IPL 2020 ದೊಡ್ಡ ಲಾಭದ ನಿರೀಕ್ಷೆಯಲ್ಲಿ ಶೇನ್‌ ವಾರ್ನ್‌!

By Suvarna News  |  First Published Dec 9, 2019, 11:09 AM IST

ಆಸ್ಟ್ರೇಲಿಯಾ ಸ್ಪಿನ್ ದಿಗ್ಗಜ ಐಪಿಎಲ್‌ನಿಂದ ಅತಿದೊಡ್ಡ ಲಾಭದ ನಿರೀಕ್ಷೆಯಲ್ಲಿದ್ದಾರೆ. ರಾಜಸ್ಥಾನ ರಾಯಲ್ಸ್ ಪರ ಶೇ.3% ಷೇರು ಹೊಂದಿರುವ ವಾರ್ನ್ ದುಪ್ಪಟ್ಟು ಲಾಭದ ಲೆಕ್ಕಾಚಾರದಲ್ಲಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..


ಮೆಲ್ಬರ್ನ್‌(ಡಿ.09): ಐಪಿ​ಎಲ್‌ನ ರಾಜ​ಸ್ಥಾನ ರಾಯಲ್ಸ್‌ ತಂಡ​ದಲ್ಲಿ ಸಣ್ಣ ಪಾಲು​ ಹೊಂದಿ​ರುವ ಸ್ಪಿನ್‌ ದಿಗ್ಗಜ ಶೇನ್‌ ವಾರ್ನ್‌ ದೊಡ್ಡ ಲಾಭದ ನಿರೀಕ್ಷೆಯಲ್ಲಿ​ದ್ದಾರೆ. 

2008ರಲ್ಲಿ ನಿವೃ​ತ್ತಿ​ಯಿಂದ ಹೊರ​ಬಂದು ರಾಜ​ಸ್ಥಾನ ತಂಡ​ವನ್ನು ಮುನ್ನ​ಡೆ​ಸಿದ್ದ ವಾರ್ನ್‌ಗೆ 4.68 ಕೋಟಿ ರುಪಾಯಿ ಸಂಭಾ​ವನೆ ಹಾಗೂ ವರ್ಷಕ್ಕೆ 0.75ರಷ್ಟು ಪಾಲು​ ನೀಡಲು ಮಾಲಿ​ಕರು ಒಪ್ಪಿ​ದ್ದರು. 4 ವರ್ಷಗಳ ಕಾಲ ತಂಡ​ದ​ಲ್ಲಿದ್ದ ವಾರ್ನ್‌ ಬಳಿ ಶೇ.3ರಷ್ಟು ಷೇರುಗಳಿವೆ. 

Latest Videos

IPL 2020; ಕೆಎಲ್ ರಾಹುಲ್‌ಗೆ ನಾಯಕತ್ವ ನೀಡಲು ಮುಂದಾದ KXIP !

ಸದ್ಯ ರಾಜ​ಸ್ಥಾನ ರಾಯಲ್ಸ್‌ ಫ್ರಾಂಚೈ​ಸಿಯ ಮೌಲ್ಯ 200 ಮಿಲಿ​ಯನ್‌ ಡಾಲರ್‌ (1425 ಕೋಟಿ​ ರುಪಾಯಿ). ಮುಂದಿನ ಕೆಲ ವರ್ಷಗ​ಳಲ್ಲಿ ಈ ಮೊತ್ತ ದುಪ್ಪ​ಟ್ಟಾ​ಗುವ ನಿರೀಕ್ಷೆ ಇದೆ. ಅಂದರೆ 400 ಮಿಲಿ​ಯನ್‌ ಡಾಲರ್‌ (ಅಂದಾಜು 2851 ಕೋಟಿ ರುಪಾಯಿ)ನಲ್ಲಿ ಶೇ.3ರಷ್ಟು ಪಾಲನ್ನು ವಾರ್ನ್‌ ಮಾರಾಟ ಮಾಡಿ​ದರೆ 85.55 ಕೋಟಿ ರುಪಾಯಿಯಷ್ಟು ಹಣ ಸಿಗ​ಲಿದೆ.

ರಾಜಸ್ಥಾನ ರಾಯಲ್ಸ್ ತಂಡವು ಐಪಿಎಲ್ ಚೊಚ್ಚಲ ಆವೃತ್ತಿಯಲ್ಲಿ ಚಾಂಪಿಯನ್ ಆಗಿತ್ತು. ಆಗ ಶೇನ್ ವಾರ್ನ್ ತಂಡವನ್ನು ಮುನ್ನಡೆಸಿದ್ದರು. ಆ ಬಳಿಕ ಆವೃತ್ತಿಯಲ್ಲಿ ರಾಜಸ್ಥಾನ ಉತ್ತಮ ಪೈಪೋಟಿ ನೀಡುತ್ತಿದ್ದರೂ ತಂಡ ಮತ್ತೊಮ್ಮೆ ಕಪ್ ಎತ್ತಿಹಿಡಿಯಲು ಸಫಲವಾಗಿಲ್ಲ.
 

click me!