Dalit: ಹಂಸಲೇಖ ಟೀಕೆ ಬೆನ್ನಲ್ಲೇ ದಲಿತರ ಕೇರಿಗೆ ಪೇಜಾವರ ಶ್ರೀ, ಪಾದಪೂಜೆ

By Kannadaprabha News  |  First Published Nov 28, 2021, 2:19 PM IST

*   ನೆಮ್ಮದಿಯಾಗಿ ಬದುಕು ಸಾಗಿಸುವುದಕ್ಕೆ ದೇವರ ಅನುಗ್ರಹ ಜತೆಗೆ, ಪ್ರಯತ್ನವೂ ಅಗತ್ಯ 
*   ಯಶಸ್ಸು ಪಡೆಯಲು ಪರಿಶ್ರಮ ಅತ್ಯಗತ್ಯ
*   ಭಗವಂತನಲ್ಲಿ ಭಕ್ತಿಯು ಇರಬೇಕು 
 


ಶಿವಮೊಗ್ಗ(ನ.28):  ದಲಿತರ(Dalit) ಕೇರಿಗಳಿಗೆ ಶ್ರೀಗಳ ಭೇಟಿ ಬಗ್ಗೆ ಸಂಗೀತ ನಿರ್ದೇಶಕ ಹಂಸಲೇಖ(Hamsalekha) ಟೀಕೆ ವಿವಾದಕ್ಕೊಳಗಾಗಿರುವ ಬೆನ್ನಲ್ಲೇ ಉಡುಪಿ(Udupi) ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ದಲಿತರ ಕೇರಿಗೆ ಭೇಟಿ ನೀಡಿದ್ದಾರೆ.

ನಗರದ ಬೈಪಾಸ್‌ ರಸ್ತೆಯಲ್ಲಿರುವ ಅಲೆಮಾರಿ ಕ್ಯಾಂಪ್‌ನಲ್ಲಿ ಶನಿವಾರ ಸಹೋದರಿ ನಿವೇದಿತ ಪ್ರತಿಷ್ಠಾನ ವತಿಯಿಂದ ಆಯೋಜಿಸಲಾಗಿದ್ದ ದಲಿತರ ಕೇರಿಗೆ ಭೇಟಿ ಮತ್ತು ಆಶೀರ್ವಚನ ಹಾಗೂ ಪಾದಪೂಜೆ(Paadapooja) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Tap to resize

Latest Videos

ನೆಮ್ಮದಿಯಾಗಿ ಬದುಕು ಸಾಗಿಸುವುದಕ್ಕೆ ದೇವರ ಅನುಗ್ರಹ ಜತೆಗೆ, ಪ್ರಯತ್ನವೂ ಅಗತ್ಯ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ(Vishwaprasanna Teertha Swamiji) ನುಡಿದರು.
ಜೀವನದಲ್ಲಿ ಯಶಸ್ಸು ಗಳಿಸಲು ಹಾಗೂ ನೆಮ್ಮದಿ ಬದುಕು ಸಾಗಿಸಲು ದೇವರ(God) ಅನುಗ್ರಹದ ಜತೆಗೆ, ಪ್ರಯತ್ನವು ಅತಿ ಮುಖ್ಯ. ಯಶಸ್ಸು ಪಡೆಯಲು ಪರಿಶ್ರಮ ಅತ್ಯಗತ್ಯ. ನಿರಂತರವಾಗಿ ಪ್ರಯತ್ನ ಮಾಡುತ್ತಲೇ ಇರಬೇಕು. ಭಗವಂತನಲ್ಲಿ ಭಕ್ತಿಯು ಇರಬೇಕು. ನರ-ನಾರಾಯಣ ಎರಡು ಒಟ್ಟಾಗಿ ಇದ್ದಾಗ ಮಾತ್ರ ಬದುಕು ಹಸನಾಗುತ್ತದೆ. ಜೀವನದಲ್ಲಿ ನೆಮ್ಮದಿ ದೊರಕುತ್ತದೆ ಎಂದು ಹೇಳಿದರು.

ಬ್ರಾಹ್ಮಣ ಹೆಣ್ಮಕ್ಳ ಮದುವೆ ಹೇಳಿಕೆ: ಪೇಜಾವರ ಸ್ವಾಮೀಜಿಗೆ ಬೆಂಬ​ಲ, ಈಶಪ್ರಿಯ ಶ್ರೀ

ನಿವೇದಿತ ಪ್ರತಿಷ್ಠಾನದವರು ಸ್ಥಳೀಯ ಅಲೆಮಾರಿಗಳನ್ನು ನಮ್ಮವರು ಎಂದು ಸ್ವೀಕರಿಸಿ ಅವರಿಗೆ ದಾರಿದೀಪವಾಗಿ ಸಹಾಯಹಸ್ತ ಚಾಚಿರುವುದು ಸಂತೋಷದ ವಿಚಾರ. ಈ ಒಂದು ಉತ್ತಮ ಕಾರ್ಯದಲ್ಲಿ ತೊಡಗಿಕೊಳ್ಳವ ಅವಕಾಶ ನೀಡಬೇಕು ಎಂದು ಅಪೇಕ್ಷೆಪಡುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಅರ್ಚಕ ಅ.ಪ. ರಾಮಭಟ್‌, ವಿನಾಯಕ ಬಾಯರಿ, ನಿವೇದಿತಾ ಪ್ರತಿಷ್ಠಾನದ ತೇಜಸ್ವಿನಿ, ವಿದ್ಯಾ ರಾಘವೇಂದ್ರ, ಭಾಗೀರಥಮ್ಮ, ಮಮತಾ, ಕೃಷ್ಣವೇಣಿ, ಪ್ರಭಾ, ಲಕ್ಷ್ಮೇ ಮಹೇಶ್‌ ಮತ್ತಿತರರು ಉಪಸ್ಥಿತರಿದ್ದರು.
ಮೈಸೂರಿನಲ್ಲಿ(Mysuru) ಬಾಲಕರಿಗೆ ಮತ್ತು ಉಡುಪಿಯಲ್ಲಿ ಬಾಲಕಿಯರಿಗೆ ಉಚಿತವಾಗಿ ಶಿಕ್ಷಣ(Free Education) ನೀಡುವುದರ ಜತೆಗೆ, ಊಟ ಮತ್ತು ವಸತಿ ವ್ಯವಸ್ಥೆ ನೀಡಲಾಗುತ್ತದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು. ನಿವೇದಿತ ಪ್ರತಿಷ್ಠಾನದವರು ಸ್ಥಳೀಯ ಅಲೆಮಾರಿಗಳನ್ನು ನಮ್ಮವರು ಎಂದು ಸ್ವೀಕರಿಸಿ ಅವರಿಗೆ ದಾರಿದೀಪವಾಗಿ ಸಹಾಯಹಸ್ತ ಚಾಚಿರುವುದು ಸಂತೋಷದ ವಿಚಾರ. ಈ ಒಂದು ಉತ್ತಮ ಕಾರ್ಯದಲ್ಲಿ ತೊಡಗಿಕೊಳ್ಳವ ಅವಕಾಶ ನೀಡಬೇಕು ಎಂದು ಅಪೇಕ್ಷೆಪಡುವುದಾಗಿ ಹೇಳಿದರು.

ಹರಿಜನ ಕಾಲೋನಿಯಲ್ಲಿ ಪೇಜಾವರ ಶ್ರೀ ದೀಪಾವಳಿ

ಉಡುಪಿ ನಗರದ ಸಮೀಪ ಬೀಡಿನಗುಡ್ಡೆಯಲ್ಲಿರುವ ಹರಿಜನ ಕಾಲೋನಿಯಲ್ಲಿ(Harijan Colony) ರಾಷ್ಟ್ರೀಯ ಸ್ವಯಂಸೇವಕ ಸಂಘದ(RSS) ಆಶ್ರಯದಲ್ಲಿ ದೀಪಾವಳಿ(Deepavali) ವಿಶಿಷ್ಟವಾಗಿ ನೆರವೇರಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕಾಲೊನಿಯ ಹತ್ತಾರು ಮನೆಗಳಿಗೆ ಸ್ವಯಂ ತೆರಳಿ ಹಣತೆ ದೀಪ ಬೆಳಗಿ ಮನೆಯ ಸದಸ್ಯರ ಜೊತೆ ಉಭಯ ಕುಶಲೋಪರಿ ನಡೆಸಿ ಬೆಳಕಿನ ಹಬ್ಬದ ಆಶೀರ್ವಾದಗೈದರು. ಬಳಿಕ ಅಲ್ಲಿನ ಪ್ರಾರ್ಥನಾ ಮಂದಿರಕ್ಕೆ ಭೇಟಿ ನೀಡಿ ದೇವರ ಸಾಲಂಕೃತ ಭಾವಚಿತ್ರಗಳಿಗೆ ಮಂಗಳಾರತಿ ಬೆಳಗಿ, ಕಾಲೊನಿ ನಿವಾಸಿಗಳು ಅರ್ಪಿಸಿದ ಭಕ್ತಿ ಗೌರವವನ್ನು ಸ್ವೀಕರಿಸಿ ಅನುಗ್ರಹ ಸಂದೇಶ ನೀಡಿದ್ದಾರೆ. 

ವಿಎಚ್‌ಪಿ ಕಾರ್ಯಕರ್ತರು ಪೋಲಿ, ಪುಂಡರಲ್ಲ: ಪೇಜಾವರ ಶ್ರೀ

ಪೇಜಾವರ ಶ್ರೀಗಳ ಬಗ್ಗೆ ಹಂಸಲೇಖ ವಿವಾದಾತ್ಮಕ ಹೇಳಿಕೆ, ದಲಿತರ ಜೊತೆ ನಾವಿದ್ದೇವೆ ಎಂದ ಶ್ರೀಗಳು

ವೇದಿಕೆಯೊಂದರಲ್ಲಿ ನಾದಬ್ರಹ್ಮ ಹಂಸಲೇಖ ಅವರು, ಪೇಜಾವರ ಶ್ರೀಗಳ (Pejawara Seer) ಬಗ್ಗೆ ಲಘುವಾಗಿ ಮಾತನಾಡಿರುವುದು ವಿವಾದಕ್ಕೀಡಾಗಿದೆ. ಹಂಸಲೇಖ  ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಪೇಜಾವರ ಶ್ರೀಗಳು ಪ್ರತಿಕ್ರಿಯಿಸಿದ್ದರು. 

ಇಂತಹ ಮಾತುಗಳು ಹಂಸಲೇಖ ಬಾಯಿಂದ ಬರಬಾರದಿತ್ತು, ನಾವು ವಿರುದ್ಧ ನಾವು ಪ್ರತಿಭಟನೆ ನಡೆಸುವುದಿಲ್ಲ, ಅಭಿಮಾನದಿಂದ ಯಾರಾದರೂ ಪ್ರತಿಭಟಿಸಿದರೆ ಅದು ಅವರ ವೈಯಕ್ತಿಕ ವಿಚಾರ. ಗುರುಗಳು ಎಲ್ಲರ ಹೃದಯದಲ್ಲಿ ಕೃಷ್ಣನನ್ನು ಕಂಡಿದ್ದರು. ಎಲ್ಲರ ಉದ್ಧಾರವನ್ನು ಬಯಸಿದ್ದರು. ಯಾರೇ ಏನೋ ಹೇಳಿದರೆ ನಮ್ಮ ಗುರುಗಳ ಘನತೆ ಕಡಿಮೆಯಾಗುವುದಿಲ್ಲ' ಎಂದು ಈಗಿನ ಪೇಜಾವರ ಶ್ರೀಗಳು ಹೇಳಿದ್ದರು.
 

click me!