ಶೃಂಗೇರಿ ರೇಪ್‌ ಕೇಸ್‌: ಬಾಲಕಿಗೆ ಮಣಿಪಾಲ ಆಸ್ಪತ್ರೇಲಿ ವೈದ್ಯಕೀಯ ಪರೀಕ್ಷೆ

By Kannadaprabha News  |  First Published Feb 3, 2021, 7:40 AM IST

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲ್ಲಿ ನಡೆದ ಬಾಲಕಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಮಣಿಪಾಲ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಲಾಗಿದೆ. 


ಚಿಕ್ಕಮಗಳೂರು (ಫೆ.03): ಶೃಂಗೇರಿ ಸಮೀಪದ ಗ್ರಾಮವೊಂದರಲ್ಲಿ ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ವೈದ್ಯಕೀಯ ಪರೀಕ್ಷೆಯನ್ನು ಮಣಿಪಾಲದ ಆಸ್ಪತ್ರೆಯಲ್ಲಿ ಮಾಡಲಾಯಿತು. 

ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ಪರೀಕ್ಷೆ ಮಾಡಲಾಗಿದ್ದರೂ ಕೂಡ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಮಂಗಳವಾರ ಕರೆದುಕೊಂಡು ಹೋಗಿ ಸ್ವಾಧಾರ ಸಂಸ್ಥೆಯವರು ಪರೀಕ್ಷೆ ಮಾಡಿಸಿದ್ದಾರೆ.

Tap to resize

Latest Videos

ಶೃಂಗೇರಿ ಬಾಲಕಿ ಮೇಲೆ 15 ಮಂದಿಯಿಂದ ರೇಪ್‌ : ಸಿಕ್ಕಿಬಿದ್ದರು 8 ಆರೋಪಿಗಳು ..

ಶೃಂಗೇರಿ ಪೊಲೀಸ್‌ ಠಾಣೆ ಹಾಗೂ ನ್ಯಾಯಾಧೀಶರ ಎದುರು ಬಾಲಕಿಯ ಹೇಳಿಕೆಯನ್ನು ಪಡೆದು ವಿಡಿಯೋ ಚಿತ್ರೀಕರಣ ಮಾಡಲಾಗಿದೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ 17 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ 9 ಮಂದಿ ಪತ್ತೆಗೆ ಪೊಲೀಸ್‌ ಇಲಾಖೆ ತಂಡವನ್ನು ರಚನೆ ಮಾಡಿದೆ.

click me!