ಆನೇಕಲ್ (ಡಿ.05): ರಾಜ್ಯದಲ್ಲಿ ಕೊರೋನಾ (corona virus) ಮಹಾಮಾರಿ ಆತಂಕ ಹೆಚ್ಚಾಗಿದ್ದು, ಅದರೊಂದಿಗೆ ಒಮಿಕ್ರಾನ್ (Omicron) ಕಂಟಕವು ಶುರುವಾಗಿದೆ. ಇದೀಗ ಬೆಂಗಳೂರು(Bengaluru) ಸಮೀಪದ ಆನೇಕಲ್ (Anekal) ತಾಲ್ಲೂಕಿನಲ್ಲಿ ಮತ್ತೆ ಕೊರೋನ ಸ್ಫೋಟವಾಗಿದೆ. ಆನೇಕಲ್‌ನ ಸ್ಫೂರ್ತಿ ಕಾಲೇಜಿನಲ್ಲಿ ಮತ್ತೆ ಕೊರೋನ ಸ್ಫೋಟವಾಗಿದ್ದು, 7 ಮಂದಿ ಪರೀಕ್ಷೆಯ ವರದಿ ಪಾಸಿಟಿವ್ (Positive) ಬಂದಿದೆ. ಇಲ್ಲಿನ ದಿ ಇಂಟರ್ನ್ಯಾಷನಲ್ ಸ್ಕೂಲ್‌ನಲ್ಲಿ (School) ಮತ್ತೆ ಐದು ಕೊರೋನ ಪ್ರಕರಣಗಳು ಪತ್ತೆಯಾಗಿವೆ.
ಬೊಮ್ಮ ಸಂದ್ರದ ಕೈಗಾರಿಕಾ ಪ್ರದೇಶದ ಆಡ್ ಕಾಕ್ ಕಂಪನಿಯಲ್ಲಿ ಮೂರು ಪ್ರಕರಣ ಪತ್ತೆಯಾಗಿದೆ. ಕಳೆದ ವಾರವೂ ಸಹ ಕೊರೋನ ಕಾಣಿಸಿಕೊಂಡ ಹಿನ್ನಲೆ ಜಿಲ್ಲಾಧಿಕಾರಿ (DC) ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದೀಗ ಮತ್ತೆ ಇಲ್ಲಿ ಉಲ್ಭಣವಾಗಿದೆ. ಈ ನಿಟ್ಟಿನಲ್ಲಿ ವೈದ್ಯಾಧಿಕಾರಿ (Doctors) ತಂಡದಿಂದ ಚುರುಕಿನ ಕಾರ್ಯ ನಡೆಯುತ್ತಿದ್ದು, ಇನ್ನಷ್ಟು ಮಂದಿಯ ಸ್ವಾಬ್ ಟೆಸ್ಟ್ಗೆ ರವಾನೆ ಮಾಡಲಾಗಿದೆ.
undefined
ಆಡ್ ಕಾಕ್ ಕಂಪನಿಯಲ್ಲಿ ಕಳೆದ ನ.20 ರಂದು ಸೌತ್ ಆಫ್ರಿಕಾದಿಂದ (South africa) ಬಂದಿದ್ದ ವ್ಯಕ್ತಿಯಿಂದ ಇಲ್ಲಿ ಕೊರೋನಾ ಸೋಂಕು ಹರಡಿರುವ ಶಂಕೆ ವ್ಯಕ್ತವಾಗಿದೆ. ಸೌತ್ ಆಫ್ರಿಕಾದಿಂದ ಬಂದಿದ್ದ ವ್ಯಕ್ತಿ ಕಂಪನಿಗೆ ಭೇಟಿ ಕೊಟ್ಟು ಇಲ್ಲಿ ಮೀಟಿಂಗ್ ಮುಗಿಸಿ ವಾಪಾಸಾಗಿದ್ದರು. ಆದರೆ ಈ ಸಭೆಯ ನಂತರವೇ ಇಲ್ಲಿ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಇನ್ನಷ್ಟು ಆತಂಕ ಮನೆ ಮಾಡಿದೆ.
ಆರಂಭದಲ್ಲೇ ಮುನ್ನೆಚ್ಚರಿಕೆ : ರಾಜ್ಯದಲ್ಲಿ ಕೊರೋನಾತಂಕದ (Corona) ಜೊತೆಗೆ ಇದೀಗ ಓಮಿಕ್ರಾನ್ ಆತಂಕ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ (Bengaluru) ದೇಶದ ಮೊದಲ ಓಮಿಕ್ರಾನ್(Omicron) ಪ್ರಕರಣಗಳು ಪತ್ತೆಯಾಗಿದ್ದು, ಇದೀಗ ಕೊರೋನಾ ಮೂರನೆ ಅಲೆಯ ಆತಂಕ ಉಂಟು ಮಾಡಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಮತ್ತೆ ನೈಟ್ ಕರ್ಫ್ಯೂ ಜಾರಿ ಮಾಡುವ ಬಗ್ಗೆ ಬಿರುಸಿನ ಚರ್ಚೆ ನಡೆಯುತ್ತಿದೆ. ಬಿಬಿಎಂಪಿ (BBMP) ತಾಂತ್ರಿಕ ಸಲಹಾ ಸಮಿತಿಯಲ್ಲಿ ಚರ್ಚೆ ನಡೆಸಲಾಗುತ್ತಿದೆ. ಆರಂಭದಲ್ಲಿಯೇ ಕರ್ಫ್ಯೂಜಾರಿ ಮಾಡುವ ಬಗ್ಗೆ ಚಿಂತನೆ ನಡೆದಿದ್ದು, ಬಿಬಿಎಂಪಿ ತಾಂತ್ರಿಕ ಸಲಹಾ ಸಮಿತಿ ಸದಸ್ಯರಿಂದ ಸಲಹೆ ಪಡೆದು ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ.
Covid-19 Variant: ಓಮಿಕ್ರೋನ್ ವಿದೇಶದಿಂದ ಬಂದಿಲ್ಲ, ಭಾರತದಲ್ಲೇ ಇದೆ : ಡಾ. ರಾಕೇಶ್ ಮಿಶ್ರಾ!
ಬೆಂಗಳೂರಿನ ಮಾಲ್, ಥಿಯೇಟರ್ ಮಾರ್ಕೆಟ್‌ಗೆ ವಿಶೇಷ ಗೈಡ್ ಲೈನ್ ನೀಡುವ ಸಾಧ್ಯತೆ ಇದೆ. ಮಾರುಕಟ್ಟೆಯಲ್ಲಿ ಹೊಸ ರೂಲ್ಸ್ ಜಾರಿ ಆಗುವ ಸಾಧ್ಯತೆ ಇದೆ. ವ್ಯಾಕ್ಸಿನೇಷನ್ ಹಾಗೂ ಪರೀಕ್ಷೆ ಹೆಚ್ಚಳದ ಬಗ್ಗೆಯೂ ಗಮನ ಹರಿಸಲಾಗುತ್ತದೆ.
40 ಮಂದಿಗೆ ಕೊರೋನಾ :
ಚಿಕ್ಕಮಗಳೂರು (ಡಿ.05): ರಾಜ್ಯದಲ್ಲಿ ಕೊರೋನಾ (Covid 19) ಕೊಂಚ ಏರಿಕೆಯತ್ತ ಸಾಗುತ್ತಿದ್ದು ಮತ್ತೆ ಮೂರನೇ ಅಲೆ ಆತಂಕ ಮೂಡಿಸಿದೆ. ಚಿಕ್ಕಮಗಳೂರಿನ (chikkamagaluru ) ವಸತಿ ಶಾಲೆಯಲ್ಲಿ 40 ಮಂದಿಗೆ ಕೊರೋನಾ ಸೋಂಕು (Covid ) ತಗುಲಿದೆ. ಚಿಕ್ಕಮಗಳೂರು ಜಿಲ್ಲೆ ಎನ್ ಅರ್ ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಸಿಗೋಡುನಲ್ಲಿರೋ ವಸತಿ ಶಾಲೆಯ (School) ವಿದ್ಯಾರ್ಥಿಗಳು (Students), ಶಿಕ್ಷಕರು ಸೇರಿದಂತೆ 40 ಮಂದಿಯಲ್ಲಿ ಕೊರೋನಾ ದೃಢ ಪಟ್ಟಿದೆ.ಮೂರು ವಿಧ್ಯಾರ್ಥಿಗಳು ಹಾಗೂ ನಾಲ್ವರು ಸಿಬ್ಬಂದಿಗೆ ಮೊದಲು ಕೊರೋನಾ ಸೋಂಕು ಹರಡಿತ್ತು. 418 ವಿಧ್ಯಾರ್ಥಿಗಳು ಹಾಗೂ ಸಿಬ್ಬಂದಿ ಇರುವ ಶಾಲೆಯಲ್ಲಿ ಎಲ್ಲರ ಸ್ವ್ಯಾಬ್ ಪಡೆದಿದ್ದ ಆರೋಗ್ಯ ಇಲಾಖೆ (health Department) ಇದೀಗ 40 ಮಂದಿಗೆ ಸೋಂಕು ತಗುಲಿರುವುದನ್ನು ದೃಢಪಡಿಸಿದೆ.
ಜವಾಹರ್ ನವೋದಯ ವಿದ್ಯಾಲಯದ ವಿದ್ಯಾರ್ಥಿಗಳು ಹಾಗು ಸಿಬ್ಬಂದಿಯಲ್ಲಿ ಕೊರೋನಾ ಕಾಣಿಸಿಕೊಂಡಿದ್ದು, ಶಾಲೆಯನ್ನು ಜಿಲ್ಲಾಡಳಿತ ಸೀಲ್ ಡೌನ್ (Seal Down) ಮಾಡಿದೆ. ಪತ್ತೆಯಾದವರಲ್ಲಿ ಯಾವುದೇ ಲಕ್ಷಣಗಳಿಲ್ಲದೆ ಸೌಮ್ಯ ಸ್ವರೂಪದಲ್ಲಿದೆ. ಸದ್ಯ ವಸತಿ ಶಾಲೆಯಲ್ಲಿಯೇ ಎಲ್ಲರಿಗೂ ಕ್ವಾರಂಟೈನ್ ಮಾಡಲಾಗಿದೆ.
ಸ್ಥಳಕ್ಕೆ ಡಿಎಚ್ ಓ (DHO), ಸರ್ವೇಕ್ಷಣಾಧಿಕಾರಿ, ಆರೋಗ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.