Omicron Variant: ಹೊಸ ತಳಿ ವೈರಸ್‌ ಭಯ, ಲಸಿಕೆಗೆ ಮುಗಿಬಿದ್ದ ಜನ..!

By Kannadaprabha News  |  First Published Nov 29, 2021, 6:17 AM IST

*  ಹೊಸ ತಳಿ, 3ನೇ ಅಲೆ ಭಯ, ಆರೋಗ್ಯ ಇಲಾಖೆ ಯತ್ನದಿಂದ ಲಸಿಕಾಕರಣದ ವೇಗ ಹೆಚ್ಚಳ
*  ರಾಜ್ಯದಲ್ಲಿ ಡಿಸೆಂಬರ್‌ ಅಂತ್ಯದೊಳಗೆ ಎಲ್ಲ ವಯಸ್ಕರಿಗೂ ಲಸಿಕೆ ನೀಡಬೇಕು ಎಂಬ ಗುರಿ
*  ಕೊರೋನಾ ಲಸಿಕೆ ನೀಡಿಕೆ ಅಭಿಯಾನ ಮತ್ತೆ ಚುರುಕು 
 


ಬೆಂಗಳೂರು(ನ.29):  ಕೊರೋನಾ(Coronavirus) ಹೊಸ ತಳಿಯ ಭಯ, ಮೂರನೇ ಅಲೆಯ ಆತಂಕ ಹಾಗೂ ಆರೋಗ್ಯ ಇಲಾಖೆಯ ಬಿಗಿ ಕ್ರಮಗಳ ಪರಿಣಾಮ ಕೊರೋನಾ ಲಸಿಕೆ(Vaccine) ನೀಡಿಕೆ ಅಭಿಯಾನ ಮತ್ತೆ ಚುರುಕು ಕಂಡಿದೆ.

ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಲಭ್ಯವಿದ್ದರೂ ಜನರು ಲಸಿಕೆ ಪಡೆಯಲು ಮುಂದೆ ಬಾರದ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ತಿಂಗಳಿಂದ ಅಭಿಯಾನದ ವೇಗ ಕುಸಿದಿತ್ತು. ಈವರೆಗೆ ಮೊದಲ ಲಸಿಕೆ ಪಡೆಯದವರು ಲಕ್ಷಾಂತರ ಜನರಿದ್ದಾರೆ. ಮೊದಲ ಲಸಿಕೆ ಪಡೆದು ನಿಗದಿತ ಅವಧಿಯಲ್ಲಿ ಎರಡನೇ ಲಸಿಕೆ ಪಡೆಯದವರ ಸಂಖ್ಯೆ ಕೂಡಾ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಕಂಡುಬಂದಿತ್ತು. ಆದರೆ ದಕ್ಷಿಣ ಆಫ್ರಿಕಾದಲ್ಲಿ(South africa) ಕಂಡುಬಂದ ಕೊರೋನಾ ಒಮಿಕ್ರೋನ್‌(Omicron) ತಳಿ, ಕ್ಲಸ್ಟರ್‌ ಮಾದರಿಯಲ್ಲಿ ಸೋಂಕು ಪ್ರಕರಣ ಹೆಚ್ಚು ಕಂಡುಬರುತ್ತಿರುವುದರಿಂದ ಆತಂಕಗೊಂಡ ಜನರು ಈಗ ಲಸಿಕಾ ಕೇಂದ್ರಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಬರತೊಡಗಿದ್ದಾರೆ.

Tap to resize

Latest Videos

undefined

Covid19: ಕೊರೋನಾ ಅಲೆ ಭೀತಿ: 6 ಜಿನೋಮಿಕ್‌ ಲ್ಯಾಬ್‌ ಇನ್ನೂ ಆರಂಭವೇ ಆಗಿಲ್ಲ

ನವೆಂಬರ್‌ 20ರಿಂದ ನ.27ರವರೆಗೆ 27.64 ಲಕ್ಷ ಮಂದಿ ಕೋವಿಡ್‌(Covid19) ಲಸಿಕೆ ಪಡೆದಿದ್ದು, ಪ್ರತಿದಿನ ಸರಾಸರಿ 4 ಲಕ್ಷ ಲಸಿಕೆ ನೀಡಲಾಗಿದೆ. ಹಿಂದಿನ ವಾರಗಳಿಗೆ ಹೋಲಿಸಿದಾಗ ಹೆಚ್ಚಿನ ಪ್ರಮಾಣದಲ್ಲಿ ಜನರು ಕೋವಿಡ್‌ ಲಸಿಕೆ ಪಡೆದುಕೊಂಡಿದ್ದಾರೆ. ನ.13ರಿಂದ ನ.20ರವರೆಗೆ 20.90 ಲಕ್ಷ ಮಂದಿ, ನ.6ರಿಂದ 13ರ ಮಧ್ಯೆ ಕೇವಲ 17.54 ಲಕ್ಷ ಮಂದಿ ಲಸಿಕೆ ಪಡೆದಿದ್ದರು.

ಮೊದಲ ಡೋಸ್‌ ಹೆಚ್ಚಳ:

ಈ ಮಧ್ಯೆ ಮೊದಲ ಡೋಸ್‌ ಲಸಿಕೆ ಪಡೆಯುತ್ತಿರುವವರ ಸಂಖ್ಯೆಯಲ್ಲಿಯೂ ಗಮನಾರ್ಹ ಹೆಚ್ಚಳವಾಗಿದೆ. ನ.20ರಿಂದ 27ರ ಮಧ್ಯೆ 6.51 ಲಕ್ಷ ಮಂದಿ ಮೊದಲ ಡೋಸ್‌ ಪಡೆದಿದ್ದಾರೆ. ಇದರ ಹಿಂದಿನ ವಾರ 4.84 ಲಕ್ಷ ಮತ್ತು ಅದಕ್ಕೂ ಹಿಂದಿನ ವಾರ 4.31 ಲಕ್ಷ ಮಂದಿ ಮಾತ್ರ ಲಸಿಕೆ ಪಡೆದಿದ್ದರು.

ರಾಜ್ಯದಲ್ಲಿ(Karnataka) ಡಿಸೆಂಬರ್‌ ಅಂತ್ಯದೊಳಗೆ ಎಲ್ಲ ವಯಸ್ಕರಿಗೂ ಲಸಿಕೆ ನೀಡಬೇಕು ಎಂಬ ಗುರಿಯನ್ನು ರಾಜ್ಯ ಆರೋಗ್ಯ ಇಲಾಖೆ(Department of Health) ಹಾಕಿಕೊಂಡಿದೆ. 4.87 ಕೋಟಿ ಫಲಾನುಭವಿಗಳನ್ನು ಗುರುತಿಸಿದ್ದು, 4.44 ಕೋಟಿ ಮಂದಿಗೆ ಲಸಿಕೆ ನೀಡಲಾಗಿದೆ. ಇನ್ನೂ 43 ಲಕ್ಷ ಮಂದಿ ಮೊದಲ ಡೋಸ್‌ ಪಡೆಯಬೇಕಿದೆ. ಈ ಗುರಿ ಮುಟ್ಟಬೇಕಾದರೆ ಪ್ರತಿದಿನ ಸರಾಸರಿ ಒಂದೂವರೆ ಲಕ್ಷ ಮಂದಿಗೆ ಮೊದಲ ಡೋಸ್‌ ನೀಡಬೇಕು. ಹಾಗೆಯೇ ಎರಡನೇ ಡೋಸ್‌ ಲಸಿಕೆ ಪಡೆಯುತ್ತಿರುವರ ಸಂಖ್ಯೆಯಲ್ಲಿಯೂ ಹೆಚ್ಚಳ ದಾಖಲಾಗಿದೆ. ನ.6ರಿಂದ ನ.13ರವರೆಗೆ 13.23 ಲಕ್ಷ, ನ.13ರಿಂದ ನ.20ರವರೆಗೆ 16.07 ಲಕ್ಷ, ನ.20ರಿಂದ ನ.27ರವರೆಗೆ 21.11 ಲಕ್ಷ ಮಂದಿ ಎರಡನೇ ಡೋಸ್‌ ಪಡೆದುಕೊಂಡಿದ್ದಾರೆ.

Omicron Variant: ವಿದೇಶದಿಂದ ಬಂದವರ ಮೇಲೆ ನಿಗಾ ವಹಿಸಿ : ಪ್ರಧಾನಿ ಮೋದಿ ಸೂಚನೆ!

ವಿಶೇಷ ಪ್ರಯತ್ನ: 

ಲಸಿಕೆ ಪಡೆಯದವರ ಮಾಹಿತಿ ಪಡೆಯಲು ಆಶಾ ಮತ್ತು ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ. ಮೊದಲ ಡೋಸ್‌ ಪಡೆದು ಎರಡನೇ ಡೋಸ್‌ ಪಡೆಯದವರಿಗೆ ಎಸ್‌ಎಂಎಸ್‌ ಮೂಲಕ ಸಂದೇಶ ಕಳುಹಿಸುವುದರ ಜೊತೆಗೆ ಫೋನ್‌ ಮಾಡಿ ಲಸಿಕೆ ಪಡೆಯಲು ಮನವೊಲಿಸುತ್ತಿದ್ದಾರೆ.

ಅತಿ ಹೆಚ್ಚು ಲಸಿಕೆ ನೀಡಿಕೆ: ನವೆಂಬರ್‌ನಲ್ಲಿ ಈವರೆಗೆ 77.76 ಲಕ್ಷ ಡೋಸ್‌ ನೀಡಲಾಗಿದ್ದು, 58.74 ಲಕ್ಷ ಎರಡನೇ ಡೋಸ್‌ ಮತ್ತು 19.01 ಲಕ್ಷ ಮೊದಲ ಡೋಸ್‌ ನೀಡಲಾಗಿದೆ. ಸೆಪ್ಟೆಂಬರ್‌ನಲ್ಲಿ 70 ಲಕ್ಷ ಎರಡನೇ ಡೋಸ್‌ ನೀಡಲಾಗಿತ್ತು.

ಜಗತ್ತಿನ ನಿದ್ದೆಗೆಡಿಸಿರುವ ಕೋವಿಡ್‌ನ ಹೊಸ ರೂಪಾಂತರಿ ‘ಒಮಿಕ್ರೋನ್‌’ ತಣ್ಣಗೆ ಇನ್ನಷ್ಟು ದೇಶಗಳಿವೆ ವ್ಯಾಪಿಸಿರುವುದು ಖಚಿತಪಟ್ಟಿದೆ. ಹೀಗಾಗಿ ಡೆಲ್ಟಾಗಿಂತಾ ವೇಗಿ, ಲಸಿಕೆಯ ಕುಣಿಕೆಯನ್ನೂ ತಪ್ಪಿಸಬಲ್ಲದು ಎಂಬ ಕುಖ್ಯಾತಿ ಹೊಂದಿರುವ ಈ ವೈರಸ್‌ ಜಗತ್ತಿನ ಕಣ್ಣಿಗೆ ಮತ್ತಷ್ಟು ಭಯಂಕರವಾಗಿ ಕಾಣಿಸಿಕೊಂಡಿದೆ.


 

click me!