ಬೀದರ್: ಕಾರಂಜಾ ಡ್ಯಾಂಗಿಲ್ಲ ಇಲ್ಲ ಸೂಕ್ತ ಭದ್ರತೆ, ಪ್ರಾಣ ಕಳೆದುಕೊಳ್ಳುತ್ತಿರುವ ಜನ

By Girish GoudarFirst Published Aug 3, 2022, 11:06 PM IST
Highlights

ಬೀದರ್ ಜಿಲ್ಲೆಯ ಜನರ ರೈತರ ಪಾಲಿನ ದೈವವಾಗಿರುವ ಕಾರಂಜಾ ಡ್ಯಾಂಗೆ ಅಭದ್ರತೆ ಕಾಡತೊಡಗಿದೆ. 

ವರದಿ- ಲಿಂಗೇಶ್ ಮರಕಲೆ, ಏಷ್ಯಾನೆಟ್ ಸುವರ್ಣ ನ್ಯೂಸ್, ಬೀದರ್

ಬೀದರ್(ಆ.03):  ಬೀದರ್‌ ಜಿಲ್ಲೆ ಭಾಲ್ಕಿ ತಾಲೂಕಿನ ಹಾಲಹಳ್ಳಿ ಗ್ರಾಮದ ಬಳಿ ಬರುವ ಕಾರಂಜಾ ಜಲಾಶಯ ಕಾರಂಜಾ ಡ್ಯಾಂಗಿಲ್ಲ ಸೂಕ್ತ ಭದ್ರತೆ. ಹೌದು, ಬೀದರ್ ಜಿಲ್ಲೆಯ ಜನರ ರೈತರ ಪಾಲಿನ ದೈವವಾಗಿರುವ ಕಾರಂಜಾ ಡ್ಯಾಂಗೆ ಅಭದ್ರತೆ ಕಾಡತೊಡಗಿದೆ.  7.691 ಟಿಎಂಸಿ ಸಾಮರ್ಥವಿರುವ ಈ ಡ್ಯಾಂನ ಬೀದರ್, ಭಾಲ್ಕಿ, ಹುಮ್ನಾಬಾದ್ ತಾಲೂಕಿನ ಸಾವಿರಾರು ಜನರಿಗೆ ಕುಡಿಯುವ ಕೊಟ್ಟು ಅವರ ದಾಹ ಇಂಗಿಸುತ್ತಿದೆ ಇದರ ಜೊತೆಗೆ ಸಾವಿರಾರು ಹೆಕ್ಟರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಏಕೈಕ ಡ್ಯಾಂ ಇದಾಗಿದ್ದು ಇಂತಹ ಡ್ಯಾಂಗೆ ಯಾವುದೇ ರೀತಿಯಿಂದಲೂ ಭದ್ರತೆಯನ್ನ ಒದಗಿಸದೇ ನೀರಾವರಿ ಇಲಾಖೆಯ ಅಧಿಕಾರಿ ದಿವ್ಯ ನಿರ್ಲಕ್ಷವನ್ನ ಮಾಡುತ್ತಿದ್ದಾರೆ. 

ಇನ್ನು ಈ ಡ್ಯಾಂನ ಅಕ್ಕಪಕ್ಕದಲ್ಲಿರುವ ಎಲ್ಲಾ ಗ್ರಾಮಸ್ಥರು ಡ್ಯಾಂನೊಳಗೆ ಇಳಿದು ಬಟ್ಟೆ ತೊಳೆಯುವುದು, ಸ್ನಾನ ಮಾಡುವುದು ಮಾಡುತ್ತಿದ್ದಾರೆ. ಇದರ ಜೊತೆಗೆ ಜನ ಜಾನುವಾರಗಳು ಯಾರೂ ಅಂಜಿಕೆ ಅಳುಕಿಲ್ಲದೇ ಡ್ಯಾಂನೊಳಗೆ ಹೋಗುತ್ತವೆ ಆದರೂ ಕೂಡಾ ಇಲ್ಲಿ ಪ್ರಶ್ನೇ ಮಾಡುವವರು ಯಾರು ಇಲ್ಲದಂತಾಗಿದೆ. ಹೀಗಾಗಿ ವರ್ಷದಲ್ಲಿ ಐದಾರು ಜನ ಡ್ಯಾಂನಲ್ಲಿ ಬಿದ್ದು ಸಾವನ್ನಪ್ಪುವುದು ಇಲ್ಲಿ ಮಾಮೂಲಾಗಿದೆ.

BIDAR: ಭಾರೀ ಮಳೆಗೆ ಮದನೂರು ಗ್ರಾಮದ ಜನ ತತ್ತರ

ಜಿಲ್ಲೆಯ ಏಕೈಕ ಜಲಾಶಯ ಇದಾಗಿದ್ದು ರೈತರ ಜೀವನಾಡಿ ಎನಿಸಿಕೊಂಡಿರುವ ಈ ಕಾರಂಜಾ ಡ್ಯಾಂಗೆ ಜಿಲ್ಲೆಯ ಹಲವು ಭಾಗಗಳಿಂದ ಜಲಾಶಯ ನೋಡಲು ಬರುವ ಪ್ರವಾಸಿಗರಿಗೆ ಇಲ್ಲಿ ಒಳಗಡೆ ಹೋಗಲು ಅವಕಾಶ ನೀಡುತ್ತಿಲ್ಲ,. ಈ ಕಾರಣದಿಂದ ಡ್ಯಾಂನ ಬೇರೆ ಭಾಗಗಳಿಂದ ಕದ್ದು ಮುಚ್ಚಿ ಜನ ಡ್ಯಾಂ ಸುತ್ತಲು ಪ್ರವೇಶ ಪಡೆಯುತ್ತಿದ್ದಾರೆ. ಡ್ಯಾಂನ ಪ್ರಮುಖ ಗೇಟ್​ ಬಳಿ ಓರ್ವ ಸೆಕ್ಯೂರಿಟಿ ಗಾರ್ಡ್​ ಮಾತ್ರ ಕಾಣಿಸಿಕೊಳ್ಳುತ್ತಾರೆ ಅದು ಯಾವಾಗಲೂ ಗೇಟ್​ಗೆ ಕೀಲಿ ಹಾಕಲಾಗಿರುತ್ತದೆ.

ಮೇನ್ ಗೇಟ್​ ನಿಂದ ಯಾರಿಗೂ ಪ್ರವೇಶ ಮಾಡಲು ಅವಕಾಶ ನೀಡುತ್ತಿಲ್ಲ ಆದರೆ,. ಡ್ಯಾಂ ಮೇಲೆ ಹೋಗಲು ಹತ್ತಾರು ಕಳ್ಳದಾರಿ ಮಾಡಿಕೊಂಡಿರುವ ಪುಂಡ ಪೋಕರಿಗಳು ಅಲ್ಲಿಗೆ ಹೋಗಿ ಅನೈತಿಕ ಚಟುವಟಿಗಳು ಮಾಡುತ್ತಿದ್ದಾರೆ. ಕಾರಂಜಾ ಜಲಾಶಯದ ಬಳಿ ಗಾರ್ಡನ್ ಕೂಡ ಯಾವುದೇ ನಿರ್ವಹಣೆ ಇಲ್ಲದೇ ಗಾರ್ಡನ್ ನಲ್ಲಿ ಗಿಡ- ಗಂಟಿಗಳು ಬೆಳೆದು ನಿಂತು ಭಯದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಜಲಾಶಯಕ್ಕೆ ಬರುವ ಪ್ರವಾಸಿಗರು ಬೇಸರಗೊಂಡು ವಾಪಸಾಗುವಂತ ಪರಿಸ್ಥಿತಿ ನಿರ್ಮಾಣಗೊಂಡಿದೆ. ಜಲಾಶಯದ ಸುತ್ತಲೂ ಯಾವುದೇ ಸುರಕ್ಷತೆ ಇಲ್ಲದ ಕಾರಣಕ್ಕೆ ಕೆಲ ರೈತರು, ಸ್ಥಳೀಯರು ಯಾವುದೇ ಸುರಕ್ಷತೆ ಇಲ್ಲದೇ ನೀರಿಗೆ ಇಳಿದು ಪ್ರಾಣ ಕೂಡ ಕಳೆದುಕೊಳ್ಳುತ್ತಿದ್ದಾರೆ. 
 

click me!