Asianet Suvarna News Asianet Suvarna News

ಪಠ್ಯಪುಸ್ತಕ ಪರಿಷ್ಕರಣೆ ಮೂಲಕ ಶಿಕ್ಷಣವನ್ನೇ ಬುಡಮೇಲು ಮಾಡಲಾಗಿದೆಯೇ?

ಶಾಲಾ ಪಠ್ಯಪುಸ್ತಕಗಳ ಪರಿಷ್ಕರಣೆಯು ಶಾಲಾ ಶಿಕ್ಷಣವನ್ನು ಅಭೂತಪೂರ್ವ ರೀತಿಯಲ್ಲಿ ರಾಜಕೀಯಗೊಳಿಸಿರುವುದು ಮಾತ್ರ ಈಗ ಬಹಿರಂಗ ಸತ್ಯ. ಜೊತೆಗೆ ರಾಜಕೀಯ ಪಕ್ಷಗಳು ಇದನ್ನೇ ತಮ್ಮ ಪ್ರಮುಖ ವಿಷಯವಾಗಿ ಇಟ್ಟುಕೊಂಡು ಕೆಸರೆರಚಾಟ ನಡೆಸುತ್ತಿದೆ.

Education subverted through Karnataka textbook revision gow
Author
Bengaluru, First Published Jun 6, 2022, 12:19 PM IST

ಬೆಂಗಳೂರು (ಜೂ.6): ರಾಜ್ಯ ಸರ್ಕಾರ ರಚಿಸಿದ್ದ  ರೋಹಿತ್ ಚಕ್ರತೀರ್ಥ (Rohith Chakrathirtha) ನೇತೃತ್ವದ ಪಠ್ಯಪರಿಷ್ಕೃತ ಸಮಿತಿಯ (textbook revision committee) ಮೇಲ್ವಿಚಾರಣೆಯಲ್ಲಿ ಶಾಲಾ ಪಠ್ಯಪುಸ್ತಕಗಳ ಪರಿಷ್ಕರಣೆಯು (textbook revision) ಶಾಲಾ ಶಿಕ್ಷಣವನ್ನು (Education) ಅಭೂತಪೂರ್ವ ರೀತಿಯಲ್ಲಿ ರಾಜಕೀಯಗೊಳಿಸಿರುವುದು ಮಾತ್ರ ಈಗ ಬಹಿರಂಗ ಸತ್ಯ.

ಪರಿಷ್ಕರಣೆಯು ಸೈದ್ಧಾಂತಿಕವಾಗಿ ನಡೆಸಲ್ಪಟ್ಟಿದೆ ಎಂದು ಪ್ರತಿಪಕ್ಷಗಳು ರಾಜ್ಯ ಸರ್ಕಾರವನ್ನು ದೂಷಿಸಿದರೆ,  "ಸರಿಪಡಿಸುವ ವಿಧಾನ" ಮನಸ್ಸಿನಲ್ಲಿ ಮಾಡಲಾಗಿದೆ ಎಂದಿದೆ. ಇದು ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದೆ. ಒಂದು ವಿಭಾಗವು ಸರ್ಕಾರದ ಬೆಂಬಲಕ್ಕೆ ಪರಿಷ್ಕರಣೆಯನ್ನು ಸಮರ್ಥಿಸಿದರೆ, ಹಲವಾರು ಪ್ರಗತಿಪರ ಚಿಂತಕರು, ಸಾಹಿತಿಗಳು ಮತ್ತು ಪ್ರಮುಖ ಮಠಾಧೀಶರು ಶಾಲಾ ಪಠ್ಯಪುಸ್ತಕಗಳನ್ನು ಪರಿಷ್ಕರಿಸುವ ನಿರ್ಧಾರವನ್ನು ವಿರೋಧಿಸುತ್ತಿದ್ದಾರೆ. 

ರಾಜ್ಯ ಪಠ್ಯಕ್ರಮದ 1 ರಿಂದ 10 ನೇ ತರಗತಿಯ ಕನ್ನಡ ಮತ್ತು ಸಮಾಜ ವಿಜ್ಞಾನ ವಿಷಯಗಳ ಒಟ್ಟು 534 ಅಧ್ಯಾಯಗಳ ಪೈಕಿ ಈಗ ವಿಸರ್ಜನೆಯಾಗಿ ಚಕ್ರತೀರ್ಥ ನೇತೃತ್ವದ ಸಮಿತಿಯು 83 ಅಧ್ಯಾಯಗಳನ್ನು ಪರಿಷ್ಕರಿಸಿತು, ಇದನ್ನು ರಾಜ್ಯ ಸರ್ಕಾರವು ನಂತರ ಅನುಮೋದಿಸಿತು. 

TUMKUR UNIVERSITY RECRUITMENT 2022; ವಿವಿಧ ವಿಷಯಗಳ ಅತಿಥಿ ಉಪನ್ಯಾಸಕರ ಹುದ್ದೆಗೆ ನೇಮಕಾತಿ

ವಿದಾದದ ಕಿಡಿ ಹೆಚ್ಚುತ್ತಿದ್ದಂತೆಯೇ ಜೂನ್ 3ರ ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಠ್ಯಪುಸ್ತಕಗಳ ಮರು ಪರಿಷ್ಕರಣೆಗೆ ಮುಕ್ತರಾಗಿದ್ದೇವೆ ಘೋಷಿಸಿದರು, ಸುಮಾರು 80 ಪ್ರತಿಶತದಷ್ಟು ಪುಸ್ತಕಗಳು ಮುದ್ರಿಸಲ್ಪಟ್ಟಿದೆ. ಮತ್ತು ಸುಮಾರು 66 ಶೇಕಡಾವನ್ನು ಕರ್ನಾಟಕದಾದ್ಯಂತ ಶಾಲೆಗಳಲ್ಲಿ ವಿತರಿಸಲಾಗಿದೆ.  ಈ ನಡುವೆ ಶಾಲಾ ಪಠ್ಯಪುಸ್ತಕಗಳನ್ನು - ವಿಶೇಷವಾಗಿ ಕನ್ನಡ ಮತ್ತು ಸಮಾಜ ವಿಜ್ಞಾನವನ್ನು ಪರಿಷ್ಕರಿಸುವ ಅಗತ್ಯತೆಯನ್ನು ಪ್ರಶ್ನಿಸಲಾಗುತ್ತಿದೆ.

9ನೇ ತರಗತಿಯ ಪಠ್ಯಪುಸ್ತಕದಲ್ಲಿ 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ  ಕುರಿತು ಪರಿಷ್ಕರಣೆ ಮಾಡಿರುವುದನ್ನು ಕೆಲವು ಮಠಾಧೀಶರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಮರು ಪರಿಷ್ಕರಣೆ ಮಾಡುವುದಾಗಿ ಘೋಷಿಸಿದ್ದಾರೆ. ಹೊಸಮಠದ ಚಿದಾನಂದ ಸ್ವಾಮೀಜಿ ಸೇರಿದಂತೆ ಈ ಭಾಗದ ಹಲವಾರು ಲಿಂಗಾಯತ ಮಠಗಳ ಮಠಾಧೀಶರು, ಶಿಕ್ಷಣ ಸಚಿವರು ಮತ್ತು ಬಸವಣ್ಣನವರ ಸಾಮಾಜಿಕ ಸುಧಾರಣೆಗಳನ್ನು ದೂಷಿಸಲು, ನಿಗದಿಪಡಿಸಿದ ಕಾರ್ಯಸೂಚಿಯನ್ನು ನಿರ್ವಹಿಸಲು ಸಮಿತಿಯನ್ನು ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ. 

Ministry of Defence Recruitment 2022 ; ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೂಡಲಸಂಗಮ ಪಂಚಮಸಾಲಿ ಪೀಠದ ಮಠಾಧೀಶ ಬಸವ ಜಯ ಮೃತ್ಯುಂಜಯ ಸ್ವಾಮಿ, ಬಸವಣ್ಣನವರನ್ನು ನಿಂದಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಲಿಂಗಾಯತ ನಾಯಕ ಬಸವರಾಜ ಬೊಮ್ಮಾಯಿ ಅಧಿಕಾರದ ಚುಕ್ಕಾಣಿ ಹಿಡಿದಾಗ ಬಸವಣ್ಣನವರಿಗೆ ಹೀಗಾಗುತ್ತದೆ ಎಂದು ನಾನು ಊಹಿಸಿರಲಿಲ್ಲ. ಇದು ಇಡೀ ಲಿಂಗಾಯತ ಸಮುದಾಯಕ್ಕೆ ದೊಡ್ಡ ನಿರಾಸೆ ತಂದಿದೆ ಎಂದಿದ್ದಾರೆ.

ಈ ಎಲ್ಲಾ ಪರ-ವಿರೋಧದ ಚರ್ಚೆಗಳ ಬಗ್ಗೆ ವಿವಾದದ ಬಗ್ಗೆ ಎಚ್ಚರದಿಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜೂ.3 ರಂದು ಸಂಜೆ ಪಠ್ಯಪುಸ್ತಕ ಪರಿಷ್ಕರಣೆ ಕುರಿತು ನಾಗೇಶ್ ಅವರಿಂದ ವರದಿ ಕೇಳಿದರು. ಮಠಾಧೀಶರು ಆಕ್ಷೇಪಿಸಿದ ಬಸವಣ್ಣನ ಕುರಿತ ವಿಷಯವನ್ನು ಮರುಪರಿಷ್ಕರಿಸಲು ಸರಕಾರ ಮುಕ್ತವಾಗಿದೆ ಎಂದು ಬೊಮ್ಮಾಯಿ ಹೇಳಿದರು.

ಈಗಾಗಲೇ ಬಹುಪಾಲು ಮುದ್ರಿಸಿ ವಿತರಿಸಲಾಗಿದೆ ಹೀಗಾಗಿ ಪಠ್ಯಪುಸ್ತಕಗಳ ಮುದ್ರಣವನ್ನು ಸ್ಥಗಿತಗೊಳಿಸುವ ಅಥವಾ ಮರುಮುದ್ರಣ ಮಾಡುವ ಅಗತ್ಯವಿಲ್ಲ ಎಂದು ಸಚಿವ ನಾಗೇಶ್ ಹೇಳಿದರು. ಬದಲಾಗಿ, ಶೈಕ್ಷಣಿಕ ವೇಳಾಪಟ್ಟಿಗಳಲ್ಲಿ ಯಾವುದೇ ವಿಳಂಬವಿಲ್ಲ ಎಂದು ಖಚಿತಪಡಿಸಿಕೊಳ್ಳಲು ಹೊಸದಾಗಿ ಪರಿಷ್ಕೃತ ಪಠ್ಯಪುಸ್ತಕಗಳೊಂದಿಗೆ ಮರು-ಪರಿಷ್ಕೃತ ಸ್ವರೂಪದ ಕಿರುಪುಸ್ತಕವನ್ನು ವಿತರಿಸಲಾಗುತ್ತದೆ ಎಂದಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ (Department of Public Education) ಪ್ರಕಾರ, ಕರ್ನಾಟಕವು ಪ್ರಾಥಮಿಕ ಮತ್ತು ಮಾಧ್ಯಮಿಕ ಹಂತದಲ್ಲಿ ಶಿಕ್ಷಣವನ್ನು ನೀಡುತ್ತಿರುವ ಒಟ್ಟು 78,424 ಶಾಲೆಗಳನ್ನು ಹೊಂದಿದೆ, ಅವುಗಳಲ್ಲಿ 22,419 ನಗರ ಪ್ರದೇಶಗಳಲ್ಲಿ ಮತ್ತು 56,005 ಗ್ರಾಮೀಣ ಪ್ರದೇಶಗಳಲ್ಲಿವೆ. ಕರ್ನಾಟಕದಲ್ಲಿ ಅಂದಾಜು 50 ಲಕ್ಷ ಶಾಲಾ ವಿದ್ಯಾರ್ಥಿಗಳಿದ್ದಾರೆ. ಪಠ್ಯಪುಸ್ತಕಗಳನ್ನು ಮರುಮುದ್ರಣ ಮಾಡುವುದು ಮತ್ತು ಅವುಗಳನ್ನು ಮರುಹಂಚಿಕೆ ಮಾಡುವುದು ಕಷ್ಟಸಾಧ್ಯ, ಇದರಿಂದ  ಶಾಲಾ ಶಿಕ್ಷಣವನ್ನು ಇನ್ನಷ್ಟು ವಿಳಂಬವಾಗುತ್ತದೆ. ಈಗಾಗಲೇ ಕೋವಿಡ್ ಸಾಂಕ್ರಾಮಿಕದ ಪರಿಣಾಮದಿಂದ ವಿದ್ಯಾರ್ತಿಗಳು ಬ್ಯಾಕ್-ಟು-ಬ್ಯಾಕ್ ಸಮಸ್ಯೆಗಳನ್ನು ಅನುಭವಿಸಿದ್ದಾರೆ.

ಪ್ರಗತಿಶೀಲ ಶಿಕ್ಷಣವನ್ನು ಪರಿಗಣಿಸಬೇಕು: 
ಪರಿಣತರು ಮತ್ತು ಪ್ರಗತಿಪರ ಚಿಂತಕರು ತಮ್ಮ ಕಡೆಯಿಂದ, ಪರಿಷ್ಕರಣೆ ನಿಜವಾಗಿಯೂ ಅಗತ್ಯವಿದ್ದರೆ, ಗಣಿತ ಮತ್ತು ವಿಜ್ಞಾನದಂತಹ ಪ್ರಮುಖ ವಿಷಯಗಳಿಗೆ ಮೊದಲು ಮಾಡಬೇಕಾಗಿತ್ತು, ಏಕೆಂದರೆ ಈ ವಿಷಯಗಳು ಪ್ರಗತಿಶೀಲತೆಯನ್ನಿ ಒದಗಿಸುತ್ತದೆ ಹೊರತು ಪ್ರತಿಗಾಮಿಯನ್ನಲ್ಲ ಇದೊಂದು ಕಲಿಕಾ ವಿಧಾನವನ್ನು ಒದಗಿಸುತ್ತವೆ. 

ಏತನ್ಮಧ್ಯೆ, ನಡೆಯುತ್ತಿರುವ ವಿವಾದದ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ, ಎಡಪಂಥೀಯ ಮತ್ತು ಬಲಪಂಥೀಯ ವರ್ಗಗಳ ನಡುವೆ ಸರಿ ತಪ್ಪುಗಳ ಲೆಕ್ಕಾಚಾರ ನಡೆಯುತ್ತಿದೆ. ಬಲಪಂಥೀಯ ವರ್ಗವು  ಸರ್ಕಾರವನ್ನು ಸ್ಪಷ್ಟವಾಗಿ ಸಮರ್ಥಿಸಿಕೊಂಡಿದೆ,  ಎಡಪಂಥೀಯ ವರ್ಗವು  ಪಠ್ಯಪುಸ್ತಕಗಳು ವಿದ್ಯಾರ್ಥಿಗಳಿಗೆ ಜೀವನ ಶಿಕ್ಷಣ ಮತ್ತು ಸತ್ಯವನ್ನು ಕಲಿಸಬೇಕು, ಹೊರತು ಸಿದ್ಧಾಂತಗಳನ್ನು ಅಲ್ಲ ಎಂದಿದೆ. 

Follow Us:
Download App:
  • android
  • ios