Hamsalekha Controversy : ಹಂಸಲೇಖ ಹೇಳಿಕೆಗೆ ಬೆಂಬಲಿಸಿ, ಸಂಸದ ಪ್ರತಾಪ್‌ ಸಿಂಹ ವಿರುದ್ಧ ಪ್ರತಿಭಟನೆ

By Kannadaprabha News  |  First Published Nov 29, 2021, 6:24 AM IST
  • ಹಂಸಲೇಖ ಹೇಳಿಕೆಗೆ ಬೆಂಬಲಿಸಿ, ಸಂಸದ ಪ್ರತಾಪ್‌ ಸಿಂಹ  ವಿರುದ್ಧ  ಪ್ರತಿಭಟನೆ
  • ಸಂಸದ ಪ್ರತಾಪ್‌ ಸಿಂಹ ಹೇಳಿಕೆಯನ್ನು ಖಂಡಿಸಿ ತಾಲೂಕು ಸಮಿತಿಯಿಂದ ಹೋರಾಟ 

  ಟಿ. ನರಸೀಪುರ (ನ.29):  ನಾದಬ್ರಹ್ಮ ಹಂಸಲೇಖ (Hamsalekha) ಹೇಳಿಕೆಯನ್ನು ಬೆಂಬಲಿಸಿ, ಸಂಸದ ಪ್ರತಾಪ್‌ ಸಿಂಹ (Prathap Simha) ಹೇಳಿಕೆಯನ್ನು ಖಂಡಿಸಿ ತಾಲೂಕು ಸಮಿತಿಯಿಂದ ಹೋರಾಟ ರೂಪಿಸಲಾಗುತ್ತದೆ ಎಂದು ದಸಂಸ ಜಿಲ್ಲಾ ಸಂಚಾಲಕ ರಾಜಶೇಖರ ಕೋಟೆ ಹೇಳಿದರು.  ಪಟ್ಟಣದ ದಸಂಸ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೇಂದ್ರ ಹಾಗೂ ರಾಜ್ಯದಲ್ಲಿ (Govt) ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದಲ್ಲಿ (BJP Govt) ದಲಿತರ ಪರವಾದ ಕಾನೂನೇ ಇಲ್ಲದಂತಾಗಿದೆ. ದಲಿತರ ಮೇಲೆ ಯಾವುದೇ ದಾಳಿ ನಡೆದರೂ ಖಂಡಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ದಲಿತರ ಪರವಾಗಿ ಮಾತನಾಡುವವರ ದನಿಯನ್ನು ಕುಗ್ಗಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಾ ಬಂದಿದೆ ಎಂದರು.

ನಾದಬ್ರಹ್ಮ ಎಂದೇ ಹೆಸರಾಗಿರುವ ಹಂಸಲೇಖ ಪ್ರಸಕ್ತ ನಡೆಯುತ್ತಿರುವ ಸನ್ನಿವೇಶವನ್ನು ಸರಿಯಾಗೇ ಹೇಳಿದ್ದಾರೆ. ಮಠಾಧೀಶರು ದಲಿತರ (Dalit) ಮನೆಗೆ ಹೋಗಿ ಕಾಟಾಚಾರಕ್ಕೆ ಊಟ ಮಾಡಿ ಬರುವ ಬದಲು ದಲಿತರನ್ನೆ ನಿಮ್ಮ ಮನೆಗೆ ಕರೆದು ಊಟ ಹಾಕಿ ಎಂದಿದ್ದಾರೆ. ಇದನ್ನೇ ಕೆಲವರು ವೈಭವೀಕರಿಸಿದ್ದಾರೆ. ಸಂಸದ ಪ್ರತಾಪ್‌ ಸಿಂಹ ಶೂದ್ರ ಜನಾಂಗಕ್ಕೆ ಸೇರಿದ್ದು, ಈತ ಹಂಸಲೇಖ ಮತ್ತು ಪ್ರಿಯಾಂಕ ಖರ್ಗೆ (Priyank Kharge) ವಿರುದ್ದ ಮಾತನಾಡುವ ಮೂಲಕ ದಲಿತರ ವಿರೋಧಿಯಂತೆ ವರ್ತಿಸಿದ್ದಾರೆ. ಇದನ್ನೆಲ್ಲ ಗಮನಿಸಿದರೇ ರಾಜ್ಯದಲ್ಲಿ ಪ್ರಜಾಪ್ರಭುತ್ವ ಕಣ್ಮರೆಯಾಗಿ ನಿರಂಕುಶ ಪ್ರಭುತ್ವ ಇದೆಯೇನೋ ಎಂಬ ಅನುಮಾನ ಕಾಡುತ್ತಿದೆ ಎಂದರು.

Latest Videos

undefined

ಸಮಿತಿಯ ಸಂಘಟನಾ ಸಂಚಾಲಕ ಶಶಿಕಾಂತ್‌ ಮಾತನಾಡಿದರು. ಜಿಲ್ಲಾ ಸಂಘಟನಾ ಸಂಚಾಲಕ ಮಣಿಯಯ್ಯ, ಖಜಾಂಚಿ ಶಿವಣ್ಣ, ಮೈಸೂರು ಉಪವಿಭಾಗ ಸಂಚಾಲಕ ಎಸ್‌. ನಂಜುಂಡಯ್ಯ, ರಂಗಸ್ವಾಮಿ ಇದ್ದರು.

ದಸಂಸ ನೂತನ ಪದಾಧಿಕಾರಿಗಳಾಗಿ ಪಿ. ಮಹದೇವಸ್ವಾಮಿ (ತಾಲೂಕು ಸಂಚಾಲಕ), ಶಾಂತಕುಮಾರ್‌, ಕಾಂತರಾಜು, ಪುಟ್ಟಸ್ವಾಮಿ, ಪಿ. ಮಹದೇವಯ್ಯ (ಸಂಘಟನಾ ಸಂಚಾಲಕ), ರಂಗದಾಸ್‌ (ತಾಲೂಕು ಖಜಾಂಚಿ), ಪಿ. ನಂಜುಂಡಸ್ವಾಮಿ, ಶಿವಣ್ಣ, ಗಂಗಾಧರ್‌, ಶಶಿಕಾಂತ್‌ (ಕಾರ್ಯಕಾರಿ ಸಮಿತಿ ಸದಸ್ಯರು),

ಹೋಬಳಿ ಸಂಚಾಲಕರು- ಎನ್‌. ಸಿದ್ದರಾಜು (ಕಸಬಾ), ಎನ್‌. ಸುನೀಲ… (ಸೋಸಲೆ), ಶಿವಮೂರ್ತಿ (ಬನ್ನೂರು), ಶೇಷಣ್ಣ (ಮೂಗೂರು) ಹಾಗೂ ಟಿ. ನರಸೀಪುರ ಟೌನ್‌ ಸಂಚಾಲಕರಾಗಿ ತ್ರಿವೇಣಿ, ಉಮೇಶ್‌, ಮೈಸೂರು ವಿಭಾಗೀಯ ಸಂಚಾಲಕರಾಗಿ ಎಸ್‌. ನಂಜುಂಡಯ್ಯ ಅವರನ್ನು ಆಯ್ಕೆ ಮಾಡಲಾಗಿದೆ.

ಗುಲಾಮರಂತೆ ಕಾಣುತ್ತಾರೆ : 

ದೇಶದಲ್ಲಿ ಮುಳುಗುತ್ತಿರುವ ಹಡಗು ಆಗಿರುವ ಕಾಂಗ್ರೆಸ್‌ (Congress) ಪಕ್ಷ ಈ ದೇಶದಲ್ಲಿರುವ ಅಲ್ಪಸಂಖ್ಯಾತರು (Minority) ಮತ್ತು ದೀನ ದಲಿತರನ್ನು ಒತ್ತೆಯಾಳುಗಳ ರೀತಿಯಲ್ಲಿ, ಗುಲಾಮರ ರೀತಿಯಲ್ಲಿ ನಡೆಸಿಕೊಳ್ಳುತ್ತಿರುವುದನ್ನು ಆ ಸಮುದಾಯಗಳ ವಿದ್ಯಾವಂತರು (Educated) ಗಮನಿಸುತ್ತಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ (Minister Govind Karjol) ಹೇಳಿದ್ದಾರೆ. ನಗರದಲ್ಲಿ ಶನಿವಾರ ಜನ ಸ್ವರಾಜ್‌ ಸಮಾವೇಶದಲ್ಲಿ ಮಾತನಾಡಿದ ಅವರು, ದಲಿತರು ಹಾಗೂ ಮುಸ್ಲಿಮರು ಕಾಂಗ್ರೆಸ್‌ನ ಗುಲಾಮರಲ್ಲ ಎಂಬುದನ್ನು ಅರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Former CM Siddaramaiah) ಮಾತನಾಡಲಿ. ನಾವಂತೂ ಮೊದಲಿನಿಂದಲೂ ಕಾಂಗ್ರೆಸ್‌ ಪಕ್ಷವನ್ನು ವಿರೋಧಿ​ಸಿಕೊಂಡು ಬಂದವರು. ಆದರೆ ಸಿದ್ದರಾಮಯ್ಯನಂತವರು ಮಾತನಾಡುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕಿದೆ ಎಂಬುದನ್ನು ಈಗಲಾದರೂ ತಿಳಿದುಕೊಳ್ಳಲಿ ಎಂದು ಹೇಳಿದರು.

ದೇಶದಲ್ಲಿ ಹಿಂದಿನ ಪರಿಸ್ಥಿತಿ ಈಗಿಲ್ಲ. ಕಾಂಗ್ರೆಸ್‌ ಮಾಡಿರುವ ದ್ರೋಹವನ್ನು ಜನರಿಗೆ ತಿಳಿಸುವ ಕೆಲಸ ಆರಂಭಗೊಂಡಿದೆ. ಅವಸಾನದ ಅಂಚಿನಲ್ಲಿರುವ ಕಾಂಗ್ರೆಸ್‌ ಪಕ್ಷ ಆಧಾರ ರಹಿತ ಆರೋಪಗಳನ್ನು (alligation) ಮಾಡುವುದನ್ನು ಮೊದಲು ನಿಲ್ಲಿಸಲಿ ಎಂದು ಆಗ್ರಹಿಸಿದರು.

ಸ್ವಯಂ ಘೋಷಿತ ಅಧ್ಯಕ್ಷರು:  ಪ್ರಧಾನಿ ಮೋದಿ (Prime Minister Narendra modi, ಯಡಿಯೂರಪ್ಪ (BS Yediyurappa) ಸೇರಿದಂತೆ ಎಲ್ಲರ ಕುರಿತು ಹೀನಾಯವಾಗಿ ಮಾತನಾಡುವ ಕಾಂಗ್ರೆಸ್‌ ಪಕ್ಷಕ್ಕೆ ಅಧಿಕೃತ ಅಧ್ಯಕ್ಷರಿಲ್ಲ. ಸ್ವಯಂ ಘೋಷಿತ ಅಧ್ಯಕ್ಷರಾಗಿ ಸೋನಿಯಾ ಗಾಂಧಿ (Sonia Gandhi) ​ಕುರ್ಚಿಗೆ ಅಂಟಿಕೊಂಡು ಕುಳಿತ್ತಿದ್ದಾರೆ ಎಂದು ವ್ಯಂಗ್ಯವಾಡಿದ ಕಾರಜೋಳ, ರಾಜ್ಯದಲ್ಲಿಯೂ ಮೂರು ಗುಂಪಾಗಿ ಮೂರಾ ಬಟ್ಟೆಯಾಗಿರುವ ಪಕ್ಷ ಆರ್‌ಎಸ್‌ಎಸ್‌ (RSS) ಬಗ್ಗೆ ಮಾತನಾಡುವ ನೈತಿಕತೆಯನ್ನು ಹೇಗೆ ಹೊಂದಲು ಸಾಧ್ಯ ಎಂದು ಪ್ರಶ್ನಿಸಿದರು.

ಸಾರಿಗೆ ಸಚಿವ ಶ್ರೀರಾಮುಲು (Shriramulu) ಮಾತನಾಡಿ, ಗೊತ್ತು ಗುರಿಯಿಲ್ಲದ ಕಾಂಗ್ರೆಸ್‌ ಪಕ್ಷಕ್ಕೆ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಭವಿಷ್ಯವಿಲ್ಲವೆಂದು (Future) ತಿಳಿದು ವಿನಾಕರಣ ಗೊಂದಲ ಮೂಡಿಸುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ (North karnataka) ಬಿಜೆಪಿಗೆ ಉತ್ತಮ ಭವಿಷ್ಯವಿದ್ದು ಪರಿಷತ್ತಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಬೇಕು ಎಂದು ತಿಳಿಸಿದರು.

ಬಿಜೆಪಿಯವರೇ ದಲಿತರ ಪರವಾಗಿಲ್ಲ : 

ಸಚಿವ ಗೋವಿಂದ ಕಾರಜೋಳ(Govind Karjol) ಅವರು ದಲಿತರ ಪರ ತಾರತಮ್ಯ ನೀತಿ ಅನುಸರಿಸುತ್ತಿದ್ದು, ಇದರಿಂದಲೇ ಬಿಜೆಪಿ ದಲಿತರ ಪರವಾಗಿಲ್ಲ ಎಂಬುದು ತಿಳಿಯುತ್ತದೆ. ಬಿಜೆಪಿ ಮಾಜಿ ಸಿಎಂ ಸಿದ್ದರಾಮಯ್ಯನವರ(Siddaramaiah) ವಿರುದ್ಧ ದಲಿತ ವಿರೋಧ ಪಟ್ಟಕಟ್ಟಿ ಬಿಜೆಪಿ ಪ್ರತಿಭಟನೆ ನಡೆಸಿದ್ದನ್ನು ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್‌ ಪಕ್ಷದ ಎಸ್ಸಿ -ಎಸ್ಟಿ ಘಟಕದ ಅಧ್ಯಕ್ಷ ರಾಜು ಮನ್ನಿಕೇರಿ ತೀವ್ರ ಖಂಡಿಸಿದ್ದಾರೆ.

click me!