ಚಿಕ್ಕಬಳ್ಳಾಪುರ (ನ.06): ಚಾಲಕನ ನಿಯಂತ್ರಣ ತಪ್ಪಿ KSRTC ಬಸ್ (Bus) ಕೆರೆಗೆ ಉರುಳಿದ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆ ಬಾಗೇಪಲ್ಲಿಯಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕು ಯಲ್ಲಂಪಲ್ಲಿ ಗ್ರಾಮದ ಬಳಿ ಇಂದು ಘಟನೆ ನಡೆದಿದೆ. ಬಾಗೇಪಲ್ಲಿಯಿಂದ ಕೋಲಾರದ (kolar) ಚಿಂತಾಮಣಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಾರಿಗೆ ಬಸ್ (KSRTC) ಕೆರೆಗೆ ಉರುಳಿ ಬಿದ್ದಿದೆ.
ಸ್ಥಳಕ್ಕೆ ಬಾಗೇಪಲ್ಲಿ ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಾರಿಗೆ ಅಧಿಕಾರಿಗಳು ಕೂಡ ಸ್ಥಳಕ್ಕೆ ದೌಡಾಯಿಸಿದ್ದಾರೆ. ಬಸ್ ನಲ್ಲಿ 25 ಪ್ರಯಾಣಿಕರು ಇದ್ದು, ಎಲ್ಲರು ಪ್ರಾಣಾಪಯದಿಂದ ಪಾರಾಗಿದ್ದಾರೆ. ಯಾವುದೇ ಪ್ರಾಣಹಾನಿ ಅವಘಡವಾಗಿಲ್ಲ.
ಬಸ್ಸಿಗೆ ಏಕಾಏಕಿ ಅಡ್ಡ ಬಂದ ಬೈಕ್ (Bike) ಸವಾರನನ್ನು ತಪ್ಪಿಸಲು ಹೋಗಿದ್ದರಿಂದ ನಿಯಂತ್ರಣ ತಪ್ಪಿದ KSRTC ಬಸ್ ಕೆರೆಗೆ ಉರುಳಿ ಬಿದ್ದಿದೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಕೆಎಸ್ಆರ್ಟಿಸಿ ಡಿಸಿ ಹಿಮವರ್ಧನ ನಾಯ್ಡು ಅಲ್ಲೂರಿ ಹೇಳಿಕೆ ನೀಡಿದ್ದಾರೆ.
ಹೆಚ್ಚುವರಿ ಬಸ್ ಸಂಚಾರ
ದೀಪಾವಳಿ (Deepavali) ಹಬ್ಬದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ರಾಜಧಾನಿ ಬೆಂಗಳೂರು (Bengaluru) ನಗರದಿಂದ ರಾಜ್ಯದ ವಿವಿಧ ಭಾಗಗಳು ಹಾಗೂ ಹೊರ ರಾಜ್ಯದ ಹಲವು ನಗರಗಳಿಗೆ ಕೆಎಸ್‌ಆರ್‌ಟಿಸಿ (KSRTC) ವತಿಯಿಂದ ಹೆಚ್ಚುವರಿಯಾಗಿ 1000 ಬಸ್‌ಗಳ (Bus) ಕಾರ್ಯಚರಣೆ ನಡೆಸಲಾಗುತ್ತಿದೆ.
ಧರ್ಮಸ್ಥಳ (Dharmasthala), ಕುಕ್ಕೆ ಸುಬ್ರಹ್ಮಣ್ಯ (Kukke Subramanya), ಶಿವಮೊಗ್ಗ (shivamogga), ಹಾಸನ (Hassan), ಮಂಗಳೂರು (Mangaluru), ಕುಂದಾಪುರ, ಶೃಂಗೇರಿ, ಹೊರನಾಡು, ಮೈಸೂರು (Mysuru), ಮಡಿಕೇರಿ, ದಾವಣಗೆರೆ (Davanagere), ಹುಬ್ಬಳ್ಳಿ, ಧಾರವಾಡ, ಬೆಳಗಾವಿ (Belagavi), ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್‌ಗೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.
ಅಲ್ಲದೆ, ಹೊರ ರಾಜ್ಯದ ನಗರಗಳಾದ ತಿರುಪತಿ (Tirupathi), ವಿಜಯವಾಡ (Vijayawada), ಹೈದರಾಬಾದ್, ತಿರುವನಂತಪುರ, ಕೊಟ್ಟಾಯಂ, ಚೆನ್ನೈ (chennai), ಕೊಯಮತ್ತೂರು, ಪೂನಾ, ಪಣಜಿ ಸೇರಿದಂತೆ ವಿವಿಧ ಭಾಗಗಳಿಗೆ ಅ.29 ರಿಂದ ನ.7ರ ವರೆಗೆ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ.
ಹೆಚ್ಚುವರಿ ವಿಶೇಷ ಸಾರಿಗೆಗಳ ಪ್ರಯಾಣ ದರಗಳಲ್ಲಿ ಹೆಚ್ಚಳ ಇರುವುದಿಲ್ಲ. ಕೆಎಸ್‌ಆರ್‌ಟಿಸಿ ನಿಗಮದ ವೆಬ್‌ಸೈಟ್ ಹಾಗೂ ಕರ್ನಾಟಕ ಮತ್ತು ಅತರ ರಾಜ್ಯದಲ್ಲಿರುವ ಗಣಕೀಕೃತ ಬುಕಿಂಗ್ ಕೌಂಟರ್‌ಗಳ ಮುಖಾಂತರ ಈ ಸಾರಿಗೆಗಳಿಗೆ ಮುಂಗಡ ಆಸನ ಕಾಯ್ದಿರಿಸುವ ಸೌಲಭ್ಯ ಕಲ್ಪಿಸಲಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಹುಬ್ಬಳ್ಳಿಯಿಂದಲೂ ಹೆಚ್ಚುವರಿ ಬಸ್
ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ (Kannada rajyotsava), 3 ಮತ್ತು 5ರಂದು ದೀಪಾವಳಿ (Deepavali) ಹಬ್ಬ, 7 ಭಾನುವಾರದ ರಜೆ ಇರುವ ಪ್ರಯುಕ್ತ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ (NWKRTC) ವಿಶೇಷ ಹೆಚ್ಚುವರಿ ಸಾರಿಗೆ ಬಸ್ (Bus) ಕಾರ್ಯಾಚರಣೆ ಮಾಡಲಿವೆ.
ದೀಪಾವಳಿ ಹಬ್ಬಕ್ಕೆ ಬಂದು ಹೋಗುವ ಪ್ರಯಾಣಿಕರ (Passengers) ಅನುಕೂಲಕ್ಕಾಗಿ ಅ. 30 ಮತ್ತು 31ರಂದು ಬೆಂಗಳೂರು (Bengaluru), ಮಂಗಳೂರು (Mangaluru), ಹೈದರಾಬಾದ್, ಪಣಜಿ, ಪುಣೆ, ಮುಂಬೈ ಮತ್ತು ಇನ್ನಿತರ ಪ್ರಮುಖ ನಗರಗಳಿಂದ ರಾಜ್ಯದ ವಿವಿಧ ಪ್ರದೇಶಗಳಿಗೆ ಹಾಗೂ ಸ್ವಂತ ಊರುಗಳಿಗೆ ತೆರಳುವ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಸಂಸ್ಥೆಯ ವ್ಯಾಪ್ತಿಯ ಹುಬ್ಬಳ್ಳಿ (Hubli), ಧಾರವಾಡ, ಗದಗ, ಬೆಳಗಾವಿ (Belagavi), ಚಿಕ್ಕೋಡಿ, ಉತ್ತರ ಕನ್ನಡ, ಹಾವೇರಿ ಮತ್ತು ಬಾಗಲಕೋಟೆ (Bagalakote) ವಿಭಾಗಗಳಿಂದ ಒಟ್ಟು 600ಕ್ಕಿಂತ ಹೆಚ್ಚು ವಿಶೇಷ ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತಿದೆ.