ಮೈಸೂರಿನ ಫಾರಂ ಹೌಸ್‌ನಲ್ಲಿ ಕೊಲೆ ಆರೋಪಿ ದರ್ಶನ್‌ ಫುಲ್‌ ರಿಲ್ಯಾಕ್ಸ್‌!

By Kannadaprabha News  |  First Published Dec 21, 2024, 7:15 AM IST

ದರ್ಶನ್ ಅವರೊಂದಿಗೆ ತಾಯಿ ಮೀನಾ ತೂಗುದೀಪ, ಪತ್ನಿ ವಿಜಯಲಕ್ಷ್ಮಿ, ನಟ ಧನ್ವಿರ್, ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಜೊತೆಗಿದ್ದಾರೆ. ಮೈಸೂರಿಗೆ ಆಗಮಿಸಿರುವ ದರ್ಶನ್ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
 


ಮೈಸೂರು(ಡಿ.21):  ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆ ಆಗಿರುವ ನಟ ದರ್ಶನ್ ಅವರು 6 ತಿಂಗಳ ಬಳಿಕ ಶುಕ್ರವಾರ ಮೈಸೂರಿಗೆ ಆಗಮಿಸಿ, ತಮ್ಮ ಫಾರಂ ಹೌಸ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. 

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾದ ದರ್ಶನ್ ಕಳೆದ ಜೂ.11ರಂದು ಮೈಸೂರಿನಲ್ಲೇ ಬಂಧನವಾಗಿದ್ದರು. ಜಾಮೀನು ಸಿಕ್ಕರೂ ಬೆಂಗಳೂರು ಬಿಟ್ಟು ತೆರಳದಂತೆ ನ್ಯಾಯಾಲಯವು ಆದೇಶಿಸಿತ್ತು. ಮೈಸೂರಿಗೆ ತೆರಳಲು ಅವಕಾಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಅವರ ಮನವಿ ಪುರಸ್ಕರಿಸಿದ್ದ ಬೆಂಗಳೂರಿನ ಸಿಸಿಎಚ್ 57ನೇ ಸೆಷನ್ಸ್ ನ್ಯಾಯಾಲಯವು ಶುಕ್ರವಾರದಿಂದ ಜ.5ರವರೆಗೆ ಮೈಸೂರಿಗೆ ತೆರಳಲು ಅವಕಾಶ ನೀಡಿತ್ತು. ಈ ಹಿನ್ನೆಲೆ ಶುಕ್ರವಾರ ಮೈಸೂರು- ಟಿ. ನರಸೀಪುರ ಮುಖ್ಯ ರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರಂ ಹೌಸ್‌ಗೆ ಅಕ್ಕನ ಮಗ ಚಂದನ್ ಅವರೊಂದಿಗೆ ಆಗಮಿಸಿದರು. 

Tap to resize

Latest Videos

undefined

ಕೊನೆಗೂ ಆಸ್ಪತ್ರೆ ವಾಸ ಅಂತ್ಯ, ಮನೆಗೆ ಹೋಗಿರುವ ನಟ ದರ್ಶನ್ ಮುಂದಿನ ಕಥೆ ಏನು?

ದರ್ಶನ್ ಅವರೊಂದಿಗೆ ತಾಯಿ ಮೀನಾ ತೂಗುದೀಪ, ಪತ್ನಿ ವಿಜಯಲಕ್ಷ್ಮಿ, ನಟ ಧನ್ವಿರ್, ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಜೊತೆಗಿದ್ದಾರೆ. ಮೈಸೂರಿಗೆ ಆಗಮಿಸಿರುವ ದರ್ಶನ್ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಜಗದೀಶ್ ಹಾಗೂ ಅನುಕುಮಾರ್‌ಗೆ ಚಿತ್ರದುರ್ಗಕ್ಕೆ ತೆರಳಲು ನ್ಯಾಯಾಲಯ ಅನುಮತಿ ನೀಡಿದೆ. ಅವರು ಚಿತ್ರದುರ್ಗದ ನಿವಾಸಿಗಳಾಗಿದ್ದಾರೆ ಅವರ ಕುಟುಂಬದವರು ಅಲ್ಲಿಯೇ ನೆಲೆಸಿದ್ದಾರೆ. ಕುಟುಂಬಸ್ಥರ ಭೇಟಿ ಮಾಡುವುದಕ್ಕಾಗಿ ಚಿತ್ರದುರ್ಗಕ್ಕೆ ತೆರಳಿ ಜ.10ರವರೆಗೆ ನೆಲಸಲು ಈ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ಅನುಮತಿ ನೀಡಿದೆ.

ಧರ್ಮಪತ್ನಿ Vs ಕರ್ಮಪತ್ನಿ; ದಾಸನ ನಿಯತ್ತು ಯಾರಿಗೆ? ವಿಜಯಲಕ್ಷ್ಮೀ - ಪವಿತ್ರಾ ಹಠ, ದಾಸ ಇಲ್ಲಾ, ಅಲ್ಲಾ?

ಬಿಜಿಎಸ್‌ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌: 

ಬೆನ್ನು ನೋವಿನ ಕಾರಣಕ್ಕೆ ಆಸ್ಪತ್ರೆ ಸೇರಿದ್ದ ಕೊಲೆ ಆರೋಪಿ ನಟ ದರ್ಶನ್‌ ಬುಧವಾರ ಬಿಜಿಎಸ್‌ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬೆಳಗ್ಗೆ 10.30ಕ್ಕೆ ಪ್ರಕ್ರಿಯೆಗಳನ್ನು ಮುಗಿಸಿದ ನಂತರ ತಮ್ಮ ಪುತ್ರ ವಿನೀಶ್‌ ಹಾಗೂ ನಟ ಧನ್ವೀರ್‌ ಜತೆಗೂಡಿ ದರ್ಶನ್‌ ಆಸ್ಪತ್ರೆಯಿಂದ ತೆರಳಿದರು. ಆಸ್ಪತ್ರೆಯಿಂದ ನೇರವಾಗಿ ಪತ್ನಿ ವಿಜಯಲಕ್ಷ್ಮೀಯವರ ಹೊಸಕೆರೆಹಳ್ಳಿಯಲ್ಲಿರುವ ನಿವಾಸಕ್ಕೆ ದರ್ಶನ್‌ ತೆರಳಿದ್ದಾರೆ. ಧನ್ವೀರ್‌ ಅವರ ಹೆಗಲ ಮೇಲೆ ಕೈ ಹಾಕಿಕೊಂಡು ಕುಂಟುತ್ತಲೇ ಆಸ್ಪತ್ರೆಯಿಂದ ಹೊರ ಬಂದ ದರ್ಶನ್‌ ಜೊತೆ ಮಗ ವಿನೀಶ್‌ ಕೂಡ ಇದ್ದ. ನಟ ಧನ್ವಿರ್‌ ಅವರೇ ಕಾರು ಚಾಲನೆ ಮಾಡಿ ದರ್ಶನ್‌ರನ್ನು ಕರೆದುಕೊಂಡು ಹೊರಟರು.

ಬೆನ್ನುನೋವಿನ ಕಾರಣಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಉದ್ದೇಶದಿಂದ ದರ್ಶನ್ ಬಿಜಿಎಸ್‌ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಜಾಮೀನು ಮಂಜೂರಾದ ಮೇಲೆ ಇದೀಗ ದರ್ಶನ್‌ ಅವರು ಶಸ್ತ್ರಚಿಕಿತ್ಸೆ ಮಾಡದೆ ಮನೆಗೆ ತೆರಳಿದ್ದಾರೆ ಎನ್ನಲಾಗಿದೆ. ಸರ್ಜರಿ ಮಾಡಿಸಿಕೊಳ್ಳದೆ ಹೋದರೆ ಪಾರ್ಶ್ವವಾಯು ಆಗುವ ಸಂಭವವಿದೆ ಎಂದು ದರ್ಶನ್‌ ಪರ ವಕೀಲರು ಈ ಮೊದಲು ವಾದ ಮಂಡಿಸಿದ್ದರಿಂದ ಈಗ ಸರ್ಜರಿ ಮಾಡದೇ ದರ್ಶನ್‌ ಹೇಗೆ ಡಿಸ್‌ಚಾರ್ಜ್‌ ಆದರು ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಎದ್ದಿದೆ. ದರ್ಶನ್‌ ಮನೆಯಲ್ಲಿಯೇ ಫಿಸಿಯೋಥೆರಪಿ ಮಾಡಿಸಿಕೊಳ್ಳಲು ನಿರ್ಧರಿಸಿದ್ದು, ಫಿಸಿಯೋಥೆರಪಿಸ್ಟ್‌ ಒಬ್ಬರು ಪ್ರತಿದಿನ ಮನೆಗೆ ಬಂದು ಫಿಸಿಯೋಥೆರಪಿ ಕೊಟ್ಟು ಹೋಗುವಂತಹ ವ್ಯವಸ್ಥೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ದರ್ಶನ್‌ ಮತ್ತು ಸಹಚರರಿಗೆ ಶುಕ್ರವಾರವಷ್ಟೇ ಜಾಮೀನು ಮಂಜೂರಾಗಿತ್ತು.

click me!