
ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧೀನದಲ್ಲಿರುವ HLL ಲೈಫ್ಕೇರ್ ಲಿಮಿಟೆಡ್ನಲ್ಲಿ 55 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಸಂಸ್ಥೆಯ ಹೆಸರು: HLL ಲೈಫ್ಕೇರ್ ಲಿಮಿಟೆಡ್
ಒಟ್ಟು ಹುದ್ದೆಗಳು: 55
ಹುದ್ದೆಗಳ ಹೆಸರು: ಅಸೋಸಿಯೇಟ್ ಮ್ಯಾನೇಜರ್, ಜೂನಿಯರ್ ಮ್ಯಾನೇಜರ್ ಹಾಗೂ ಇತರ ಹುದ್ದೆಗಳು
ಉದ್ಯೋಗ ಸ್ಥಳ: ಅಖಿಲ ಭಾರತ
ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆ ಅಥವಾ ಸಂಬಂಧಿತ ಮಂಡಳಿಯಿಂದ ಪದವಿ, ಐಟಿಐ, ಡಿಪ್ಲೊಮಾ , ಫಾರ್ಮಸಿ ಸ್ನಾತಕೋತ್ತರ ಪದವಿ, M.Sc, MBA/PGDM ಅಥವಾ BMLT ಪೂರ್ಣಗೊಳಿಸಿರಬೇಕು.
ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯ ಗರಿಷ್ಠ ವಯಸ್ಸು 37 ರಿಂದ 47 ವರ್ಷಗಳು.
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕವಿಲ್ಲ
ಗುಣಮಟ್ಟ ಭರವಸೆ ಅಧಿಕಾರಿ: ಮೂಲ ವೇತನ 12,000–₹29,500.
ಜೂನಿಯರ್ ಮ್ಯಾನೇಜರ್ ಹುದ್ದೆಗಳು: ಮೂಲ ವೇತನ ₹20,000–₹40,000.
ಅಸೋಸಿಯೇಟ್ ಮ್ಯಾನೇಜರ್ ಹುದ್ದೆಗಳು: ಮೂಲ ವೇತನ ₹25,000–₹45,000.
ಕಾರ್ಯಾಚರಣೆ ವ್ಯವಸ್ಥಾಪಕ ಹುದ್ದೆಗಳು: ಮೂಲ ವೇತನ ₹30,000–₹50,000.
ಉಪ ಪ್ರಧಾನ ವ್ಯವಸ್ಥಾಪಕ (QA & QC): ಮೂಲ ವೇತನ ₹70,000–₹2,00,000.
ಲಭ್ಯವಿರುವ ನೇಮಕಾತಿ ಮಾಹಿತಿಯ ಪ್ರಕಾರ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
HLL ಲೈಫ್ಕೇರ್ನ ಅಧಿಕೃತ ವೆಬ್ಸೈಟ್ lifecarehll.com ಗೆ ಭೇಟಿ ನೀಡಿ.
ನಿಮಗೆ ಸೂಕ್ತವಾದ ಹುದ್ದೆ ಮತ್ತು ಅದರ ಅಧಿಸೂಚನೆಯನ್ನು ಆಯ್ಕೆಮಾಡಿ.
ಅಧಿಸೂಚನೆಯಲ್ಲಿ ನೀಡಿರುವ Google Form ಲಿಂಕ್ ತೆರೆಯಿರಿ.
ನಿಗದಿತ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ, ಸರಿಯಾದ ಮಾಹಿತಿಯೊಂದಿಗೆ ಭರ್ತಿ ಮಾಡಿ.
ಭರ್ತಿ ಮಾಡಿದ ಅರ್ಜಿಯನ್ನು PDF ಅಥವಾ Word ರೂಪದಲ್ಲಿ ಉಳಿಸಿ.
ಅಗತ್ಯವಿರುವ ವಿದ್ಯಾರ್ಹತೆ, ಅನುಭವ, CV ಮತ್ತು ಇತರ ದಾಖಲೆಗಳನ್ನು ಸೂಚನೆಯಂತೆ ಅಪ್ಲೋಡ್ ಮಾಡಿ.
ಅರ್ಜಿ ಸಲ್ಲಿಕೆ ಆರಂಭವಾದ ದಿನಾಂಕ: ಅಕ್ಟೋಬರ್ 07-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 21-2026