
ತಿರುಚಿ(ಮೇ.27) ನಗರ ಪ್ರದೇಶಗಳಲ್ಲಿ ಟ್ರಾಫಿಕ್ ಸಮಸ್ಯೆ ಸಾಮಾನ್ಯ. ಪ್ರತಿ ದಿನ ಟ್ರಾಫಿಕ್ ಜಾಮ್ ಕಿರಿಕಿರಿ ಅನುಭವಿಸಲೇಬೇಕು. ಇದರ ನಡುವೆ ಅಚಾನಕ್ಕಾಗಿ ಎದುರಾಗವ ಸಮಸ್ಯೆಗಳಿಂದ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತದೆ. ಹೀಗೆ ರಸ್ತೆಯಲ್ಲಿ ವಾಹನ ಚಲಿಸಲು ಸಾಧ್ಯವಾಗದಷ್ಟು ಟ್ರಾಫಿಕ್ ಜಾಮ್ ಆದಾಗ, ಪಾದಾಚಾರಿಗಳ ರಸ್ತೆಯಲ್ಲಿ ತೆರಳಿದ ಘಟನೆಗಳು ನಡೆದಿದೆ. ಇಲ್ಲೊಬ್ಬ ಬೈಕ್ ರ್ಯಾಲಿ ಸಂಭ್ರಮದಲ್ಲಿ ಕಿರಿದಾದ ಡಿವೈಡರ್ ಮೇಲೆ ತನ್ನ ದ್ವಿಚಕ್ರ ವಾಹನ ಹತ್ತಿಸಿ ಸುಲಭವಾಗಿ ತೆರಳಿದ್ದಾನೆ. ತಮಿಳುನಾಡಿನ ತಿರುಚಿಯಲ್ಲಿ ನಡೆದ ಈ ಘಟನೆ ಭಾರಿ ವೈರಲ್ ಆಗಿದೆ.
ಕೊಲ್ಲಿಡ್ಯಾಮ್ ರಿವರ್ ಬ್ರಿಡ್ಜ್ ಬಳಿ ಈ ಘಟನೆ ನಡೆದಿದೆ. ರಸ್ತೆ ತುಂಬಾ ವಾಹನಗಳು ಸಾಲುಗಟ್ಟಿ ನಿಂತಿತ್ತು. ಇದೇ ವೇಳ ಮುಥರಿಯಾರ್ ಸಥಾ ವಿಝಾ ಸಂಭ್ರಮಾಚರಣೆಯೂ ನಡೆದಿತ್ತು. ಮುಥರಿಯಾರ್ ಜಯಂತಿ ಪ್ರಯುಕ್ತ ಬೈಕ್ ರ್ಯಾಲಿ ಆಯೋಜಿಸಲಾಗಿತ್ತು. ಒಂದಡೆ ಟ್ರಾಫಿಕ್, ಮತ್ತೊಂದೆಡೆ ಬೈಕ್ ರ್ಯಾಲಿಯಿಂದ ರಸ್ತೆ ತುಂಬಾ ವಾಹನಗಳೇ ತುಂಬಿತ್ತು. ಇದೇ ವೇಳೆ ಯುವಕ ಕಿರಿದಾದ ಡಿವೈಡರ್ ಮೇಲಿನಿಂದ ಬೈಕ್ ರೈಡ್ ಮಾಡಿದ್ದಾನೆ.
ಬರಿಗಾಲಲ್ಲಿ ರಸ್ತೆ ದಾಟುತ್ತಿದ್ದ ಮಗುವಿಗೆ ಚಪ್ಪಲಿ, ಬಟ್ಟೆ ಕೊಡಿಸಿದ ಹೃದಯವಂತ ಬೈಕರ್!
ಡಿವೈಡರ್ ಮೇಲಿನಿಂದ ಈತ ಆರಾಮಾಗಿ ಬೈಕ್ ರೈಡಿಂಗ್ ಮಾಡಿದ್ದಾನೆ. ಅಪಾಯಕಾರಿ ಸ್ಟಂಟ್ ಮೂಲಕ ಬೈಕ್ ಮಾಡಿರುವುದು ಇದೀಗ ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ವಿಡಿಯೋ ವೈರಲ್ ಆಗಿದೆ. ಇಷ್ಟೇ ಅಲ್ಲ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ರ್ಯಾಲಿ, ಸಂಭ್ರಮಾಚರಣೆ ವೇಳೆ ಈ ರೀತಿಯ ಸ್ಟಂಟ್‌ಗಳು ಸಾಮಾನ್ಯವಾಗುತ್ತಿದೆ. ಪೊಲೀಸರು ಕಣ್ಮುಚ್ಚಿ ಕುಳಿತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.
ರ್ಯಾಲಿಗಳಲ್ಲಿ ಹೆಲ್ಮೆಟ್ ಹಾಕದೆ, ತ್ರಿಬಲ್ ರೈಡಿಂಗ್ ಮಾಡಿದರೂ ದಂಡ ವಿಧಿಸಿದ ಉದಾಹರಣೆಗಳು ಕಡಿಮೆ . ವೈಯುಕ್ತಿವಾಗಿ ಮಾಡಿದರೆ ಅತೀ ದೊಡ್ಡ ತಪ್ಪಾಗಿ ಪರಿಗಣಿಸುವ ಪೊಲೀಸರು, ರಾಜಕೀಯ ಸಂಭ್ರಮಾಚರಣೆ, ರಾಜಕೀಯ ಪಕ್ಷಗಳು ಯೂಥ್ ವಿಂಗ್ ರ್ಯಾಲಿ ಸೇರಿದಂತೆ ಇತರ ಸಂಭ್ರಮಾಚರಣೆಗಳಲ್ಲಿ ಸಾವಿರು ನಿಯಮ ಉಲ್ಲಂಘನೆ ಮಾಡಿದರೂ ಮೌನವಾಗಿರುತ್ತಾರೆ ಎಂದು ಅಸಮಾಧಾನಗಳು ವ್ಯಕ್ತವಾಗಿದೆ.
ಈ ರೀಯಿ ನಿಯಮ ಉಲ್ಲಂಘನೆಗಳಿಗೆ ಅವಕಾಶ ನೀಡಬಾರದು. ಆತನ ಜೀವಕ್ಕೆ ಮಾತ್ರವಲ್ಲ, ರಸ್ತೆಯಲ್ಲಿರುವ ಇತರರ ಜೀವಕ್ಕೂ ಈ ರೀತಿಯ ಸ್ಟಂಟ್ನಿಂದ ಅಪಾಯ ತಪ್ಪಿದ್ದಲ್ಲ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಇಂತಹ ಘಟನೆ ಮರುಕಳಿಸಿದಂತೆ ಪೊಲೀಸರು ಕ್ರಮ ಕೈಗೊಳ್ಳಬೇಕು ಅನ್ನೋ ಆಕ್ರೋಶ ಎಲ್ಲೆಡೆಗಳಿಂದ ವ್ಯಕ್ತವಾಗುತ್ತಿದೆ.
ಚಲಿಸುತ್ತಿರುವ ಬೈಕ್‌ನಲ್ಲಿ ಪ್ರೇಮಿಗಳ ಕಿಸ್ಸಿಂಗ್: ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ