ನಾಳೆಯಿಂದ ಏಕೀಕೃತ ಪಿಂಚಣಿ ಯೋಜನೆ ಜಾರಿ; ಯಾರು ಅರ್ಹರು, ಎಷ್ಟು ಪಿಂಚಣಿ ಬರಲಿದೆ? ಇಲ್ಲಿದೆ ಲೆಕ್ಕಾಚಾರ!

Published : Mar 31, 2025, 12:06 PM ISTUpdated : Mar 31, 2025, 12:11 PM IST
ನಾಳೆಯಿಂದ ಏಕೀಕೃತ ಪಿಂಚಣಿ ಯೋಜನೆ ಜಾರಿ; ಯಾರು ಅರ್ಹರು, ಎಷ್ಟು ಪಿಂಚಣಿ ಬರಲಿದೆ? ಇಲ್ಲಿದೆ ಲೆಕ್ಕಾಚಾರ!

ಸಾರಾಂಶ

ಏಪ್ರಿಲ್ 1, 2025 ರಿಂದ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಜಾರಿಗೆ ಬರಲಿದೆ. ಕೇಂದ್ರ ನೌಕರರಿಗೆ ಇದು ಲಭ್ಯವಿದ್ದು, ರಾಜ್ಯ ಸರ್ಕಾರಗಳು ತಮ್ಮ ನೌಕರರಿಗೂ ವಿಸ್ತರಿಸಬಹುದು. 25 ವರ್ಷ ಸೇವೆ ಸಲ್ಲಿಸಿದವರಿಗೆ ಕೊನೆಯ 12 ತಿಂಗಳ ವೇತನದ ಸರಾಸರಿಯ 50% ಪಿಂಚಣಿ ಸಿಗುತ್ತದೆ. 10 ವರ್ಷ ಸೇವೆ ಸಲ್ಲಿಸಿದವರಿಗೆ ಕನಿಷ್ಠ 10,000 ರೂಪಾಯಿ ಪಿಂಚಣಿ ದೊರೆಯುತ್ತದೆ. ಯುಪಿಎಸ್ ಆಯ್ಕೆ ಅಂತಿಮವಾಗಿರುತ್ತದೆ.

ನವದೆಹಲಿ (ಮಾ.31): ನಮ್ಮ ದೇಶದಲ್ಲಿ ನಾಳೆ ಅಂದರೆ (ಏ.1 2025ರಿಂದ) ಏಕೀಕೃತ ಪಿಂಚಣಿ ಯೋಜನೆ (Unified Pension Scheme-UPS) ಜಾರಿಗೆ ಬರಲಿದೆ. ಇದನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಇದನ್ನು ಸೂಚಿಸಲು ಅಧಿಸೂಚನೆ ಹೊರಡಿಸಿದೆ.

ಹೊಸ ಯುಪಿಎಸ್ ಆಯ್ಕೆ ಮಾಡಿಕೊಳ್ಳಲು ಎಲ್ಲಾ ಕೇಂದ್ರ ನೌಕರರಿಗೆ ಏಪ್ರಿಲ್ 1 ರಿಂದ ಯೋಜನೆ ತೆರೆದಿರುತ್ತದೆ. ಈ ಯೋಜನೆಯನ್ನು ವಿಸ್ತರಿಸಿ ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ನೌಕರರನ್ನು ಸಹ ಇದರಲ್ಲಿ ಸೇರಿಸಿಕೊಳ್ಳಬಹುದು. ಇದಕ್ಕೆ ಆಯಾ ರಾಜ್ಯ ಸರ್ಕಾರಗಳ ತೀರ್ಮಾನಕ್ಕೆ ಬಿಡಲಾಗಿದೆ.

ಯುಪಿಎಸ್‌ ಉದ್ದೇಶವೇನು?
ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ನೌಕರರಿಗೆ ನಿರ್ದಿಷ್ಟ ಪಿಂಚಣಿ ಭದ್ರತೆಯನ್ನು ನೀಡುವುದು ಮೋದಿ ಸರ್ಕಾರ ಕಳೆದ ವರ್ಷ ಘೋಷಿಸಿದ ಯುಪಿಎಸ್‌ನ ಉದ್ದೇಶವಾಗಿದೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಅಡಿಯಲ್ಲಿ ಈ ಯೋಜನೆ ಮುಖ್ಯವಾಗಿ ಕೇಂದ್ರ ಸರ್ಕಾರಿ ನೌಕರರಿಗೆ ಆಗಿದೆ. ಸರ್ಕಾರಿ ನೌಕರಿಯಲ್ಲಿರುವ ಮತ್ತು ಈಗಾಗಲೇ ಎನ್‌ಪಿಎಸ್‌ನಲ್ಲಿ ನೋಂದಾಯಿಸಿಕೊಂಡಿರುವವರಿಗೆ ಯುಪಿಎಸ್ ಆಯ್ಕೆ ಮಾಡುವ ಅವಕಾಶ ಸಿಗಲಿದೆ ಎಂಬುದನ್ನು ನೆನಪಿಡಿ.

UPS ನಲ್ಲಿ 50% ಪಿಂಚಣಿ ಖಾತರಿ ಯಾರಿಗೆ?
ಯುಪಿಎಸ್ ಅಡಿಯಲ್ಲಿ, ಕನಿಷ್ಠ 25 ವರ್ಷಗಳ ಕಾಲ ಕೆಲಸ ಮಾಡಿದ ವ್ಯಕ್ತಿಗೆ ನಿವೃತ್ತಿಗೆ ಮುಂಚೆ ಕೊನೆಯ 12 ತಿಂಗಳ ಸರಾಸರಿ ಮೂಲ ವೇತನದ 50% ಗೆ ಸಮಾನವಾದ ಪಿಂಚಣಿ ಸಿಗುತ್ತದೆ. ಯಾರಾದರೂ 10 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ್ದರೆ, ಅವರಿಗೆ ತಿಂಗಳಿಗೆ ಕನಿಷ್ಠ 10,000 ರೂಪಾಯಿ ಪಿಂಚಣಿ ಸಿಗುತ್ತದೆ.

ಪಿಂಚಣಿ ಲೆಕ್ಕಾಚಾರದ ಸೂತ್ರವೇನು?
ಪಿಂಚಣಿ=50% (ಕಳೆದ 12 ತಿಂಗಳ ಮೂಲ ವೇತನದ ಒಟ್ಟು/12)
ಸೇವೆ 25 ವರ್ಷ ಅಥವಾ ಅದಕ್ಕಿಂತ ಹೆಚ್ಚಿದ್ದರೆ ಪೂರ್ಣ ಪಿಂಚಣಿ ಸಿಗುತ್ತದೆ.
ಸೇವೆ 25 ವರ್ಷಕ್ಕಿಂತ ಕಡಿಮೆಯಿದ್ದರೆ, ಪಿಂಚಣಿ ಅದೇ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.

ಇದನ್ನೂ ಓದಿ: ಏಕೀಕೃತ ಪಿಂಚಣಿ ಯೋಜನೆ ಲಾಭಾನಾ?ನಷ್ಟನಾ? ಆರ್ಥಿಕ ತಜ್ಞರು ಹೇಳೋದೇನು?

ಉದಾಹರಣೆ-
ನಿಮ್ಮ 25 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಸೇವೆಯಲ್ಲಿ ಸರಾಸರಿ ಮೂಲ ವೇತನ 1,00,000 ರೂಪಾಯಿ ಆಗಿದ್ದರೆ, ಪಿಂಚಣಿ ತಿಂಗಳಿಗೆ 50,000 ರೂಪಾಯಿ ಆಗುತ್ತದೆ.
ನಿಮ್ಮ 20 ವರ್ಷಗಳ ಸೇವೆಯಲ್ಲಿ ಸರಾಸರಿ ವೇತನ 1,00,000 ರೂಪಾಯಿ ಆಗಿದ್ದರೆ, ಪಿಂಚಣಿ ತಿಂಗಳಿಗೆ 40,000 ರೂಪಾಯಿ ಆಗುತ್ತದೆ.
ನಿಮ್ಮ ಮೂಲ ವೇತನ 15000 ರೂಪಾಯಿ ಆಗಿದ್ದರೆ, ಪಿಂಚಣಿ ತಿಂಗಳಿಗೆ 10,000 ರೂಪಾಯಿ ಆಗುತ್ತದೆ. ಮೊತ್ತವು ಸೂತ್ರಕ್ಕಿಂತ ಕಡಿಮೆಯಿದ್ದರೂ ಸಹ.

UPS ಗೆ ಯಾರು ಅರ್ಹರು?
1- ಏಪ್ರಿಲ್ 1, 2025 ರಂದು ಸೇವೆಯಲ್ಲಿರುವ ಮತ್ತು ಈಗಾಗಲೇ ಎನ್‌ಪಿಎಸ್ ಅಡಿಯಲ್ಲಿ ಬರುವ ಕೇಂದ್ರ ಸರ್ಕಾರಿ ನೌಕರರು.
2- ಇದರ ಜೊತೆಗೆ ಏಪ್ರಿಲ್ 1, 2025 ರಂದು ಅಥವಾ ನಂತರ ಕೇಂದ್ರ ಸರ್ಕಾರದ ಸೇವೆಯಲ್ಲಿ ಬರುವ ಹೊಸ ನೌಕರರು ಸಹ ಇದಕ್ಕೆ ಅರ್ಹರಾಗಿರುತ್ತಾರೆ, ಆದರೆ ಅವರು ಸೇರುವ 30 ದಿನಗಳ ಒಳಗೆ UPS ಅನ್ನು ಆಯ್ಕೆ ಮಾಡಬೇಕು.
3- ಎನ್‌ಪಿಎಸ್ ಅಡಿಯಲ್ಲಿ ಇದ್ದು 31 ಮಾರ್ಚ್ 2025 ರಂದು ಅಥವಾ ಅದಕ್ಕಿಂತ ಮೊದಲು ನಿವೃತ್ತರಾದ ನೌಕರರು
4- ಇದರ ಜೊತೆಗೆ ಎನ್‌ಪಿಎಸ್ ಅಡಿಯಲ್ಲಿ ನಿವೃತ್ತರಾದ ನೌಕರನು ಮರಣ ಹೊಂದಿದರೆ ಮತ್ತು ಅವರು ಯುಪಿಎಸ್ ಆಯ್ಕೆಯನ್ನು ಆರಿಸದಿದ್ದರೆ, ಕಾನೂನು ಪ್ರಕಾರ ಅವರ ಪತ್ನಿ ಅಥವಾ ಪತಿ ಈ ಯೋಜನೆಯಲ್ಲಿ ಸೇರಲು ಅರ್ಹರಾಗಿರುತ್ತಾರೆ.

ಇದನ್ನೂ ಓದಿ: ಎನ್‌ಪಿಎಸ್‌ ವಿರೋಧಕ್ಕೆ ಮಣಿದ ಮೋದಿ ಸರ್ಕಾರ: ಹೊಸ ಯೋಜನೆಯಲ್ಲಿ 50% ಪಿಂಚಣಿ ಖಚಿತ..!

ಒಮ್ಮೆ ಆಯ್ಕೆ ಮಾಡಿದ ನಂತರ ಬದಲಾಯಿಸಲು ಸಾಧ್ಯವಿಲ್ಲ:  UPS ಗೆ ಅರ್ಹರಾದ ಈಗಿನ ಮತ್ತು ಮಾಜಿ ನೌಕರರು ಏಪ್ರಿಲ್ 1, 2025 ರಿಂದ ಮೂರು ತಿಂಗಳ ಒಳಗೆ ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಒಮ್ಮೆ ಯುಪಿಎಸ್ ಆಯ್ಕೆ ಮಾಡಿದ ನಂತರ ಅದು ಅಂತಿಮವಾಗುತ್ತದೆ ಮತ್ತು ಅದರಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ.

PREV
Read more Articles on
click me!

Recommended Stories

ಮದುವೆ ಹತ್ತಿರ ಇರುವಾಗ್ಲೆ 25 ಲಕ್ಷ ಸ್ಯಾಲರಿ ಕೆಲ್ಸ ಬಿಟ್ಟು ಡೆಲಿವರಿ ಬಾಯ್ ಆದ, ಇಂಟರೆಸ್ಟಿಂಗ್ ಆಗಿದೆ ಕಾರಣ
ಮಂಗಳೂರು: 'ಡಿಕೆಶಿ ಮುಂದಿನ ಸಿಎಂ’ ಘೋಷಣೆ ಕೂಗಿದ ಐವನ್, ಮಿಥುನ್‌ಗೆ ನೋಟಿಸ್?