RCB ಪಾಲಾಗಲಿದೆ 13ನೇ ಆವೃತ್ತಿ ಐಪಿಎಲ್ ಟ್ರೋಫಿ: ದಿಗ್ಗಜ ಹೇಳಿದ ಭವಿಷ್ಯ ಎಂದು ಸುಳ್ಳಾಗಿಲ್ಲ!

Published : Oct 01, 2020, 04:06 PM IST
RCB ಪಾಲಾಗಲಿದೆ 13ನೇ ಆವೃತ್ತಿ ಐಪಿಎಲ್ ಟ್ರೋಫಿ: ದಿಗ್ಗಜ ಹೇಳಿದ ಭವಿಷ್ಯ ಎಂದು ಸುಳ್ಳಾಗಿಲ್ಲ!

ಸಾರಾಂಶ

13ನೇ ಆವೃತ್ತಿ ಐಪಿಎಲ್ ಟ್ರೋಫಿ ಗೆಲ್ಲುವ ನೆಚ್ಚಿನ ತಂಡ, ಪ್ಲೇ ಆಫ್  ಸ್ಥಾನಕ್ಕೇರುವ ನೆಚ್ಚಿನ 4 ತಂಡಗಳು ಯಾವುದು ಎಂದು ಹಲವು ಕ್ರಿಕೆಟಿಗರು ಭವಿಷ್ಯ ನುಡಿದಿದ್ದಾರೆ. ಆದರೆ ಹೆಚ್ಚಿನವರು ಆರ್‌ಸಿಬಿ ಹೆಸರು ಹೇಳಿಲ್ಲ. ಇದೀಗ ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಕೊರಗು ನೀಗಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಮುಂಬೈ(ಅ.01): ಐಪಿಎಲ್ ಟೂರ್ನಿ, ವಿಶ್ವಕಪ್ ಸೇರಿದಂತೆ ಹಲವು ಟೂರ್ನಿ ಆರಂಭಕ್ಕೂ ಮುನ್ನವೇ ಹಲವು ಕ್ರಿಕೆಟಿಗರು ಭವಿಷ್ಯ ನುಡಿಯುತ್ತಾರೆ. ಆದರೆ ಟೀಂ ಇಂಡಿಯಾ ಮಾಜಿ ಆಯ್ಕೆ ಸಮಿತಿ ಮುಖ್ಯಸ್ಥ ದೀಲಿಪ್ ವೆಂಗಸರ್ಕರ್ ಹೆಚ್ಚಾಗಿ ಭವಿಷ್ಯ ನುಡಿದವರಲ್ಲ. ಕ್ರಿಕೆಟಿಗನ ಪ್ರತಿಭೆಯನ್ನು ಗಮನಿಸಿ, ಮುಂದಿನ ದಿನದಲ್ಲಿ ಈ ಹುಡುಗ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗನಾಗುತ್ತಾನೆ ಎಂದಿದ್ದಾರೆ. ಇಷ್ಟೇ ಅಲ್ಲ ಅದು ನಿಜವಾಗಿದೆ. ಇದೀಗ ದೀಲಿಪ್ ವೆಂಗಸರ್ಕರ್, 13ನೇ ಆವೃತ್ತಿ ಐಪಿಎಲ್ ಟ್ರೋಫಿ RCB ಪಾಲಾಗಲಿದೆ ಎಂದಿದ್ದಾರೆ.

ರೋಚಕ ಗೆಲುವಿನ ಬಳಿಕ RCBಗೆ ಲಾಂಗ್ ಲೀವ್, ಖುಷಿಯಲ್ಲಿ ಮಜಾ ಉಡಾಯಿಸ್ತಿದೆ ಕೊಹ್ಲಿ ಪಡೆ!

12 ಆವೃತ್ತಿಗಳಲ್ಲಿ ಟ್ರೋಫಿ ಕೈಚೆಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಟ್ರೋಫಿ ಗೆಲ್ಲಲಿದೆ ಎಂದಿದ್ದಾರೆ. ಇದಕ್ಕೆ ಕಾರಣವನ್ನೂ ನೀಡಿದ್ದಾರೆ. RCB ತಂಡದ ಪ್ರಮುಖ ಪಿಲ್ಲರ್‌ಗಳಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಫಾರ್ಮ್‌ನಲ್ಲಿದ್ದಾರೆ. ಕೊಹ್ಲಿ ಅಬ್ಬರಿಸಿದಿದ್ದರೂ ಟಚ್‌ನಲ್ಲಿದ್ದಾರೆ. ಇತ್ತ ಯಜುವೇಂದ್ರ ಚಹಾಲ್ ಸ್ಪಿನ್ ಮೋಡಿ ಮಾಡಿದ್ದಾರೆ. ಇಷ್ಟೇ ಅಲ್ಲ ನವದೀಪ್ ಸೈನಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇದು RCB ಟ್ರೋಫಿ ಗೆಲುವಿಗೆ ಸಹಕಾರಿಯಾಗಿದೆ ಎಂದು ವೆಂಗಸರ್ಕರ್ ಹೇಳಿದ್ದಾರೆ.

ಸೂಪರ್ ಓವರ್ ಮ್ಯಾಜಿಕ್; ಕೊನೆಗೂ ಗೆದ್ದು ಬೀಗಿದ ಆರ್‌ಸಿಬಿ...

20 ಮಾದರಿಯಲ್ಲಿ ಯಾರು ಗೆಲುವು ಸಾಧಿಸುತ್ತಾರೆ ಎಂದು ಹೇಳುವುದು ಕಷ್ಟ. ಆದರೆ ಈ ಬಾರಿ RCB ಪ್ರದರ್ಶನ ಗಮನಿಸಿದರೆ ಹಿಂದಿನ ಆವೃತ್ತಿಗಳಿಂದ ಉತ್ತಮ ಪ್ರದರ್ಶನ ನೀಡಿದೆ. ಇಷ್ಟೇ ಅಲ್ಲ ಸೋಲಿನಿಂದ ಬಹುಬೇಗನೆ ಕಮ್‌ಬ್ಯಾಕ್ ಮಾಡಿದೆ. ಹೀಗಾಗಿ RCB ಟ್ರೋಫಿ ಕೊರಗನ್ನು ನೀಗಿಸಲಿದೆ ಎಂದು ದಿಲೀಪ್ ವೆಂಗಸರ್ಕರ್ ಹೇಳಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಧೋನಿ ಸಸ್ಯಹಾರಿಯೋ, ಮಾಂಸಹಾರಿಯೋ? ಮಹಿ ಇಷ್ಟದ ಆಹಾರ ಬಗ್ಗೆ ಗುಟ್ಟು ಬಿಚ್ಚಿಟ್ಟ ಮಾಜಿ ರೂಮ್‌ಮೇಟ್!
ಐಪಿಎಲ್ ಮಿನಿ ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಬಿಡ್ ಆಗೋದು ಯಾರು? ಅಚ್ಚರಿ ಭವಿಷ್ಯ ನುಡಿದ AI