ಅಮೆರಿಕಾದಲ್ಲಿ ಅಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸುತ್ತಿರುವ ಭಾರತೀಯರ ಸಂಖ್ಯೆ ಟ್ರಂಪ್ ಸರ್ಕಾರದ ಕಠಿಣ ವಲಸೆ ನೀತಿಗಳಿಂದ ಕಡಿಮೆಯಾಗಿದೆ. ಗಡೀಪಾರು ಕ್ರಮಗಳು ಮತ್ತು ಕಳ್ಳಸಾಗಣೆದಾರರ ಹಿಂಜರಿಕೆಯಿಂದ ಪರಿಸ್ಥಿತಿ ಹದಗೆಟ್ಟಿದೆ.
ಅಕ್ರಮವಾಗಿ ಅಮೆರಿಕಾಕ್ಕೆ ಪ್ರವೇಶಿಸಲು ಪ್ರಯತ್ನಿಸುವ ಭಾರತೀಯರ ಪ್ರಯಾಣ ಹಿಂದೆಂದಿಗಿಂತಲೂ ಅಪಾಯಕಾರಿಯಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡ ನಂತರ ಅಕ್ರಮ ವಲಸಿಗರನ್ನು ಹೊರಹಾಕುವ ಕ್ರಮವನ್ನು ಪ್ರಾರಂಭಿಸಿದ್ದಾರೆ. ಇದರಿಂದ ಅಮೆರಿಕ ಗಡಿ ಭಾಗದಲ್ಲಿ ಅಕ್ರಮವಾಗಿ ಪ್ರವೇಶಿಸಲು ಯತ್ನಿಸುವವರ ಬಂಧನ ಕಳೆದ 4 ವರ್ಷಗಳಲ್ಲಿ ಅತ್ಯಂತ ಕಡಿಮೆಯಾಗಿದೆ.
ಗಡಿಪಾರು ಕ್ರಮದಿಂದಾಗಿ ವಲಸಿಗರಿಗೆ ಆಶ್ರಯ ನೀಡುತ್ತಿದ್ದ ಕಳ್ಳಸಾಗಣೆದಾರರು ಸಹ ಹಿಂದೆ ಸರಿದಿದ್ದಾರೆ. ಇದರ ಮಧ್ಯೆ ಅಮೆರಿಕದಲ್ಲಿ ಈಗಾಗಲೇ ಅಕ್ರಮವಾಗಿ ವಾಸಿಸುತ್ತಿರುವವರು ಗಡೀಪಾರಾಗುವ ಭಯದಿಂದ ಹೊರಗೆ ಓಡಾಡುವುದನ್ನು ಕಡಿಮೆ ಮಾಡಿದ್ದಾರೆ.
ಅಧ್ಯಕ್ಷ ಟ್ರಂಪ್ ಅವರ ಕಠಿಣ ವಲಸೆ ನೀತಿಗಳು ಮತ್ತು ಅಕ್ರಮ ಪ್ರವೇಶದ ವಿರುದ್ಧದ ದಮನವೇ ಈ ಪ್ರವೃತ್ತಿಗೆ ಕಾರಣ ಎಂದು ತಜ್ಞರು ಹೇಳುತ್ತಾರೆ.
Modi-Trump meet: ಅಕ್ರಮ ವಲಸೆ, ಮಾನವ ಕಳ್ಳಸಾಗಣೆ ವಿರುದ್ಧ ಕ್ರಮಗಳಿಗೆ ಮೋದಿ ಬೆಂಬಲ
ಫೆಬ್ರವರಿ ತಿಂಗಳಲ್ಲಿ ಬಂಧಿತರಾದವರಲ್ಲಿ 238 ಜನರು ಉತ್ತರ ಅಮೆರಿಕ ಗಡಿಯಲ್ಲಿ ಮತ್ತು 145 ಜನರು ಮೆಕ್ಸಿಕೋದ ದಕ್ಷಿಣ ಗಡಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಉಳಿದವರನ್ನು ದೇಶದ ಒಳಗೆ ಬಂಧಿಸಲಾಗಿದೆ. ಬಂಧಿತರಲ್ಲಿ ನಾಲ್ವರು ರಕ್ಷಕರಿಲ್ಲದ ಬಾಲಕರು, ಮೂವರು ಮಕ್ಕಳು, ಕುಟುಂಬವಾಗಿ ಬಂಧಿಸಲ್ಪಟ್ಟ 52 ಜನರು ಮತ್ತು 1,572 ವಯಸ್ಕರು ಸೇರಿದ್ದಾರೆ.
ಅಕ್ರಮ ವಲಸೆಗೆ ಟ್ರಂಪ್ ಅವರ ಕಠಿಣ ನಿಲುವು ಗುಜರಾತ್‌ನಿಂದ ಅಮೆರಿಕಾಕ್ಕೆ ಪ್ರವೇಶಿಸಲು ಪ್ರಯತ್ನಿಸುವ ಭಾರತೀಯರ ಚಲನೆಯನ್ನು ಬಹುತೇಕ ಸ್ಥಗಿತಗೊಳಿಸಿದೆ. "ಟ್ರಂಪ್ ಅಧಿಕಾರಕ್ಕೆ ಬಂದಾಗಿನಿಂದ ಕಳ್ಳಸಾಗಣೆದಾರರು ತುಂಬಾ ಜಾಗರೂಕರಾಗಿದ್ದಾರೆ. ಸೇನಾ ವಿಮಾನಗಳ ಮೂಲಕ ಅಕ್ರಮ ವಲಸಿಗರನ್ನು ಭಾರತಕ್ಕೆ ಗಡಿಪಾರು ಮಾಡಲು ಪ್ರಾರಂಭಿಸಿದಾಗ ಪರಿಸ್ಥಿತಿ ಹದಗೆಟ್ಟಿತು" ಎಂದು ಸಂಬಂಧಪಟ್ಟ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಅಮೆರಿಕದಲ್ಲಿ ಆಗ್ತಿರೋದೇನು? ತಾತ್ಕಾಲಿಕ ವೀಸಾ ಪಡೆದವರ, ಮಕ್ಕಳ ಗತಿಯೇನು? ಎಳೆ ಎಳೆ ಮಾಹಿತಿ ಇಲ್ಲಿದೆ...
ಅಮೆರಿಕದ ಕಸ್ಟಮ್ಸ್ ಮತ್ತು ಗಡಿ ಭದ್ರತಾ ವಿಭಾಗದ ದತ್ತಾಂಶಗಳ ಪ್ರಕಾರ ಪ್ರತಿ ವರ್ಷ 90,000 ದಿಂದ 1 ಲಕ್ಷ ಭಾರತೀಯರು ಅಮೆರಿಕಾಕ್ಕೆ ಅಕ್ರಮವಾಗಿ ನುಸುಳಲು ಪ್ರಯತ್ನಿಸುತ್ತಾರೆ. ಆದರೆ ಟ್ರಂಪ್ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳಿಂದ ಆ ಸಂಖ್ಯೆ ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ.