ಹಾಸನಾಂಬೆ ದರ್ಶನ ಪಡೆದ ಡಿಜಿ, ಐಜಿಪಿ ಪ್ರವೀಣ್ ಸೂದ್

By Suvarna NewsFirst Published Nov 6, 2021, 12:25 PM IST
Highlights
  • ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್  ಹಾಸನಕ್ಕೆ ಭೇಟಿ ನೀಡಿ ಹಾಸನಾಂಬೆ ದರ್ಶನ ಪಡೆದಿದ್ದಾರೆ
  •  ಕುಟುಂಬ ಸಮೇತರಾಗಿ ಇಂದು ಆಗಮಿಸಿದ ಸೂದ್ ಹಾಸನಾಂಬೆ ಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. 

 ಹಾಸನ (ನ.06): ಪೊಲೀಸ್ ಮಹಾ ನಿರ್ದೇಶಕ  (DG IGP) ಪ್ರವೀಣ್ ಸೂದ್ (Praveen Sood) ಹಾಸನಕ್ಕೆ (Hassan) ಭೇಟಿ ನೀಡಿ ಹಾಸನಾಂಬೆ (Hasanamba) ದರ್ಶನ ಪಡೆದಿದ್ದಾರೆ.   ಕುಟುಂಬ ಸಮೇತರಾಗಿ ಇಂದು ಆಗಮಿಸಿದ ಸೂದ್ ಹಾಸನಾಂಬೆ ಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. 

ಇಂದು ಹಾಸನಾಂಬೆ ದೇವಿ ದರ್ಶನ ಪಡೆಯಲು ಕೊನೆಯ ದಿನವಾಗಿದ್ದು, ಇಲ್ಲಿಗೆ ಆಗಮಿಸಿದ  ರಾಜ್ಯ ಪೊಲೀಸ್ ಮಹಾ ನಿರ್ದೆಶಕ (Karnataka police chief ) ಪ್ರವೀಣ್ ಸೂದ್ ಹಾಸನಾಂಬೆ ದರ್ಶನ ಪಡೆದುಕೊಂಡಿದ್ದಾರೆ. 

ಕಳೆದ ಹತ್ತು ದಿನಗಳಿಂದ ನೂರಾರು ಗಣ್ಯರು ಹಾಸನಾಂಬೆ ದೇವಿಯ ದರ್ಶನ ಪಡೆದಿದ್ದಾರೆ. ಇಂದು ಹಾಸನಾಂಬೆ ದೇಗುಲದ ಬಾಗಿಲು ಮುಚ್ಚಲಿದ್ದು, ಇನ್ನು ಮುಂದಿನ  ವರ್ಷದವರೆಗೂ ತೆರೆಯುವುದಿಲ್ಲ. 
 
ಹಾಸನಾಂಬೆ ದರ್ಶನ ಪಡೆದ ನಂತರ ಮಾತನಾಡಿದ ಪೊಲೀಸ್ (police) ಮಹಾ ನಿರ್ದೇಶಕ ಪ್ರವೀಣ್ ಸೂದ್  ಹಾಸನಾಂಬೆ ದೇಗುಲಕ್ಕೆ‌ ಭೇಟಿ ನೀಡಬೇಕು ಎನ್ನುವುದು ಬಹಳ ದಿನದಿಂದ ಮನಸ್ಸಿನಲ್ಲಿ ಇತ್ತು. ಇಂದು ಪತ್ನಿ ಜೊತೆಗೆ ಬಂದು ಮುಖ್ಯವಾದ ದಿನ ದರ್ಶನ ಮಾಡಿದ್ದು ಖುಷಿಯಾಗಿದೆ ಎಂದರು.

ದೀಪಾವಳಿಯ (Deepavali) ಈ ಸಂದರ್ಭದಲ್ಲಿ ಹಾಸನಾಂಬೆ ಎಲ್ಲರಿಗೂ ಶುಭ ತರಲಿ ಎಂದು ಪ್ರವೀಣ್ ಸೂದ್ ಹಾರೈಸಿದರು. ಕಳೆದ ಹತ್ತು ದಿನಗಳಿಂದ ಹಾಸನಾಂಬೆ ಉತ್ಸವ ಚೆನ್ನಾಗಿ ಆಗಿದೆ. ಲಕ್ಷಾಂತರ ಭಕ್ತರು ಹಾಸನಾಂಬೆ ದರ್ಶನ ಪಡೆದಿದ್ದಾರೆ. ಎಲ್ಲರಿಗೂ ಒಳಿತಾಗಲಿ ಎಂದು ಹಾರೈಸಿದರು. ಕಾನೂನು ಬಾಹಿರ (Illegal activities) ಚಟುವಟಿಕೆಗಳು ಕಂಡಾಗ ಜನರ ಸ್ಪಂದನೆ ವಿಚಾರ, ನೈತಿಕ ಪೊಲೀಸ್ ಗಿರಿ ಬಗ್ಗೆ ಪೊಲೀಸ್ ಮಹಾ ನಿರ್ದೇಶಕರು ಈ ವೆಳೆ ಮಾತನಾಡಿದರು.  

ಪೊಲೀಸರು ಕಾನೂನು ಪ್ರಕಾರ ಕೆಲಸ ಮಾಡುತ್ತಾರೆ.  ಕಾನೂನು ಪ್ರಕಾರ ಯಾರಾದರು ತಪ್ಪು ಮಾಡಿದರೆ ಅಥವಾ ಕಾನೂನು ಭಂಗ ಮಾಡಿದರೆ ನಾವು ಕ್ರಮ ವಹಿಸುತ್ತೇವೆ.  ಕಾನೂನು ಪ್ರಕಾರ ಯಾರೆ ತಪ್ಪು ಮಾಡಿದರೂ ಪೊಲೀಸರಿಗೆ ತಿಳಿಸಬೇಕು.  ಜನರೆ ಅಲ್ಲಿನ ತಪ್ಪನ್ನು ಸರಿಪಡಿಸಲು ಹೊಗುವ ಮೊದಲು ಪೊಲೀಸರಿಗೆ ಮಾಹಿತಿ ತಿಳಿಸಬೇಕು ಎಂದು ಪೊಲೀಸರಿಗೆ ತಿಳಿಸಬೇಕು. ಪೊಲೀಸರು ಈ ನಿಟ್ಟಿನಲ್ಲಿ ಕ್ರಮ ವಹಿಸುತ್ತಾರೆ ಎಂದರು. 

ಜನರು ತಾವೇ ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡು ಕ್ರಮ ತೆಗೆದು ಕೊಳ್ಳೋದು ತಪ್ಪು ಎಂದು ಹಾಸನದಲ್ಲಿ ಡಿಜಿ - ಐಜಿ ಪ್ರವೀಣ್ ಸೂದ್ ಹೇಳಿದರು.

KSRPಯಲ್ಲಿ 5 ವರ್ಷ ಕೆಲಸ ಮಾಡಿದರೆ ಸಿವಿಲ್‌ ಪೊಲೀಸ್‌ ಹುದ್ದೆ

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂಭ್ರಮದ ಹೊತ್ತಿನಲ್ಲಿ ರಾಜ್ಯದ ಸಶಸ್ತ್ರ ಮೀಸಲು ಪಡೆಗಳ ಪೊಲೀಸರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಐದು ವರ್ಷಗಳ ಸೇವಾವಧಿ ಪೂರೈಸಿದ ಸಶಸ್ತ್ರ ಮೀಸಲು ಪಡೆ ಪೊಲೀಸರಿಗೆ ಇನ್ನು ಮುಂದೆ ಸಿವಿಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸಲು ಸರ್ಕಾರ ಸಮ್ಮತಿಸಿದೆ.

ತನ್ಮೂಲಕ ಕೆಎಸ್‌ಆರ್‌ಪಿ, ಸಿಎಆರ್‌ ಹಾಗೂ ಡಿಎಎಆರ್‌ ವಿಭಾಗದ ಪೊಲೀಸರ ಬಹು ದಿನಗಳ ಬೇಡಿಕೆ ಈಡೇರಿದಂತಾಗಿದೆ. ನಗರದ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ರಾಜ್ಯ ಸಶಸ್ತ್ರ ಮೀಸಲು ಪಡೆ (ಕೆಎಸ್‌ಆರ್‌ಪಿ) ಆಯೋಜಿಸಿದ್ದ 75ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ‘ಐಕ್ಯತೆ ಮತ್ತು ದೈಹಿಕ ಸದೃಢತೆಗಾಗಿ ಸ್ವಾತಂತ್ರ್ಯ ಓಟ’ ಕಾರ್ಯಕ್ರಮದಲ್ಲಿ ಈ ವಿಷಯವನ್ನು ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಪ್ರಕಟಿಸಿದರು.

ಸಿವಿಎಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸಲು ಸೇವಾ ಹಿರಿತನ ಆಧಾರದ ಮೇರೆಗೆ ಅವಕಾಶ ನೀಡುವಂತೆ ಸಶಸ್ತ್ರ ದಳದ ಪೊಲೀಸರು ಮನವಿ ಮಾಡಿದ್ದರು. ಈ ಮನವಿಗೆ ಸರ್ಕಾರ ಸ್ಪಂದಿಸಿದ್ದು, ಇನ್ಮುಂದೆ ಐದು ವರ್ಷಗಳ ಸೇವೆ ಸಲ್ಲಿಸಿದ ಸಶಸ್ತ್ರ ಮೀಸಲು ಪಡೆ ಪೊಲೀಸರಿಗೆ ಸಿವಿಲ್‌ ವಿಭಾಗಕ್ಕೆ ನಿಯೋಜಿಸಲಾಗುತ್ತದೆ ಎಂದು ಹೇಳಿದರು.

ಕ್ರೀಡಾಪಟುಗಳಿಗೆ ಶೇ.2ರಷ್ಟುಮೀಸಲು: ಅಲ್ಲದೆ, ಪೊಲೀಸರ ನೇಮಕಾತಿಯಲ್ಲಿ ಕೀಡಾ ವಲಯಕ್ಕೆ ಶೇ.2ರಷ್ಟುಮೀಸಲಾತಿ ಕಲ್ಪಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಒಪ್ಪಿಗೆ ಸೂಚಿಸಿದ್ದು, ಈ ಸಂಬಂಧ ಮುಂದಿನ ವಾರವೇ ಅಧಿಸೂಚನೆ ಹೊರಡಿಸಲಾಗುತ್ತದೆ. ಈ ನಿಟ್ಟಿನಲ್ಲಿ ಇಲಾಖೆ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿದೆ ಎಂದು ಡಿಜಿಪಿ ತಿಳಿಸಿದರು.

click me!