'ಇದು ನನ್ನ ಮರುಜನ್ಮʼ-ತಿಂಗಳುಗಳ ಬಳಿಕ ಮತ್ತೆ ಬಂದ ಯೂಟ್ಯೂಬರ್‌ ರಣವೀರ್ ಅಲಹಾಬಾದಿಯಾ! ಇಷ್ಟು ದಿನ ಏನಾಯ್ತು?

ನಾವು ಮಾಡುವ ಒಂದು ತಪ್ಪಿನಿಂದ ದೊಡ್ಡ ಯಶಸ್ಸು ಹೇಗೆ ಒಂದೇ ಸಮನೆ ರಪ್ಪನೆ ಕೆಳಗಡೆ ಬೀಳುತ್ತದೆ ಎಂಬುದಕ್ಕೆ ರಣವೀರ್‌ ಉದಾಹರಣೆ. ಈಗ ರಣವೀರ್‌ ಸೋಶಿಯಲ್‌ ಮೀಡಿಯಾಕ್ಕೆ ಮರಳಿದ್ದಾರೆ. 
 

youtuber ranveer allahbadia come back to instagram after controversy statement

ಇಡೀ ದೇಶವೇ ಚರ್ಚೆ ಮಾಡುವಂತಹ ವಿವಾದಾತ್ಮಕ ಮಾತುಗಳನ್ನು ಆಡಿದ ಬಳಿಕ ಯೂಟ್ಯೂಬರ್ ರಣವೀರ್ ಅಲಹಾಬಾದಿಯಾ (Ranveer Allahbadia) ಅವರು ಸೋಶಿಯಲ್‌ ಮೀಡಿಯಾಕ್ಕೆ ಮರಳಿದ್ದಾರೆ. ಸಮಯ್ ರೈನಾ ಅವರ ʼಇಂಡಿಯಾಸ್ ಗಾಟ್ ಟ್ಯಾಲೆಂಟ್‌ʼ ಶೋನಲ್ಲಿ ಆಕ್ಷೇಪಾರ್ಹ ಕಾಮೆಂಟ್‌ಗಳು ಬಂದ ನಂತರ ಅವರು ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿದ್ದ ಎಲ್ಲಾ ವೀಡಿಯೊಗಳನ್ನು ಡಿಲೀಟ್ ಮಾಡಿದ್ದರು. ಇನ್ನು ರಣವೀರ್ ತಮ್ಮ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದರು. ರಣವೀರ್ ವಿರುದ್ಧ ದೇಶದ ಹಲವೆಡೆ ದೂರುಗಳು ದಾಖಲಾಗಿದ್ದವು. ಇದೀಗ‌ ರಣವೀರ್ ಒಂದು ತಿಂಗಳ ನಂತರ ಸೋಶಿಯಲ್‌ ಮೀಡಿಯಾಕ್ಕೆ ಮರಳಿದ್ದಾರೆ.

ರಣವೀರ್‌ ಏನು ಹೇಳಿಕೆ ನೀಡಿದ್ದರು? 
ಯೂಟ್ಯೂಬರ್ ರಣವೀರ್ ಅಲಹಾಬಾದಿಯಾ ಅವರು ಸಮಯ್ ರೈನಾ ಅವರ ʼಇಂಡಿಯಾಸ್ ಗಾಟ್ ಟ್ಯಾಲೆಂಟ್ ಶೋʼನಲ್ಲಿ ವಿವಾದಾತ್ಮಕ ಕಾಮೆಂಟ್ ಮಾಡಿದ್ದರು. “ನೀವು ನಿಮ್ಮ ಪೋಷಕರ ಲೈಂಗಿಕ ಕ್ರಿಯೆಯನ್ನು ಜೀವನಪೂರ್ತಿ ನೋಡಲು ಇಷ್ಟಪಡುತ್ತೀರಾ ಅಥವಾ ಒಮ್ಮೆ ಅದರಲ್ಲಿ ಭಾಗವಹಿಸಿ ಅದನ್ನು ಶಾಶ್ವತವಾಗಿ ಮುಗಿಸಲು ಬಯಸುತ್ತೀರಾ?” ಎಂದು ಕೇಳಿದ್ದರು. ಈ ಕ್ಲಿಪ್ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆ ನಂತರ ರಣವೀರ್ ಕ್ಷಮೆ ಕೇಳಿದರು. 

Latest Videos

ಕೇಂದ್ರ ಸರ್ಕಾರಕ್ಕೆ ಪ್ರಶ್ನೆ ಇಟ್ಟು, ರಣವೀರ್‌ ಶೋಗೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್‌!

ರಣವೀರ್‌ ಏನಂದ್ರು? 
ಕಳೆದ ತಿಂಗಳು ತಾನು ಎದುರಿಸಿದ ಸವಾಲುಗಳ ಬಗ್ಗೆ ರಣವೀರ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಹಂಚಿಕೊಂಡಿದ್ದಾರೆ. “ನಿಮ್ಮೆಲ್ಲರಿಂದ ನಾನು ಸುಧಾರಿಸಿಕೊಳ್ತಿದೀನಿ. ನಾಳೆಯೂ ನಮ್ಮೊಂದಿಗೆ ಇರಿ” ಎಂದು ತಮ್ಮ ಅಭಿಮಾನಿಗಳು, ತಂಡದಿಂದ ತನಗೆ ಸಿಕ್ಕ ಬೆಂಬಲದ ಬಗ್ಗೆ ಹೇಳಿದ್ದಾರೆ. 

“ಪ್ರತಿ ತಂಡದ ಸದಸ್ಯರಿಗೂ ಕೃತಜ್ಞನಾಗಿದ್ದೇನೆ. ಈ ಬಿರುಗಾಳಿಯಲ್ಲಿಯೂ ಪ್ರತಿಯೊಬ್ಬರೂ ನನ್ನೊಂದಿಗೆ ನಿಂತರು. ಇದೇ ನಿಜವಾದ ಸಂಪತ್ತು” ಎಂದು ರಣವೀರ್ ಹೇಳಿದ್ದಾರೆ. 

ಆ ದಿನಗಳು! ಸಂದರ್ಶನದಲ್ಲಿ ರಣವೀರ್‌ ಅಲ್ಹಾಬಾದಿಯಾ ಕೇಳಿದ್ದೇನು, ಸನ್ನಿ ಲಿಯೋನ್ ಹೇಳಿದ್ದೇನು?

ಕ್ಷಮೆಯಾಚಿಸಿದ್ದ ರಣವೀರ್!‌ 
ರಣವೀರ್ ಅವರು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ (NCW) ಲಿಖಿತ ಕ್ಷಮೆಯಾಚಿಸಿದರು. ಪೋಷಕರು, ಲೈಂಗಿಕತೆಯ ಬಗ್ಗೆ ಅವರ ಅನುಚಿತ ಹೇಳಿಕೆಗಳಿಗೆ NCW ವಿವರಣೆಯನ್ನು ಕೇಳಿತ್ತು. ಸುಪ್ರೀಂ ಕೋರ್ಟ್ ರಣವೀರ್‌ಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದ್ದರೂ, ಅವರ ನಡವಳಿಕೆಯನ್ನು ಟೀಕಿಸಿತು, ಅವರ ಹೇಳಿಕೆಗಳನ್ನು ʼಅಶ್ಲೀಲʼ ಎಂದು ಲೇಬಲ್ ಮಾಡಿತು, ಸಮಾಜವನ್ನು ನಾಚಿಕೆಪಡುವಂತೆ ಮಾಡಿದ್ದಕ್ಕಾಗಿ ಖಂಡಿಸಿತು.  

ರಣವೀರ್‌ ಅವರೊಂದಿಗೆ ಗರ್ಲ್‌ಫ್ರೆಂಡ್‌ ಬ್ರೇಕಪ್‌ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ. ಇನ್ನು ಸಾಕಷ್ಟು ಸಿನಿಮಾ ತಂಡಗಳು ರಣವೀರ್‌ ಜೊತೆಗೆ ಸಂದರ್ಶನ ಕೊಡಬೇಕು, ಪ್ರಚಾರ ಕಾರ್ಯದಲ್ಲಿ ಭಾಗಿಯಾಗಬೇಕು ಎಂದುಕೊಂಡಿತ್ತು. ಅವೆಲ್ಲವೂ ಈಗ ರದ್ದಾಗಿವೆಯಂತೆ. 
 

vuukle one pixel image
click me!