* ಹುಬ್ಬಳ್ಳಿಯಲ್ಲಿ ಖರ್ಗೆಗೆ ಕೇಂದ್ರ ಸಚಿವ ಗಡ್ಕರಿ ಭರವಸೆ
* ಕಲಬುರಗಿಗೆ ಬಂದಾಗ 5 ಸಾವಿರ ಯೋಜನೆ ಘೋಷಿಸುವೆ: ಗಡ್ಕರಿ
* ಗಡ್ಕರಿ ಅವರ ಬಗ್ಗೆ ನನಗೆ ವಿಶೇಷ ಗೌರವವಿದೆ: ಖರ್ಗೆ
ಹುಬ್ಬಳ್ಳಿ(ಮಾ.01): ಅಭಿವೃದ್ಧಿ ಕಾರ್ಯದಲ್ಲಿ ರಾಜಕಾರಣ(Politics) ಮಾಡಬಾರದು. ಅದು ಒಳ್ಳೆಯದಲ್ಲ. ಈ ತತ್ವವನ್ನು ಅನುಸರಿಸಿಕೊಂಡು ಇತರರಿಗೆ ಮಾದರಿಯಾಗುವಂತೆ ಕೆಲಸ ಮಾಡುತ್ತಿರುವವರು ಕೇಂದ್ರ ಸಚಿವ ನಿತಿನ್ ಗಡ್ಕರಿ(Nitin Gadkari) ಎಂದು ರಾಜ್ಯಸಭಾ ವಿರೋಧ ಪಕ್ಷದ ನಾಯಕ, ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಎಂದು ಗಡ್ಕರಿ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಇಲ್ಲಿನ ಗಬ್ಬೂರ್ ಕ್ರಾಸ್‌ನಲ್ಲಿ ಆಯೋಜಿಸಿದ್ದ 26 ರಾಷ್ಟ್ರೀಯ ಹೆದ್ದಾರಿಗಳ(National Highway) ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಡ್ಕರಿ ಅವರ ಬಗ್ಗೆ ನನಗೆ ವಿಶೇಷ ಗೌರವವಿದೆ. ಅವರು ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡುವುದಿಲ್ಲ. ಸಾರ್ವಜನಿಕರ ಹಿತಕ್ಕಾಗಿ ಏನು ಅವಶ್ಯವೋ ಆ ಕೆಲಸವನ್ನು ಮಾಡುವಲ್ಲಿ ಸದಾಕಾಲ ಮುಂದೆ ಇದ್ದವರು. ಹೀಗಾಗಿ ರಾಜಕೀಯವನ್ನು ಬದಿಗಿಟ್ಟು ಅವರ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲು ಇಲ್ಲಿಗೆ ಬಂದಿದ್ದೇನೆ ಎಂದರು.
Hubballi Dharwad Bypass Road: ನೂರಾರು ಜೀವ ಬಲಿ ಪಡೆದ ಬೈಪಾಸ್‌ಗೆ ಮುಕ್ತಿ
ಮೊದಲ ಬಾರಿಗೆ ಗಡ್ಕರಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. ಹಿಂದೆ ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗ ಅಭಿವೃದ್ಧಿ ಕೆಲಸಗಳ ಕುರಿತು ಅವರೊಂದಿಗೆ ಪ್ರಸ್ತಾಪಿಸಿದರೆ ತಕ್ಷಣ ಒಪ್ಪಿಗೆ ಕೊಡುತ್ತಿದ್ದರು. ಒಮ್ಮೆ ಕಾಂಗ್ರೆಸ್(Congress) ಪಕ್ಷದ ಕಚೇರಿಗೆ ಬಂದು ಯೋಜನೆಯೊಂದರ ಆದೇಶದ ಪ್ರತಿ ಕೊಟ್ಟು ಹೋಗಿದ್ದರು. ಯಾವ ರಾಜ್ಯದವರು, ಯಾವ ಪಕ್ಷದವರು ಎಂದು ನೋಡದೆ ಕೆಲಸಗಳಿಗೆ ಮಾತ್ರ ಮಹತ್ವ ನೀಡುವವರು ಎಂದು ಗುಣಗಾನ ಮಾಡಿದರು.
ಈ ಹಿಂದೆ ಇನ್ನಷ್ಟು ಕ್ರಿಯಾಶೀಲವಾಗಿದ್ದರು. ಆದರೆ ಈಗ ಸ್ವಲ್ಪ ಅವರ ಕೆಲಸದ ವೇಗ ಕಡಿಮೆಯಾಗಿದೆ ಎಂದೆನಿಸುತ್ತದೆ ಎಂದೂ ಇದೇ ವೇಳೆ ಕಾಲೆಳೆದ ಅವರು, ಗಡ್ಕರಿ ಅವರಿಂದ ಇನ್ನಷ್ಟುಉತ್ತಮ ಕೆಲಸಗಳಾಗಲಿ ಎಂದು ಖರ್ಗೆ ಹಾರೈಸಿದರು.
ಕಲಬುರಗಿಗೆ ಬಂದಾಗ 5 ಸಾವಿರ ಯೋಜನೆ ಘೋಷಿಸುವೆ: ಗಡ್ಕರಿ
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕೋರಿಕೆಯಂತೆ ಯಾದಗಿರಿ(Yadgir) ಬೈಪಾಸ್ ನಿರ್ಮಾಣ ಹಾಗೂ ಕಲಬುರಗಿ(Kalaburagi) ಸೇರಿದಂತೆ ಅನೇಕ ಮೇಲ್ಸೇತುವೆ ಹಾಗೂ ಕೆಳಸೇತುವೆಗಳ ಕಾಮಗಾರಿ ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಕಲಬುರಗಿಗೆ ಬಂದಾಗ ಕನಿಷ್ಠ 5000 ಕೋಟಿ ವೆಚ್ಚದ ಯೋಜನೆಯನ್ನಾದರೂ ಘೋಷಿಸುವೆ ಎಂದು ಭರವಸೆ ನೀಡಿದ್ದಾರೆ.
ನಗರದ ಗಬ್ಬೂರ ವೃತ್ತದ ಟ್ರಕ್ ಟರ್ಮಿನಲ್ ಆವರಣದಲ್ಲಿ ಸೋಮವಾರ ಭೂಸಾರಿಗೆ ಹಾಗೂ ಹೆದ್ದಾರಿ ಮಂತ್ರಾಲಯ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ, ಪಿಎಂ ಗತಿ ಶಕ್ತಿ, ಭಾರತಮಾಲಾ ಹಾಗೂ ಲೋಕೋಪಯೋಗಿ ಇಲಾಖೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ . 12,795 ಕೋಟಿ ವೆಚ್ಚದಲ್ಲಿ 925 ಕಿ.ಮೀ. ಉದ್ದದ ವಿವಿಧ 26 ರಾಷ್ಟ್ರೀಯ ಹೆದ್ದಾರಿಗಳ ಭೂಮಿಪೂಜೆ ಹಾಗೂ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
Martyrs Calendar ಬಿಪಿನ್ ರಾವತ್ ಸ್ಮರಣಾರ್ಥ ವಿಶೇಷ ಹುತಾತ್ಮ ಕ್ಯಾಲೆಂಡರ್ ಬಿಡುಗಡೆ ಮಾಡಿದ ಗಡ್ಕರಿ!
ನೀವು ಯೋಜನೆಗಳ ರೂಪುರೇಷೆ ತಯಾರಿಸಿಕೊಂಡು ಬನ್ನಿ, ನಾನು ಒಪ್ಪಿಗೆ ಕೊಟ್ಟು ಅದಕ್ಕೆ ಹಣಕಾಸು ನೆರವು ನೀಡುತ್ತೇನೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೇಳಿದರಲ್ಲದೇ ಕಲಬುರಗಿ ಲೋಕಸಭಾ ಕ್ಷೇತ್ರಕ್ಕೆ ತೆರಳಿದಾಗ ಕನಿಷ್ಠ 5 ಸಾವಿರ ಕೋಟಿ ವೆಚ್ಚದ ಯೋಜನೆಯನ್ನಾದರೂ ಘೋಷಿಸುವೆ ಎಂದು ನುಡಿದರು. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavarj Bommai), ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ(Pralhad Joshi), ನಾರಾಯಣಸ್ವಾಮಿ ಇದ್ದರು.
2024ರಲ್ಲಿ ರಾಜ್ಯದಲ್ಲಿ ಅಮೆರಿಕ ಮಾದರಿ ರಸ್ತೆ
ಭಾರತದ (India) ರಸ್ತೆಗಳ ಗುಣಮಟ್ಟವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸುವ ಗುರಿ ಹೊಂದಿದ್ದು 2024ರೊಳಗೆ ಕರ್ನಾಟಕದ (Karnataka) ಎಲ್ಲ ರಸ್ತೆಗಳ ಗುಣಮಟ್ಟವನ್ನು ಅಮೆರಿಕ ಮಾದರಿಗೆ ಎತ್ತರಿಸಲಾಗುವುದು ಎಂದು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ. ಬೆಳಗಾವಿ, ಹುಬ್ಬಳ್ಳಿ ಮತ್ತು ಮಂಗಳೂರುಗಳಲ್ಲಿ ಸೋಮವಾರ ಒಂದೇ ದಿನದಲ್ಲಿ ನಡೆದ ಪ್ರತ್ಯೇಕ ಸಮಾರಂಭಗಳಲ್ಲಿ ಅವರು ಒಟ್ಟಾರೆ ರಾಜ್ಯದ ವಿವಿಧೆಡೆ ನಡೆಯಲಿರುವ .19,930 ಕೋಟಿ ವೆಚ್ಚದ 46 ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.