Liquor Sale Ban in Karnataka : 3 ದಿನ ಮದ್ಯ ಮಾರಾಟ ನಿಷೇಧ

By Kannadaprabha NewsFirst Published Dec 7, 2021, 2:33 PM IST
Highlights
  • ಕರ್ನಾಟಕ ವಿಧಾನ ಪರಿಷತ್  (ಸ್ಥಳೀಯ ಸಂಸ್ಥೆಗಳು)   ಚುನಾವಣೆ ಮತದಾನ
  •  ಚುನಾವಣೆ ಮತದಾನ ನಡೆಯುವುದರಿಂದ ಮದ್ಯ ಮಾರಾಟಕ್ಕೆ ಬ್ರೇಕ್

ಮಂಡ್ಯ (ಡಿ.07): ಮಂಡ್ಯ (Mandya) ಜಿಲ್ಲೆಯಲ್ಲಿ ಡಿ.30 ರಂದು ಕರ್ನಾಟಕ ವಿಧಾನ ಪರಿಷತ್  (ಸ್ಥಳೀಯ ಸಂಸ್ಥೆಗಳು) ದೈವಾರ್ಷಿಕ ಚುನಾವಣೆ (Karnataka MLC Election) ಮತದಾನ ನಡೆಯುವುದರಿಂದ ಜಿಲ್ಲಾ ವ್ಯಾಪ್ತಿಯಲ್ಲಿ ಡಿ.8ರ ಸಂಜೆ 5 ಗಂಟೆಯಿಂದ ಡಿ. 10ರ ಸಂಜೆ  5 ಗಂಟೆವರೆಗೆ  ಅಂದರೆ ಮತದಾನ ಮುಕ್ತಾಯದ ಹಿಂದಿನ 48 ಗಮಟೆಗಳ ಅವಧಿಯಲ್ಲಿ  ಎಲ್ಲಾ ತರಹದ ಮದ್ಯದ ಅಂಗಡಿ (Liquor Shop) ಬಾರ್ ಅಂಡ್ ರೆಸ್ಟೊರೆಂಟ್ ಕ್ಲಬ್‌ಗಳಲ್ಲಿ ಮದ್ಯ ಮಾರಾಟ ನಿಷೇಧಿಸಿ (Liquor Sale Ban) ಜಿಲ್ಲಾಧಿಕಾರಿ (DC) ಆದೇಶ ಹೊರಡಿಸಿದ್ದಾರೆ. ಈ ಸಮಯದಲ್ಲಿ ಮದ್ಯ ಮಾರಾಟ, ಹಂಚಿಕೆ ಸಾಗಾಣಿಕೆ ಮತ್ತು ಶೇಖರಣೆಯನ್ನು ನಿಷೇಧಿಸಿ ಶುಷ್ಕ ದಿನವೆಂದು  ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. 

ಮದ್ಯ ಮಾರಾಟ ನಿಷೇಧಿಸಿ ಡಿಸಿ ಆದೇಶ 

ಕಲಬುರಗಿ:  ಕರ್ನಾಟಕ ವಿಧಾನ ಪರಿಷತ್‌ (MLC Election) ಗುಲ್ಬರ್ಗ ಕ್ಷೇತ್ರದ ಸ್ಥಳೀಯ ಚುನಾವಣೆ ಹಿನ್ನೆಲೆಯಲ್ಲಿ ಕಲಬುರಗಿ (Kalaburagi) ಜಿಲ್ಲಾದ್ಯಂತ ಡಿ.10ರಂದು ಮತದಾನ ಹಾಗೂ ಡಿ.14ರಂದು ಮತ ಎಣಿಕೆ ನಡೆಯಲಿದೆ. ಈ ಚುನಾವಣೆಯು ಮುಕ್ತ, ಶಾಂತಿಯುತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಅನುಕೂಲವಾಗುವಂತೆ ಕಲಬುರಗಿ ಜಿಲ್ಲಾದ್ಯಂತ ಮದ್ಯ ಮಾರಾಟ ಹಾಗೂ ಮದ್ಯ ಸೇವನೆ ನಿಷೇಧಿಸಿ ಕಲಬುರಗಿ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ಆದೇಶ ಹೊರಡಿಸಿದ್ದಾರೆ.

ಡಿ.8ರ ಮಧ್ಯ ರಾತ್ರಿಯಿಂದ ಡಿ.10ರ ಮಧ್ಯರಾತ್ರಿಯವರೆಗೆ ಹಾಗೂ ಡಿ.14ರ ಬೆ.6 ರಿಂದ ಡಿ.15ರ ಬೆ.6ರ ವರೆಗೆ ಕಲಬುರಗಿ ಜಿಲ್ಲಾದ್ಯಂತ ಎಲ್ಲಾ ರೀತಿಯ ಮದ್ಯ ಮಾರಾಟ, ಶೇಖರಣೆ, ಹೊರಗಿನಿಂದ ಮದ್ಯ ಇತ್ಯಾದಿಗಳನ್ನು ತಂದು ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದ್ದು, ಬಿಯರ್‌ ಬಾರ್‌ಗಳು, ಮದ್ಯದ ಡೀಪೋ (ಕೆ.ಎಸ್‌.ಬಿ.ಸಿ.ಎಲ್‌. KSBCL) ಗಳನ್ನು ಹಾಗೂ ಮದ್ಯ ಮಾರಾಟ ಅಂಗಡಿಗಳನ್ನು ಮುಚ್ಚಬೇಕೆಂದು ಅವರು ಆದೇಶ ಹೊರಡಿಸಿದ್ದು, ಈ ಮೇಲ್ಕಂಡ ದಿನಗಳಂದು ಶುಷ್ಕ ದಿನಗಳೆಂದು ಘೋಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಜಾತ್ರೆ, ಉತ್ಸವಗಳು ಮುಂದೂಡಿ ಆದೇಶ :   ಕರ್ನಾಟಕ ವಿಧಾನ ಪರಿಷತ್ತಿನ ಗುಲಬರ್ಗಾ ಕ್ಷೇತ್ರ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಡಿ. 10 ರದು ಮತದಾನ ನಡೆಯಲಿದೆ. ಇದರ ಹಿನ್ನೆಲೆಯಲ್ಲಿ ಮತದಾನ ದಿನದಂದು ನಡೆಯುವ ಜಾತ್ರೆ (fest), ದನಗಳ ಸಂತೆ, ಉತ್ಸವ ಹಾಗೂ ಉರುಸ್‌ಗಳು ಸೇರಿದಂತೆ ಮುಂತಾದವುಗಳನ್ನು ಮುಂದೂಡಿ ಕಲಬುರಗಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ವಿ.ವಿ. ಜ್ಯೋತ್ಸ್ನಾ  ಅವರು ಆದೇಶ ಹೊರಡಿಸಿದ್ದಾರೆ.

10ರಂದು ಮದ್ಯ ಮಾರಾಟ ನಿಷೇಧ

ಧಾರವಾಡ :  ವಿಧಾನ ಪರಿಷತ ಧಾರವಾಡ (Dharwad) ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ಡಿ. 10ರಂದು ಮತದಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ 6ರಿಂದ ಮಧ್ಯರಾತ್ರಿ 11.59ರ ವರೆಗೆ ಜಿಲ್ಲಾದ್ಯಂತ ಮದ್ಯದ ಅಂಗಡಿ, ಬಾರ್‌ ಗಳನ್ನು ಬಂದ್‌ ಮಾಡಬೇಕು. ಎಲ್ಲ ರೀತಿಯ ಮದ್ಯ ತಯಾರಿಕಾ ಘಟಕಗಳು, ಮದ್ಯ ಸಾಗಾಣೆ, ಸಂಗ್ರಹಣೆ ನಿಷೇಧಿಸಲಾಗಿದೆ. ಮಾರಾಟ (Sale) ಮಳಿಗೆಗಳನ್ನು ಮುಚ್ಚಲು ಜಿಲ್ಲಾಧಿಕಾರಿ (DC) ಹಾಗೂ ಜಿಲ್ಲಾ ದಂಡಾಧಿಕಾರಿ ನಿತೇಶ ಕೆ. ಪಾಟೀಲ ಆದೇಶ ಹೊರಡಿಸಿದ್ದಾರೆ. ಪ್ರಜಾ ಪ್ರತಿನಿಧಿ ಕಾಯ್ದೆ 1951 ಕಲಂ 135 (ಸಿ) ಅನ್ವಯ ಪ್ರದತ್ತ ವಾದ ಅಧಿಕಾರ ಚಲಾಯಿಸಿ ಈ ಆದೇಶ ಹೊರಡಿಸಲಾಗಿದೆ. ಅಬಕಾರಿ ಉಪ ಆಯುಕ್ತರು, ಉಪ ಅಧೀಕ್ಷಕರು ಹಾಗೂ ವಿಚಕ್ಷಕ ದಳದ ಅಧಿಕಾರಿಗಳು ಈ ಆದೇಶ ಜಾರಿಗೊಳಿಸಲು ಜಿಲ್ಲಾಧಿಕಾರಿ (DC) ಸೂಚಿಸಿದ್ದಾರೆ.

click me!