
ಮುಂಬೈ(ಡಿ.17): 13ನೇ ಆವೃತ್ತಿ ಐಪಿಎಲ್ ಟೂರ್ನಿಗೆ ತಯಾರಿ ಆರಂಭಗೊಂಡಿದೆ. ಇದೀಗ ಡಿ.19ರಂದು ನಡೆಯಲಿರುವ ಐಪಿಎಲ್ ಹರಾಜಿಗೆ ಎಲ್ಲರೂ ಕಾಯುತ್ತಿದ್ದಾರೆ. ಫ್ರಾಂಚೈಸಿಗಳು ಆಟಗಾರರ ಖರೀದಿಗೆ ಸಜ್ಜಾಗಿದ್ದರೆ, ಅಭಿಮಾನಿಗಳು ಯಾರು ಯಾವ ತಂಡ ಸೇರಿಕೊಳ್ಳಲಿದ್ದಾರೆ ಅನ್ನೋ ಕುತೂಹಲಕ್ಕಾಗಿ ಕಾಯುತ್ತಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಐಪಿಎಲ್ ಅತ್ಯಂತ ಜನಪ್ರೀಯ ಲೀಗ್. ಹೀಗಾಗಿ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿದೆ. ಇದಕ್ಕಾಗಿ ಮಿನಿ ಐಪಿಎಲ್ ಟೂರ್ನಿಗೆ ಮುಂದಾಗಿದೆ.
ಇದನ್ನೂ ಓದಿ: IPL ಹರಾಜಿಗೆ ಪೌರತ್ವ ಪ್ರತಿಭಟನೆಯ ಬಿಸಿ..!.
ಪ್ರತಿ ವರ್ಷ ಎಪ್ರಿಲ್, ಮೇ ತಿಂಗಳಲ್ಲಿ ಐಪಿಎಲ್ ಟೂರ್ನಿ ಆಯೋಜನೆ ಗೊಳ್ಳಲಿದೆ. ಇದೀಗ ಮಿನಿ ಐಪಿಎಲ್ ಟೂರ್ನಿಯನ್ನು ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಆಯೋಜಿಸಲು ಬಿಸಿಸಿಐ ಮುಂದಾಗಿದೆ. ಚಾಂಪಿಯನ್ಸ್ ಲೀಗ್ ಟೂರ್ನಿ ರದ್ದಾದ ಬಳಿಕ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಸುಮಾರು 15 ದಿನದ ಕಾಲವಕಾಶ ಖಾಲಿ ಇದೆ. ಈ ಸಮಯದಲ್ಲಿ ಮಿನಿ ಐಪಿಎಲ್ ಆಯೋಜಿಸಲು ಬಿಸಿಸಿಐ ಸಜ್ಜಾಗಿದೆ.
ಇದನ್ನೂ ಓದಿ: IPL ಆಟಗಾರರ ಹರಾಜು: ಈ ಇಬ್ಬರತ್ತ ಎಲ್ಲರ ಚಿತ್ತ..!
ಚಾಂಪಿಯನ್ಸ್ ಲೀಗ್ ಟೂರ್ನಿಗಾಗಿ ಬಿಸಿಸಿಐ, ಐಸಿಸಿಯಿಂದ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿನ ಹಕ್ಕನ್ನು ಪಡೆದಿದೆ. ಚಾಂಪಿಯನ್ಸ್ ಲೀಗ್ ರದ್ದಾದರೂ ಹಕ್ಕು ಬಿಸಿಸಿಐ ಬಳಿ ಇದೆ. ಕಳೆದ 5 ವರ್ಷದಿಂದ ಚಾಂಪಿಯನ್ಸ್ ಲೀಗ್ ಟೂರ್ನಿ ರದ್ದಾಗಿದೆ. 2014ರ ಅಂತಿಮ ಟೂರ್ನಿ ಆಡಲಾಗಿತ್ತು. ಇದೀಗ ಚಾಂಪಿಯನ್ಸ್ ಲೀಗ್ ಸಮಯವಕಾಶದಲ್ಲಿ ಮಿನಿ ಐಪಿಎಲ್ ಟೂರ್ನಿ ನಡೆಯಲು ಬಿಸಿಸಿಐ ಪ್ಲಾನ್ ರೆಡಿ ಮಾಡಿದೆ.
ಇದನ್ನೂ ಓದಿ: IPL ಹರಾಜಿನಲ್ಲಿರುವ ಆಟಗಾರರ ಅಂತಿಮ ಪಟ್ಟಿ; ಉದಯೋನ್ಮುಖ ಕ್ರಿಕೆಟಿಗರ ಪೈಪೋಟಿ!
ಈ ಹಿಂದೆ ಬಿಸಿಸಿಐ ಮಿನಿ ಐಪಿಎಲ್ ಟೂರ್ನಿಗೆ ಪ್ಲಾನ್ ರೆಡಿ ಮಾಡಿತ್ತು. ಆದರೆ ಫ್ರಾಂಚೈಸಿಗಳ ವಿರೋಧದಿಂದ ಮಿನಿ ಐಪಿಎಲ್ ಟೂರ್ನಿ ಕೈಬಿಡಲಾಗಿತ್ತು. ಇದೀಗ ಸೌರವ್ ಗಂಗೂಲಿ ಅಧ್ಯಕ್ಷರಾದ ಬಳಿಕ ಮತ್ತೆ ಮಿನಿ ಐಪಿಎಲ್ ಪ್ರಸ್ತಾಪ ಚರ್ಚೆಯಾಗಿದೆ. ಐಪಿಎಲ್ ಗರ್ವನಿಂಗ್ ಕೌನ್ಸಿಲ್ ಹಾಗೂ ಫ್ರಾಂಚೈಸಿಗಳ ನಿರ್ಧಾರದ ಮೇಲೆ ಮಿನಿ ಐಪಿಎಲ್ ಟೂರ್ನಿ ಭವಿಷ್ಯ ನಿಂತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.