ಮದ್ದೂರಲ್ಲಿ ದಿಢೀರ್‌ ಪ್ರವಾಹ: ಬೆಂಗಳೂರು- ಮೈಸೂರು ರೈಲು ಸಂಚಾರ ಸ್ಥಗಿತ

By Kannadaprabha NewsFirst Published Aug 4, 2022, 1:30 AM IST
Highlights

ಬೆಂಗಳೂರಿನಿಂದ ಮಂಗಳೂರಿಗೆ ತೆರಳುವ ಎಕ್ಸಪ್ರೆಸ್‌ ರೈಲು, ಮೈಸೂರಿನಿಂದ ಶಿವಮೊಗ್ಗಕ್ಕೆ ತೆರಳುವ ಪ್ಯಾಸೆಂಜರ್‌ ರೈಲು, ವಾರಾಣಾಸಿ ಎಕ್ಸಪ್ರೆಸ್‌ ರೈಲುಗಳ ಸಂಚಾರವನ್ನು ರದ್ದು

ಮಂಡ್ಯ(ಆ.04):  ಮದ್ದೂರು ಕೆರೆ ಕೋಡಿ ಬಿದ್ದು ಕೊಲ್ಲಿ ನದಿಯಲ್ಲಿ ದಿಢೀರ್‌ ಪ್ರವಾಹ ಉಂಟಾಗಿ ಪ್ರವಾಹದ ನೀರು ರೈಲು ಹಳಿಗಳ ಮೇಲೆ ಹರಿಯುತ್ತಿರುವುದರಿಂದ ಬೆಂಗಳೂರು - ಮೈಸೂರು ನಡುವೆ ಸಂಚರಿಸುವ ರೈಲು ಸಂಚಾರವನ್ನು ಬುಧವಾರ ಸಂಜೆಯಿಂದ ಸ್ಥಗಿತಗೊಳಿಸಲಾಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ತೆರಳುವ ಎಕ್ಸಪ್ರೆಸ್‌ ರೈಲು, ಮೈಸೂರಿನಿಂದ ಶಿವಮೊಗ್ಗಕ್ಕೆ ತೆರಳುವ ಪ್ಯಾಸೆಂಜರ್‌ ರೈಲು, ವಾರಾಣಾಸಿ ಎಕ್ಸಪ್ರೆಸ್‌ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ. ಚೆನೈ ನಿಂದ ಮೈಸೂರಿಗೆ ತೆರಳುತ್ತಿದ್ದ ಎಕ್ಸಪ್ರೆಸ್‌ ರೈಲನ್ನು ಕೆಂಗೇರಿಯಲ್ಲೆ ತಡೆಹಿಡಿಯಲಾಗಿದ್ದು, ಮೈಸೂರಿಗೆ ತೆರಳುವ ರೈಲು ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರು - ಮೈಸೂರು ನಡುವೆ ಸಂಚರಿಸುವ ಜೋಡಿ ರೈಲು ಮಾರ್ಗದಲ್ಲಿ ಪ್ರವಾಹವಾದ ನೀರಿನಿಂದ ಆವೃತವಾಗಿರುವ ಜೋಡಿ ರೈಲು ಮಾರ್ಗ ಬಿಟ್ಟು ಏಕ ಮುಖ ಸಂಚಾರದಲ್ಲಿ ಸಂಚರಿಸಲು ಅನುವು ಮಾಡಿಕೊಡುವ ಉದ್ದೇಶದಿಂದ ಕೆಲವು ರೈಲುಗಳನ್ನು ನಿಲ್ದಾಣದಲ್ಲಿ ಕ್ರಾಸಿಂಗ್‌ ಮಾಡಿ ನಿಲ್ಲಿಸಲಾಗಿದೆ.

Latest Videos

2ನೇ ಹಂತದಲ್ಲಿ ನಮ್ಮ‌ಮೆಟ್ರೋ ಸೂಪರ್ ಫಾಸ್ಟ್: ಓಡಲಿದೆ 2 ನಿಮಿಷಕ್ಕೊಂದು ಟ್ರೈನ್‌

ಮಂಡ್ಯ ಕೆರಗೋಡು ವ್ಯಾಪ್ತಿಯ ಕೆಲವು ಕೆರೆಗಳು ಒಡೆದು ಅಪಾರ ಪ್ರಮಾಣದ ನೀರು ಮದ್ದೂರು ಕೆರೆಗೆ ಹರಿದು ಬಂದಿದೆ. ಮದ್ದೂರು ಕೆರೆ ರಕ್ಷಣೆ ಮಾಡುವ ಉದ್ದೇಶದಿಂದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕೆರೆ ಕೋಡಿ ಒಡೆದು ಪ್ರವಾಹದ ನೀರನ್ನು ಕೊಲ್ಲಿ ನದಿ ಮೂಲಕ ಶಿಂಷಾ ನದಿಗೆ ಹರಿಯಬಿಡಲು ವ್ಯವಸ್ಥೆ ಮಾಡಿದ್ದರು. ಆದರೆ ಬುಧವಾರ ಸಂಜೆ ಮದ್ದೂರು ಕೆರೆಗೆ ಒಳಹರಿವು ಕ್ಷಣ ಕ್ಷಣಕ್ಕೂ ನೀರು ಹೆಚ್ಚಾಗಿ ಬೆಂಗಳೂರು-ಮೈಸೂರು ಜೋಡಿ ರೈಲು ಮಾರ್ಗದ ಮೇಲೆ ಹರಿಯುತ್ತಿದೆ ಈ ಹಿನ್ನೆಲೆಯಲ್ಲಿ ರೈಲು ಸುರಕ್ಷತಾ ದಳದ ಅಧಿಕಾರಿಗಳು ನೈರುತ್ಯ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಹಲವು ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಇಲಾಖೆ ಆದೇಶ ಹೊರಡಿಸಿದ್ದು, ಇಲಾಖೆಯ ದಿರ್ಡೀ ನಿರ್ಧಾರದಿಂದಾಗಿ ಪ್ರಯಾಣಿಕರು ತೊಂದರೆಗೆ ಒಳಗಾಗಿದ್ದಾರೆ.
 

click me!