ಕೇಂದ್ರ ರಕ್ಷಣಾ ಇಲಾಖೆ 2022ನೇ ಸಾಲಿನ ನೇಮಕಾತಿ ಕುರಿತು ಅಧಿಸೂಚನೆ ಬಿಡುಗಡೆ ಮಾಡಿದೆ . ಅರ್ಜಿ ಸಲ್ಲಿಸಲು ಜೂನ್ 16 ಕೊನೆಯ ದಿನವಾಗಿದೆ.
ನವದೆಹಲಿ (ಜೂ.5): ಕೇಂದ್ರ ರಕ್ಷಣಾ ಇಲಾಖೆ 2022ನೇ ಸಾಲಿನ ನೇಮಕಾತಿ ಕುರಿತು ಅಧಿಸೂಚನೆ ಬಿಡುಗಡೆ ಮಾಡಿದೆ. ಇದರ ಅನ್ವಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಶೀಘ್ರವೇ ನೇಮಕಾತಿ ಮೂಲಕ ಭರ್ತಿಗೊಳಿಸಲಾಗುತ್ತದೆ. ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಸೂಕ್ತ ದಾಖಲೆಗಳ ಸಹಿತ ಪೂರ್ಣವಾಗಿ ಭರ್ತಿಗೊಳಿಸಿ ಬಳಿಕ ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಬೇಕಿದೆ. ಅರ್ಜಿ ಸಲ್ಲಿಸಲು ಜೂನ್ 16 ಕೊನೆಯ ದಿನವಾಗಿದೆ. 10ನೇ ತರಗತಿ, ಪಿಯುಸಿ, ಡಿಪ್ಲೊಮಾ ಅಥವಾ ಯಾವುದೇ ವಿಷಯದಲ್ಲಿ ತತ್ಸಮಾನ ಪದವಿ ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ವಿವರಗಳನ್ನು ಕೆಳಗಡೆ ನೀಡಲಾಗಿದೆ. ಹೆಚ್ಚಿನ ವಿಚಾರಗಳಿಗೆ https://www.mod.gov.in/ ಲಾಗ್‌ಇನ್ ಆಗಿ ವಿಚಾರಿಸಬಹುದಾಗಿದೆ.
ಹುದ್ದೆಗಳು ಈ ರೀತಿ ಇದೆ: Ministry of Defence (ರಕ್ಷಣಾ ಇಲಾಖೆ) ನೇಮಕಾತಿ ಕುರಿತು ಹೊರಡಿಸಿದ್ದ ಅಧಿಸೂಚನೆಯಲ್ಲಿ ಹುದ್ದೆಗಳ ವಿವರಗಗಳನ್ನು ವಿಸ್ತಾರವಾಗಿ ವಿವರಿಸಲಾಗಿದೆ. ಇಲಾಖೆಯಲ್ಲಿ ಮೆಟೀರಿಯಲ್ ಅಸಿಸ್ಟೆಂಟ್(03)ಹುದ್ದೆ, ಲೋವರ್ ಡಿವಿಷನ್ ಕ್ಲರ್ಕ್( 03), ಫೈಯರ್ ಮ್ಯಾನ್ (14), ಡ್ರಾಟ್ಸ್‌ಮನ್(01), ಎಂಟಿಎಸ್(ಗಾರ್ಡೆನರ್)(03),ಟ್ರೇಡ್ಸ್‌ಮೆನ್ ಮೇಟ್(150) ಸಹಿತ 180ಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
DRDO Recruitment 2022: ವಿವಿಧ scientist ಹುದ್ದೆಗಳಿಗೆ ನೇಮಕಾತಿ
ವಿದ್ಯಾರ್ಹತೆ ಏನು ಬೇಕು: ರಕ್ಷಣಾ ಇಲಾಖೆ ತಿಳಿಸಿದಂತೆ, ಎಸ್‌ಎಸ್‌ಎಲ್‌ಸಿ ಅಥವಾ ಪಿಯುಸಿ, ಡಿಗ್ರಿ, ಡಿಪ್ಲೊಮಾ ಪೂರ್ಣಗೊಳಿಸಿ ನಿರುದ್ಯೋಗಿಯಾಗಿರುವವರು ಮೊದಲು ಅರ್ಜಿ ಸಲ್ಲಿಸಬಹುದಾಗಿದೆ. ಮೆಟಿರೀಯಲ್ ಅಸಿಸ್ಟೆಂಟ್ ಹುದ್ದೆಗೆ ಡಿಪ್ಲೊಮಾ ಅಥವಾ ಪದವೀಧರರಾಗಿರಬೇಕು. ಲೋವರ್ ಡಿವಿಷನ್ ಕ್ಲರ್ಕ್ ಹುದ್ದೆಗೆ ಇಂಟರ್‌ಮೀಡಿಯಟ್, ಫೈಯರ್‌ಮ್ಯಾನ್ ಹುದ್ದೆಗೆ ಎಸ್‌ಎಸ್‌ಎಲ್‌ಸಿ, ಟ್ರೇಡ್‌್ಸಮನ್ ಮೇಟ್ ಹುದ್ದೆಗೆ ಎಸ್‌ಎಸ್‌ಎಲ್‌ಸಿ, ಡ್ರಾಟ್ಸ್‌ಮನ್ ಹುದ್ದೆಗೆ ಎಸ್‌ಎಸ್‌ಎಲ್‌ಸಿ ಅಥವಾ ಡಿಪ್ಲೊಮಾ ಪೂರ್ಣವಾಗಿರಬೇಕು ಎಂದು ನೇಮಕಾತಿ ವಿಭಾಗ ಅಧಿಸೂಚನೆಯಲ್ಲಿ ತಿಳಿಸಿದೆ.
ವಯಸ್ಸು ಹಾಗೂ ಕೊನೆ ದಿನ: ಕೇಂದ್ರ ರಕ್ಷಣಾ ಇಲಾಖೆ ಅಧಿಸೂಚನೆಯಲ್ಲಿ ವಯಸ್ಸು ಹಾಗೂ ಅರ್ಜಿ ಸಲ್ಲಿಕೆ ಕುರಿತು ತಿಳಿಸಿದ್ದು, ಅರ್ಜಿದಾರನು ಅರ್ಜಿ ಸಲ್ಲಿಕೆಯ ಕೊನೆ ದಿನಾಂಕದ ವೇಳೆಗೆ ಕನಿಷ್ಠ 18 ವರ್ಷ ಪೂರ್ಣವಾಗಿದ್ದು, ಗರಿಷ್ಠ ಎಂದರೆ 25 ವರ್ಷ ಮೀರಿರಬಾರದು. ಜೊತೆಗೆ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಜೂನ್16ರಂದು ಆಗಿದೆ ಎಂದು ಹೇಳಿದೆ.
IDBI Recruitment 2022; ಬರೋಬ್ಬರಿ 1,544 ಹುದ್ದೆಗಳ ಭರ್ತಿಗೆ ನೇಮಕಾತಿ
ಅಗತ್ಯ ದಾಖಲೆಗಳು ಏನು?: ನೇಮಕಾತಿ ವಿಭಾಗವು ಈಗಾಗಲೇ ಇದರ ಕುರಿತು ತಿಳಿಸಿದ್ದು, ಅಭ್ಯರ್ಥಿಯು ಅರ್ಜಿ ಸಲ್ಲಿಕೆ ವೇಳೆ ಅಗತ್ಯ ದಾಖಲೆಗಳನ್ನು ಸಿದ್ಧವಿರಿಸಿಕೊಳ್ಳುವಂತೆ ತಿಳಿಸಿದೆ. ಅಂತೆಯೆ, ಅರ್ಜಿ ಸಲ್ಲಿಕೆ ವೇಳೆ( ಆಯ್ಕೆ ಪ್ರಕ್ರಿಯೆ ವೇಳೆಯೂ ಬೇಕು) ಗುರುತಿನ ಚೀಟಿಗಳಾದ ಆಧಾರ್‌ಕಾರ್ಡ್, ವೋಟರ್‌ಐಡಿ ಸಹಿತ ಇತರೆ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಪಿಯುಸಿ, ಡಿಪ್ಲೊಮಾ ಅಥವಾ ತತ್ಸಮಾನ ಪದವಿಯ ಅಂಕಪಟ್ಟಿ, ದೈಹಿಕ ಕ್ಷಮತೆ ಪ್ರಮಾಣ ಪತ್ರ(ಲಭ್ಯ ಇದ್ದಲ್ಲಿ ಮಾತ್ರ.ಕಡ್ಡಾಯವಿಲ್ಲ) ಹಾಗೂ ಇತರೆ ಪ್ರಮುಖ ದಾಖಲೆಗಳಾದ ಇಡಬ್ಲ್ಯುಎಸ್, ಮೀಸಲಾತಿ ಪ್ರಮಾಣ ಪತ್ರ ಇತ್ಯಾದಿಗಳನ್ನು ಲಗತ್ತಿಸಬಹುದಾಗಿದೆ.
ಆಯ್ಕೆ ಪ್ರಕ್ರಿಯೆ ಹೀಗಿದೆ: ಆಯ್ಕೆ ಪ್ರಕ್ರಿಯೆ ಹಾಗೂ ಮಾನದಂಡಗಳನ್ನು ಅಧಿಸೂಚನೆಯಲ್ಲಿ ನೇಮಕಾತಿ ವಿಭಾಗವು ತಿಳಿಸಿದೆ. ಅದರಂತೆಯೆ, ಜನರಲ್ ಇಂಟಲಿಜೆನ್ಸ್ ಆ್ಯಂಡ್ ರೀಸನಿಂಗ್, ನ್ಯೂಮರಿಂಗ್ ಆಪ್ಟಿಟ್ಯೂಡ್, ಜನರಲ್ ಇಂಗ್ಲಿಷ್, ಜನರಲ್ ಅವಾರ್ನೆಸ್ ಕುರಿತು ಒಟ್ಟು 150 ಅಂಕಗಳಿಗೆ ಲಿಖಿತ ಪರೀಕ್ಷೆ ಆಯೋಜಿಸಲಾಗುತ್ತದೆ. ಇದು ಎರಡು ಗಂಟೆ ಅವಧಿಯ ಪರೀಕ್ಷೆಯಾಗಿದೆ. ಬಳಿಕ ದೈಹಿಕ ಪರೀಕ್ಷೆ ಹಾಗೂ ವೈಯಕ್ತಿ ಸಂದರ್ಶನ ಇರುತ್ತದೆ.
ವೇತನ ಶ್ರೇಣಿ ಹೀಗಿದೆ: ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ವೇತನ ಪ್ಯಾಕೇಜ್ ಇದ್ದು, ಇದರ ಕುರಿತು ನೇಮಕಾತಿನ ಅಧಿಸೂಚನೆಯಲ್ಲಿ ಈಗಾಗಲೇ ತಿಳಿಸಲಾಗಿದೆ. ಅದರ ಪ್ರಕಾರ, ಮೊದಲನೆಯದ್ದಾಗಿ ಮೆರಿಟೋರಿಯಲ್ ಅಸಿಸ್ಟೆಂಟ್ ಹುದ್ದೆಗೆ 29,00 ರು. ವೇತನ ನಿಗದಿಪಡಿಸಲಾಗಿದೆ. ಲೋವರ್ ಡಿವಿಷನ್ ಕ್ಲರ್ಕ್ ಹುದ್ದೆಗೆ 19,900 ರು., ಫೈಯರ್‌ಮ್ಯಾನ್ ಹುದ್ದೆಗೆ 19,900 ರು., ಟ್ರೇಡ್‌್ಸಮನ್ ಮೇಟ್ ಹುದ್ದೆಗೆ 18,000, ಎಂಟಿಎಸ್(ಗಾರ್ಡನರ್) 18,000 ರು., ಡ್ರಾಟ್ಸ್‌ಮನ್ ಹುದ್ದೆಗೆ 25,000 ರು. ನಿಗದಿಪಡಿಸಲಾಗಿದೆ.