IPL 2020: ಚೆನ್ನೈ ಸೂಪರ್‌ ಕಿಂಗ್ಸ್‌ನಿಂದ ಧೋನಿಗೆ ಅದ್ಭುತ ಸ್ವಾಗತ, ವಿಡಿಯೋ ವೈರಲ್

Published : Mar 02, 2020, 04:59 PM ISTUpdated : Mar 02, 2020, 06:41 PM IST
IPL 2020: ಚೆನ್ನೈ ಸೂಪರ್‌ ಕಿಂಗ್ಸ್‌ನಿಂದ ಧೋನಿಗೆ ಅದ್ಭುತ ಸ್ವಾಗತ, ವಿಡಿಯೋ ವೈರಲ್

ಸಾರಾಂಶ

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಮುನ್ನ ಅಭ್ಯಾಸ ನಡೆಸಲು ಚೆನ್ನೆಗೆ ಆಗಮಿಸಿರುವ ಧೋನಿಗೆ ಅದ್ಭುತ ಸ್ವಾಗತ ಸಿಕ್ಕಿದೆ. ಧೋನಿ ವೆಲ್‌ಕಂ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..

ಚೆನ್ನೈ(ಮಾ.02): 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಸಜ್ಜಾಗುತ್ತಿರುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿಗಿಂದು(ಮಾರ್ಚ್ 02) ಚೆನ್ನೈ ಸೂಪರ್ ಕಿಂಗ್ಸ್ ತಂಡವು ಅದ್ಭುತ ಸ್ವಾಗತ ನೀಡಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಧೋನಿ ಆಗಮನವನ್ನು ಮೊದಲ ದಿನದ ಮೊದಲ ಶೋನ ಅನುಭವ ಎಂದು ಟ್ವೀಟ್ ಮಾಡಿದೆ. 

ಹೀಗಿದೆ ನೋಡಿ ಆ ವಿಡಿಯೋ:

ಚೆನ್ನೈ ಸೂಪರ್ ಕಿಂಗ್ಸ್ ಟ್ರೈನಿಂಗ್ ಕ್ಯಾಂಪ್ ಮಾರ್ಚ್ 19ರಿಂದ ಆರಂಭವಾಗಲಿದ್ದು, ಧೋನಿ ಮಾರ್ಚ್ 3ರಿಂದಲೇ ಕ್ರಿಕೆಟ್ ಅಭ್ಯಾಸ ಆರಂಭಿಸಲಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಶಿ ವಿಶ್ವನಾಥನ್ ಕಳೆದ ವಾರವಷ್ಟೇ ತಿಳಿಸಿದ್ದರು. 2020ರ ಐಪಿಎಲ್ ಟೂರ್ನಿಯು ಮಾರ್ಚ್ 29ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರು ಚೆನ್ನೈ ಸೂಪರ್ ಕಿಂಗ್ಸ್ ಸೆಣಸಲಿದೆ. 

RCB ಈಗ ಸಂಪೂರ್ಣ ಕನ್ನಡಮಯ; IPLನಲ್ಲಿ ಕೊಹ್ಲಿ ಸೈನ್ಯದ ಹೊಸ ಅಧ್ಯಾಯ!

2019ರ ಐಸಿಸಿ ಏಕದಿನ ವಿಶ್ವಕಪ್ ಬಳಿಕ ಧೋನಿ ಸ್ಫರ್ಧಾತ್ಮಕ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದಾರೆ. ಇನ್ನು ಇತ್ತೀಚೆಗಷ್ಟೇ ಬಿಸಿಸಿಐ ಕೇಂದ್ರೀಯ ಗುತ್ತಿಗೆಯಿಂದಲೂ ಹೊರಬಿದ್ದಿದ್ದರು. ಧೋನಿ ಐಪಿಎಲ್‌ನಲ್ಲಿ ನೀಡುವ ಪ್ರದರ್ಶನ ಅಂತಾರಾಷ್ಟ್ರೀಯ ಕಮ್‌ಬ್ಯಾಕ್ ತೀರ್ಮಾನಿಸಲಿದೆ ಎಂದು ಕೆಲ ತಿಂಗಳ ಹಿಂದೆ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಹೇಳಿದ್ದರು. 

#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್:

"

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

CSKನೂ ಅಲ್ಲ, KKR ಕೂಡಾ ಅಲ್ಲ ಎರಡೂ ತಂಡ ಬಿಟ್ಟು ಹಾರ್ದಿಕ್ ಪಾಂಡ್ಯ ಈ ತಂಡ ಸೇರಬಹುದು! ಅಚ್ಚರಿ ಭವಿಷ್ಯ ನುಡಿದ ರವಿಚಂದ್ರನ್ ಅಶ್ವಿನ್
ಆ ಒಂದು ಶತಕ ನನ್ನ ವೃತ್ತಿಜೀವನವನ್ನೇ ರೂಪಿಸಿತು; ಆರ್‌ಸಿಬಿ ವಿರುದ್ಧದ ಆಟ ನೆನೆದ 'ಕಿಲ್ಲರ್' ಮಿಲ್ಲರ್