ಅಂಗಡಿ ಮುಂದೆ ಕುಳಿತಿದ್ದ ಓವೈಸಿ ಪಕ್ಷದ ನಾಯಕನ ಮೇಲೆ ಗುಂಡಿನ ದಾಳಿ

Published : May 27, 2024, 12:46 PM IST
ಅಂಗಡಿ ಮುಂದೆ ಕುಳಿತಿದ್ದ ಓವೈಸಿ ಪಕ್ಷದ ನಾಯಕನ ಮೇಲೆ ಗುಂಡಿನ ದಾಳಿ

ಸಾರಾಂಶ

Asaduddin Owaisi s party leader ರಾತ್ರಿ 1.20ಕ್ಕೆ ಓಲ್ಡ್ ಆಗ್ರಾ ರಸ್ತೆಯ ಪೆಟ್ರೋಲ್ ಬಂಕ್ ಬಳಿಯೊಂದರ ಅಂಗಡಿಯ ಮುಂದೆ ಅಬ್ದುಲ್ ಮಲಿಕ್ ಕುಳಿತಿದ್ದರು. ಈ ವೇಳೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ

ಮುಂಬೈ: ಬೈಕ್‌ನಲ್ಲಿ ಬಂದ ಇಬ್ಬರು ಆಗುಂತಕರು ಮಾಲೇಗಾಂವ್ ನಗರದ ಮಾಜಿ ಮೇಯರ್ (Former Mayor) ಮೇಲೆ ಗುಂಡಿನ ದಾಳಿ (Gun Fire) ನಡೆಸಿದ್ದಾರೆ. ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ (Maharashtra Nashik district,  Malegaon) ಗುಂಡಿನ ದಾಳಿ ನಡೆದಿದೆ. ಗುಂಡಿನ ದಾಳಿಗೆ ಒಳಗಾಗಿರುವ ಅಬ್ದುಲ್ ಮಲಿಕ್, ಆಲ್‌ ಇಂಡಿಯಾ ಮಜಿಸ್‌-ಇ-ಇತ್ತೆಹದುಲ್ ಮುಸ್ಲಿಮೀನ್ (AIMIM- All India Majlis-e-Ittehadul Muslimeen) ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಅಬ್ದುಲ್ ಮಲಿಕ್ ನಗರ ಪೆಟ್ರೋಲ್ ಬಂಕ್ ಬಳಿ ಗುಂಡಿನ ದಾಳಿ ನಡೆದಿದೆ ಎಂದು ವರದಿಯಾಗಿದೆ. 

ಅಬ್ದುಲ್ ಮಲೀಕ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅಬ್ದುಲ್ ಮಲೀಕ್ ಆರೋಗ್ಯ ಚೇತರಿಕೆ ಕಂಡು ಬಂದಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. 

ರಾತ್ರಿ 1.20ಕ್ಕೆ ಓಲ್ಡ್ ಆಗ್ರಾ ರಸ್ತೆಯ ಪೆಟ್ರೋಲ್ ಬಂಕ್ ಬಳಿಯೊಂದರ ಅಂಗಡಿಯ ಮುಂದೆ ಅಬ್ದುಲ್ ಮಲಿಕ್ ಕುಳಿತಿದ್ದರು. ಈ ವೇಳೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಮಾಲೇಗಾಂವ್ ನಗರ ಪೊಲೀಸರು ಮಾಹಿತಿ ನೀಡಿದ್ದಾರೆ. 

ಮಧುಮೇಹಿ ಮಗಳಿಗೆ ಮೌಂಟೇನ್ ಡ್ಯೂ ನೀಡಿದ ತಾಯಿ, ಮಗಳನ್ನು ಕೊಂದ ಮಹಿಳೆಗೆ ನಾಲ್ಕು ವರ್ಷ ಜೈಲು!

ಮೂರು ಸುತ್ತಿನ ಗುಂಡಿನ ದಾಳಿ

ದುಷ್ಕರ್ಮಿಗಳು ಮೂರು ಸುತ್ತಿನ ಗುಂಡಿನ ದಾಳಿ ನಡೆಸಿದ್ದಾರೆ. ಅಬ್ದುಲ್ ಮಲೀಕ್ ಎದೆ ಮತ್ತು ಕಾಲಿಗೆ ಗುಂಡು ತಗುಲಿದೆ. ಕೂಡಲೇ ಅಬ್ದುಲ್ ಮಲಿಕ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

ಬದುಕಿರದ ಅಮ್ಮನ ಬಗ್ಗೆ ಕೆಟ್ಟ ಮಾತು: 10 ವರ್ಷದ ಬಾಲಕನ ಹತ್ಯೆಗೈದ 13ರ ಬಾಲಕ!

ಪ್ರಕರಣ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಐಪಿಸಿ ಸೆಕ್ಷನ್ 307 (ಕೊಲೆ ಯತ್ನ) ಅಡಿ ಕೇಸ್ ದಾಖಲಾಗಿದೆ. ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ತನಿಖೆ ಮುಂದುವರಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
Viral Video: ಮಾಜಿ ಸಿಜೆಐ ಬಿಆರ್‌ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್‌ ಕಿಶೋರ್‌ಗೆ ಕೋರ್ಟ್‌ನಲ್ಲೇ ಚಪ್ಪಲಿಯಿಂದ ಹಲ್ಲೆ!