ಹೈದರಾಬಾದ್: ಹಣ ಕಂಡ್ರೆ ಹೆಣನೂ ಬಾಯಿ ಬಿಡುತ್ತೆ ಎಂಬ ಗಾದೆ ಮಾತನ್ನು ನಾವು ನೀವೆಲ್ಲಾ ಕೇಳಿದ್ದೇವೆ. ಹಣಕ್ಕೆ ಅಷ್ಟೊಂದು ಬೆಲೆ ಇದೆ. ಈ ಹಣವನ್ನು ಬಹುತೇಕರು ತೋರಿಸಿಕೊಳ್ಳುವುದಕ್ಕಿಂತ ಜೋಪಾನವಾಗಿ ತಿಜೋರಿಯಲ್ಲಿ ಇಡುವವರೇ ಹೆಚ್ಚು. ಆದರೆ ಇಲ್ಲೊಂದು ಕಡೆ ಯುವಕರು ಮೋಜು ಮಸ್ತಿಯ ಹೆಸರಲ್ಲಿ ಹಣವನ್ನು ಆಕಾಶದಿಂದ ಕೆಳಗೆ ತೂರಾಡಿದ್ದಾರೆ. ಮುತ್ತಿನ ನಗರಿ ಹೈದರಾಬಾದ್‌ನ ಪ್ರವಾಸಿ ತಾಣ ಚಾರ್ ಮಿನಾರ್ ಸಮೀಪ ಈ ಘಟನೆ ನಡೆದಿದೆ.
ರಾಧಿಕಾ ರೆಡ್ಡಿ ಎಂಬುವವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಚಾರ್‌ಮಿನಾರ್ (Charminar) ಸಮೀಪದ ಗುಲ್ಜರ್ ಹೌಸ್ ಬಳಿಯ ದೃಶ್ಯವಿದು. 500 ರೂಪಾಯಿ ನೋಟುಗಳು ಗಾಳಿಯಲ್ಲಿ ತೂರಾಡುತ್ತಿದೆ. ಮದುವೆ ಕಾರ್ಯಕ್ರಮದ ದಿಬ್ಬಣ ಆಗಮನದ ವೇಳೆ ಈ ಘಟನೆ ನಡೆದಿದೆ ಎಂದು ಅವರು ಈ ವಿಡಿಯೋ ಪೋಸ್ಟ್ ಮಾಡಿ ಬರೆದುಕೊಂಡಿದ್ದಾರೆ.
ವಿಡಿಯೋದಲ್ಲಿ ಕಾಣಿಸುವಂತೆ ಕುರ್ತಾ ಧರಿಸಿರುವ ಯುವಕರು 500 ರೂಪಾಯಿ ನೋಟುಗಳನ್ನು ಗಾಳಿಯಲ್ಲಿ ತೂರಾಡುತ್ತಿದ್ದಾರೆ. ಜೂನ್ 10 ರಂದು ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ವಿಡಿಯೋ ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೇಳೆ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೌರ ಕಾರ್ಮಿಕರು ರಸ್ತೆಯಲ್ಲಿ ಬಿದ್ದಿದ್ದ ಕರೆನ್ಸಿ ನೋಟುಗಳನ್ನು ಎತ್ತಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈಕೆ ಹಾಡಿದ್ರೆ ಹಣದ ಮಳೆ: ಸಿಕ್ಕಿದ ಹಣವೆಲ್ಲ ಬಡ ಹೆಣ್ಮಕ್ಕಳ ಮದುವೆಗೆ ಬಳಸುತ್ತಾರೆ ಈಕೆ
ಮದೀನಾದಿಂದ ನಾಲ್ಕು ಕಾರುಗಳಲ್ಲಿ ಗುಲ್ಜರ್ ಹೌಸ್‌ಗೆ ಬಂದ ಯುವಕರು ಅಲ್ಲಿ ಕಾರನ್ನು ಪಾರ್ಕ್ ಮಾಡಿದ್ದಾರೆ. ಗುಲ್ಜಾರ್ ಹೌಸ್ (Gulzar House) ಬಳಿ ಯುವಕರು ಕೆಲ ಕಾಲ ಮೋಜಿನೊಂದಿಗೆ ಬೊಬ್ಬೆ ಹಾಕಿದ್ದಾರೆ. ನಂತರ ಕಾರು ಏರಿ ಫೌಂಟೇನ್ ಬಳಿ ಸಾಗಿದ ಯುವಕರು ಅಲ್ಲಿ 20 ರೂಪಾಯಿಯ ನೋಟುಗಳನ್ನು ಎಸೆದಿದ್ದಾರೆ ಎಂದು ತಿಳಿದು ಬಂದಿದೆ.
ಏನಪ್ಪಾ ಧಣಿಗಳ ಶ್ರೀಮಂತಿಕೆ, ಮದುವೆ ಮೆರವಣಿಗೆಯಲ್ಲಿ 1 ಕೋಟಿ ರೂ. ಸುರಿಮಳೆ!
ಗುಲ್ಜರ್ ಹೌಸ್ ಫೌಂಟೇನ್ ( Gulzar House Fountain ) ಬಳಿ ಜೋರಾಗಿ ಬೊಬ್ಬೆ ಹಾಕಿ ಸಂಭ್ರಮಾಚರಿಸಿದ ಯುವಕರು ನಂತರ ಕಾಳಿ ಕಾಮನ್‌ನತ್ತ (Kali kamaan) ತೆರಳಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಮದುವೆ ಸಂಭ್ರಮದಲ್ಲಿದ್ದ ಯುವಕರು ಈ ರೀತಿ ಮೋಜು ಮಾಡಿದ್ದಾರೆ ಎಂದು ತಿಳಿದು ಬಂದಿದೆ ಎಂದು ಚಾರ್ಮಿನಾರ್ ಇನ್ಸ್ ಪೆಕ್ಟರ್ ಗುರು ನಾಯ್ಡು (Guru Naidu)ತಿಳಿಸಿದ್ದಾರೆ. ಘಟನೆ ನಡೆದ ಆ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು (CCTV footage) ಪರಿಶೀಲಿಸಲಾಗುತ್ತಿದೆ. ಯುವಕರು ಎಸೆದ ನೋಟುಗಳು ನಕಲಿಯೇ ಅಥವಾ ನಿಜವೇ ಎಂಬುದನ್ನು ಪತ್ತೆ ಹಚ್ಚಲು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ