ಒಂದೇ ದಿನ​ದಲ್ಲಿ ಚಿತ್ರದುರ್ಗದ 15 ಮಠಾ​ಧೀ​ಶರ ಭೇಟಿ ಮಾಡಿದ ಡಿಕೆಶಿ

By Kannadaprabha News  |  First Published Feb 3, 2021, 8:43 AM IST

KPCC ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಚಿತ್ರದುರ್ಗಕ್ಕೆ ತೆರಳಿ ಒಂದೇ ದಿನದಲ್ಲಿ 15 ಸ್ವಾಮೀಜಿಗಳನ್ನು ಭೇಟಿ ಮಾಡಿದ್ದಾರೆ. ಎಲ್ಲಾ ಸ್ವಾಮೀಜಿಗಳಿಗೂ ಆಹ್ವಾನ ನೀಡಿದರು.


 ಚಿತ್ರದುರ್ಗ (ಫೆ.03):  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಮಂಗಳವಾರ ಚಿತ್ರದುರ್ಗ ಜಿಲ್ಲೆಯ ವಿವಿ​ಧ ಮಠ​ಗ​ಳಿಗೆ ಭೇಟಿ ನೀಡಿ ತಮ್ಮ ಪುತ್ರಿಯ ವಿವಾಹ ಸಮಾ​ರಂಭಕ್ಕೆ ಆಹ್ವಾನಿಸಿದರು. ಒಟ್ಟು 15 ಮಠಾ​ಧಿ​ಪ​ತಿ​ಗ​ಳನ್ನು ಭೇಟಿಯಾಗಿ ಆಮಂತ್ರಣ ಪತ್ರ ಸಲ್ಲಿಸಿ ಆಶೀ​ರ್ವಾದ ಪಡೆ​ದರು.

ಡಿ.ಕೆ.ಶಿವಕುಮಾರ್‌ ಅವರ ಪುತ್ರಿ ಐಶ್ವರ್ಯಾ ಅವರ ವಿವಾಹವನ್ನು ಮಾಜಿ ಮುಖ್ಯ​ಮಂತ್ರಿ ಎಸ್‌.​ಎಂ.ಕೃಷ್ಣ ಅವ​ರ ಮೊಮ್ಮ​ಗನಾದ ಅಮ​ತ್ರ್ಯ ಅವ​ರೊಂದಿಗೆ ನಿಶ್ಚ​ಯಿ​ಸ​ಲಾ​ಗಿದೆ. 

Latest Videos

undefined

ಡಿಕೆಶಿ ಇದ್ದ ಕೊಠಡಿಯನ್ನೇ ಪಡೆದ ಸೈನಿಕ, ಸಲಹೆ ಕೊಟ್ಟಿದ್ದು ಯಾರಂತೆ! ..

ಈ ಸಮಾ​ರಂಭಕ್ಕೆ ಡಿ.ಕೆ.​ಶಿ​ವ​ಕು​ಮಾರ್‌ ಅವರು ಚಿತ್ರ​ದು​ರ್ಗದ ಬಸವಕೇಂದ್ರ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾಶರಣರು, ಕೋಡಿಹಳ್ಳಿ ಆದಿಜಾಂಬವ ಪೀಠದ ಷಡಕ್ಷರಮುನಿ ಸ್ವಾಮೀಜಿ, ಯಾದವ ಗುರುಪೀಠದ ಕೃಷ್ಣ ಯಾದವಾನಂದ ಸ್ವಾಮೀಜಿ, ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಹೊಸದುರ್ಗ ಕುಂಚಿಟಿಗ ಪೀಠದ ಡಾ.ಶಾಂತವೀರ ಸ್ವಾಮೀಜಿ ಭೇಟಿ ಮಾಡಿದರು.

ವಿನಯ್‌ ಗುರೂಜಿ ಜತೆ 20 ನಿಮಿಷ ಮಾತುಕತೆ ನಡೆಸಿದ ಡಿಕೆಶಿ ..

ಇನ್ನು ಮಡಿವಾಳ ಮಾಚಿದೇವ ಸ್ವಾಮೀಜಿ, ಮೇದಾರ ಗುರುಪೀಠದ ಶ್ರೀಗಳು, ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿ, ಬಂಜಾರ ಗುರುಪೀಠದ ಸೇವಾಲಾಲ್‌ ಸ್ವಾಮೀಜಿ, ಪಂಚಮಸಾಲಿ ಪೀಠದ ಶ್ರೀಗಳಾದ ಜಯಮೃತ್ಯುಂಜಯ, ವಚನಾನಂದ ಸ್ವಾಮೀಜಿ, ಸಾಣೆಹಳ್ಳಿ ಪೀಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರನ್ನು ಆಹ್ವಾನಿಸಿದರು

click me!