Kaveri Water: ಬೆಂಗ್ಳೂರಿಗರ ಗಮನಕ್ಕೆ: ನಾಡಿದ್ದು ಈ ಏರಿಯಾಗಳಲ್ಲಿ ನೀರು ಬರಲ್ಲ

Kannadaprabha News   | Asianet News
Published : Mar 01, 2022, 08:21 AM ISTUpdated : Mar 01, 2022, 08:26 AM IST
Kaveri Water: ಬೆಂಗ್ಳೂರಿಗರ ಗಮನಕ್ಕೆ: ನಾಡಿದ್ದು ಈ ಏರಿಯಾಗಳಲ್ಲಿ ನೀರು ಬರಲ್ಲ

ಸಾರಾಂಶ

*  ಮಾ. 3 ರಂದು ಬೆಳಗಿನ ಜಾವ 3ರಿಂದ ರಾತ್ರಿ 9ರವರೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯ *  ಕಾವೇರಿ ನೀರಿನ ಪೈಪ್‌ಲೈನ್‌ ಮಾರ್ಗ ಬದಲಾವಣೆ ಕಾಮಗಾರಿ  *  ಬೆಂಗಳೂರಿನ ಹಲವು ಬಡಾವಣೆಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ

ಬೆಂಗಳೂರು(ಮಾ.01):  ಕೆಆರ್‌ ಪುರಂ ಹಾಗೂ ತಿಪ್ಪಗೊಂಡನಹಳ್ಳಿ ವ್ಯಾಪ್ತಿಯಲ್ಲಿ ಕಾವೇರಿ ನೀರಿನ(Kaveri Water) ಪೈಪ್‌ಲೈನ್‌ ಮಾರ್ಗ ಬದಲಾವಣೆ ಕಾಮಗಾರಿ ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ನಗರದ ಹಲವು ಬಡಾವಣೆಗಳಲ್ಲಿ ಮಾ. 3 ರಂದು ಬೆಳಗಿನ ಜಾವ 3ರಿಂದ ರಾತ್ರಿ 9ರವರೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಜಲಮಂಡಳಿ(Bengaluru Water Board) ತಿಳಿಸಿದೆ.

ವ್ಯತ್ಯಯದ ಸ್ಥಳಗಳು: 

ಯಲಹಂಕ, ಜಕ್ಕೂರು, ಬ್ಯಾಟರಾಯನಪುರ, ವಿದ್ಯಾರಣ್ಯಪುರ, ಬಿಇಎಲ್‌ ಲೇಔಟ್‌, ಎಚ್‌ಎಂಟಿ ಬಡಾವಣೆ, ದಾಸರಹಳ್ಳಿ, ಶೆಟ್ಟಿಹಳ್ಳಿ, ಮಲ್ಲಸಂದ್ರ, ಬಾಗಲಗುಂಟೆ, ಟಿ.ದಾಸರಹಳ್ಳಿ, ಪೀಣ್ಯ, ರಾಜಗೋಪಾಲ ನಗರ, ಚೊಕ್ಕಸಂದ್ರ, ಹೆಗ್ಗನಹಳ್ಳಿ, ಎಚ್‌ಎಂಟಿ ವಾರ್ಡ್‌, ನಂದಿನಿ ಲೇಔಟ್‌, ಆರ್‌ಆರ್‌ ನಗರ, ಕೆಂಗೇರಿ, ಉಲ್ಲಾಳ, ಅನ್ನಪೂರ್ಣೇಶ್ವರಿ ನಗರ, ಪಾಪರೆಡ್ಡಿಪಾಳ್ಯ, ಮಲ್ಲತ್ತಹಳ್ಳಿ, ಕೆಂಗುಂಟೆ, ಜಗಜ್ಯೋತಿ ಬಡಾವಣೆ, ಜ್ಞಾನಭಾರತಿ ಲೇಔಟ್‌, ಐಡಿಯಲ್‌ ಹೋಮ್ಸ್‌, ಬಿಇಎಂಎಲ್‌ ಲೇಔಟ್‌, ಪಟ್ಟಣಗೆರೆ, ಚೆನ್ನಸಂದ್ರ, ಕೊತ್ತನೂರು ದಿಣ್ಣೆ, ಜೆಪಿ ನಗರ 6, 7 ಮತ್ತು 8ನೇ ಹಂತ, ವಿಜಯ ಬ್ಯಾಂಕ್‌ ಲೇಔಟ್‌, ಕೂಡ್ಲು, ಅಂಜನಾಪುರ, ಬೊಮ್ಮನಹಳ್ಳಿ.

ವನ್ಯ ಜೀವಿಗಳ ನೀರಿನ ಸಮಸ್ಯೆಗೆ ಪರಿಹಾರ: ಬನ್ನೇರುಘಟ್ಟ ಉದ್ಯಾನಕ್ಕೆ ಕಾವೇರಿ ನೀರು

ಕೆ.ಆರ್‌.ಪುರಂ, ರಾಮಮೂರ್ತಿ ನಗರ, ಮಹದೇವಪುರ, ಎ.ನಾರಾಯಣಪುರ, ಮಾರತ್ತಹಳ್ಳಿ, ಹೂಡಿ, ವೈಟ್‌ಫೀಲ್ಡ್‌, ನಾಗರಬಾವಿ, ಜಿಕೆವಿಕೆ, ಸಂಜಯನಗರ, ನ್ಯೂ ಬಿಇಎಲ್‌ ರಸ್ತೆ, ಎಚ್‌ಎಸ್‌ಆರ್‌ ಲೇಔಟ್‌, ಎಚ್‌ಬಿಆರ್‌ ಲೇಔಟ್‌, ದೊಮ್ಮಲೂರು, ಬನ್ನೇರುಘಟ್ಟರಸ್ತೆ, ಜಂಬೂಸವಾರಿ ದಿಣ್ಣೆ, ಲಗ್ಗೆರೆ, ಶ್ರೀಗಂಧದ ಕಾವಲ್‌, ಟೆಲಿಕಾಂ ಲೇಔಟ್‌, ಶ್ರೀನಿವಾಸ ನಗರ, ಬಾಹುಬಲಿ ನಗರ, ಜಾಲಹಳ್ಳಿ, ಓಎಂಬಿಆರ್‌, ಬೊಮ್ಮನಹಳ್ಳಿ, ಅರಕೆರೆ, ಬಿಎಚ್‌ಇಎಲ್‌ ಲೇಔಟ್‌.
ಸುಂಕದಕಟ್ಟೆ, ಬ್ಯಾಡರಹಳ್ಳಿ, ಸರ್‌ ಎಂ.ವಿಶ್ವೇಶ್ವರಯ್ಯ ಲೇಔಟ್‌, ಕೊಟ್ಟಿಗೆಪಾಳ್ಯ, ಎಲ್‌ಐಸಿ ಬಡಾವಣೆ, ನಾಗದೇವನಹಳ್ಳಿ, ಮೈಸೂರು ರಸ್ತೆ, ಶಿರ್ಕೆ, ಚಿಕ್ಕಗೊಲ್ಲರಹಟ್ಟಿ, ಸುಬ್ಬಣ್ಣ ಗಾರ್ಡನ್‌, ನಾಯಂಡನಹಳ್ಳಿ, ಕಾಮಾಕ್ಷಿಪಾಳ್ಯ, ರಂಗನಾಥಪುರ, ಗೋವಿಂದರಾಜ ನಗರ, ಕೆಎಚ್‌ಬಿ ಕಾಲೋನಿ, ಮೂಡಲಪಾಳ್ಯ, ಆದರ್ಶ ನಗರ, ಬಿಡಿಎ ಲೇಔಟ್‌, ಮುನೇಶ್ವರ ನಗರ, ಕೊಡಿಗೇಹಳ್ಳಿ, ಅಮೃತಹಳ್ಳಿ, ಕೋಗಿಲು, ಜೆಪಿ ಪಾರ್ಕ್, ಯಶವಂತಪುರ, ಸದ್ದಗುಂಟೆ ಪಾಳ್ಯ, ಕಸವನಹಳ್ಳಿ, ಕೊನೇನ ಅಗ್ರಹಾರ, ಸುಧಾಮ ನಗರ, ಮುರುಗೇಶ್‌ ಪಾಳ್ಯ, ಎಚ್‌ಆರ್‌ಬಿಆರ್‌ ಲೇಔಟ್‌, ನಾಗವಾರ, ಬಾಲಾಜಿ ಲೇಔಟ್‌, ಬಿಜಿಎಸ್‌ ಲೇಔಟ್‌, ಎಸ್‌ಬಿಎಂ ಕಾಲೋನಿ, ಬಿಟಿಎಸ್‌ ಬಡಾವಣೆ.

ಸಾರ್ವಭೌಮ ನಗರ, ಹುಳಿಮಾವು, ಬಂಡೆಪಾಳ್ಯ, ಸರಸ್ವತಿಪುರಂ, ರಾಘವೇಂದ್ರ ಲೇಔಟ್‌, ಸಿಂಡಿಕೇಟ್‌ ಬ್ಯಾಂಕ್‌ ಕಾಲೋನಿ, ರಾಮಯ್ಯ ಲೇಔಟ್‌, ಪ್ರಗತಿ ಬಡಾವಣೆ, ಸಿಲ್ಕ್‌ಬೋರ್ಡ್‌ ಕಾಲೋನಿ, ಮಂಗಮ್ಮನಪಾಳ್ಯ, ಸಿಂಗಸಂದ್ರ, ದೇವರಚಿಕ್ಕನಹಳ್ಳಿ, ಲಕ್ಷ್ಮೇನಾರಾಯಣಪುರ, ಸೋಮಸುಂದರ ಪಾಳ್ಯ, ದೊಡ್ಡಾನೆಕುಂದಿ, ಗರುಡಾಚಾರ್‌ಪಾಳ್ಯ, ಸಪ್ತಗಿರಿ ಲೇಔಟ್‌, ಮುನೆನಕೊಳಲು, ಇಸ್ರೋ ಲೇಔಟ್‌, ಬೃಂದಾವನ ನಗರ, ತಿಗಳರಪಾಳ್ಯ, ಅಕ್ಷಯ ನಗರ, ರಮೇಶ್‌ ನಗರ, ಅನ್ನಸಂದ್ರಪಾಳ್ಯ, ಪಟಾಲಮ್ಮ ಲೇಔಟ್‌, ಗಾಯತ್ರಿ ಬಡಾವಣೆ, ಮಂಜುನಾಥ್‌ ನಗರ, ರಾಮಾಂಜನೇಯ ಲೇಔಟ್‌, ಮಾರೇನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ಪ್ರಕಟಣೆ ತಿಳಿಸಿದೆ.

Mekedatu Padayatre: ಬೆಂಗಳೂರಲ್ಲಿ 3 ದಿನ ಪಾದಯಾತ್ರೆ ಹಿಂದೆ ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್

‘ಗಂಗಾ’ ಯೋಜನೆಯಡಿಯಲ್ಲಿ ಮನೆ ಮನೆಗೆ ನಲ್ಲಿ ಸಂಪರ್ಕ: ಈಶ್ವರಪ್ಪ

ಬೆಳಗಾವಿ: ರಾಜ್ಯದಲ್ಲಿ  (Karnataka) ‘ಮನೆ ಮನೆಗೆ ಗಂಗಾ’ ಯೋಜನೆಯಡಿ (Ganga Yojana) ಗ್ರಾಮೀಣ ಭಾಗದಲ್ಲಿ (Rural Area) ಈವರೆಗೆ 41.91 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ನಳ (Water Tap) ಸಂಪರ್ಕ ಕಲ್ಪಿಸಲಾಗಿದ್ದು, 2023-24ರ ಅಂತ್ಯದೊಳಗೆ ಒಟ್ಟು 97.91 ಲಕ್ಷ ಮನೆಗಳಿಗೆ ನಳ ಸಂಪರ್ಕ ಕಲ್ಪಿಸಲು ಗುರಿ ಹೊಂದಲಾಗಿದೆ. ನಿತ್ಯ 10 ಸಾವಿರ ಮನೆಗಳಿಗೆ ನಳ ಸಂಪರ್ಕ ಕಲ್ಪಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ (KS Eshwarappa) ಹೇಳಿದ್ದರು.

ಡಿ. 17 ರಂದು ವಿಧಾನ ಪರಿಷತ್‌ನಲ್ಲಿ(Vidhan Parishat) ಬಿಜೆಪಿಯ (BJP) ಎನ್‌.ರವಿಕುಮಾರ್‌ ಅವರ ಪ್ರಶ್ನೆಗೆ ಉತ್ತರಿಸಿದ್ದ ಸಚಿವರು, ನಿರಂತರವಾಗಿ ಲಭ್ಯವಿರುವ ಜಲಮೂಲ ಇರುವ ಕಡೆ ಈ ಯೋಜನೆ ಜಾರಿ ಮಾಡಲಾಗುತ್ತಿದೆ. ಈ ಯೋಜನೆಯಡಿ ನಳ ಸಂಪರ್ಕ ಪಡೆಯಲು ಯಾವುದೇ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಆದರೆ ಯೋಜನೆಯ (Project) ಮಾರ್ಗಸೂಚಿಯಂತೆ ಗ್ರಾಮದೊಳಗಿನ ನಳ ಸಂಪರ್ಕ ಒದಗಿಸುವ ಅಂದಾಜು ಮೊತ್ತದ ಶೇ.10ರಷ್ಟನ್ನು (ಪ.ಜಾತಿ/ ಪಂಡಗಳಿಗೆ ಶೇ.5) ಸಮುದಾಯ ವಂತಿಕೆಯಾಗಿ ಪಡೆಯಬೇಕಾಗಿರುತ್ತದೆ ಎಂದು ವಿವರಿಸಿದ್ದರು. 
 

PREV
Read more Articles on
click me!

Recommended Stories

ದರ್ಶನ್ ಗ್ಯಾಂಗ್‌ನಿಂದ ಕೊಲೆಗೀಡಾದ ರೇಣುಕಾಸ್ವಾಮಿಗೆ ಸತ್ತಮೇಲೂ ನೆಮ್ಮದಿಯಿಲ್ಲ! ಸಮಾಧಿ ಧ್ವಂಸಗೈದ ಡೆವಿಲ್ ಗ್ಯಾಂಗ್‌!
ಧರ್ಮಸ್ಥಳ ನೂರಾರು ಶವ ಹೂಳಿದ ಕೇಸ್: ಬುರುಡೆ ಗ್ಯಾಂಗ್ ಷಡ್ಯಂತ್ರ ಬಯಲು - SIT ವರದಿಯಲ್ಲಿ ಒಬ್ಬರಿಗೆ ಕ್ಲೀನ್ ಚಿಟ್!