ಸಾನಿಯಾ ಮಿರ್ಜಾ ಸಹೋದರಿ ಆಯೋಜಿಸಿದ ರಂಜಾನ್ ಎಕ್ಸ್‌ಪೋದಲ್ಲಿ ಗುಂಡಿನ ದಾಳಿ, ಓರ್ವ ಅರೆಸ್ಟ್

Published : Mar 30, 2025, 02:36 PM ISTUpdated : Mar 30, 2025, 02:47 PM IST
ಸಾನಿಯಾ ಮಿರ್ಜಾ ಸಹೋದರಿ ಆಯೋಜಿಸಿದ ರಂಜಾನ್ ಎಕ್ಸ್‌ಪೋದಲ್ಲಿ ಗುಂಡಿನ ದಾಳಿ, ಓರ್ವ ಅರೆಸ್ಟ್

ಸಾರಾಂಶ

ಸಾನಿಯಾ ಮಿರ್ಜಾ ಸಹೋದರಿ ಆಯೋಜಿಸಿದ ರಂಜಾನ್ ಎಕ್ಸ್‌ಪೋದಲ್ಲಿ ಗುಂಡಿನ ದಾಳಿಯಾಗಿದೆ. ಈ ಪೈಕಿ ಪೊಲೀಸರು ಓರ್ವನ ಬಂಧಿಸಿದ್ದಾರೆ. 

ಹೈದರಾಬಾದ್(ಮಾ.30)  ಟೆನಿಸಾ ತಾರೆ ಸಾನಿಯಾ ಮಿರ್ಜಾ ಸಹೋದರಿ ಅನಮ್ ಮಿರ್ಜಾ ಪ್ರತಿ ವರ್ಷ ರಂಜಾನ್ ತಿಂಗಳಲ್ಲಿ ದವತ್ ಇ ರಂಜಾನ್ ಪ್ರದರ್ಶನ ಮತ್ತು ಮಾರಾಟ ಎಕ್ಸ್‌ಪೋ ಆಯೋಜಿಸುತ್ತಾರೆ. ಆದರೆ ಈ ಬಾರಿ ಅವಘಡ ಸಂಭವಿಸಿದೆ. ಈ ಎಕ್ಸ್‌ಪೋದಲ್ಲಿ ಗುಂಡಿನ ದಾಳಿಯಾಗಿದೆ. ಇಬ್ಬರ ನಡುವೆ ವಾಗ್ವಾದ ನಡೆದು ಗುಂಡಿನ ದಾಳಿ ನಡೆಸಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ದಾಳಿ ನಡೆಸಿದ ವ್ಯಕ್ತಿಯನ್ನು ಅರೆಸ್ಟ್ ಮಾಡಿದ್ದರೆ. ಈತನಿಂದ ಪಿಸ್ತೂಲ್ ಸೇರಿದಂತೆ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ. ಅದೃಷ್ಠವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಎರಡು ಸುತ್ತು ಹಾರಿದ ಗುಂಡು
ಹೈದರಾಬಾದ್‌ನಲ್ಲಿ ರಂಜಾನ್ ತಿಂಗಳ ವೇಳೆ ಹಲವು ಫುಡ್ ಎಕ್ಸ್‌ಪೋ ಆಯೋಜನೆಗೊಳ್ಳುತ್ತದೆ. ಈ ಪೈಕಿ ಸಾನಿಯಾ ಮಿರ್ಜಾ ಸಹೋದರಿ ಅನಮ್ ಮಿರ್ಜಾ ಆಯೋಜಿಸುವ ದವತ್ ಇ ರಂಜಾನ್ ಎಕ್ಸ್‌ಪೋ ಅತ್ಯಂತ ಜನಪ್ರಿಯವಾಗಿದೆ.ಆಹಾರ ಮಳಿಗೆ ಸೇರಿದಂತೆ ಹಲವು ವಸ್ತು ಪ್ರದರ್ಶನ ಹಾಗೂ ಮಾರಾಟ ಮಳಿಗಳನ್ನು ತೆರೆಯಲಾಗುತ್ತದೆ. ಪರ್ಫ್ಯೂಮ್ ಶಾಪ್ ಹಾಗೂ ಆಟಿಕೆ ಶಾಪ್ ಮಾಲೀಕರ ನಡುವೆ ಸಣ್ಣ ವಿಚಾರಕ್ಕೆ ಜಗಳ ಶುರುವಾಗಿದೆ. ಈ ಜಗಳ ತಾರಕಕ್ಕೇರಿದೆ. ಆಕ್ರೋಶದಲ್ಲಿ ರಿವಾಲ್ವರ್ ತೆಗೆದು ಎರಡು ಸುತ್ತು ಗುಂಡಿನ ದಾಳಿ ನಡೆಸಲಾಗಿದೆ.

ಭಾರತದ 10 ದುಬಾರಿ ವಿಚ್ಛೇದನಗಳು, ಗಂಡನಿಂದ ದೂರಾಗಿ ಪಡೆದ ಹಣವೆಷ್ಟು?

ಈ ಪ್ರಕರಣ ಸಂಬಂಧ ಗುಂಡು ಹಾರಿಸಿದ ಹಸ್ಸೇ ಬುದ್ದೀನ್‌ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆಕ್ರೋಶಗೊಂಡ ಹೆಸ್ಸೇ ಬುದ್ದಿನ ವಾಗ್ವಾದ ಮುಗಿದ ಬೆನ್ನಲ್ಲೇ ರಿವಾಲ್ವರ್ ಮೂಲಕ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಹೀಗಾಗಿ ಯಾವುದೇ ಅನಾಹುತ ಸಂಭವಿಸಿಲ್ಲ. ಪೊಲೀಸರು ಆಗಮಿಸಿ ಆರೋಪಿ ಹಸ್ಸೇ ಬುದ್ದೀನ್‌ನ ಅರೆಸ್ಟ್ ಮಾಡಿದ್ದಾರೆ. ಬಂಧಿತ ಹಸ್ಸೇ ಬುದ್ದೀನ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಅನ್ನೋ ಮಾಹಿತಿಯೂ ಬಹಿರಂಗವಾಗಿದೆ.

ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ
ಹಸ್ಸೇ ಬುದ್ದೀನ್ ಅಲಿಯಾ ಹೈದರ್ ಲೈಸೆನ್ಸ್ ಗನ್ ಮೂಲಕ ದಾಳಿ ನಡೆಸಿದ್ದಾರೆ. ಬೆದರಿಸಲು ಈ ದಾಳಿ ನಡೆಸಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ. ಆದರೆ ಶಸ್ತ್ರಾಸ್ತ್ರ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಈ ಜಗಳ ಹಾಗೂ ದಾಳಿಯ ಹಿಂದಿನ ಉದ್ದೇಶದ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಮಾರ್ಚ್ 29ರಂದ ಈ ಘಟನೆ ನಡೆದಿದೆ. 

ಅನಮ್ ಮಿರ್ಜಾ
ಸಾನಿಯಾ ಮಿರ್ಜಾ ಸಹೋದರಿ ಅನಮ್ ಮಿರ್ಜಾ ಫ್ಯಾಶನ್ ಕ್ಯೂರೇಟರ್ ಆಗಿ ಗುರುತಿಸಿಕೊಂಡಿದ್ದಾರೆ. ಸಾನಿಯಾ ಮಿರ್ಜಾ ರೀತಿಯಲ್ಲಿ ವೈವಾಹಿಕ ಬದುಕು ತಾಳ ತಪ್ಪಿದ ಬಳಿಕ ಹಲವು ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಅನಮ್ ಮಿರ್ಜಾ ಯೂಟ್ಯೂಬ್ ಚಾನಲ್ ಮೂಲಕವೂ ಸುದ್ದಿಯಲ್ಲಿದ್ದಾರೆ. ಪ್ರತಿ ವರ್ಷ ಅನಮ್ ಮಿರ್ಜಾ ರಂಜಾನ್ ತಿಂಗಳಲ್ಲಿ ವಸ್ತು ಪ್ರದರ್ಶನ ಹಾಗೂ ಮಾರಾಟ ಮಳಿಗೆ ಆಯೋಜಿಸುತ್ತಾರೆ. ದವತ್ ಇ ರಂಜಾನ್ ಪ್ರದರ್ಶನ ಹಾಗೂ ಮಾರಾಟದಲ್ಲಿ 400 ರಿಟೇಲ್ ಬ್ರ್ಯಾಂಡ್ ಹಾಗೂ 60 ಆಹಾರ ಮಳಿಗೆ ಇದೆ. ಹೈದರಾಬಾದ್‌ನಲ್ಲಿ ಆಯೋಜನೆಗೊಂಡಿರುವ ಅತೀ ದೊಡ್ಡ ಎಕ್ಸ್‌ಪೋ ಇದಾಗಿದೆ.

ರಂಜಾನ್‌ ಸ್ಪೆಷಲ್: ಸಾನಿಯಾ ಮಿರ್ಜಾ ಡ್ರೆಸ್ ಸ್ಟೈಲ್ ನಿಮಗೂ ಇಷ್ಟವಾಗಬಹುದು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಅಮೆರಿಕ ತೆರಿಗೆ ದಾಳಿಗೆ ಒಳಗಾದ ದೇಶಗಳಿಂದ ಮಾದರಿಯಾದ ಚೀನಾ; ಟ್ರಂಪ್‌ಗೆ ಶಾಕ್ ನೀಡಿ ದಾಖಲೆ ಬರೆದ ಡ್ರ್ಯಾಗನ್
ವಂದೇ ಮಾತರಂ ಚರ್ಚೆ ವೇಳೆ ಶಾ ವರ್ಸಸ್‌ ಖರ್ಗೆ