2020ರ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ. ಹೀಗಿರುವಾಗಲೇ ಗರಿಷ್ಠ ಮೂಲಬೆಲೆ ಹೊಂದಿದ ಆಟಗಾರರ ಪಟ್ಟಿ ಪ್ರಕಟಗೊಂಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನವದೆಹಲಿ(ಡಿ.04): 2020ರ ಐಪಿಎಲ್ ಆಟಗಾರರ ಹರಾಜಿಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಎಲ್ಲಾ 8 ತಂಡಗಳು ಈಗಾಗಲೇ ತಾವು ಖರೀದಿಸಲು ಇಚ್ಛಿಸುವ ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳುತ್ತಿವೆ. 7 ಆಟಗಾರರ ಮೂಲ ಬೆಲೆ 2 ಕೋಟಿ ನಿಗದಿಯಾಗಿದೆ.
IPL ಹರಾಜಿನಿಂದ ಹಿಂದೆ ಸರಿದ RCB ಮಾಜಿ ವೇಗಿ!
ಹೌದು, ಇದೇ ತಿಂಗಳ 19ರಂದು ಕೋಲ್ಕತಾದಲ್ಲಿ ನಡೆಯಲಿರುವ ಆಟಗಾರರು ಹರಾಜು ಪ್ರಕ್ರಿಯೆಗೆ ದಿನಗಣನೆ ಆರಂಭವಾಗಿದೆ. ಇದುವರೆಗೂ ಕಪ್ ಗೆಲ್ಲಲು ವಿಫಲವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್, ಕಿಂಗ್ಸ್ ಇಲೆವನ್ ಪಂಜಾಬ್ ಸೇರಿದಂತೆ ಎಲ್ಲಾ ತಂಡಗಳು ತಮಗೆ ಬೇಕಾದ ಆಟಗಾರರನ್ನು ಖರೀದಿಸಲು ತುದಿಗಾಲಿನಲ್ಲಿ ನಿಂತಿವೆ.
IPL ಹರಾಜು: 73 ಸ್ಥಾನಕ್ಕೆ 971 ಕ್ರಿಕೆಟಿಗರ ಸ್ಪರ್ಧೆ!
ಲಿನ್, ಸ್ಟೇನ್ ದುಬಾರಿ: ಮಂಗಳವಾರ ಗರಿಷ್ಠ ಮೂಲೆಬೆಲೆ ಹೊಂದಿರುವ ಆಟಗಾರರ ಪಟ್ಟಿ ಪ್ರಕಟಗೊಂಡಿತು. 7 ಆಟಗಾರರು 2 ಕೋಟಿ ರುಪಾಯಿ ಮೂಲಬೆಲೆ ಹೊಂದಿದ್ದು, ಇದರಲ್ಲಿ ಐವರು ಆಸ್ಪ್ರೇಲಿಯನ್ನರಿದ್ದಾರೆ. ಇದರಲ್ಲಿ ಕ್ರಿಸ್ ಲಿನ್, ಪ್ಯಾಟ್ ಕಮಿನ್ಸ್, ದ.ಆಫ್ರಿಕಾದ ಡೇಲ್ ಸ್ಟೇನ್, ಶ್ರೀಲಂಕಾದ ಏಂಜೆಲೋ ಮ್ಯಾಥ್ಯೂಸ್ ಇದ್ದಾರೆ. ಇದೇ ವೇಳೆ 9 ಆಟಗಾರರು ತಮ್ಮ ಮೂಲಬೆಲೆಯನ್ನು 1.5 ಕೋಟಿಗೆ ನಿಗದಿ ಮಾಡಿಕೊಂಡಿದ್ದು, ಈ ಪಟ್ಟಿಯಲ್ಲಿರುವ ಭಾರತದ ಏಕೈಕ ಆಟಗಾರ ರಾಬಿನ್ ಉತ್ತಪ್ಪ.
ಆಟಗಾರರ ಹರಾಜಿನಲ್ಲಿ 8 ತಂಡಗಳು ಸೇರಿ ಒಟ್ಟು 73 ಆಟಗಾರರನ್ನು ಖರೀದಿಸಬಹುದಾಗಿದೆ. ಸೋಮವಾರ ಬಿಸಿಸಿಐ, ಎಲ್ಲಾ ಫ್ರಾಂಚೈಸಿಗಳಿಗೂ ಹರಾಜಿನಲ್ಲಿ ಪಾಲ್ಗೊಳ್ಳಲು ಇಚ್ಛಿಸಿರುವ ಆಟಗಾರರ ಪಟ್ಟಿಯನ್ನು ಕಳುಹಿಸಿದ್ದು, ತಾವು ಖರೀದಿಸಲು ಆಸಕ್ತಿ ಹೊಂದಿರುವ ಆಟಗಾರರ ಅಂತಿಮ ಪಟ್ಟಿಯನ್ನು ನೀಡಲು ಸೂಚಿಸಿದೆ. 900ಕ್ಕೂ ಹೆಚ್ಚು ಆಟಗಾರರು ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳಲು ಹೆಸರು ನೋಂದಾಯಿಸಿಕೊಂಡಿದ್ದಾರೆ.
ಐಪಿಎಲ್ 2020: ಗರಿಷ್ಠ ಮೂಲಬೆಲೆ
2 ಕೋಟಿ ರುಪಾಯಿ
ಪ್ಯಾಟ್ ಕಮಿನ್ಸ್
ಜೋಶ್ ಹೇಜಲ್‌ವುಡ್
ಕ್ರಿಸ್ ಲಿನ್
ಮಿಚೆಲ್ ಮಾರ್ಷ್
ಗ್ಲೆನ್ ಮ್ಯಾಕ್ಸ್‌ವೆಲ್
ಡೇಲ್ ಸ್ಟೇನ್
ಏಂಜೆಲೋ ಮ್ಯಾಥ್ಯೂಸ್
1.5 ಕೋಟಿ ರುಪಾಯಿ
ರಾಬಿನ್ ಉತ್ತಪ್ಪ
ಶಾನ್ ಮಾರ್ಷ್
ಕೇನ್ ರಿಚರ್ಡ್ಸನ್
ಇಯಾನ್ ಮಾರ್ಗನ್
ಜೇಸನ್ ರಾಯ್
ಕ್ರಿಸ್ ವೋಕ್ಸ್
ಡೇವಿಡ್ ವಿಲ್ಲಿ
ಕ್ರಿಸ್ ಮೋರಿಸ್
ಕೈಲ್ ಅಬೋಟ್