RCB ಈಗ ಸಂಪೂರ್ಣ ಕನ್ನಡಮಯ; IPLನಲ್ಲಿ ಕೊಹ್ಲಿ ಸೈನ್ಯದ ಹೊಸ ಅಧ್ಯಾಯ!

Suvarna News   | Asianet News
Published : Mar 01, 2020, 09:48 PM ISTUpdated : Mar 01, 2020, 09:55 PM IST
RCB ಈಗ ಸಂಪೂರ್ಣ ಕನ್ನಡಮಯ; IPLನಲ್ಲಿ ಕೊಹ್ಲಿ ಸೈನ್ಯದ ಹೊಸ ಅಧ್ಯಾಯ!

ಸಾರಾಂಶ

ಕಳೆದ 12 ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಕಪ್ ಗೆದ್ದಿಲ್ಲ ಅನ್ನೋ ಕೊರಗು ಮಾತ್ರವಲ್ಲ, ತಂಡದಲ್ಲಿ ಕನ್ನಡಿಗರಿಲ್ಲ, ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಕನ್ನಡ ಬಳಸುತ್ತಿಲ್ಲ ಅನ್ನೋ ಹಲವು ಟೀಕೆ ಎದುರಿಸಿದೆ. 13ನೇ ಆವೃತ್ತಿಗೆ ಹೊಸತನಕ್ಕೆ ನಾಂದಿ ಹಾಡಿರುವ RCB ಸಂಪೂರ್ಣ ಕನ್ನಡಮಯವಾಗಿದೆ. 

ಬೆಂಗಳೂರು(ಮಾ.01): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇತ್ತೀಚೆಗೆ ಹೊಸ ಲೋಗೋ ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಅಚ್ಚರಿ ನೀಡಿತ್ತು. ಇದೀಗ ಟೂರ್ನಿ ಆರಂಭಕ್ಕೆ ಕೆಲ ದಿನಗಳಿರುವಾಗಲೇ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ. RCB ತಂಡ ಈಗ ಕನ್ನಡಮಯವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಕನ್ನಡ ರಾರಾಜಿಸುತ್ತಿದೆ.

ಇದನ್ನೂ ಓದಿ: IPL 2020: ಇಲ್ಲಿದೆ RCB ತವರಿನ ಪಂದ್ಯದ ವೇಳಾಪಟ್ಟಿ!

ಈ ಹಿಂದಿನ ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಂದು ಬಾರಿಯೂ ಕನ್ನಡ ಬಳಸಿಲ್ಲ. ಇದೇ ಮೊದಲ ಬಾರಿಗೆ RCB ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಬಳಸಿದೆ. ಕನ್ನಡ ಸಿನಿಮಾದ ಜನಪ್ರಿಯ ಹಾಡುಗಳ ಸಾಲು ಬಳಸಿ ಐಪಿಎಲ್ ಟೂರ್ನಿಗೆ ಸಜ್ಜಾಗುತ್ತಿದೆ ಅನ್ನೋ ಸಂದೇಶ ರವಾನಿಸಿದೆ.

 

ಇದನ್ನೂ ಓದಿ: IPL ಫ್ಲ್ಯಾಶ್‌ಬ್ಯಾಕ್; 2008ರ ಹರಾಜಿನಲ್ಲಿ ಕೊಹ್ಲಿ ತಿರಸ್ಕರಿಸಿದ್ದ ಡೆಲ್ಲಿ!

13ನೇ ಆವೃತ್ತಿ ಐಪಿಎಲ್ ಟೂರ್ನಿ RCB ತಂಡಕ್ಕೆ ಮಹತ್ವದ್ದಾಗಿದೆ. ಇಷ್ಟೇ ಅಲ್ಲ ಹಲವು ಹೊಸತನಗಳಿಗೂ ಸಾಕ್ಷಿಯಾಗಿದೆ. ಇದೀಗ ಕನ್ನಡಲ್ಲಿನ ಟ್ವೀಟ್, ಹರಾಜಿನಲ್ಲಿ ಹೊಸ ಆಟಗಾರರ ಆಯ್ಕೆ, ಹೊಸ ಕೋಚ್ ಹಾಗೂ ನಿರ್ದೇಶಕರು ಸೇರಿದಂತೆ ಹಲವು ಹೊಸತನಗಳಿವೆ. ಕನ್ನಡ ಸಿನಿಮಾ ಹಾಡೂ, ಗಾದೆ ಮಾತು, ಕನ್ನಡ ಸಿನಿಮಾ ಡೈಲಾಗ್ RCB ತಂಡಕ್ಕೆ ಹೊಸದು. ಆದರೆ ಈ ಪ್ರಯೋಗ ಕನ್ನಡಿಗರಿಗೆ ಹೊಸದಲ್ಲ.

ಸುನಿಲ್ ಚೆಟ್ರಿ ನೇತೃತ್ವದ ಬೆಂಗಳೂರು FC ಫುಟ್ಬಾಲ್ ತಂಡ ಈ ಪ್ರಯೋಗಗಳನ್ನು ಹಲವು ವರ್ಷಗಳಿಂದ ಮಾಡುತ್ತಿದೆ. BFC ತನ್ನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಶಂಕರ್‌ನಾಗ್ ಸೇರಿದಂತೆ ಕನ್ನಡ ಚಿತ್ರ ರಂಗದ ನಟರ ಡೈಲಾಗ್, ಹಾಡು ಸೇರಿದಂತೆ ಹಲವು ಗಾದೆ ಮಾತುಗಳ ಮೂಲಕ ಟ್ವೀಟ್ ಮಾಡಿ ಮನೆಮಾತಾಗಿದೆ. ಇದೀಗ ವಿರಾಟ್ ಕೊಹ್ಲಿ ಸೈನ್ಯ  ಬೆಂಗಳೂರು   FC ಫುಟ್ಬಾಲ್ ತಂಡವನ್ನು ಅನುಸರಿಸಿದೆ.


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2026 ಐಪಿಎಲ್ ಹರಾಜಿನಿಂದ ಹಿಂದೆ ಸರಿದ ಮತ್ತಿಬ್ಬರು ಸ್ಟಾರ್ ಆಲ್ರೌಂಡರ್ಸ್!
IPL 2026 ಆಟಗಾರರ ಹರಾಜಿನ ಲಿಸ್ಟ್‌ ಫೈನಲ್: 2 ಕೋಟಿ ಮೂಲ ಬೆಲೆ ಹೊಂದಿರುವ ಆಟಗಾರ ಪಟ್ಟಿ ಔಟ್, ಕೇವಲ 2 ಭಾರತೀಯರಿಗೆ ಸ್ಥಾನ!