2016ರಲ್ಲಿ ಲೋಗೋ ಬದಲಾಯಿಸಿ 3 ಚಮತ್ಕಾರ ಮಾಡಿದ್ದ RCB

By Suvarna NewsFirst Published Mar 2, 2020, 6:45 PM IST
Highlights

ಹಲವು ಹೊಸತನಗಳಿಂದ 2020ರ ಐಪಿಎಲ್ ಟೂರ್ನಿಗೆ  ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಸಜ್ಜಾಗುತ್ತಿದೆ. 13ನೇ ಆವೃತ್ತಿಗೆ ಹೊಸ ಲೋಗೋ ಅನಾವರಣ ಮಾಡಿರುವ RCB, ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. 2016ರಲ್ಲೂ RCB ಲೋಗೋ ಬದಲಾವಣೆ ಮಾಡಿತ್ತು? ಈ ವೇಳೆ 3 ಇಂಟ್ರೆಸ್ಟಿಂಗ್ ವಿಚಾರ ನಡೆದಿತ್ತು. ಈ ಕುರಿತ ವಿವರ ಇಲ್ಲಿದೆ.

ಬೆಂಗಳೂರು(ಫೆ.02): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊಸ ರೂಪದಲ್ಲಿ ಕಣಕ್ಕಿಳಿಯುತ್ತಿದೆ. ತಂಡದ ಲೋಗೋ ಬದಲಾಗಿದೆ. ಕೆಲ ಆಟಗಾರರು ಬದಲಾಗಿದ್ದಾರೆ. ಕೋಚ್ ಬದಲಾಗಿದ್ದಾರೆ.  ತಂಡದ ರಣನೀತಿ ಬದಲಾಗಿದೆ. 2020ರ ಟೂರ್ನಿ ಹಲವು ಕಾರಣಗಳಿಂದ RCBಗೆ ವರವಾಗಲಿದೆ. ಇದಕ್ಕೆ ಇನ್ನೊಂದು ಕಾರಣವೂ ಇದೆ. 2016ರಲ್ಲೂ RCB ಲೋಗೋ ಬದಲಾಯಿಸಿ ಮೂರು ಚಮತ್ಕಾರವನ್ನೇ ಮಾಡಿತ್ತು.

ಇದನ್ನೂ ಓದಿ: RCB ಈಗ ಸಂಪೂರ್ಣ ಕನ್ನಡಮಯ; IPLನಲ್ಲಿ ಕೊಹ್ಲಿ ಸೈನ್ಯದ ಹೊಸ ಅಧ್ಯಾಯ!

RCB ಫೈನಲ್ ಪ್ರವೇಶ
2016ರಲ್ಲಿ ಲೋಗೋ ಬದಲಾಯಿಸಿ RCB ಕಣಕ್ಕಿಳಿದಿತ್ತು. ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ಬೆಂಗಳೂರು ತಂಡ ಫೈನಲ್ ಪ್ರವೇಶಿಸಿತ್ತು. ಫೈನಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಬಾದ್ ವಿರುದ್ಧ ಕೇವಲ 8 ರನ್‌ಗಳ ಸೋಲು ಅನುಭವಿಸಿತ್ತು. ಲೀಗ್ ಹಂತದಿಂದಲೇ ಹೊರಬೀಳುತ್ತಿದ್ದ RCB 2016ರಲ್ಲಿ ಲೋಗೋ ಬದಲಾವಣೆ ಬಳಿಕ ಫೈನಲ್‌‍ಗೆ ಲಗ್ಗೆ ಇಟ್ಟಿತ್ತು.

ಇದನ್ನೂ ಓದಿ:RCB ತಂಡದಿಂದ ಹೊರಬಂದ ಬೆನ್ನಲ್ಲೇ ಟ್ರೋಫಿ ಗೆದ್ದ 3 ಕ್ರಿಕೆಟರ್ಸ್!.

ಕೊಹ್ಲಿ ಬ್ಯಾಟಿಂಗ್ ದಾಖಲೆ
RCB ಲೋಗೋ ಬದಲಾಯಿಸಿದ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ ಅದ್ಭುತ ಪಾರ್ಮ್‌ಗೆ ಮರಳಿದರು. 2016ರಲ್ಲಿ 81.08 ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ ಕೊಹ್ಲಿ 16 ಪಂದ್ಯದಿಂದ 973 ರನ್ ಸಿಡಿಸಿದರು. ವಿಶೇಷ ಅಂದರೆ 4 ಶತಕಗಳನ್ನು ಸಿಡಿಸಿದ್ದರು. ಕೊಹ್ಲಿ ಸ್ಟ್ರೈಕ್ ರೇಟ್ 152.03.

ಇದನ್ನೂ ಓದಿ:RCB to CSK ಐಪಿಎಲ್ ಟೂರ್ನಿಯ 8 ತಂಡದ ಕಂಪ್ಲೀಟ್ ಡೀಟೇಲ್ಸ್!

ಒಂದೇ ಇನಿಂಗ್ಸ್‌ನಲ್ಲಿ ಕೊಹ್ಲಿ-ಎಬಿಡಿ ಸೆಂಚುರಿ
2016ರಲ್ಲಿ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಒಂದೇ ಇನಿಂಗ್ಸ್‌ನಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದರು. ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ RCB ಗುಜರಾತ್ ಲಯನ್ಸ್ ವಿರುದ್ದ ಹೋರಾಟ ನಡೆಸಿತ್ತು. ಕೊಹ್ಲಿ 55 ಎಸೆತದಲ್ಲಿ 109 ರನ್ ಸಿಡಿಸಿದರೆ, ಎಬಿ ಡಿವಿಲಿಯರ್ಸ್ 52 ಎಸೆತದಲ್ಲಿ 129 ರನ್ ಸಿಡಿಸಿದರು. ಈ ಪಂದ್ಯದಲ್ಲಿ ಅಬ್ಬರಿಸಿದ RCB 248 ರನ್ ಸಿಡಿಸಿತ್ತು. 

click me!