Covid Crisis : ಬೆಂಗಳೂರಿಗರೇ ಎಚ್ಚರ : ಒಂದೇ ದಿನ ಶೇ.20% ಸೋಂಕು ಹೆಚ್ಚಳ

Kannadaprabha News   | Asianet News
Published : Jan 07, 2022, 07:34 AM IST
Covid Crisis : ಬೆಂಗಳೂರಿಗರೇ ಎಚ್ಚರ :  ಒಂದೇ ದಿನ ಶೇ.20% ಸೋಂಕು ಹೆಚ್ಚಳ

ಸಾರಾಂಶ

ಸಿಲಿಕಾನ್‌ಸಿಟಿಯಲ್ಲಿ ಒಂದೇ ದಿನಕ್ಕೆ ಕೊರೋನಾ ಹೊಸ ಪ್ರಕರಣಗಳು ಶೇ.20ರಷ್ಟುಹೆಚ್ಚಳ  214 ದಿನಗಳ ನಂತರ 4 ಸಾವಿರಕ್ಕಿಂತ ಅಧಿಕ ಜನರಲ್ಲಿ ಸೋಂಕು ಪತ್ತೆ

 ಬೆಂಗಳೂರು (ಜ.07):  ಸಿಲಿಕಾನ್‌ಸಿಟಿಯಲ್ಲಿ ಒಂದೇ ದಿನಕ್ಕೆ ಕೊರೋನಾ (Corona) ಹೊಸ ಪ್ರಕರಣಗಳು ಶೇ.20 ರಷ್ಟು ಹೆಚ್ಚಳವಾಗಿದ್ದು 214 ದಿನಗಳ ನಂತರ 4 ಸಾವಿರಕ್ಕಿಂತ ಅಧಿಕ ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ನಗರದಲ್ಲಿ ಪಾಸಿಟಿವಿಟಿ (Positivity) ದರ 4.98ಕ್ಕೆ ಏರಿಕೆಯಾಗಿದೆ.  ನಗರದಲ್ಲಿ ಗುರುವಾರ ಒಂದೇ ದಿನ 4324 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು ಓರ್ವ ಸೋಂಕಿತರು ಮೃತ ಪಟ್ಟಿರುವ ವರದಿಯಾಗಿದೆ. ಈ ಮೂಲಕ ಒಟ್ಟಾರೆ ಕೊರೋನಾ (Corona) ಪ್ರಕರಣಗಳ ಸಂಖ್ಯೆ 12.76 ಲಕ್ಷಕ್ಕೆ, ಗುಣ ಮುಖರ ಸಂಖ್ಯೆ 12.41 ಲಕ್ಷಕ್ಕೆ, ಸಾವಿಗೀಡಾದವರ ಸಂಖ್ಯೆ 16,415ಕ್ಕೆ ಹೆಚ್ಚಳವಾಗಿದೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 18,913ಕ್ಕೆ ಏರಿಕೆಯಾಗಿದೆ.

ಜ.3ರಂದು 1041, ಜ.4ರಂದು 2053 ಮತ್ತು ಜ.5ರಂದು 3605 ಹೊಸ ಪ್ರಕರಣಗಳು (Covid ) ವರದಿಯಾದ ಬೆನ್ನಲ್ಲೇ ಗುರುವಾರ 4324 ಪ್ರಕರಣಗಳು ಪತ್ತೆಯಾಗುವ ಮೂಲಕ ಒಂದೇ ದಿನದಲ್ಲಿ ಶೇ.20ರಷ್ಟು ಪ್ರಕರಣಗಳು ಜಾಸ್ತಿಯಾಗಿವೆ. ಎರಡನೇ ಅಲೆಯ ಸಂದರ್ಭದಲ್ಲಿ ಮೇ 30ರಂದು 4734 ಪ್ರಕರಣಗಳು ಮತ್ತು ಜೂ.2ರಂದು 4095 ಪ್ರಕರಣಗಳು ಪತ್ತೆಯಾಗಿದ್ದು, ಈ ವರೆಗಿನ ಅತ್ಯಧಿಕ ಸೋಂಕಿತ ಪ್ರಕರಣವಾಗಿದ್ದವು. ಇದೀಗ 214 ದಿನಗಳ ಬಳಿಕ ಅತಿ ಹೆಚ್ಚು ಅಂದರೆ 4324 ಪ್ರಕರಣಗಳು ದಾಖಲಾಗಿವೆ.

ಬೆಳ್ಳಂದೂರಲ್ಲಿ (Bellanduru) 40 ಕೇಸ್‌:  ಪಾಲಿಕೆ ವ್ಯಾಪ್ತಿಯ 10 ವಾರ್ಡ್‌ಗಳಲ್ಲಿ 10ಕ್ಕಿಂತ ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಬೆಳ್ಳಂದೂರು ವಾರ್ಡ್‌ವೊಂದರಲ್ಲೇ 40 ಜನರಲ್ಲಿ ಸೋಂಕು ದೃಢಪಟ್ಟಿದೆ. ಹಗದೂರು 20, ದೊಡ್ಡನೆಕ್ಕುಂದಿ 17, ಎಚ್‌ಎಸ್‌ಆರ್‌ ಲೇಔಟ್‌ 14, ವರ್ತೂರು 13, ಕೋರಮಂಗಲ 14, ಅರಕೆರೆ 11, ಹೊರಮಾವು 11, ಶಾಂತಲಾ ನಗರ 12 ಮತ್ತು ರಾಜಾಜಿನಗರ ವಾರ್ಡ್‌ಗಳಲ್ಲಿ 10 ಪ್ರಕರಣಗಳು ಪತ್ತೆಯಾಗಿವೆ.

ಬಿಬಿಎಂಪಿಯ (BBMP) ಎಂಟು ವಲಯಗಳಲ್ಲಿ ಸೋಂಕಿತ ಪ್ರಕರಣಗಳೊಂದಿಗೆ ಮೈಕ್ರೋ ಕಂಟೈನ್ಮೆಂಟ್‌ ವಲಯಗಳ ಸಂಖ್ಯೆಯೂ ಹೆಚ್ಚಾಗಿದ್ದು ಬರೋಬ್ಬರಿ 221 ಕಂಟೈನ್ಮೆಂಟ್‌ಗಳನ್ನು ಗುರುತಿಸಲಾಗಿದೆ. ಮಹದೇವಪುರ ವಲಯವೊಂದರಲ್ಲೇ 83 ಕಂಟೈನ್ಮೆಂಟ್‌ಗಳನ್ನು ಮಾಡಲಾಗಿದೆ. ಬೊಮ್ಮನಹಳ್ಳಿ 63, ಯಲಹಂಕ 27, ಪಶ್ಚಿಮ 21, ಪೂರ್ವ 12, ದಕ್ಷಿಣ 12, ದಾಸರಹಳ್ಳಿ 4 ಕಂಟೈನ್ಮೆಂಟ್‌ಗಳನ್ನು ಮಾಡಲಾಗಿದೆ ಎಂದು ಬಿಬಿಎಂಪಿ ವರದಿ ಮಾಹಿತಿ ನೀಡಿದೆ.

ದಿನಾಂಕ - ಸೋಂಕಿತರು

ಜ.1 -810

ಜ.2-923

ಜ.3-1041

ಜ.4-2053

ಜ.5 -3605

ಜ.6-4324

ಬೂಸ್ಟರ್ ಡೋಸ್‌ಗೆ ಬೇರೆ ಲಸಿಕೆ ಇಲ್ಲ :   ಕೊರೋನಾದಿಂದ (Corona) ಪಾರಾಗಲು ದೇಶದಲ್ಲಿ ಬೂಸ್ಟರ್‌ ಡೋಸ್‌ಗೆ (Booster Dose)  ಅರ್ಹವಿರುವವರಿಗೆ ಲಸಿಕೆಗಳ ಮಿಶ್ರಣ ನೀಡುವುದಿಲ್ಲ. ಬದಲಿಗೆ ಅವರು ಪಡೆದ ಮೊದಲೆರಡು ಡೋಸ್‌ಗಳ ಲಸಿಕೆಯನ್ನೇ (Vaccination) ಬೂಸ್ಟರ್‌ ಡೋಸ್‌ ಆಗಿ ನೀಡಲಾಗುತ್ತದೆ ಎಂದು ಭಾರತದ (India) ಕೋವಿಡ್‌ ಕಾರ್ಯಪಡೆ ಮುಖ್ಯಸ್ಥ ಡಾ. ವಿ.ಕೆ ಪೌಲ್‌ ತಿಳಿಸಿದ್ದಾರೆ.  ಈ ಪ್ರಕಾರ ಸೀರಂ ಸಂಸ್ಥೆಯ ಕೋವಿ ಶೀಲ್ಡ್‌ ಲಸಿಕೆಯ ಮೊದಲೆರಡು ಡೋಸ್‌ ಪಡೆದವರಿಗೆ ಅದೇ ಲಸಿಕೆಯ 3ನೇ ಡೋಸ್‌ ಮತ್ತು ಭಾರತ್‌ ಬಯೋಟೆಕ್‌ನ ಕೋವ್ಯಾಕ್ಸಿನ್‌ ಪಡೆದವರಿಗೆ 3ನೇ ಡೋಸ್‌ ಅನ್ನು ಅದೇ ಲಸಿಕೆ ನೀಡಲಾಗುತ್ತದೆ.

ಲಸಿಕೆಯ (Vaccination) ಮೊದಲೆರಡು ಡೋಸ್‌ಗಳನ್ನು ಪಡೆದ ವ್ಯಕ್ತಿಗಳಿಗೆ ಅದೇ ಲಸಿಕೆಯ 3ನೇ ಡೋಸ್‌ (Dose) ಅನ್ನು ಮಾತ್ರವೇ ನೀಡಬೇಕು ಎಂಬ ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದೆ. ಈ ಹಿನ್ನೆಲೆಯಲ್ಲಿ ಲಸಿಕೆಗಳ ಮಿಶ್ರಣದ ನಿರ್ಧಾರದಿಂದ ಸರ್ಕಾರ ಹಿಂದೆ ಸರಿದಿದೆ.

ದೇಶಾದ್ಯಂತ ಒಮಿಕ್ರೋನ್‌ (Omicron) ಅಟ್ಟಹಾಸ ತೀವ್ರವಾದ ಬಳಿಕ ಅಗತ್ಯವಿರುವವರೆಗೆ ಬೂಸ್ಟರ್‌ ಡೋಸ್‌ ನೀಡುವುದಾಗಿ ಪ್ರಧಾನಿ ಮೋದಿ (Prime Minister Modi) ಅವರು ಘೋಷಣೆ ಮಾಡಿದರು. ಅದರಂತೆ ಜ.10ರಿಂದ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಬೂಸ್ಟರ್‌ ಡೋಸ್‌ ಅಭಿಯಾನ ಆರಂಭವಾಗಲಿದೆ.

ಅಲ್ಲದೆ ಕಳೆದ ವಾರವಷ್ಟೇ ಕೋವಿಡ್‌ (Covid) ವಿರುದ್ಧದ ಭಾರತದ ಬತ್ತಳಿಕೆಗೆ ಸೇರ್ಪಡೆಯಾಗಿರುವ ಕೋರ್ಬೆವ್ಯಾಕ್ಸ್‌ ಮತ್ತು ಕೋವೋವ್ಯಾಕ್ಸ್‌ ಲಸಿಕೆಗಳನ್ನು ಬೂಸ್ಟರ್‌ ಡೋಸ್‌ಗೆ ಪರಿಗಣಿಸುವ ಸಾಧ್ಯತೆಯಿಲ್ಲ ಎಂದು ದೇಶದ ಲಸಿಕಾಕರಣದ ಅಧ್ಯಕ್ಷ ಡಾ. ಅರೋರಾ ತಿಳಿಸಿದ್ದಾರೆ. ದೇಶಾದ್ಯಂತ ಈಗಾಗಲೇ 147 ಡೋಸ್‌ಗಳನ್ನು ನೀಡಿದ್ದು, ಇದರಲ್ಲಿ 61.8 ಕೋಟಿ ಮಂದಿಗೆ 2ನೇ ಡೋಸ್‌ ನೀಡಲಾಗಿದೆ.

PREV
Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC