'ಅನ್ನ ಹಳಸಿತ್ತು ನಾಯಿ ಹಸಿದಿತ್ತು, ಸಿದ್ದು ಹಸಿದಿದ್ರು ಕಾಂಗ್ರೆಸ್ ಹಳಸಿತ್ತು!'

By Suvarna NewsFirst Published Nov 6, 2021, 1:16 PM IST
Highlights

*ದಲಿತರಿಗೆ ಬಿಜೆಪಿ ಸೂಕ್ತ ಸ್ಥಾನಮಾನ ನೀಡಿದೆ
*ಕಾಂಗ್ರೇಸ್‌ ಕೇವಲ ಅವರನ್ನು ರಾಜಕೀಯಕ್ಕಾಗಿ ಬಳಸಿದೆ
*ಸಿದ್ದರಾಮಯ್ಯ ಬಗ್ಗೆ ನಮಗೆ ವೈಯಕ್ತಿಕ ದ್ವೇಷ ಇಲ್ಲ
*ದಲಿತರ ಬಗ್ಗೆ ಹೇಳಿಕೆ ಕೊಟ್ಟಿಲ್ಲ‌‌ ಎಂದು ಸಿದ್ದರಾಮಯ್ಯ ಹೇಳಿದ್ದಾರೆ
*ಆದರೆ ನಮ್ಮ ಬಳಿ ವಿಡಿಯೋ ಸಾಕ್ಷಿ ಇದೆ : ಛಲಾವದಿ ನಾರಾಯಣಸ್ವಾಮಿ

ಬೆಂಗಳೂರು (ನ. 6) . ಸಿಂದಗಿ-ಹಾನಗಲ್‌ ಉಪಚುನಾವಣೆ (Sindgi-Hangal by-election) ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿತ್ತು. ಸಿಂದಗಿಯಲ್ಲಿ ಬಿಜೆಪಿ ಅಭೂತ ಪೂರ್ವ ವಿಜಯದಾಖಲಿಸಿದ್ರೆ, ಹಾನಗಲ್‌ನಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ಇನ್ನು ಜೆಡಿಎಸ್‌ಗೆ ಎರಡೂ ಕಡೆ ಹೀನಾಯ ಸೋಲು ಕಂಡಿದೆ. ಫಲಿತಾಂಶದ ಬಗ್ಗೆ ಬಿಜೆಪಿ (BJP), ಕಾಂಗ್ರೆಸ್ (Congress) ಹಾಗೂ ಜೆಡಿಎಸ್ (JDS) ನಾಯಕರು ವಿವಿಧ ರೀತಿಯಲ್ಲಿ ವ್ಯಾಖ್ಯಾನ ಮಾಡಿದ್ದಾರೆ. ಈ ಬೆನ್ನಲ್ಲೇ ವಿಪಕ್ಷ ನಾಯಕ ಸಿದ್ದರಾಮಯ್ಯ "ದಲಿತರು ಹೊಟ್ಟೆ ಪಾಡಿಗಾಗಿ  ಬಿಜೆಪಿ ಸೇರಿದವರು" ಎಂದು ಹೇಳಿದ್ದರು ಎಂದು ಬಿಜೆಪಿ ಆರೋಪಿಸಿತ್ತು. ಇನ್ನು ಈ ಹೇಳಿಕೆ ವಿರೋಧಿಸಿ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಬಿಜೆಪಿ ಎಸ್‌ಸಿ ಮೋರ್ಚಾ ವತಿಯಿಂದ ಪ್ರತಿಭಟನೆ ಕೂಡ ನಡೆದಿದ್ದವು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿದ್ದಾರಾಮಯ್ಯ ಬಿಜೆಪಿಗರನ್ನು ಬಹಿರಂಗ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದರು.

ಬಿಜೆಪಿ ದಲಿತರ ಹೋರಾಟಕ್ಕೆ ಸಿದ್ದರಾಮಯ್ಯ ಆಕ್ರೋಶ

ಇದೇ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ (Ravi Kumar) ಹಾಗೂ ಛಲವಾದಿ ನಾರಾಯಣ ಸ್ವಾಮಿ (chalavadi narayanaswamy) ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ್ದು ಬಿಜೆಪಿ ಪಕ್ಷವು ದಲಿತರು ಮತ್ತು ಮುಸ್ಲಿಮ್‌ರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನ ಮಾಡುತ್ತಿದೆ. ದಲಿತರಿಗೆ (Dalit)ಸೂಕ್ತ ಸ್ಥಾನಮಾನ ನೀಡಿರುವುದು ಬಿಜೆಪಿ ಮಾತ್ರ. ಆದರೆ ಕಾಂಗ್ರೆಸ್ ಯಾವತ್ತೂ ಅವರ ಏಳಿಗೆಗಾಗಿ ಶ್ರಮಿಸಲಿಲ್ಲ. ಅಲ್ಪಸಂಖ್ಯಾತರು ಹಾಗೂ ದಲಿತರನ್ನು ಕಾಂಗ್ರೆಸ್ (Congress)ಕೇವಲ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

ದಲಿತರಿಗೆ ಸೂಕ್ತ ಸ್ಥಾನಮಾನ ನೀಡಿರುವುದು ಬಿಜೆಪಿ ಮಾತ್ರ!

"ಕಾಂಗ್ರೆಸ್ ಅಂಬೇಡ್ಕರ್ (Ambedkar) ಅವರನ್ನು ಎರಡು ಬಾರಿ ಸೋಲಿಸಿದೆ. ಕಾಂಗ್ರೇಸ್‌ನವರು ಬಾಬು ಜಗಜೀವನರಾಂ  (Babu Jagjivan Ram) ಅವರನ್ನು ಪ್ರಧಾನ ಮಂತ್ರಿ ಹುದ್ದೆಗೆ ಏರದಂತೆ ತಪ್ಪಿಸಿದ್ದರು. ಅಂಬೇಡ್ಕರ್ ಅವರಿಗೆ ಭಾರತರತ್ನ ತಪ್ಪಿಸಿದರು. ಅಂಬೇಡ್ಕರ್ ತೀರಿಕೊಂಡಾಗ ಅಂತ್ಯ ಸಂಸ್ಕಾರ ಮಾಡಲೂ ಕೂಡ ಸ್ಥಳ ಕೊಡಲಿಲ್ಲ. ಆದರೆ ನೆಹರು,ಇಂದಿರಾ ಗಾಂಧಿ ಸಮಾಧಿಗೆ ಮುಕ್ಕಾಲು ಎಕರೆ ಜಾಗ ಮಾಡಿಕೊಂಡಿದ್ದಾರೆ. ಮೂಲಭೂತ ಅವಶ್ಯಕತೆ ಗಳಾದ ಅಕ್ಕಿ, ಮನೆ, ನೀರು, ಇತ್ಯಾದಿ ಗಳನ್ನು ದಲಿತರಿಗೆ ತಲುಪಿಸುವಲ್ಲೂ ಕಾಂಗ್ರೆಸ್ ಸೋತಿದೆ. ದಲಿತರಿಗೆ ಸೂಕ್ತ ಸ್ಥಾನಮಾನ ನೀಡಿರುವುದು ಬಿಜೆಪಿ ಮಾತ್ರ. ಸಿದ್ದರಾಮಯ್ಯ ಅವರು ತಮ್ಮ ಹೇಳಿಕೆಗೆ ಕೂಡಲೇ ಕ್ಷಮೆ ಕೇಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಅವರ ವಿರುದ್ದ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತೆ" ಎಂದು ರವಿ ಕುಮಾರ್‌ ಹೇಳಿದ್ದಾರೆ.

ಸಿದ್ದರಾಮಯ್ಯ ವಿಷಸರ್ಪದಂತೆ ಕಟ್ಟಿದ ಮನೆ ಕಾಂಗ್ರೆಸ್‌ಗೆ ಸೇರಿಕೊಂಡರು

ಇದೇ ವೇಳೆ ಸಿದ್ದರಾಮಯ್ಯ ಹೇಳಿಕೆಯ ವಿಡಿಯೋ ಪ್ರದರ್ಶನ ಮಾಡಿದ ಛಲವಾದಿ‌ ನಾರಾಯಣ ಸ್ವಾಮಿ " ಸಿದ್ದರಾಮಯ್ಯ ವಿರುದ್ಧ ನಾವು ಕಳೆದ ಬುಧವಾರದಂದು (ನ.3) ಪ್ರತಿಭಟನೆ ಮಾಡಿದೆವು.  ದಲಿತರ ಬಗ್ಗೆ ಇಂಥಹ ಹೇಳಿಕೆ ಕೊಟ್ಟಿಲ್ಲ‌‌ ಎಂದು ಸಿದ್ದರಾಮಯ್ಯ ಸ್ಪಷ್ಟನೆ ಕೊಟ್ಟಿದಾರೆ. ಆದರೆ ನಮಗೆ ಸುಳ್ಳು ಹೇಳುವ ಅಗತ್ಯ ಇಲ್ಲ. ಸಿದ್ದರಾಮಯ್ಯ ಬಗ್ಗೆ ನಮಗೆ ವೈಯಕ್ತಿಕ ದ್ವೇಷ ಇಲ್ಲ.  ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಕಾಂಗ್ರೆಸ್‌ ಸೇರಿದ್ದೇಕೆ : ಸಿಡಿದ ಮುಖಂಡರು

ಸಿದ್ದರಾಮಯ್ಯ ಜೆಡಿಎಸ್ (JDS) ಬಿಟ್ಟ ಮೇಲೆ ತಾವೇ ಒಂದು ಪಕ್ಷ ಕಟ್ಟಿದ್ದರು, ಆದರೆ ಎಲ್ಲ ಕಡೆ ಸೋತರು. ನಂತರ ಸಿದ್ದರಾಮಯ್ಯ ವಿಷಸರ್ಪದಂತೆ ಕಟ್ಟಿದ ಮನೆ ಕಾಂಗ್ರೆಸ್‌ಗೆ ಸೇರಿಕೊಂಡರು. ಅನ್ನ ಹಳಸಿತ್ತು ನಾಯಿ ಹಸಿದಿತ್ತು ಅನ್ನುವ ಹಾಗೆ ಸಿದ್ದರಾಮಯ್ಯ ಹಸಿದಿದ್ರು ಕಾಂಗ್ರೆಸ್ ಹಳಸಿತ್ತು. ಅಧಿಕಾರ ದಾಹದಿಂದ ಸಿದ್ದರಾಮಯ್ಯ ಕಾಂಗ್ರೆಸ್ ಗೆ ಹೋದರು.  ಕಾಂಗ್ರೆಸ್ ನಲ್ಲಿ ದಲಿತರನ್ನು, ಅಲ್ಪಸಂಖ್ಯಾತರನ್ನು ಸಿದ್ದರಾಮಯ್ಯ ನುಂಗಿದರು. ಸಿದ್ದರಾಮಯ್ಯ ಸ್ವತ: ದಲಿತ ನಾಯಕರಿಗೆ ಕರೆ ಮಾಡುತ್ತಿದ್ದಾರೆ. ಧ್ರುವನಾರಾಯಣ, ಮಹಾದೇವಪ್ಪ ಹಾಗೂ ಆಂಜನೇಯರಿಗೆ ಸಿದ್ದರಾಮಯ್ಯ ಕರೆ ಮಾಡಿದ್ದಾರೆ. ನೀವ್ಯಾಕೆ ಸುಮ್ಮನಿದೀರಿ, ಬಿಜೆಪಿ ನನ್ನ ವಿರುದ್ಧ ಪ್ರತಿಭಟನೆ ಮಾಡ್ತಿದೆ ಎಂದು ಕೇಳಿದ್ದಾರೆ. "ನನ್ನ ಪರ ಸುದ್ದಿಗೋಷ್ಟಿ ಮಾಡಿ" ಎಂದು ಸಿದ್ದರಾಮಯ್ಯ ಕಾಂಗ್ರೆಸ್ ದಲಿತ ನಾಯಕರ ಬೆನ್ನುಬಿದ್ದಿದ್ದಾರೆ. ಎಂದು  ಛಲವಾದಿ ನಾರಾಯಣ ಸ್ವಾಮಿ ಹೇಳಿದ್ದಾರೆ.

Bengaluru: ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಬಿಜೆಪಿ SC Morcha ಪ್ರತಿಭಟನೆ!

"ಸಿದ್ದರಾಮಯ್ಯ ಬಾಯಲ್ಲಿ ದಲಿತ ಪ್ರೇಮಿ, ಹೃದಯದಲ್ಲಿ ದಲಿತ ವಿರೋಧಿ. ಸಿದ್ದರಾಮಯ್ಯನವರ ಈ ಕಪಟತನ್ನ ಜಾಸ್ತಿ ದಿನ ನಡೆಯಲ್ಲ. ಸಿದ್ದರಾಮಯ್ಯ ಅವಧಿಯಲ್ಲಿ ಹೆಚ್ಚು ಕ್ರೈಸ್ತೀಕರಣ ಆಗಿದೆ. ಹೆಚ್ಚು ದಲಿತರು ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದು ಸಿದ್ದರಾಮಯ್ಯ ಕಾಲದಲ್ಲಿ. ಸೋನಿಯಾ ಗಾಂಧಿ ಮೆಚ್ಚಿಸಲು ಸಿದ್ದರಾಮಯ್ಯರಿಂದ ಮತಾಂತರಕ್ಕೆ ಅವಕಾಶ ಎಂದು ಛಲವಾದಿ ನಾರಯಣ ಸ್ವಾಮಿ ಹೇಳಿದ್ದಾರೆ. ಜತೆಗೆ ಸಿದ್ದರಾಮಯ್ಯ ದಲಿತರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ."

click me!