
ಅಬು ಧಾಬಿ(ಅ.01): ವೀರೋಚಿತ ಸೋಲಿನ ನಿರಾಸೆಯಿಂದ ಹೊರಬರಲು ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಕಾತರಿಸುತ್ತಿದ್ದು, ಗುರುವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಕಳೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ನ ದಾಖಲೆಯ ರನ್ ಚೇಸ್‌ಗೆ ಕಿಂಗ್ಸ್ ಇಲೆವೆನ್ ಬೆಚ್ಚಿಬಿದ್ದರೆ, ಆರ್‌ಸಿಬಿ ವಿರುದ್ಧ ಸೂಪರ್ ಓವರ್‌ನಲ್ಲಿ ಮುಂಬೈ ಪರಾಭವಗೊಂಡಿತ್ತು. ಉಭಯ ತಂಡಗಳು ಆಡಿರುವ 3 ಪಂದ್ಯಗಳಲ್ಲಿ ತಲಾ 1ರಲ್ಲಿ ಗೆದ್ದು, 2ರಲ್ಲಿ ಸೋಲುಂಡಿವೆ. ಈ ಪಂದ್ಯದಲ್ಲಿ ಜಯಿಸಿ ಅಂಕಪಟ್ಟಿಯಲ್ಲಿ ಮೇಲೇಳಲು ಎದುರು ನೋಡುತ್ತಿವೆ.
ಭಾರತದ ಯುವ ಹಾಗೂ ಅನುಭವಿ ಬ್ಯಾಟ್ಸ್‌ಮನ್‌ಗಳಾದ ಕೆ.ಎಲ್.ರಾಹುಲ್, ಮಯಾಂಕ್ ಅಗರ್‌ವಾಲ್, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕರುಣ್ ನಾಯರ್, ಸರ್ಫರಾಜ್ ಖಾನ್ ಈ ಪಂದ್ಯದಲ್ಲಿ ಪೈಪೋಟಿ ನಡೆಸಲಿರುವುದು ವಿಶೇಷ.
ಒಟ್ಟು ಮುಖಾಮುಖಿ: 24
ಮುಂಬೈ: 13
ಪಂಜಾಬ್: 11
ಸಂಭವನೀಯ ಆಟಗಾರರ ಪಟ್ಟಿ
ಮುಂಬೈ: ರೋಹಿತ್ ಶರ್ಮಾ(ನಾಯಕ), ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಕೀರನ್ ಪೊಲ್ಲಾರ್ಡ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜೇಮ್ಸ್ ಪ್ಯಾಟಿನ್ಸನ್, ಜಸ್‌ಪ್ರೀತ್ ಬೂಮ್ರಾ.
ಪಂಬಾಬ್: ಕೆ.ಎಲ್.ರಾಹುಲ್(ನಾಯಕ), ಮಯಾಂಕ್ ಅಗರ್‌ವಾಲ್, ಗ್ಲೆನ್ ಮ್ಯಾಕ್ಸ್‌ವೆಲ್, ನಿಕೋಲಸ್ ಪೂರನ್, ಕರುಣ್ ನಾಯರ್, ಜೇಮ್ಸ್ ನೀಶಮ್, ಸರ್ಫರಾಜ್ ಖಾನ್, ಮೊಹಮದ್ ಶಮಿ, ಶೆಲ್ಡನ್ ಕಾಟ್ರೆಲ್, ರವಿ ಬಿಷ್ಣೋಯಿ, ಎಂ.ಅಶ್ವಿನ್.
ಪ್ರಾಬಲ್ಯ
ಭರವಸೆ ಮೂಡಿಸಿರುವ ಇಶಾನ್
ಆಲ್ರೌಂಡರ್ ಪೊಲ್ಲಾರ್ಡ್ ಬಲ
ಉತ್ತಮ ಲಯದಲ್ಲಿ ಸ್ಪಿನ್ನರ್ ಚಹರ್
ಲಯದಲ್ಲಿ ರಾಹುಲ್, ಮಯಾಂಕ್
ಭರವಸೆ ಹೆಚ್ಚಿಸಿರುವ ತೆವಾಟಿಯಾ
ತಂಡದ ಉತ್ತಮ ಕ್ಷೇತ್ರರಕ್ಷಣೆ
ದೌರ್ಬಲ್ಯ
ಸ್ಥಿರತೆ ಕಾಣದ ಅಗ್ರ ಕ್ರಮಾಂಕ
ಡೆತ್ ಓವರಲ್ಲಿ ಬೂಮ್ರಾ ದುಬಾರಿ
ನಿರೀಕ್ಷೆ ಉಳಿಸಿಕೊಳ್ಳದ ಹಾರ್ದಿಕ್
ದುಬಾರಿಯಾಗುತ್ತಿರುವ ಬೌಲರ್ಸ್
ಮೇಲ್ಕ್ರಮಾಂಕದ ಮೇಲೆ ಒತ್ತಡ
ಆಲ್ರೌಂಡರ್ ಕೊರತೆ
ಆರಂಭ: 7.30ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋಟ್ಸ್‌ರ್
ಪಿಚ್ ರಿಪೋರ್ಟ್
ಈ ಐಪಿಎಲ್ನಲ್ಲಿ ಇಲ್ಲಿ 4 ಪಂದ್ಯಗಳು ನಡೆದಿದ್ದು, ಮೊದಲು ಬ್ಯಾಟ್ ಮಾಡಿದ ತಂಡಗಳು 2ರಲ್ಲಿ ಗೆದ್ದರೆ, ಮತ್ತೆರಡು ಪಂದ್ಯಗಳಲ್ಲಿ 2ನೇ ಬ್ಯಾಟಿಂಗ್ ನಡೆಸಿದ ತಂಡಗಳು ಜಯಿಸಿವೆ. ಇಲ್ಲಿ ಮೊದಲು ಬ್ಯಾಟ್ ಮಾಡುವ ತಂಡ 170-180 ರನ್ ಗಳಿಸಿದರೆ ಸುರಕ್ಷಿತ ಎಂದೇ ಪರಿಗಣಿಸಬಹುದು. ಸ್ಪಿನ್ನರ್‌ಗಳಿಗೆ ಪಿಚ್ ಹೆಚ್ಚು ನೆರವು ನೀಡಲಿದೆ. 2ನೇ ಇನ್ನಿಂಗ್ಸ್ ವೇಳೆ ಇಬ್ಬನಿ ಬೀಳುವ ಕಾರಣ, ಬೌಲ್ ಮಾಡುವ ತಂಡಕ್ಕೆ ಕಷ್ಟವಾಗಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.