೆ ಸ್ವಲ್ಪ ಕಡಿಮೆಯಾಗಿದೆ.

-ಆರ್‌.ವಿ.ಗೋಪಿ, ಕಲಾಸಿಪಾಳ್ಯ ತರಕಾರಿ ಸಗಟು ವರ್ತಕರ ಸಂಘದ ಅಧ್ಯಕ್ಷ.

ಹಾಪ್‌ಕಾಮ್ಸ್‌ ದರ ಕೆಜಿಗೆ

ಆಲೂಗಡ್ಡೆ .45

ನಾಟಿ ಟೊಮೊಟೋ .70

ಹಸಿ ಮೆಣಸಿನಕಾಯಿ .58

ಹಿರೇಕಾಯಿ .90

ಹೆಚ್ಚಾಗಿದ್ದ ಟೊಮೆಟೊ ದರ :   ದಕ್ಷಿಣ ಭಾರತದಲ್ಲಿ (South India) ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ (Heavy Rain ), ಚೆನ್ನೈನಲ್ಲಿ (Chennai) ಪ್ರತಿ ಕೆಜಿ ಟೊಮೊಟೋ (Tomato) ದರವನ್ನು 150 ರು.ಗೆ ಮುಟ್ಟಿಸಿದೆ. ಕರ್ನಾಟಕದಿಂದ (Karnataka) ಟೊಮೆಟೋ ಆಗಮನ ಸ್ಥಗಿತವಾಗಿರುವುದು, ಕೃಷ್ಣಗಿರಿಯಲ್ಲಿ ಮಳೆಯಿಂದಾಗಿ ಬೆಳೆ ನಷ್ಟವಾದ (Crop Loss) ಕಾರಣ, ಬೇಡಿಕೆಗೆ ಅಗತ್ಯ ಪ್ರಮಾಣದ ಪೂರೈಕೆ (supply) ಆಗುತ್ತಿಲ್ಲ. ಹೀಗಾಗಿ ಇಲ್ಲಿನ ಸಗಟು ಮಾರುಕಟ್ಟೆಯಲ್ಲಿ (Market) ಪ್ರತಿ ಕೆಜಿ ಟೊಮೆಟೊ ಬೆಲೆ 120 ರು.ತಲುಪಿದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ದರ 150 ರು. ಮುಟ್ಟಿದೆ.

ಮಳೆ ಆರಂಭಕ್ಕಿಂತ ಮೊದಲು ಪ್ರತೀ ಕೆಜಿ ಟೊಮ್ಯಾಟೊಗೆ 20 ರು. ನಂತೆ ಮಾರಾಟ (Sale) ಮಾಡಲಾಗುತಿತ್ತು. ಏಕಾಏಕಿ ಆರಂಭವಾದ ಮಳೆ ತರಕಾರಿ ಬೆಲೆಗಳನ್ನು (Vegetable Price) ಗಗನಕ್ಕೆ ಏರುವಂತೆ ಮಾಡಿತ್ತು. ಇದರಿಂದ ಗ್ರಾಹಕರಿಗೆ (customers) ಬಿಸಿ ತಟ್ಟಿದೆ.  ಕರ್ನಾಟಕ ಹಾಗು ಆಂಧ್ರ ಪ್ರದೇಶದಿಂದ (Andhra pradesh) ಸರಬರಾಜಾಗುತ್ತಿದ್ದ ಟೊಮೊಟೊ ಪೂರೈಕೆ ನಿಂತ ಕಾರಣ ಚೆನ್ನೈ (Chennai) ನಗರದಲ್ಲಿ ಏಕಾಏಕಿ ಬೆಲೆ ಏರಿಕೆಗೆ ಕಾರಣ ಆಯ್ತು.  ಭಾರೀ ಮಳೆಯಿಂದ ರೈತರು (farmers) ಬೆಳೆದ ಬೆಳೆ ಸಂಪೂರ್ಣವಾಗಿ ನೆಲ ಕಚ್ಚಿದ್ದು ಶೇ.80 ರಷ್ಟು ಬೆಳೆ ಹಾಳಾಗಿದೆ ಎನ್ನಲಾಗಿದೆ. ಇದರಿಂದ ತರಕಾರಿಗಳ ಬೆಲೆ ದಿನೇ ದಿನೇ ಗಗನಕ್ಕೆ ಏರುತ್ತಿದೆ. 

ಇನ್ನು ಟೊಮೆಟೊ ಜೊತೆ ಈರುಳ್ಳಿ (Onian) ಹಾಗು ಅಲೂಗಡ್ಡೆ (Potato) ಬೆಲೆಯಲ್ಲಿಯೂ ಏರಿಕೆಯಾಗುತ್ತಿದೆ. 60 ರು.ಗಿಂತಲೂ ಹೆಚ್ಚು ಬೆಲೆಯಲ್ಲಿ ಪ್ರತೀ ಕೆಜಿಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ಬೆಂಡೆ ಕಾಯಿ. ಸೌತೆಕಾಯಿ, ಮೆಣಸು, ಬಿಟ್ರೋಟ್, ಮೂಲಂಗಿ ಎಲ್ಲಾ ತರಕಾರಿಗಳ ಬೆಲೆಯೂ ಗಗನ ಮುಖಿಯಾಗಿಯೇ ಸಾಗುತ್ತಿದೆ.

click me!