IPL ಹರಾಜಿಗೂ ಮುನ್ನ ಫ್ಯಾನ್ಸ್‌ಗೆ ಸಿಹಿ ಸುದ್ದಿ ನೀಡಿದ ವಿರಾಟ್ ಕೊಹ್ಲಿ !

By Suvarna News  |  First Published Dec 17, 2019, 6:27 PM IST

ಐಪಿಎಲ್ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಸಿಹಿ ಸುದ್ದಿ ನೀಡಿದ್ದಾರೆ. 2020ರ ಐಪಿಎಲ್ ಟೂರ್ನಿ ಸ್ಮರಣೀಯವಾಗಿಸುವುದಾಗಿ ಕೊಹ್ಲಿ ಹೇಳಿದ್ದಾರೆ. ಹರಾಜಿಗೂ ಮುನ್ನ ಕೊಹ್ಲಿ ಮಾತುಗಳ ಇಲ್ಲಿವೆ.


ವಿಶಾಖಟ್ಟಣಂ(ಡಿ.17): ಐಪಿಎಲ್ ಟೂರ್ನಿ ಹರಾಜಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೆಚ್ಚು ತಯಾರಿ ನಡೆಸಿದೆ. ನಾಯಕ ವಿರಾಟ್ ಕೊಹ್ಲಿ ಬಳಿ ಹಲವು ಸುತ್ತಿನ ಮಾತುಕತೆ ನಡೆಸಿದೆ. ಇದರ ಜೊತೆಗೆ ಅಭಿಮಾನಿಗಳಲ್ಲೂ ಸಲಹೆ ಕೇಳಿ ಪಟ್ಟಿ ರೆಡಿ ಮಾಡಿದೆ. ಇದರ ಬೆನ್ನಲ್ಲೇ  ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಅಭಯ ನೀಡಿದ್ದಾರೆ. 

ಇದನ್ನೂ ಓದಿ: IPL Auction: ಈ ಐವರು ವಿದೇಶಿ ಕ್ರಿಕೆಟಿಗರು ಮಾರಾಟವಾಗುವುದು ಖಚಿತ?

Tap to resize

Latest Videos

ಕಳೆದ ಆವೃತ್ತಿಗಳಲ್ಲಿ ಒಂದಲ್ಲ ಒಂದು ಸಮಸ್ಯೆ ಎದುರಿಸಿದ RCB , ಈ ಬಾರಿ ಎಲ್ಲಾ ಕುಂದು ಕೊರತೆ ನೀಗಿಸುವ ವಿಶ್ವಾಸದಲ್ಲಿದೆ. ತಂಡದ ಎಲ್ಲಾ ವಿಭಾಗವನ್ನು ಬಲಿಷ್ಠಗೊಳಿಸುವುದಾಗಿ ಕೊಹ್ಲಿ ಹೇಳಿದ್ದಾರೆ. ನನಗೆ ಅತೀ ಹೆಚ್ಚು ಪ್ರೀತಿ ನೀಡಿದ  ಎಲ್ಲಾ  RCB ಅಭಿಮಾನಿಗಳಿಗೆ ನನ್ನ ನಮಸ್ಕಾರ. ನೀವೆಲ್ಲಾ ಹರಾಜಿಗೆ ಕಾಯುತ್ತಿದ್ದೀರಿ. ಬಲಿಷ್ಠ ತಂಡ ಕಟ್ಟಲು  ಟೀಂ ಮ್ಯಾನೇಜ್ಮೆಂಟ್, ನಾನು ಹಲವು ಬಾರಿ ಚರ್ಚೆ ಮಾಡಿದ್ದೇವೆ. ತಂಡಕ್ಕೆ ಅವಶ್ಯವಿರುವ ಆಟಗಾರರನ್ನು RCB ಖರೀದಿಸಲಿದೆ. ಈ ಮೂಲಕ 2020ರ ಐಪಿಎಲ್ ಟೂರ್ನಿಯನ್ನು ಸ್ಮರಣೀಯ ಮಾಡಲಿದ್ದೇವೆ. ನಾನು ಈಗಾಗಲೇ ಹೇಳಿದ ಹಾಗೆ, ತಂಡವನ್ನು ಫಾಲೋ ಮಾಡುತ್ತಿರಿ. ನಿಮ್ಮ ಪ್ರೀತಿ, ಪ್ರೋತ್ಸಾಹ ನಮಗೆ ಅತ್ಯಗತ್ಯ.  ಇದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಐಪಿಎಲ್ ಹರಾಜನ್ನು ಎದುರನೋಡುತ್ತಿದ್ದೇನೆ. ಧನ್ಯವಾದ ಎಂದು ಕೊಹ್ಲಿ ವಿಡಿಯೋ ಮೂಲಕ ಹೇಳಿದ್ದಾರೆ.

 

All set for the ? The Captain has a message for you. pic.twitter.com/moGkXCz31y

— Royal Challengers (@RCBTweets)

ಇದನ್ನೂ ಓದಿ: ಐವರು ವಿದೇಶಿ ಆಟಗಾರರನ್ನು ಖರೀದಿಸಲು ಮುಂದಾದ RCB, ಇಲ್ಲಿದೆ ವಿವರ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಧೀಕೃತ ಟ್ವಿಟರ್ ಖಾತೆಯಲ್ಲಿ ಕೊಹ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದೆ.  ಡಿ.19ರ ಐಪಿಎಲ್ ಹರಾಜಿನಲ್ಲಿ RCB ಅಳೆದು ತೂಗಿ ಆಟಗಾರರ ಖರೀದಿಗೆ ಮುಂದಾಗಿದೆ. RCB ಬಳಿ ಸದ್ಯ 27.90 ಕೋಟಿ ರೂಪಾಯಿ ಹಣವಿದೆ. ಈ ಮೊತ್ತದಲ್ಲಿ ಗರಿಷ್ಠ 12 ಆಟಗಾರರನ್ನು ಖರೀದಿಸಲು ಮುಂದಾಗಿದೆ. 

ಡಿ.19ರಂದು ಕೋಲ್ಕತಾದಲ್ಲಿ ಐಪಿಎಲ್ ಹರಾಜು ನಡೆಯಲಿದೆ. 332 ಆಟಗಾರರು ಹರಾಜು  ಕಣದಲ್ಲಿದ್ದು, 8 ಫ್ರಾಂಚೈಸಿಗಳು ಒಟ್ಟು 73 ಆಟಗಾರರನ್ನು ಖರೀದಿಸಲಿದೆ. ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಕರ್ನಾಟಕದ 13 ಆಟಗಾರರು ಕಾಣಿಸಿಕೊಂಡಿದ್ದಾರೆ.

ಡಿ.19 ಐಪಿಎಲ್ ಹರಾಜಿನ live ಅಪ್‌ಡೇಟ್ ಸುವರ್ಣನ್ಯೂಸ್.ಕಾಂ ನೀಡಲಿದೆ. ಕ್ಷಣ ಕ್ಷಣದ ಹರಾಜಿನ ಮಾಹಿತಿಗಾಗಿ ಸುವರ್ಣನ್ಯೂಸ್.ಕಾಂ ಕ್ಲಿಕ್ ಮಾಡಿ.
 

click me!