ಜೆಡಿಎಸ್ ಶಾಸಕರಿಗೆ ಬಿಜೆಪಿಯಿಂದ 100 ಕೋಟಿ ರೂ. ಆಮಿಷ

First Published May 16, 2018, 12:31 PM IST
Highlights

ಜೆಡಿಎಸ್ ಶಾಸಕಾಂಗ ಪಕ್ಷದ ಮುಖಂಡರಾಗಿ ಎಚ್.ಡಿ.ಕುಮಾರಸ್ವಾಮಿ ಆಯ್ಕೆಯಾಗಿದ್ದಾರೆ. ಈ ಸಭೆಯಲ್ಲಿ ಎಲ್ಲ ಜೆಡಿಎಸ್ ಶಾಸಕರೂ ಭಾಗಿಯಾಗಿದ್ದು, ನಂತರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ, ಮುಖ್ಯಮಂತ್ರಿಯಾಗಲು ಅವರಿಗೆ ಅವಕಾಶ ಮಾಡಿಕೊಡುತ್ತಿರುವ ಕಾಂಗ್ರೆಸ್ಸಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಬೆಂಗಳೂರು: ಜೆಡಿಎಸ್ ಶಾಸಕಾಂಗ ಪಕ್ಷದ ಮುಖಂಡರಾಗಿ ಎಚ್.ಡಿ.ಕುಮಾರಸ್ವಾಮಿ ಆಯ್ಕೆಯಾಗಿದ್ದಾರೆ.

'ನಾಡಿನ ಜನತೆ ನಿರ್ಧಾರ ಮಾಡುವುದು ಅನಿವಾರ್ಯವಾಗಿದ್ದು, ಅಷ್ಟೇನೂ ಸಂತೋಷ ನೀಡಿಲ್ಲ. ನಾಡಿನ ಅಭಿವೃದ್ಧಿಗೆ ಇನ್ನೂ ಒಳಿತನ್ನು ಮಾಡಬಹುದಿತ್ತು ಎನ್ನುವ ಅಭಿಪ್ರಾಯ ನಮ್ಮದು. ಜನರಿಗೆ ಪಕ್ಷದ ಮೇಲೆ ನಂಬಿಕೆ ಹೆಚ್ಚುವಂತೆ , ನಮ್ಮ ನಡೆ ಇರಬೇಕು. ಮುಂದಿನ ನಡವಳಿಕೆ ಅನುಮಾನ ಬರುವಂತೆ ಮಾಡಲಾಗುತ್ತಿದೆ,' ಎಂದು ಸಭೆಯ ನಂತ ಪತ್ರಿಕಾಗೋಷ್ಠಿಯಲ್ಲಿ ಕುಮಾರಸ್ವಾಮಿ ಹೇಳಿದ್ದಾರೆ.

ರಾಜ್ಯ ರಾಜಕೀಯ ರಂಗಕ್ಕೆ ಶಾ ಪ್ರವೇಶ

'ಬಿಜೆಪಿ 105 ಸ್ಥಾನಗಳನ್ನು ಗೆದ್ದಿದ್ದು, ಅದೂ ಜನರ ನೈಜ ಆಯ್ಕೆಯಲ್ಲ. ಆದರೆ, ಕೆಲವು ವರ್ಗದ ನಿರ್ಧಾರಗಳಿಂದ ಪಡೆದುಕೊಂಡ ಮತಗಳು. ರಾಜ್ಯದಲ್ಲಿ ಬಿಜೆಪಿ ಪಡೆದಿರುವ ಮತಕ್ಕೂ, ನರೇಂದ್ರ ಮೋದಿ ವರ್ಚಸ್ಸಿಗೂ ಯಾವುದೇ ಸಂಬಂಧವೂ ಇಲ್ಲ. ಬಿಜೆಪಿಯ ಶ್ರಮಕ್ಕೆ ನಿಜ ಹೇಳಬೇಕೆಂದರೆ 80 ಸೀಟುಗಳನ್ನೂ ದಾಟುತ್ತಿರಲಿಲ್ಲ. ಬೇರೆ ಬೇರಿ ಕಾರಣಗಳಿಂದ ಬಿಜೆಪಿಗೆ ಜನರು ಮತ ಹಾಕಿದ್ದಾರೆ,' ಎಂದು ಹೇಳಿದರು.

ಈ ಖಾತೆ ಸಚಿವರಿಗೆ ಸೋಲು ಕಟ್ಟಿಟ್ಟ ಬುತ್ತಿ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡಿದ ಕುಮಾರಸ್ವಾಮಿ, 'ಬೇರೆ ಪಕ್ಷಗಳು ಸರಕಾರ ರಚಿಸಲು ಅವಕಾಶ ನೀಡುವುದಿಲ್ಲವೆಂದು ಬಿಜೆಪಿ ಹೇಳುತ್ತಿದೆ. ಅಧಿಕಾರಿಯುತ ಸ್ಥಾನದಲ್ಲಿ ಕೂತು, ಇಂಥ ಅಹಂಕಾರದ ಮಾತುಗಳನ್ನು ಆಡುತ್ತಿದ್ದಾರೆಂಬುವುದು ಸ್ಪಷ್ಟ,' ಎಂದು ಆರೋಪಿಸಿದರು.

ವಿಫಲವಾಯಿತು ನೋಟಾ ಅಭಿಯಾನ

'ಕಾಂಗ್ರೆಸ್ ಜೆಡಿಎಸ್‌ಗೆ ಬೆಂಬಲಿಸಲು ಮುಂದಾಗಿರುವುದಕ್ಕೆ ನಾನು ಕೃತಜ್ಞ.  ಆದರೆ, ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದಂತೆ ಯಾವ ನಿರ್ಧಾರವನ್ನೂ ತ್ವರಿತವಾಗಿ ತೆಗೆದುಕೊಳ್ಳಲಿಲ್ಲ. ರಾಜ್ಯದ ಜನರು ನನಗೆ ಮುಖ್ಯಮಂತ್ರಿ ಆಗುವ ಅವಕಾಶ ನೀಡಿದ್ದಾರೆ. ಬಿಜೆಪಿ ಗೋವಾ, ಮೇಘಾಲಯ ಹಾಗೂ ಮಣಿಪುರದಲ್ಲಿ ಸರಕಾರ ರಚಿಸುವಂಥ ರೀತಿಯಲ್ಲಿ, ಇಲ್ಲಿಯೂ ಸರಕಾರ ರಚನೆಯಾಗಿದೆ,' ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಇವರೇ ನಮ್ಮ ನೂತನ ಶಾಸಕರು

'ಸರಕಾರ ರಚಿಸಲು ಬೆಂಬಲ ನೀಡುವಂತೆ ಜೆಡಿಎಸ್ ಶಾಸಕರಿಗೆ ಬಿಜೆಪಿ 100 ಕೋಟಿ ರೂ. ಆಮಿಷ ತೋರುತ್ತಿದ್ದು, ಅದೆಲ್ಲಿಂದ ಅಷ್ಟು ದುಡ್ಡು ಪಕ್ಷಕ್ಕೆ ಬರುತ್ತೆ,' ಎಂದು ಪ್ರಶ್ನಿಸಿದ್ದಾರೆ.

ವಿಧಾನ ಕದನ

ಡಿಎಸ್‌ ಎಲ್ಲ ಶಾಸಕರೂ ಸಭೆಯಲ್ಲಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗಿಯಾಗಿದ್ದರು.

click me!