Kalaburagi: ಆಳಂದ ಚಲೋಗೆ ಪಟ್ಟು: ಚೈತ್ರಾ ಕುಂದಾಪುರ ಪೊಲೀಸರ ವಶಕ್ಕೆ

By Kannadaprabha News  |  First Published Mar 1, 2022, 11:15 AM IST

*  ಕಲಬುರಗಿ ಜಿಲ್ಲೆ ಪ್ರವೇಶಕ್ಕೆ ಮುಂದಾದ ಹಿಂದುಪರ ಹೋರಾಟಗಾರ್ತಿ ಚೈತ್ರಾ ಕುಂದಾಪುರ 
*  ಶಹಾಬಾದ್ ಎಬಿಎಲ್ ಕ್ರಾಸ್ ಬಳಿ ತಡೆದು ಬಂಧನ
*  ಯಾದಗಿರಿಗೆ ಕರೆದೊಯ್ದ ಪೊಲೀಸರು 
 


ಕಲಬುರಗಿ(ಮಾ.01): ಮಹಾ ಶಿವರಾತ್ರಿ(Maha Shivaratri) ದಿನದಂದು ಶ್ರೀರಾಮ ಸೇನೆ ಕರೆ ನೀಡಿದ್ದ ಆಳಂದ ಚಲೋ ಅಭಿಯಾನದಲ್ಲಿ ಪಾಲ್ಗೊಳ್ಳಲು ಹಾಗೂ ಲಾಡಲೆ ಮಸಾಕ್ ದರ್ಗಾದಲ್ಲಿನ ಶಿವಲಿಂಗ ಶುದ್ದೀಕರಣ ಪೂಜೆಗಳಲ್ಲಿ ಭಾಗವಹಿಸಲು ನಿನ್ನೆ(ಸೋಮವಾರ) ಮಧ್ಯಾಹ್ನ ಕಲಬುರಗಿಗೆ ಆಗಮಿಸುತ್ತಿದ್ದ ಮಂಗಳೂರಿನ ಮೂಲದ ಹಿಂದುಪರ ಹೋರಾಟಗಾರ್ತಿ ಚೈತ್ರಾ ಕುಂದಾಪುರ(Chaitra Kundapur) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇವರು ಪ್ರಯಾಣಿಸುತ್ತಿದ್ದ ಕಾರು ಶಹಾಬಾದ್ ಮಾರ್ಗವಾಗಿ ಕಲಬುರಗಿಗೆ ಬರುತ್ತಿದ್ದಾಗಲೇ ದಾರಿಯಲ್ಲಿ ಕಾಗಿಣಾ ನದಿ ಸಮೀಪದ ಎಬಿಎಲ್ ಕ್ರಾಸ್ ಬಳಿ ಪೊಲೀಸರು(Police) ಎದುರಾಗಿ ಚೈತ್ರಾ ಕುಂದಾಪೂರ ಆವರನ್ನು ವಶಕ್ಕೆ ಪಡೆದಿದ್ದು ಅಲ್ಲಿಂದಲೇ ಯಾದಗಿರಿಗೆ(Yadgir) ಕರೆದೊಯ್ದಿದ್ದಾರೆ.

Latest Videos

Hubballi: ಕಾಲೇಜಿಗೆ ಹಿಜಾಬ್‌ ಧರಿಸಿಯೇ ಬರ್ತೇವೆ ಎನ್ನುವವರು ಪಾಕಿಸ್ತಾನಕ್ಕೆ ಹೋಗಲಿ: ಮುತಾಲಿಕ್‌

ಆಲಂದಲ್ಲಿ ಮಾ. 1 ರಂದು ಶಿವರಾತ್ರಿ ದಿನವೇ ಲಾಡ್ಲೆ ಮಶಾಕ್ ದರ್ಗಾದಲ್ಲಿನ ಸಿವಲಿಂಗದ ಸುದ್ದೀಕರಣಕ್ಕೆ ಶ್ರೀ ರಾಮ ಸೇನೆ ಮುಂದಾಗಿತ್ತು, ಇದೇ ದಿನ ದರ್ಗಾದಲ್ಲಿ ಸಂದಲ್, ಉರುಸ್ ಸಹ ಇರೋದರಿಂದ ಉಭಯ ಕೋಮಿನವರು ಅಲ್ಲಿ ಸೇರವುದನ್ನು ನಿಷೇಧಿಸಿರುವ ಪೊಲೀಸರು ಫೆ. 27 ರಿಂದ ಮಾ. 3 ರ ವರೆಗೂ ನಿಷೇಧಾಜ್ಞೆ(Prohibition) ಹಾಕಿದ್ದಾರೆ. ಜೊತೆಗೇ ಇದೇ 5 ದಿನದ ಅವಧಿಗೆ ಶ್ರೀ ರಾಮ ಸೇನೆ ರಾಜ್ಯಾಧ್ಯಕ್ಷ ಪ್ರಮೋದ್‌ ಮುತಾಲಿಕ್(Pramod Mutalik) ಹಾಗೂ ಹೋರಾಟಗಾರ್ತಿ ಚೈತ್ರಾ ಕುಂದಾಪುರ ಅವರ ಕಲಬುರಗಿ(Kalaburagi) ಪ್ರವೇಶಕ್ಕೂ ನಿಷೇಧ ವಿಧಿಸಿ ಆದೇಶಿಸಿದ್ದರು.

ಹೀಗಾಗಿ ಚೈತ್ರಾ ಕುಂದಾಪುರ ಅವರು ಶಹಾಬಾದ್ ಮಾರ್ಗವಾಗಿ ಕಲಬುರಗಿ ಪ್ರವೇಶಿಸುತ್ತಿದ್ದಂತೆಯೇ ಅವರನ್ನು ವಶಕ್ಕೆ ಪಡೆದು ಪಕ್ಕದ ಯಾದಗಿರಿ ಜಿಲ್ಲೆಗೆ ಪೊಲೀಸರು ಕರೆದೊಯ್ಯಿದ್ದಾರೆ. ಇದೇ ಪ್ರಕರಣದಲ್ಲಿ ರಾಮ ಸೇನೆ ಕಾರ್ಯಾಧ್ಯಕ್ಷ ಆಂದೋಲಾ ಸಿದ್ದಲಿಂಗ ಶ್ರೀಗಳ ಆಳಂದ ಪ್ರವೇಶಕ್ಕೆ ಜಲ್ಲಾಡಳಿತ ಹಾಗೂ ಪೊಲೀಸರು ನಿಷೇಧ ಹೇರಿ ಆದೇಶ ಹೊರಡಿಸಿದ್ದಾರೆ.

ಮಾ. 1ರ ಶಿವರಾತ್ರಿ ದಿನ ಆಳಂದ ಚಲೋ ಮೂಲಕ ಹೋಗಿ ಶಿವಲಿಂಗ(Shivalinga) ಪೂಜೆ ಮಾಡೋದು ನಿಶ್ಚಿತ ಎಂದು ಸಿದ್ದಲಿಂಗ ಶ್ರೀಗಳು ಹೇಳಿಕೆ ನೀಡಿದ್ದು ಇವರ ಆಂದೋಲನಕ್ಕೆ ಜಿಲ್ಲೆಯ ಬಿಜೆಪಿ ಸಾಸಕರಾದ ರಾಜುಮಾರ್ ಪಾಈಲ್ ತೇಲ್ಕೂರ್, ಸುಭಾಸ ಗುತ್ತೇದಾರ್, ಬಸವರಾಜ ಮತ್ತಿಮಡು, ಪಕ್ಷದ ಅಧ್ಯಕ್ಷ ಶಿವರಾಜ ಪಾಟೀಲ್, ಮಾಜಿ ಸಾಸಕ ದೊಡ್ಡಪ್ಪಗೌಡ ಪಾಟೀಲ್ ಬೆಂಬಲಿಸಿ ಇವರೆಲ್ಲರೂ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಕುಂಕುಮ, ಬಳೆ ವಿಷಯಕ್ಕೆ ಬಂದ್ರೆ ನಾಲಿಗೆ ಸೀಳ್ತೇವೆ: ಮುತಾಲಿಕ್‌ ಖಡಕ್‌ ಎಚ್ಚರಿಕೆ

ಬಾಗಲಕೋಟೆ: ಹಿಜಾಬ್‌(Hijab) ವಿಷಯದ ಜೊತೆಗೆ ಕುಂಕುಮ, ಬಳೆ, ಗಣಪತಿ ಪೂಜೆ, ಸರಸ್ವತಿ ಪೂಜೆ ಬಗ್ಗೆ ಯಾರಾದರೂ ಮಾತನಾಡಿದರೆ ನಾಲಿಗೆ ಸೀಳಬೇಕಾದಿತು ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್‌(Pramod Mutalik) ವಿವಾದಾತ್ಮಕ ಹೇಳಿಕೆ ನೀಡಿದ್ದರು. 

ಫೆ.19 ರಂದು ನಗರದಲ್ಲಿ ಮಾತನಾಡಿದ್ದ ಅವರು, ನಮ್ಮ ಹತ್ತಾರು ದೇಶಗಳನ್ನು ನುಂಗಿ ನೀರು ಕುಡಿದಿರುವ ಇಸ್ಲಾಮಿಕ್‌(Islamic) ಇತಿಹಾಸ ಇದೀಗ ನಮ್ಮ ಸಂಪ್ರದಾಯದ ಭಾಗವಾಗಿರುವ ವಿಷಯಗಳ ಬಗ್ಗೆ ಮಾತನಾಡಿದರೆ ಹೇಗೆ ಸಹಿಸಲು ಸಾಧ್ಯ ಎಂದು ಪ್ರಶ್ನಿಸಿದ್ದರು. 

Gadag: ಸಿದ್ದರಾಮಯ್ಯ ಮುಸ್ಲಿಮರಿಗೆ ಮಾತ್ರ ಪ್ರತಿಪಕ್ಷ ನಾಯಕರಲ್ಲ: ಪ್ರಮೋದ್‌ ಮುತಾಲಿಕ್‌

ಆರ್‌ಎಸ್‌ಎಸ್‌(RSS) ಸಂಘಟನೆ ದೇಶ ಭಕ್ತಿಯ ಸಂಘಟನೆ ಅಂತಹ ಸಂಘಟನೆಯ ಬಗ್ಗೆ ಸಿದ್ದರಾಮಯ್ಯ(Siddaramaiah) ಅವರು ಮಾತನಾಡಬಾರದು. ಅವರು ಬೇಕಾದರೆ ಬಿಜೆಪಿ ಕುರಿತು ಟೀಕೆ ಮಾಡಲಿ ಆರ್‌ಎಸ್‌ಎಸ್‌ ಬಗ್ಗೆ ಟೀಕೆ ಬೇಡ ಎಂದು ಸಲಹೆ ನೀಡಿದ್ದರು. 

ಹಿಜಾಬ್‌ ಧರಿಸಿಯೇ ಕಾಲೇಜಿಗೆ ಬರುತ್ತೇವೆ ಎನ್ನುವವರು ಪಾಕಿಸ್ತಾನಕ್ಕೆ(Pakistan) ಹೋಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದ ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ ಮುತಾಲಿಕ್‌, ಸರ್ಕಾರ ವಿಳಂಬ ಮಾಡದೆ, ಅವಿಧೇಯತೆ ತೋರುವವರ ಮೇಲೆ ಸೂಕ್ತಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.

click me!