NTPC Recruitment 2022: ವಿವಿಧ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ನೇಮಕಾತಿ

By Suvarna News  |  First Published Jun 6, 2022, 1:00 PM IST

ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್‌ ಲಿಮಿಟೆಡ್‌ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  ಜೂನ್.17 ಆಗಿದೆ.  


ಬೆಂಗಳೂರು (ಜೂ.6):  ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್‌ ಲಿಮಿಟೆಡ್‌ (National Thermal Power Corporation) ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ವಿವಿಧ ಕಾರ್ಯನಿರ್ವಾಹಕ ( Executive)  ಹುದ್ದೆಗಳು ಖಾಲಿ ಇದ್ದು  ಒಟ್ಟು 4 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  ಜೂನ್.17 ಆಗಿದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು NTPCಯ ಅಧಿಕೃತ ವೆಬ್‌ತಾಣ https://www.ntpc.co.in/ ಗೆ ಭೇಟಿ ನೀಡಲು ಅಧಿಸೂಚನೆಯಲ್ಲಿ ಕೋರಲಾಗಿದೆ. ಅರ್ಜಿ ಸಲ್ಲಿಸಬೇಕಾದ ವೆಬ್‌ತಾಣ https://careers.ntpc.co.in/ ಆಗಿದೆ.

ಒಟ್ಟು 4 ಹುದ್ದೆಗಳ ಮಾಹಿತಿ
ಕಾರ್ಯನಿರ್ವಾಹಕ (Corporate Communication): 2 ಹುದ್ದೆಗಳು
ಕಾರ್ಯನಿರ್ವಾಹಕ (Ash Management ) : 1 ಹುದ್ದೆ
ಕಾರ್ಯನಿರ್ವಾಹಕ (Operation & IT): 1 ಹುದ್ದೆ 

Tap to resize

Latest Videos

ಪಠ್ಯಪುಸ್ತಕ ಪರಿಷ್ಕರಣೆ ಮೂಲಕ ಶಿಕ್ಷಣವನ್ನೇ ಬುಡಮೇಲು ಮಾಡಲಾಗಿದೆಯೇ?

ಶೈಕ್ಷಣಿಕ ವಿದ್ಯಾರ್ಹತೆ: ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್‌ ಲಿಮಿಟೆಡ್‌ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು. ಮಾಡಿರಬೇಕು. ಜೊತೆಗೆ ಶೇ.60 ರಷ್ಟು ಅಂಕಗಳನ್ನು ಪಡೆದಿರಬೇಕು. ಸಂಬಂಧಿಸಿದ ಕ್ಷೇತ್ರದಲ್ಲಿ 5 ವರ್ಷಗಳ ಅನುಭವ ಹೊಂದಿರಬೇಕು.

ಕಾರ್ಯನಿರ್ವಾಹಕ (Corporate Communication): ಹುದ್ದೆಗೆ ಸಂವಹನ/ ಜಾಹೀರಾತು ಮತ್ತು ಸಂವಹನ ನಿರ್ವಹಣೆ/ ಸಾರ್ವಜನಿಕ ಸಂಪರ್ಕಗಳು/ ಸಮೂಹ ಸಂವಹನ/ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಅಥವಾ ಸ್ನಾತಕೋತ್ತರ ಡಿಪ್ಲೊಮಾ ಮಾಡಿರಬೇಕು.

ಕಾರ್ಯನಿರ್ವಾಹಕ (Ash Management ) : ಹುದ್ದೆಗೆ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್. / ಬಿ.ಇ.  ಎಂಬಿಎ ವಿದ್ಯಾರ್ಹತೆ ಮಾಡಿರಬೇಕು.

ಕಾರ್ಯನಿರ್ವಾಹಕ (Operation & IT): ಹುದ್ದೆಗೆ ಆಪರೇಷನ್ ಮತ್ತು IT ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಅಥವಾ ಕಂಪ್ಯೂಟರ್ ಸೈನ್ಸ್‌ನಲ್ಲಿ M.Sc./M.Tech ಮಾಡಿರಬೇಕು. 

TUMKUR UNIVERSITY RECRUITMENT 2022; ವಿವಿಧ ವಿಷಯಗಳ ಅತಿಥಿ ಉಪನ್ಯಾಸಕರ ಹುದ್ದೆಗೆ ನೇಮಕಾತಿ

ಅರ್ಜಿ ಶುಲ್ಕ: ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್‌ ಲಿಮಿಟೆಡ್‌ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಸಾಮಾನ್ಯ /EWs/OBC ಅಭ್ಯರ್ಥಿಗಳಿಗೆ ₹300 ಅರ್ಜಿ ಶುಲ್ಕ ಪಾವತಿಸಬೇಕು. ಮತ್ತು SC/ST, PWD ಅಭ್ಯರ್ಥಿಗಳು ಯಾವುದೇ ಶುಲ್ಕ ಪಾವತಿಸುವಂತಿಲ್ಲ.

Ministry of Defence Recruitment 2022 ; ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ವಯೋಮಿತಿ:  ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್‌ ಲಿಮಿಟೆಡ್‌ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರವಾಗಿ  ವಯೋಮಿತಿ  ನಿಗದಿಯಾಗಿದೆ.
ಕಾರ್ಯನಿರ್ವಾಹಕ (Corporate Communication): ಗರಿಷ್ಠ 45 ವರ್ಷ 
ಕಾರ್ಯನಿರ್ವಾಹಕ (Ash Management ) : ಗರಿಷ್ಠ 35 ವರ್ಷ 
ಕಾರ್ಯನಿರ್ವಾಹಕ (Operation & IT): ಗರಿಷ್ಠ 35 ವರ್ಷ 

IDBI Recruitment 2022; ಬರೋಬ್ಬರಿ 1,544 ಹುದ್ದೆಗಳ ಭರ್ತಿಗೆ ನೇಮಕಾತಿ

ವೇತನ ವಿವರ: ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್‌ ಲಿಮಿಟೆಡ್‌ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗೆ ಅನುಸಾರವಾಗಿ  ವೇತನ ದೊರೆಯಲಿದೆ.
ಕಾರ್ಯನಿರ್ವಾಹಕ (Corporate Communication): 1,50,000 ರೂ
ಕಾರ್ಯನಿರ್ವಾಹಕ (Ash Management ) :  90,000 ರೂ
ಕಾರ್ಯನಿರ್ವಾಹಕ (Operation & IT): 90,000 ರೂ

click me!