ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!

ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!

Published : Jun 08, 2026, 06:37 PM IST

ಬೆಳಗಾವಿಯ ಕೃಷ್ಣ ಮತ್ತು ಸತ್ಯವ್ವ ಪ್ರೀತಿಸುತ್ತಿದ್ದರು, ಆದರೆ ಸತ್ಯವ್ವಳ ಕುಟುಂಬ ಆಕೆಗೆ ಬೇರೆ ಮದುವೆ ಮಾಡಿತ್ತು. ಹಳೇ ಪ್ರೇಮಿ ಕೃಷ್ಣನ ಜೊತೆ ಓಡಿಹೋದ ಸತ್ಯವ್ವಳನ್ನು ಆಕೆಯ ಕುಟುಂಬಸ್ಥರೇ ಕೊಲೆ ಮಾಡುತ್ತಾರೆ. 

ಬೆಳಗಾವಿ (ಜೂ.8): ಅವರಿಬ್ಬರದ್ದು ಅಪರೂಪದ ಹಳೇ ಪ್ರೇಮ ಕಥೆ. ಸಣ್ಣ ವಯಸ್ಸಿನಲ್ಲೇ ಜೊತೆಯಾಗಿ ಬಾಳುವ ಕನಸು ಕಂಡಿದ್ದ ಬೆಳಗಾವಿಯ ಯಮಕನಮರಡಿಯ ಕೃಷ್ಣ ಮತ್ತು ಸತ್ಯವ್ವ ದಂಪತಿಯ ಜೀವನದಲ್ಲಿ ವಿಧಿಯ ಆಟ ಭೀಕರ ದುರಂತಕ್ಕೆ ಕಾರಣವಾಗಿದೆ. ಹೆತ್ತವರು ಸತ್ಯವ್ವಳಿಗೆ ಬೇರೆ ಮದುವೆ ಮಾಡಿದ್ದರೂ, ಆಕೆಗೆ ಆ ಜೀವನ ಇಷ್ಟವಿರಲಿಲ್ಲ. ಹೀಗಾಗಿ ಒಂದು ದಿನ ತನ್ನ ಹಳೇ ಪ್ರೇಮಿ ಕೃಷ್ಣನ ಜೊತೆ ಆಕೆ ಓಡಿಹೋಗಿದ್ದಳು. ಆದರೆ, ಆ ಬಳಿಕ ಅವರ ಬಾಳಿನಲ್ಲಿ ಬಿರುಗಾಳಿ ಎದ್ದಿತ್ತು.

ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!

ಕೃಷ್ಣನ ಜೊತೆ ಓಡಿಹೋಗಿದ್ದ ಸತ್ಯವ್ವ ಹಠಾತ್ ನಾಪತ್ತೆಯಾಗಿದ್ದಳು. ಆವತ್ತು ಕೃಷ್ಣ ಸುಮ್ಮನಾಗಿದ್ದರೆ ಆಕೆಯ ಸಾವಿನ ಸತ್ಯ ಎಂದಿಗೂ ಹೊರಬರುತ್ತಿರಲಿಲ್ಲ. ಆದರೆ ಸತ್ಯವ್ವಳ ಕುಟುಂಬಸ್ಥರ ಮೇಲೆ ಅನುಮಾನಗೊಂಡ ಕೃಷ್ಣ, ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ನೀಡಿದ್ದ. ತನಿಖೆ ನಡೆಸಿದ ಪೊಲೀಸರಿಗೆ ಸತ್ಯವ್ವಳನ್ನು ಆಕೆಯ ಸ್ವಂತ ಕುಟುಂಬಸ್ಥರೇ ಕೊಲೆ ಮಾಡಿರುವ ಭೀಕರ ಸತ್ಯ ಬಯಲಾಗಿತ್ತು.

ತನ್ನ ಪ್ರೇಯಸಿಯ ಪ್ರಾಣ ತೆಗೆದ ಹಂತಕ ಕುಟುಂಬವನ್ನು ಪೊಲೀಸರಿಗೆ ಹಿಡಿದುಕೊಟ್ಟ ನಂತರ ಕೃಷ್ಣ ನಿಟ್ಟುಸಿರು ಬಿಟ್ಟಿದ್ದ ನಿಜ. ಆದರೆ, ಆತನ ಮನಸ್ಸಿನಲ್ಲಿದ್ದ ಸತ್ಯವ್ವಳ ನೆನಪುಗಳು ಮಾತ್ರ ಮಾಸಿರಲಿಲ್ಲ. ಆಕೆಯನ್ನು ಮರೆಯಲು ಎಷ್ಟೇ ಪ್ರಯತ್ನ ಪಟ್ಟರೂ ಕೃಷ್ಣನಿಗೆ ಅದು ಸಾಧ್ಯವಾಗದೆ, ದಿನನಿತ್ಯ ಆಕೆಯ ನೆನಪಿನಲ್ಲೇ ಕೊರಗುತ್ತಾ ಕಾಲ ಕಳೆಯುತ್ತಿದ್ದ.
 

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more