ದೇವೇಗೌಡರ ಆಯ್ಕೆ ಕಾಂಗ್ರೆಸ್ಸೇ ಏಕೆ..?

First Published May 16, 2018, 11:19 AM IST
Highlights

ಬಿಜೆಪಿ ನಾಯಕರು ಮಾತುಕತೆ ಆರಂಭಿಸುವ ಮೊದಲೇ ಜೆಡಿಎಸ್ ವರಿಷ್ಠ ನಾಯಕ ಎಚ್ .ಡಿ. ದೇವೇಗೌಡರು ಕಾಂಗ್ರೆಸ್ ಪಕ್ಷದ ಮೈತ್ರಿ ಪ್ರಸ್ತಾಪವನ್ನು ತರಾತುರಿಯಲ್ಲಿ ಒಪ್ಪಿಕೊಳ್ಳುವ ಮೂಲಕ ಮತ್ತೊಂದು ಹಂತದ ರಾಜಕಾರಣಕ್ಕೆ ಮುಂದಡಿ ಇಟ್ಟಿದ್ದಾರೆ.

ಬೆಂಗಳೂರು : ಬಿಜೆಪಿ ನಾಯಕರು ಮಾತುಕತೆ ಆರಂಭಿಸುವ ಮೊದಲೇ ಜೆಡಿಎಸ್ ವರಿಷ್ಠ ನಾಯಕ ಎಚ್ .ಡಿ. ದೇವೇಗೌಡರು ಕಾಂಗ್ರೆಸ್ ಪಕ್ಷದ ಮೈತ್ರಿ ಪ್ರಸ್ತಾಪವನ್ನು ತರಾತುರಿಯಲ್ಲಿ ಒಪ್ಪಿಕೊಳ್ಳುವ ಮೂಲಕ ಮತ್ತೊಂದು ಹಂತದ ರಾಜಕಾರಣಕ್ಕೆ ಮುಂದಡಿ ಇಟ್ಟಿದ್ದಾರೆ.
ದೇವೇಗೌಡರು ಯಾವುದೇ ಒಂದು ನಿರ್ಧಾರ ಕೈಗೊಂಡರೂ ಅವರ ದೃಷ್ಟಿ ದೂರದಲ್ಲಿರುವ ಬೆಟ್ಟದ ಮೇಲೆ ನೆಟ್ಟಿರುತ್ತದೆ. ಅಷ್ಟು ಸುಲಭವಾಗಿ ಯಾವುದನ್ನೂ ಒಪ್ಪಿಕೊಳ್ಳುವವರು ಅಲ್ಲ. ಲಾಭ-ನಷ್ಟಗಳನ್ನು ಅಳೆದು ತೂಗಿಯೇ ನಿರ್ಧಾರ ಕೈಗೊಳ್ಳುತ್ತಾರೆ.

ನಾಳೆಯೇ ಬಿಎಸ್‌ವೈ ಪ್ರಮಾಣ ವಚನ

ಎರಡು ದಿನಗಳ ಹಿಂದಿನವರೆಗೂ ಕಾಂಗ್ರೆಸ್ ವಿರುದ್ಧ ಹರಿಹಾಯುತ್ತಿದ್ದ ಅವರು ದಿಢೀರನೆ ಆ ಪಕ್ಷದೊಂದಿಗೆ ಮೈತ್ರಿ ಸರ್ಕಾರಕ್ಕೆ ಮುಂದಾಗಿರುವುದಕ್ಕೆ ಕೆಳಕಂಡ ಕಾರಣಗಳು ಇವೆ: 

ಗೌಡರ ಲೆಕ್ಕಾಚಾರ ಬಿಜೆಪಿ ಜತೆ ಕೈಜೋಡಿಸಿದರೆ ಕೋಮುವಾದಿ ಪಟ್ಟ, ಜತೆಗೆ ಸಿಎಂ ಸ್ಥಾನವೂ ಸಿಗಲ್ಲ 100  ಗಡಿ ದಾಟಿರುವ ಬಿಜೆಪಿ ಏನೇ ಆಗಿದ್ದರೂ ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವ ಸ್ಥಿತಿಯಲ್ಲಿ ಇರಲಿಲ್ಲ ಎನ್ನುವುದು ಗೌಡರಿಗೆ ಚೆನ್ನಾಗಿ ಗೊತ್ತಿತ್ತು. ಹೀಗಾಗಿ ಆ ಅವಕಾಶ ನೀಡಿದ ಕಾಂಗ್ರೆಸ್ ಪಕ್ಷವನ್ನು ಒಪ್ಪಿಕೊಳ್ಳುವುದು ಸುಲಭದ ಆಮಿಷವಾಗಿತ್ತು.

ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಿದಲ್ಲಿ ರಾಷ್ಟ್ರಮಟ್ಟದಲ್ಲೂ ಕೋಮುವಾದಿ ಸ್ನೇಹಿ ಎಂಬ ಆರೋಪ ಎದುರಿಸ ಬೇಕಾಗುತ್ತಿತ್ತು. ಕಾಂಗ್ರೆಸ್ ಜತೆ ಸೇರುವುದರಿಂದ ಜಾತ್ಯತೀತ ಎಂಬುದನ್ನು ನಿರೂಪಿಸಿದಂತಾಗುತ್ತದೆ. 

ಗೆದ್ದ ಮಹಿಳಾ ಅಭ್ಯರ್ಥಿಗಳು

ಕಾಂಗ್ರೆಸ್ ಜತೆ ಸೇರಿ ಸರ್ಕಾರ ರಚಿಸುವುದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎಗೆ ಪರ್ಯಾಯವಾಗಿ ಶಕ್ತಿಯೊಂದನ್ನು ಹುಟ್ಟು ಹಾಕುವಲ್ಲಿ ತಾವು ಪ್ರಮುಖ ಪಾತ್ರ ವಹಿಸಬಹುದು ಎಂಬ ಎಣಿಕೆ. 

ರೆಸಾರ್ಟ್ ರಾಜಕಾರಣ ಶುರು

 ಪುತ್ರ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿಯೇ ಮುಖ್ಯಮಂತ್ರಿ ಯಾಗುವು ದರಿಂದ ಉತ್ತಮ ಆಡಳಿತ ನೀಡುವ  ಮೂಲಕ ಪಕ್ಷಕ್ಕೆ ಒಳ್ಳೆಯ ಇಮೇಜ್ ಸೃಷ್ಟಿಸಬಹುದು ಹಾಗೂ ಪಕ್ಷದ ಸಂಘಟನೆ ಬಲಗೊಳಿಸಬಹುದು.

ರಾಜ್ಯಪಾಲರ ನಿರ್ಧಾರವೇನು?

ಬಿಜೆಪಿ ಜತೆ ಸೇರುತ್ತಾರೆ ಎಂಬ ಆಪಾದನೆ ಯಿಂದಲೇ ಈ ಚುನಾವಣೆಯಲ್ಲಿ ಮೊದಲು ಜೆಡಿಎಸ್ ಜತೆಗೂ ಇದ್ದ ಅಲ್ಪಸಂಖ್ಯಾತರು ದೂರ ಸರಿದಿದ್ದರು. ಕೇವಲ ಒಕ್ಕಲಿಗ ಮತಗಳನ್ನಷ್ಟೇ ನೆಚ್ಚಿಕೊಂಡು ಚುನಾವಣೆ ಎದುರಿಸುವುದು ಕಷ್ಟ. ಹೀಗಾಗಿ, ಮುಂದಿನ ರಾಜಕಾರಣ ದೃಷ್ಟಿಯಿಂದ ಅಲ್ಪಸಂಖ್ಯಾತರೂ ಸೇರಿದಂತೆ ಇತರ ಸಣ್ಣ ಪುಟ್ಟ ಸಮುದಾಯಗಳ ವಿಶ್ವಾಸ ಗಳಿಸಬಹುದು ಎಂಬ ಲೆಕ್ಕಾಚಾರ.

ಶಾ ಪ್ರವೇಶ

ಜೆಡಿಎಸ್‌ಗೆ ಲಾಭ ತಂದ ಮಾಯವತಿ

2013ರ ಚುನಾವಣೆ ಪುನರಾವರ್ತನೆಯಾಗಲಿದೆಯೇ?

 

 

click me!