Karnataka Politics : ಬೆಳಗ್ಗೆ ಕಾಂಗ್ರೆಸ್‌ ಸೇರಿ, ರಾತ್ರಿ ಬಿಜೆಪಿ ಸೇರಿದ ಮುಖಂಡರು

By Kannadaprabha NewsFirst Published Dec 7, 2021, 3:11 PM IST
Highlights
  • ಬೆಳಗ್ಗೆ ಕಾಂಗ್ರೆಸ್‌ ಸೇರಿ, ರಾತ್ರಿ ಬಿಜೆಪಿ ಸೇರಿದ ಮುಖಂಡರು
  •  ಕೇತಗಾನಹಳ್ಳಿ ಗ್ರಾಪಂ ಸದಸ್ಯರು ಸೃಷ್ಟಿಸಿದ ರಾಜಕೀಯ ಗೊಂದಲ

ಬಂಗಾರಪೇಟೆ  (ಡಿ.07):  ಡಿ. 10ರಂದು ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ (MLC Election) ನಡೆಯಲಿರುವ ಚುನಾವಣೆಯಲ್ಲಿ ಗೆಲ್ಲಲೇ ಬೇಕೆಂದು ಹಠಕ್ಕೆ ಬಿದ್ದಿರುವ ಬಿಜೆಪಿ (BJP) ಮತ್ತು ಕಾಂಗ್ರೆಸ್‌ (Congress) ಅಭ್ಯರ್ಥಿಗಳು ಗ್ರಾಮ ಪಂಚಾಯಿತಿ ಸದಸ್ಯರನ್ನು (Grama Panchayat Members) ಸೆಳೆಯಲು ಮುಂದಾಗಿದ್ದು, ಅದರಂತೆ ಕೇತಗಾನಹಳ್ಳಿ ಪಂಚಾಯಿತಿ ಬಿಜೆಪಿ ಸದಸ್ಯರನ್ನು ಬೆಳಗ್ಗೆ ಕಾಂಗ್ರೆಸ್‌ ಪಕ್ಷಕ್ಕೆ ಶಾಸಕರು ಸೇರಿಸಿಕೊಂಡರೇ ರಾತ್ರಿ ಮತ್ತೆ ಬಿಜೆಪಿಗೆ ಮರಳಿ ರಾಜಕೀಯವಾಗಿ (Politics) ಗೊಂದಲ ಸೃಷ್ಟಿಸಿದ್ದಾರೆ. ಇದೊಂದು ಜಿಲ್ಲೆ ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆ ಎನಿಸಿಕೊಂಡಿದೆ. 

ಹೌದು ಇಷ್ಟು ದಿನ ಗ್ರಾಮ ಪಂ ಸದಸ್ಯರನ್ನು ಯಾರೂ ಬೆಲೆ ಕೊಡದೆ ಕಡೆಗಣಿಸಿದ್ದರು, ಈ ಚುನಾವಣೆಯಿಂದ (Election) ಅವರಿಗೆ ಈಗ ಎಲ್ಲಿಲ್ಲದ ಡಿಮ್ಯಾಂಡು (Demand) ಬಂದಿದೆ. ಅದರಂತೆ ತಾಲೂಕಿನ ಕೇತಗಾನಹಳ್ಳಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಬಿಜೆಪಿ (BJP) ವಶದಲ್ಲಿದ್ದು, ಇಲ್ಲಿನ ಸದಸ್ಯರನ್ನು ಕಾಂಗ್ರೆಸ್‌ಗೆ ಸೆಳೆಯುವಲ್ಲಿ ಡಿಸಿಸಿ ಬ್ಯಾಂಕಿನ (DCC Bank) ನಿರ್ದೇಶಕ ಗೋವಿಂದ ರಾಜು ಮೂಲಕ ಶಾಸಕ ಎಸ್‌.ಎನ್‌.ನಾರಾಯಣ ಸ್ವಾಮಿ ಭಾನುವಾರ ಯಶಸ್ವಿಯಾಗಿದ್ದರು. ಬೆಳಗ್ಗೆ ಬಿಜೆಪಿ ಸೇರಿದ್ದ ಸದಸ್ಯರು ರಾತ್ರಿಯಾಗುತ್ತಿದ್ದಂತೆ ಬಿಜೆಪಿ ನಾಯಕರ ಒತ್ತಡಕ್ಕೆ ಸಿಲುಕಿ ಮತ್ತೆ ಬಿಜೆಪಿ ಸೇರಿದರು. ನಾವು ಬಿಜೆಪಿ ಬಿಟ್ಟು ಕಾಂಗ್ರೆಸ್‌   (Congress) ಸೇರಿಲ್ಲ. ಡಿಸಿಸಿ ಬ್ಯಾಂಕ್‌ ನಿರ್ದೇಶಕ ಗೋವಿಂದರಾಜು ನಮ್ಮನ್ನು ಖಾಸಗಿ ಸಮಾರಂಭಕ್ಕೆ ಕರೆದುಕೊಂಡು ಹೋಗಿ ಅಲ್ಲಿ ನಮಗೆ ತಿಳಿಯದಂತೆ ಶಾಸಕರ ಜೊತೆ ಫೋಟೋ ತೆಗೆಸಿದರು. ನಂತರ ನಾವು ಕಾಂಗ್ರೆಸ್‌ ಸೇರಿರುವುದಾಗಿ ಅಪಪ್ರಚಾರ ಮಾಡಿದ್ದಾರೆ ಎಂದು ಸದಸ್ಯರಾದ ಮುರಳಿ, ನಾಯ್ಡು, ರಾಮಪ್ಪ ಸ್ಪಷ್ಟಣೆ ನೀಡಿದರು.

Latest Videos

ರಾಜಕೀಯ ಪಕ್ಷ ವೊಂದರ ಅಭ್ಯರ್ಥಿ ಹಾಗೂ ನಾಯಕರು ಪಂಚಾಯಿತಿ ಸದಸ್ಯರಿಂದ ಧರ್ಮಸ್ಥಳ ಮಂಜುನಾಥ ಸ್ವಾಮಿ (Dharmasthala Manjunatha) ಫೋಟೋ ಮೇಲೆ ಆಣೆ ಮಾಡಿಸಿಕೊಂಡು, ಪ್ರಸಾದ ನೀಡಿ ತಮಗೇ ಮತ ಹಾಕಬೇಕೆಂದು ಆಣೆ ಪ್ರಮಾಣ ಮಾಡಿಸಿಕೊಂಡು ಹಣದ (Money) ಆಮಿಷ ನೀಡಿದ್ದಾರೆ ಎನ್ನಲಾಗಿದ್ದು ಇದು ಎಲ್ಲೆಡೆ ವೈರಲ್‌ ಆಗಿದೆ.

ಬಿಜೆಪಿ ಜೆಡಿಎಸ್ ನಾಯಕರು ಕಾಂಗ್ರೆಸ್ ಸೇರ್ಪಡೆ : 

ಮುಂಬರುವ ವಿಧಾನಸಭೆ ಚುನಾವಣೆಗೆ (Karnataka Assembly Election 2023) ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಈಗಿನಿಂದಲೇ ತಾಲೀಮು ಆರಂಭಿಸಿವೆ. ಇದರ ಮಧ್ಯೆ ನಾಯರುಗಳು ಸಹ ತಮ್ಮ ಮುಂದಿನ ರಾಜಕೀಯ(Politics) ಭವಿಷ್ಯದ ಲೆಕ್ಕಾಚಾರದೊಂದಿಗೆ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಿಗಿಯುತ್ತಿದ್ದಾರೆ.

ಅದರಂತೆ  ಡಿ.02 ರಂದು ಬೆಂಗಳೂರಿನಲ್ಲಿ ಸಿದ್ದರಾಮಯ್ಯ(Siddaramaiah) ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivakumar) ನೇತೃತ್ವದಲ್ಲಿ ಬಿಜೆಪಿ(BJP) ಹಾಗೂ ಜೆಡಿಎಸ್ (JDS) ಮುಖಂಡರು ಕಾಂಗ್ರೆಸ್(Congress) ಸೇರ್ಪಡೆಯಾದರು.

Karnataka Politics: ಬಿಜೆಪಿ ನಾಯಕ ಕಾಂಗ್ರೆಸ್‌ ಸೇರ್ಪಡೆಗೆ ಮಾತುಕತೆ, ಮಾಹಿತಿ ಬಿಟ್ಟುಕೊಟ್ಟ 3ನೇ ವ್ಯಕ್ತಿ

ಜೆಡಿಎಸ್‌ನ ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಆರ್. ಮನೋಹರ್, ಮಾಲೂರಿನ ಮಾಜಿ ಶಾಸಕ, ಬಿಜೆಪಿ ಮುಖಂಡ ನಾಗರಾಜು, ರಾಜ್ಯ ಮಡಿವಾಳರ ಸಂಘದ ನಂಜಪ್ಪ, ಅಮರನಾಥ್, ಜೆಡಿಎಸ್ ನ ಗೋಪಿಕೃಷ್ಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಅನುಸೂಯ ಸೇರಿದಂತೆ  ಅನೇಕ ಮುಖಂಡರು ಸೇರ್ಪಡೆಯಾಗಿದ್ದು ಇವರಿಗೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಕಾಂಗ್ರೆಸ್ ಧ್ವಜ ನೀಡಿ ಪಕ್ಷಕ್ಕೆ ಸ್ವಾಗತಕೋರಿದರು.

ವೇಟಿಂಗ್ ಲಿಸ್ಟ್‌ನಲ್ಲಿ ಘಟಾನುಘಟಿಗಳು 
ಹೌದು...ಜೆಡಿಎಸ್ ಹಾಗೂ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಗೆ ಹಲವು ಘಟಾನುಘಟಿ ನಾಯಕರು ತುದಿಗಾಲಲ್ಲಿ ನಿಂತಿದ್ದಾರೆ. ಕೋಲಾರ ಜೆಡಿಎಸ್ ಹಾಲಿ ಶಾಸಕ ಶ್ರೀನಿವಾಸ್ ಗೌಡ, ಜಿಟಿ ದೇವೇಗೌಡ, ಸಂದೇಶ್ ನಾಗರಾಜ್ ಸೇರಿದಂತೆ ಹಲವು ಘಟಾನುಘಟಿ ನಾಯಕರು ಕಾಂಗ್ರೆಸ್ ಸೇರ್ಪಡೆಗೆ ಕ್ಯೂನಲ್ಲಿ ನಿಂತಿದ್ದು, ಸೇರ್ಪಡೆಗೆ ಕಾಲ, ಸಮಯ ನಿಗದಿಯಾಗಿಲ್ಲ.  2023ರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮೇಲೆ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಈ ಬಗ್ಗೆ ಈಗಾಗಲೇ ಕಾಂಗ್ರೆಸ್‌ನಲ್ಲಿ ಚರ್ಚೆಗಳು ಆಗಿವೆ.

ಜೆಡಿಎಸ್ ನಾಯಕರೇ ಹೆಚ್ಚು
ಹೌದು...ಜೆಡಿಎಸ್‌ನಿಂದಲೇ ಹಲವರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಮುಂದೆ ಸಹ ಹಲವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಅದರಲ್ಲೂ  ಮಂಡ್ಯ, ತುಮಕೂರು, ಕೋಲಾರ ಜಿಲ್ಲೆಗಳ ಜೆಡಿಎಸ್ ನಾಯಕರು 2023ರ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಮಾಹಿತಿ ಇದೆ.

click me!